1. ಅಗ್ರಿಪಿಡಿಯಾ

ಕಬ್ಬಿನಲ್ಲಿ ಪ್ರಮುಖ ರೋಗ ಮತ್ತು ಕೀಟಗಳು- ಸಮಗ್ರ ನಿರ್ವಹಣಾ ಕ್ರಮಗಳು

Kalmesh T
Kalmesh T
Major Disease and Insects in Sugarcanes

ಕಬ್ಬು ರಾಜ್ಯದ ಪ್ರಮುಖ ವಾಣಿಜ್ಯ ಬೆಳೆಯಾಗಿದ್ದು, ನೀರು ಬಸಿದು ಹೋಗುವಂತಹ ಮಧ್ಯಮ ಕಪ್ಪುಮಿಶ್ರಿತ ಮಣ್ಣು ಈ ಬೆಳೆಗೆ ಸೂಕ್ತ. ದೇಶದಲ್ಲಿ ಈ ಬೆಳೆಯನ್ನು 5.06 ದಶಲಕ್ಷ ಹೆಕ್ಟೇರ್ ಕ್ಷೇತ್ರದಲ್ಲಿ ಬೆಳೆಯುತ್ತಿದ್ದು, ಒಟ್ಟು ಉತ್ಪಾದನೆ, 361.10 ದಶ ಲಕ್ಷ ಟನ್ ಇರುವುದು. ಕರ್ನಾಟಕ ರಾಜ್ಯವು ಕಬ್ಬು ಮತ್ತು ಸಕ್ಕರೆ ಉತ್ಪಾದನೆಯಲ್ಲಿ 3 ನೇ ಸ್ಥಾನದಲ್ಲಿದ್ದು ರಾಜ್ಯದಲ್ಲಿ ಒಟ್ಟು 56 ಸಕ್ಕರೆ ಕಾರ್ಖಾನೆಗಳಿದ್ದು ಹೆಚ್ಚಿನ ಜನರಿಗೆ ಉದ್ಯೋಗವಕಾಶ ಇದರಿಂದ ತೊರೆಯುತ್ತಿದೆ.

ರಾಜ್ಯದ ಒಟ್ಟು ಕಬ್ಬು ಕ್ಷೇತ್ರ ಹಾಗೂ ಉತ್ಪಾದನೆಯು ಶೇ. 65 ರಷ್ಟು ಉತ್ತರ ಕರ್ನಾಟಕದಲ್ಲಿ ಇದ್ದು ಇದನ್ನು ಪ್ರಮುಖವಾಗಿ ಬೆಳಗಾವಿ, ಬಾಗಲಕೋಟ್, ಬಿಜಾಪೂರ, ಧಾರವಾಡ, ಹಾವೇರಿ ಹಾಗೂ ಬೀದರ್ ಜಿಲ್ಲೆಗಳಲ್ಲಿ ಬೆಳೆಯಲಾಗುತ್ತಿದೆ. ರಾಜ್ಯದಲ್ಲಿ ಈ ಬೆಳೆಯನ್ನು 4.20 ಲಕ್ಷ ಹೆಕ್ಟೇರ್ ಕ್ಷೇತ್ರದಲ್ಲಿ ಬೆಳೆಯುತ್ತಿದ್ದು 379.0 ಲಕ್ಷ ಟನ್ ಉತ್ಪಾದನೆ ಇದ್ದು.

ಕಬ್ಬು ಬೆಳೆಯುವ ಜಿಲ್ಲೆಗಳಲ್ಲಿ ಇದರ ಉತ್ಪಾದನೆಯು ಎಕರೆಗೆ ಸುಮಾರು 30 ರಿಂದ 35 ಟನ್‍ಗಳಷ್ಟಿದೆ. ಇದು ಇತರ ಕಬ್ಬು ಬೆಳೆಯುವ ಜಿಲ್ಲೆಗಳಿಗೆ ಹೋಲಿಸಿದರೆ ತುಂಬಾ ಕಡಿಮೆ. ಇದರ ಹಲವಾರು ಕಾರಣಗಳಲ್ಲಿ ಸರಿಯಾದ ಸಮಯದಲ್ಲಿ ರೋಗ ಮತ್ತು ಕೀಟಗಳ ಹತೋಟಿ ಮಾಡದಿರುವುದು ಒಂದು ಪ್ರಮುಖ ಕಾರಣ. ಕಬ್ಬು ಬೆಳೆಯ ಪ್ರಮುಖ ರೋಗ ಮತ್ತು ಕೀಟಗಳು ಮತ್ತು ಅದರ ಸಮಗ್ರ ನಿರ್ವಹಣಾ ಕ್ರಮಗಳನ್ನು ಕೆಳಗೆ ಪಟ್ಟಿ ಮಾಡಲಾಗಿದೆ.

