1. ಅಗ್ರಿಪಿಡಿಯಾ

ಟೊಮೆಟೊ ಬೆಳೆಗೆ ಅಂಗಮಾರಿ ರೋಗ: ನಿರ್ವಹಣೆ ಮತ್ತು ತಡೆಗಟ್ಟುವಿಕೆ …

Hitesh
Hitesh
Limb disease in tomato: management and prevention

ಕರ್ನಾಟಕದ ಪ್ರಮುಖ ಬೆಳೆಗಳಲ್ಲಿ ಟೊಮೆಟೊ ಸಹ ಒಂದು. ಟೊಮೆಟೊ ಬೆಳೆ ದಕ್ಷಿಣ ಕರ್ನಾಟಕದ ಕೋಲಾರ, ಚಿಂತಾಮಣಿ, ಬೆಂಗಳೂರು ಗ್ರಾಮಾಂತರ ಪ್ರದೇಶ ಸೇರಿದಂತೆ ವಿವಿಧ ಪ್ರದೇಶದ ರೈತರಿಗೆ ಚಿನ್ನದ ಬೆಳೆ.
ಕಡಿಮೆ ನೀರಾವರಿಯನ್ನು ಬಳಸಿ ಬೆಳೆಯಬಹುದಾದ ಬೆಳೆ ಆಗಿರುವುದರಿಂದ ಅಲ್ಪ ಪ್ರಮಾಣದಲ್ಲಿ ಮಳೆ ಆಗುವ ಪ್ರದೇಶಗಳಲ್ಲಿ ಈ ಬೆಳೆಗೆ ಹೆಚ್ಚು ಆದ್ಯತೆ ಇದೆ.

ಆದರೆ, ಇತ್ತೀಚಿಗೆ ರಾಜ್ಯದಲ್ಲಿ ಸುರಿಯುತ್ತಿರುವ ಅಕಾಲಿಕ ಮಳೆ ಹಾಗೂ ವಾತಾವರಣ ವೈಪರೀತ್ಯದಿಂದ ಆಲೂಗಡ್ಡೆ ಹಾಗೂ ಟೊಮೆಟೊ ಬೆಳೆಯಲ್ಲಿ ಅಂಗಮಾರಿ ರೋಗ ಕಾಣಿಸಿಕೊಳ್ಳುತ್ತಿದೆ.

ಮೊದ ಮೊದಲು ಆಲೂಗಡ್ಡೆ ಬೆಳೆಯಲ್ಲಿ ಕಾಣಿಸಿಕೊಳ್ಳುತ್ತಿದ್ದ ಅಂಗಮಾರಿ ರೋಗ ಇತ್ತೀಚಿನ ವರ್ಷಗಳಲ್ಲಿ ಟೊಮೆಟೊ ಬೆಳೆಯಲ್ಲೂ ಕಾಣಿಸಿಕೊಳ್ಳುತ್ತಿದೆ.

Gold Rate: ಇಳಿಕೆ ಆಗಲಿದೆ ಚಿನ್ನದ ದರ, ಇಂದಿನ ದರವೆಷ್ಟು ?!

ಅಂಗಮಾರಿ ರೋಗ ಎಂದರೆ ಏನು, ಇದು ಹೇಗೆ ಬರುತ್ತದೆ ಹಾಗೂ ಇದನ್ನು ತಡೆಯಲು ರೈತರು ಯಾವೆಲ್ಲ ಸುಧಾರಣಾ ಕ್ರಮಗಳನ್ನು ಅನುಸರಿಸಬೇಕು ಎನ್ನುವ ವಿಸ್ತೃತವಾದ ವಿವರಣೆ ಈ ಲೇಖನದಲ್ಲಿದೆ.  

ಆಲೂಗಡ್ಡೆಯಲ್ಲಿ ಕಾಣಿಸಿಕೊಳ್ಳುವ ಶೀಲಿಂಧ್ರ ಮಾದರಿ ರೋಗ ಇದೀಗ ಟೊಮೆಟೊ ಬೆಳೆಯಲ್ಲೂ ಕಾಣಿಸಿಕೊಳ್ಳುತ್ತಿದೆ. ಅಂಗಮಾರಿ ರೋಗವು “ಹೆಮ್ಮಾರಿ ರೋಗ”ವಾಗಿ ಟೊಮೆಟೊ ಬೆಳೆದ ರೈತರನ್ನು ಕಾಡುತ್ತಿದೆ.

