ಇತ್ತೀಚಿನ ದಿನಗಳ ಕೃಷಿಯಲ್ಲಿ ನೀರಿನ ಬಳಕೆ ಹೆಚ್ಚುತ್ತಿದ್ದು, ಇದರ ಜೊತೆಗೆ ಅತಿಯಾದ ಬೋರವೆಲ್ ಕೊರೆತದಿಂದ ಅಂತರ್ಜಲಮಟ್ಟ ಸಹ ವರ್ಷದಿಂದ ವರ್ಷಕ್ಕೆ ಕ್ಷೀಣಿಸುತ್ತಿದೆ. ಇದರ ಪರಿಣಾಮ ಬೆಳೆಗಳಿಗೆ ಸರಿಯಾದ ಪ್ರಮಾಣ ನೀರು ಸಿಗದೇ ರೈತರು ಕಂಗಾಲಾಗುತ್ತಿದ್ದಾರೆ. ಇದಕ್ಕಾಗಿಯೇ ಹೈಡ್ರೋಪೊನಿಕ್ಸ್ ಎಂಬ ತಂತ್ರಜ್ಞಾನ ಬಂದಿದೆ.
ಈ ಒಂದು ವಿಧಾನದಲ್ಲಿ ಬೆಳೆಗಳನ್ನು ಮಣ್ಣಿಲ್ಲದೆ , ಮಿತವಾದ ನೀರನ್ನು ಬಳಸಿಕೊಂಡು ಬೆಳೆಯಬಹುದು. ಅನೇಕ ಹೈನುಗಾರಿಕೆ ಮತ್ತು ಕೋಳಿ ಸಾಕಾಣಿಕೆಯನ್ನು ಕೈಗೊಂಡಿರುವ ರೈತರು ಸಹ ಈ ಒಂದು ವಿಧಾನ ಬಳಸಿಕೊಂಡು ರಾಸುಗಳಿಗೆಬೇಕಾದ ಮೇವನ್ನು ಉತ್ಪಾದಿಸುತ್ತಿರುವುದು ಇದರ ಜನಪ್ರಿಯತೆ ತಿಳಿಸುತ್ತದೆ. ಹಾಗೂ ನಗರದ ಜನರು ತಮ್ಮ ತಾರಸಿನಲ್ಲಿ / ಮನೆಯಲ್ಲಿ ತಮಗೆ ಅಗತ್ಯವಾದ ತರಕಾರಿ/ಸೊಪ್ಪುಗಳನ್ನು ಬೆಳೆಯುತ್ತಿದ್ದಾರೆ.ಈ ಒಂದು ಅಂಶವನ್ನು ಗಮನದಲ್ಲಿ ಇಟ್ಟುಕೊಂಡು ಬೆಂಗಳೂರಿನ IIHR ಸಂಸ್ಥೆಯು ದ್ರವ ರೂಪದ ಗೊಬ್ಬರವನ್ನು ತಯಾರಿಸಿದೆ.ಅದೇ ಅರ್ಕಾಸಸ್ಯಪೋಷಕ ರಸ.
ಏನಿದು ಅರ್ಕಾಸಸ್ಯ ಪೋಷಕ ರಸ :
ಈ ಒಂದು ದ್ರಾವಣ ರೂಪದ ಗೊಬ್ಬರವು, ( ದ್ರಾವಣ A ಮತ್ತು ದ್ರಾವಣ B ಎಂಬ ಏರಡು ದ್ರಾವಣದಲ್ಲಿ) ಎಲ್ಲಾ ಸೂಕ್ಷ್ಮಪೋಷಕಾಂಶಗಳು ( ಕಬ್ಬಿಣ, ಮ್ಯಾಂಗನೀಸ್, ತಾಮ್ರ , ಜಿಂಕ್ , ಬೋರಾನ್ ) ಹಾಗೂ ಸ್ಥೂಲ ಪೋಷಕಾಂಶಗಳು ( ನೈಟ್ರೋಜನ್, ಪಾಸ್ಪರಸ್) ಮುಂತಾದವುಗಳನ್ನು ಒಳಗೊಂಡಿದ್ದು, ಸಸ್ಯದ ಬೆಳವಣಿಗೆಯ ಎಲ್ಲಾ ಹಂತಗಳಲ್ಲೂ ಪೋಷಕಾಂಶಗಳನ್ನು ಒದಗಿಸುವ ಸಾಮರ್ಥ್ಯ ಹೊಂದಿದೆ.
ಈ ಒಂದು ದ್ರವ ರೂಪದ ಗೊಬ್ಬರವನ್ನು ತರಕಾರಿ ಬೆಳೆಗಳಾದ ಕ್ಯಾಬೇಜ್, ಟೊಮೆಟೊ, ಮೆಣಸಿನಕಾಯಿ, ಸೌತೆಕಾಯಿ, ಹೀರೆಕಾಯಿ, ಅವರೆ, ಅಲಸಂಧಿ, ಡೋಲಿಕೋಸ್ ಬೀನ್ಸ್, ಬಟಾಟೆ ( peas) ಹಾಗೂ ರಾಜಗಿರಿ ( Amaranthus) , ಕೊತ್ತಂಬರಿ, ಮತ್ತು ಪಾಲಕ್ ಸೊಪ್ಪುಗಳಲ್ಲೂ ಸಹ ಬಳಸಬಹುದಾಗಿದೆ.
ಹೆಚ್ಚಿನ ಮಾಹಿತಿಗಾಗಿಭೇಟಿ ನೀಡಿ : https://www.iihr.res.in/arka-sasya-poshak-ras-liquid-nutrient-formulation-soilless-vegetable-production
ಲೇಖನ:ಆತ್ಮಾನಂದ ಹೈಗರ
Share your comments