ಇದನ್ನೂ ಓದಿರಿ: 

ಕಪ್ಪು ಗೋಧಿಯ ಬಗ್ಗೆ ನಿಮಗೆ ಗೊತ್ತೆ? ಇಲ್ಲಿದೆ ರೈತರಿಗೆ ಲಾಭದಾಯಕ ಕೃಷಿಯ ಐಡಿಯಾ!

Paddy: ಉತ್ತಮ ಇಳುವರಿ ನೀಡುವ ರೋಗ ನಿರೋಧಕ ಭತ್ತದ ತಳಿಗಳ ಕುರಿತು ಇಲ್ಲಿದೆ ಸಮಗ್ರ ಮಾಹಿತಿ…

ರಾಜ್ಯದ ಒಟ್ಟು ಕಬ್ಬು ಕ್ಷೇತ್ರ ಹಾಗೂ ಉತ್ಪಾದನೆಯು ಶೇ. 65 ರಷ್ಟು ಉತ್ತರ ಕರ್ನಾಟಕದಲ್ಲಿ ಇದ್ದು ಇದನ್ನು ಪ್ರಮುಖವಾಗಿ ಬೆಳಗಾವಿ, ಬಾಗಲಕೋಟ್, ಬಿಜಾಪೂರ, ಧಾರವಾಡ, ಹಾವೇರಿ ಹಾಗೂ ಬೀದರ್ ಜಿಲ್ಲೆಗಳಲ್ಲಿ ಬೆಳೆಯಲಾಗುತ್ತಿದೆ. ರಾಜ್ಯದಲ್ಲಿ ಈ ಬೆಳೆಯನ್ನು 4.20 ಲಕ್ಷ ಹೆಕ್ಟೇರ್ ಕ್ಷೇತ್ರದಲ್ಲಿ ಬೆಳೆಯುತ್ತಿದ್ದು 379.0 ಲಕ್ಷ ಟನ್ ಉತ್ಪಾದನೆ ಇದ್ದು.

ಕಬ್ಬು ಬೆಳೆಯುವ ಜಿಲ್ಲೆಗಳಲ್ಲಿ ಇದರ ಉತ್ಪಾದನೆಯು ಎಕರೆಗೆ ಸುಮಾರು 30 ರಿಂದ 35 ಟನ್‍ಗಳಷ್ಟಿದೆ. ಇದು ಇತರ ಕಬ್ಬು ಬೆಳೆಯುವ ಜಿಲ್ಲೆಗಳಿಗೆ ಹೋಲಿಸಿದರೆ ತುಂಬಾ ಕಡಿಮೆ.

ಇದರ ಹಲವಾರು ಕಾರಣಗಳಲ್ಲಿ ಸರಿಯಾದ ಸಮಯದಲ್ಲಿ ರೋಗ ಮತ್ತು ಕೀಟಗಳ ಹತೋಟಿ ಮಾಡದಿರುವುದು ಒಂದು ಪ್ರಮುಖ ಕಾರಣ. ಕಬ್ಬು ಬೆಳೆಯ ಪ್ರಮುಖ ರೋಗ ಮತ್ತು ಕೀಟಗಳು ಮತ್ತು ಅದರ ಸಮಗ್ರ ನಿರ್ವಹಣಾ ಕ್ರಮಗಳನ್ನು ಕೆಳಗೆ ಪಟ್ಟಿ ಮಾಡಲಾಗಿದೆ.

ಪ್ರಮುಖ ರೋಗಗಳು

1) ಕಾಡಿಗೆ ರೋಗ

ಸುಳಿಯಿಂದ ತೆಳ್ಳನೆಯ ಉದ್ದವಾದ ಬಿಳಿ ಪೊರೆಯಿಂದ ಮುಚ್ಚಿದ ಬಾರಕೋಲಿನಂತಹ ಹಲವಾರು ಸೆಂ.ಮೀ. ಉದ್ದವಿರುವ ಸಸ್ಯಾಂಗವು ಹೊರಬಂದು ಕ್ರಮೇಣ ಬಿಳಿಪೊರೆ ಒಡೆದು ಕಪ್ಪುಪುಡಿ ಬಾರಕೋಲಿನಂತಿರುವ ಸಸ್ಯಾಂಗದ ಸುತ್ತಲೂ ಇರುವುದನ್ನು ಕಾಣುತ್ತವೆ. ಇದರಿಂದ ಕಬ್ಬಿನಲ್ಲಿ ಬ್ರಿಕ್ ಶುದ್ಧತೆ ಕಡಿಮೆಯಾಗುವುದು.