ಮೀನು ಪ್ರಿಯರಿಗೆ ಸಿಹಿಸುದ್ದಿ: ಮಲೆನಾಡು ಭಾಗದಲ್ಲಿ ಮೀನಿನ ದರ ಇಳಿಕೆ!

ಈಚೆಗೆ ಬಂಗಾಳಕೊಲ್ಲಿಯಲ್ಲಿ ಸೃಷ್ಟಿ ಆಗಿರುವ ವಾಯುಭಾರ ಕುಸಿತದಿಂದಾಗಿ ರಾಜ್ಯದ ಹಲವು ಜಿಲ್ಲೆಗಳಲ್ಲಿ ಚಳಿಗಾಲದಲ್ಲೂ ಮಳೆ ಆಗುತ್ತಿದೆ. 

ದಕ್ಷಿಣ ಒಳನಾಡಿನ ವಿವಿಧ ಜಿಲ್ಲೆಗಳಲ್ಲಿ ಹಾಗೂ ಟೊಮೆಟೊ, ಆಲೂಗಡ್ಡೆ ಬೆಳೆಗಳು ಬೆಳೆಯುವ ಜಿಲ್ಲೆಗಳಲ್ಲೂ ನಿರಂತರವಾಗಿ ಮಳೆ ಆಗುತ್ತಿರುವುದು ರೈತರನ್ನು ಸಂಕಷ್ಟಕ್ಕೆ ದೂಡಿದೆ.

ರಾಜ್ಯದಲ್ಲಿ ಅತಿ ಹೆಚ್ಚು ಟೊಮೆಟೊ ಬೆಳೆಯುವ ಜಿಲ್ಲೆ ಎಂದೇ ಖ್ಯಾತಿ ಗಳಿಸಿರುವ ಕೋಲಾರ ಜಿಲ್ಲೆಯಲ್ಲಿ ಟೊಮೆಟೊ ಬೆಳೆಗೆ ಅಂಗಮಾರಿ ರೋಗ ಆವರಿಸಿದ್ದು, ಉತ್ತಮ ಬೆಳೆಯ ನಿರೀಕ್ಷೆಯಲ್ಲಿದ್ದ ಜನ ಸಂಕಷ್ಟಕ್ಕೆ ಸಿಲುಕಿದ್ದಾರೆ.

ಈ ಬಾರಿ ಮುಂಗಾರು ಹಂಗಾಮಿನಲ್ಲಿ ನಿರೀಕ್ಷೆಯಂತೆ ಮಳೆಯಾಗಿಲ್ಲ. ಹಿಂಗಾರು ಹಂಗಾಮಿನಲ್ಲಿ 15 ದಿನಗಳು ಮೋಡ ಮುಸುಕಿದ ವಾತಾವರಣ ನಿರ್ಮಾಣವಾಗಿತ್ತು.

ಒಮ್ಮೊಮ್ಮೆ ತುಂತುರು ಮಳೆಯಾಗುತ್ತಿತ್ತು. ಹೀಗಾಗಿ, ವಾತಾವರಣದಲ್ಲಿ ತೇವಾಂಶ ಪ್ರಮಾಣ ಹೆಚ್ಚಾಗಿದ್ದು, ಟೊಮೊಟೆ ಬೆಳೆಯಲ್ಲಿ ಅಂಗಮಾರಿ ರೋಗ ಕಾಣಿಸಿಕೊಂಡಿದೆ.

ಸರ್ಕಾರಿ ನೌಕರರಿಗೆ ಮತ್ತೆ ಸಿಹಿಸುದ್ದಿ: ಸಿ, ಡಿ ದರ್ಜಿ ನೌಕರರ ವರ್ಗಾವಣೆ ನಿಯಮದಲ್ಲಿ ಬದಲಾವಣೆ; ಪತಿ, ಪತ್ನಿ ಪ್ರಕರಣ ನಿಯಮ ಸಡಿಲ!

Limb disease in tomato: management and prevention

ತುಂತುರು ಮಳೆ, ವಾತಾವರಣದಲ್ಲಿ ತೇವಾಂಶ ಹೆಚ್ಚಾಗುವುದು ಹಾಗೂ ಮೋಡಕವಿದ ವಾತಾವರಣ ನಿರಂತರವಾಗಿ ಇದ್ದರೆ, ಬೆಳೆಯಲ್ಲಿ ಅಂಗಮಾರಿ ರೋಗ ಕಾಣಿಸಿಕೊಳ್ಳುತ್ತದೆ

ಎನ್ನುತ್ತಾರೆ ಬೆಂಗಳೂರಿನ ಕೃಷಿ ವಿಶ್ವವಿದ್ಯಾಲಯ ಗಾಂಧಿ ಕೃಷಿ ವಿಜ್ಞಾನ ಕೇಂದ್ರದ(ಜಿಕೆವಿಕೆ) ಸಸ್ಯರೋಗಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ.ಸಿ.ಆರ್‌.ಜಹಿರ್‌ ಬಾಷಾ.

ಅಂಗಮಾರಿ ರೋಗವು ಪ್ರಾರಂಭಿಕ ಹಂತದಲ್ಲಿ ಟೊಮೆಟೊ ಬೆಳೆಯ ಎಲೆಯ ಅಂಚಿನಲ್ಲಿ ಮೇಲೆ ಮಚ್ಚೆಯ ಮಾದರಿಯಲ್ಲಿ ಕಾಣಿಸಿಕೊಳ್ಳುತ್ತದೆ.

ನಂತರ, ಎಲೆಯ ಕೆಳಭಾಗದಲ್ಲಿ ಬೂಸ್ಟ್‌ನಂತೆ ಕಾಣಿಸಿಕೊಳ್ಳುತ್ತದೆ. ಹೀಗಾಗಿ, ಇದನ್ನು ಅಂಗಮಾರಿ ಎಂದು ಕರೆಯಲಾಗುತ್ತದೆ.

ಅಂಗಮಾರಿ ರೋಗವು ಕಾಂಡ ಮತ್ತು ಹಣ್ಣಿಗೂ ಹಬ್ಬುತ್ತದೆ. ಕಾಯಿ ಮತ್ತು ಹಣ್ಣಿಗೆ ಬಂದರೆ, ಅವು ಕೊಳೆತು ಹೋಗುತ್ತದೆ. ಕಾಲಮಿತಿಯಲ್ಲಿ ಈ ರೋಗವನ್ನು ತಡೆಯದಿದ್ದರೆ, ಪೂರ್ಣ ಪ್ರಮಾಣದಲ್ಲಿ ಟೊಮೆಟೊ ಬೆಳೆಗೆ ಹಾನಿಯಾಗುವ ಸಾಧ್ಯತೆ ಇದೆ.

ಅಂಗಮಾರಿ ರೋಗ ಯಾವೆಲ್ಲ ರೀತಿ ಹರಡುತ್ತದೆ ?

ಅಂಗಮಾರಿ ರೋಗವನ್ನು ಹರಡುವ ಕ್ರಿಮಿಗಳು ಭೂಮಿಯಲ್ಲಿ ಅಂದರೆ ಮಣ್ಣಿನಲ್ಲಿ ಹಾಗೂ ಗಾಳಿಯ ಮೂಲಕವೂ ಬೆಳೆಗಳಿಗೆ ಹಾನಿಯನ್ನು ಉಂಟು ಮಾಡುವ ಸಾಧ್ಯತೆ ಇರುತ್ತದೆ.

ಹೀಗಾಗಿ, ಬೆಳೆಗಳಲ್ಲಿ ಅಂಗಮಾರಿ ರೋಗ ಕಾಣಿಸಿಕೊಂಡರೆ ರೈತರು ಹೆಚ್ಚು ಮುತುವರ್ಜಿ ವಹಿಸಬೇಕಾಗುತ್ತದೆ.

ಅಂಗಮಾರಿ ರೋಗವನ್ನು ತಡೆಯುವುದು ಹೇಗೆ

ಅಂಗಮಾರಿ ರೋಗವನ್ನು ತಡೆಯುವ ಮೊದಲ ಹಂತವೇ ಉತ್ತಮ ತಳಿಯನ್ನು ಆಯ್ಕೆ ಮಾಡಿಕೊಳ್ಳುವುದು ಎನ್ನುತ್ತಾರೆ  ಡಾ.ಸಿ.ಆರ್‌. ಜಹಿರ್‌ ಬಾಷಾ.

ಉತ್ತಮ ತಳಿಯ ಟೊಮೆಟೊ, ಆಲೂಗಡ್ಡೆಯನ್ನು ಆಯ್ಕೆ ಮಾಡಿಕೊಳ್ಳುವುದರಿಂದ ಅಂಗಮಾರಿಯನ್ನು ತಡೆಯಲು ಸಾಧ್ಯವಿದೆ.

ಸಹಿಷ್ಣತೆ ಹೊಂದಿರುವ ತಳಿಯನ್ನು ಆಯ್ಕೆ ಮಾಡಿಕೊಳ್ಳಬೇಕು. ರೈತರಿಗೆ ಈ ಬಗ್ಗೆ ಗೊಂದಲ ಇದ್ದರೆ ಅಥವಾ ಹೆಚ್ಚಿನ ಮಾಹಿತಿ ಅವಶ್ಯಕತೆ ಇದ್ದರೆ, ಕೃಷಿ ತಜ್ಞರನ್ನು ಭೇಟಿ ಮಾಡುವುದು ಉತ್ತಮ.

ಟೊಮೆಟೊದಲ್ಲಿ ಅರ್ಕಾಅಬೇದ್‌ ತಳಿಯನ್ನು ಬಳಸುವುದರಿಂದ ಅಂಗಮಾರಿ ರೋಗವನ್ನು ತಡೆಯಬಹುದು. ಇದೇ ಮಾದರಿಯಲ್ಲಿ ಹಲವು ತಳಿಗಳಿವೆ.

ಇನ್ನು ಎರಡನೇಯದಾಗಿ ಅಂಗಮಾರಿಯನ್ನು ತಡೆಯಲು ಬೆಳೆಗಳ ನಡುವೆ ಅಂತರ ಕಾಪಾಡಿಕೊಳ್ಳಬೇಕು. ಇದರಿಂದ ರೋಗ ಹಬ್ಬುವುದನ್ನು ತಡೆಯಬಹುದು ಅಥವಾ ಹಾನಿಯ ಪ್ರಮಾಣವನ್ನೂ ಕಡಿಮೆ ಮಾಡಲು ಸಾಧ್ಯವಿದೆ.

ಸಾಮಾನ್ಯವಾಗಿ ಟೊಮೆಟೊ ಬೆಳೆಯನ್ನು ಬೆಳೆಯುವ ಸಂದರ್ಭದಲ್ಲಿ 60*40 (ಸೆಂ.ಮೀ) ಅಂತರ ಕಾಪಾಡಿಕೊಳ್ಳಲಾಗುತ್ತದೆ. ಉತ್ತಮ ಬೆಳೆಯಿದ್ದಾಗಲೂ ಈ ರೀತಿ ಅಂತರ ಕಾಪಾಡಿಕೊಳ್ಳಲಾಗುತ್ತದೆ.

ರೋಗ ಹೆಚ್ಚಾಗುವ ಸಂದರ್ಭದಲ್ಲಿ ಅಥವಾ ವಾತಾವರಣವು ಅಂಗಮಾರಿ ರೋಗ ಹೆಚ್ಚಳಕ್ಕೆ ಕಾರಣವಾಗಬಹುದು ಎನ್ನುವ ವಾತಾವರಣ ಇದ್ದರೆ, ಅಂತರವನ್ನು ಹೆಚ್ಚಿಸಿಕೊಳ್ಳಬೇಕಾಗುತ್ತದೆ.

ವಾತಾವರಣ ವೈಪರೀತ್ಯದಿಂದಾಗಿ ಅಕ್ಟೋಬರ್‌, ನವೆಂಬರ್‌ ಮತ್ತು ಡಿಸೆಂಬರ್‌ನಲ್ಲಿ ದಕ್ಷಿಣ ಕರ್ನಾಟಕದ ಜಿಲ್ಲೆಗಳಲ್ಲಿ ಈ ರೋಗ ಕಾಣಿಸಿಕೊಳ್ಳತ್ತದೆ.

ರೋಗ ತಡೆಯುವ ನಿಟ್ಟಿನಲ್ಲಿ ಔಷಧಿ ಸಿಂಪಡಣೆ
ಅಂಗಮಾರಿ ರೋಗವನ್ನು ತಡೆಯುವ ನಿಟ್ಟಿನಲ್ಲಿ ಕೆಲವು ಔಷಧಿಯನ್ನು ಸಿಂಪಡಣೆ ಮಾಡಬಹುದು. ಇದನ್ನು ಮೂರು ಹಂತಗಳನ್ನಾಗಿ ವಿಂಗಡಿಸಿಕೊಳ್ಳಬಹುದಾಗಿದೆ.    

ಅಂಗಮಾರಿ ರೋಗವನ್ನು ಮಳೆಯ ನಡುವೆಯೇ ತಡೆಯುವುದು ಸವಾಲಿನ ಕೆಲಸವಾಗಿ ಪರಿಣಮಿಸಿದೆ. ಆದರೆ, ಇದನ್ನು  ತಡೆಯಲು ಸಹ ಮಾರ್ಗೋಪಾಯಗಳಿವೆ.

ಅಂಗಮಾರಿಯನ್ನು ತಡೆಯುವ ನಿಟ್ಟಿನಲ್ಲಿ ಹಾಗೂ ಮುಂಜಾಗ್ರತಾ ಕ್ರಮವಾಗಿ ಒಂದು ಲೀಟರ್‌ ನೀರಿಗೆ 2 ಗ್ರಾಂ ಮ್ಯಾಂಕೋಜೆಬ್‌ ಸಿಂಪಡಣೆ ಮಾಡಬೇಕು.

ಒಂದೊಮ್ಮೆ ರೋಗದ ಮೂಲ ಅಥವಾ ಪ್ರಾರಂಭಿಕ ಹಂತ ಕಾಣಿಸಿಕೊಂಡರೆ, ಎರಡನೇ ಸಿಂಪಡಣೆಯನ್ನು ಅಂದರೆ ರೋಗದ ಪ್ರಾರಂಭಿಕ ಹಂತದಲ್ಲಿ

ಎರಡು ಲೀಟರ್‌ ನೀರಿಗೆ ಎರಡು ಗ್ರಾಂ ಕ್ಲೋರೋಥ್ಯಾಲೋನಿಲ್‌ ಔಷಧಿಯನ್ನು ಸಿಂಪಡಣೆ ಮಾಡಬೇಕು. ಮೂರನೇ ಸಿಂಪಡಣೆಯನ್ನು ರೋಗ ಕಾಣಿಸಿಕೊಂಡ ಸಂದರ್ಭದಲ್ಲಿ ಮಾಡಬೇಕು.

ಮೂರನೇ ಹಂತದಲ್ಲಿ ಡೈಮಿಥೋಮಾರ್ಪ್‌ ಒಂದು ಗ್ರಾಂನೊಂದಿಗೆ ಸಿಂಪಡಣೆ ಮಾಡಬೇಕು. ಮೆಟಿರ್‍ಯಾಮ್‌ ಅಥವಾ ಪಾಲಿರ್‍ಯಾಮ್‌ ಅನ್ನು ಎರಡು ಗ್ರಾಂ ಸಿಂಪಡಣೆ ಮಾಡಬಹುದು.

ಒಂದೊಮ್ಮೆ ಈ ಔಷಧಿ ಲಭ್ಯವಾಗದೆ ಇದ್ದರೆ, ಅಕ್ರೋಬ್ಯಾಡ್‌ನಿಂದೊಗೆ ಮೆಟಿರ್‍ಯಾಮ್‌ ಅಥವಾ ಮ್ಯಾಂಕೋಜೆಬ್‌ ಬಳಸಬಹುದು.

ಇದನ್ನು ಬಳಸಿದ ಮೂರರಿಂದ ಐದು ದಿನಗಳ ನಂತರ ಮೂರುಗ್ರಾಂ ಪೆನಮಿಡಾನ್‌ ಹಾಗೂ ಮ್ಯಾಂಕೋಜೆಬ್‌ ಔಷಧಿಯನ್ನು ಒಂದು ಲೀಟರ್‌ಗೆ ಹಾಕಿ ಸಿಂಪಡಣೆ ಮಾಡಬಹುದಾಗಿದೆ.
ಇನ್ನೂ ಗಂಭೀರವಾಗಿ ಕಾಣಿಸಿಕೊಂಡರೆ,

ಅನಿಸ್ಟಾರ್‌ ಎಂಬ ಔಷಧಿಯನ್ನು ಒಂದು ಎಂಎಲ್‌ ಒಂದು ಲೀಟರ್‌ಗೆ ಹಾಕಿ ಸಂಪಣೆ ಮಾಡಬೇಕಾಗುತ್ತದೆ ಎನ್ನುತ್ತಾರೆ ಬಾಷಾ ಅವರು.  

 - ಹಿತೇಶ್‌.ವೈ 

Published On: 18 November 2022, 03:06 PM English Summary: Limb disease in tomato: management and prevention

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.