ಮೇ ತಿಂಗಳಲ್ಲಿ ಬಿತ್ತನೆ ಮಾಡಬೇಕಾದ ಬೆಳೆಗಳು! ಇದರಿಂದ ರೈತರಿಗಾಗಲಿದೆ ಹೆಚ್ಚಿನ ಲಾಭ

ಶ್ರೀಗಂಧ ಬೆಳೆದು 6 ಲಕ್ಷ ರೂಪಾಯಿ ಗಳಿಸಬಹುದು..ಮಾರುಕಟ್ಟೆಯಲ್ಲೂ ಸಿಕ್ಕಾಪಟ್ಟೆ ಡಿಮ್ಯಾಂಡ್‌

1) ಕಾಡಿಗೆ ರೋಗ 2) ಕೆಂಪು ಕೊಳೆ 3) ಅನಾನಸ್ ರೋಗ (ತುಂಡು ಕೊಳೆ ರೋಗ)

ಪ್ರಮುಖ ರೋಗಗಳು

1) ಕಾಡಿಗೆ ರೋಗ

ಸುಳಿಯಿಂದ ತೆಳ್ಳನೆಯ ಉದ್ದವಾದ ಬಿಳಿ ಪೊರೆಯಿಂದ ಮುಚ್ಚಿದ ಬಾರಕೋಲಿನಂತಹ ಹಲವಾರು ಸೆಂ.ಮೀ. ಉದ್ದವಿರುವ ಸಸ್ಯಾಂಗವು ಹೊರಬಂದು ಕ್ರಮೇಣ ಬಿಳಿಪೊರೆ ಒಡೆದು ಕಪ್ಪುಪುಡಿ ಬಾರಕೋಲಿನಂತಿರುವ ಸಸ್ಯಾಂಗದ ಸುತ್ತಲೂ ಇರುವುದನ್ನು ಕಾಣುತ್ತವೆ. ಇದರಿಂದ ಕಬ್ಬಿನಲ್ಲಿ ಬ್ರಿಕ್ ಶುದ್ಧತೆ ಕಡಿಮೆಯಾಗುವುದು.

ನಿರ್ವಹಣಾ ಕ್ರಮಗಳು:-

  1. ರೋಗರಹಿತ ಬೀಜದ ಬಳಕೆ
  2. ಕಾಡಿಗೆ ರೋಗಪೀಡಿತ ಪೊದೆಗಳನ್ನು ತೆಗೆದು ಹಾಕುವುದು.
  3. ಬೀಜ ನಾಟಿ ಮಾಡುವ ಪೂರ್ವ ಶಿಲೀಂಧ್ರನಾಶಕಗಳಾದ 1 ಗ್ರಾಂ. ಕಾರ್ಬನ್‍ಡೈಜಿಮ್ 50 ಡಬ್ಲೂ.ಪಿ. ಅಥವಾ 1 ಗ್ರಾಂ. ಬೆನೋಮಿಲ್ 50 ಡಬ್ಲೂ.ಪಿ. ಪ್ರತಿ ಲೀಟರ್ ನೀರಿನಲ್ಲಿ ಕರಗಿಸಿ ತಯಾರಿಸಿದ ದ್ರಾವಣದಲ್ಲಿ ಉಪಚರಿಸಬೇಕು. ರೋಗಪೀಡಿತ ಭೂಮಿಯಲ್ಲಿ ಬೆಳೆ ಪರಿವರ್ತನೆ ಮಾಡಬೇಕು. ನಾಟಿ ಮಾಡುವ ಬೀಜದ ತುಂಡುಗಳನ್ನು ಉಗಿ ಉಷ್ಟ ಉಪಚಾರ ಯುನಿಟ್‍ದಲ್ಲಿ 50 ಸೆಂ.ನಲ್ಲಿ ಒಂದು ತಾಸಿನವರೆಗೆ ಶಾಖೋಪಚಾರ ಮಾಡಬೇಕು.

2) ಕೆಂಪು ಕೊಳೆ ರೋಗ                                                           

ರೋಗ ತಗುಲಿದ ತುಂಡುಗಳನ್ನು ಉಪಯೋಗಿಸಿದ ಹೊಲಗಳಲ್ಲಿ ಮೊಳಕೆಯೊಡೆಯುವ ಪ್ರಮಾಣ ಕಡಿಮೆ. ಬೆಳೆಯುವ ಸಸಿಯಲ್ಲಿ ಮೂರನೆಯ ಮತ್ತು ನಾಲ್ಕನೆಯ ಗರಿಯ ತುದಿ ಒಣಗುವುದು ಕಂಡು ಬರುತ್ತದೆ. 10 ರಿಂದ 12 ದಿವಸಗಳಲ್ಲಿ ಪೂರ್ತಿ ಸಸಿ ಒಣಗುತ್ತದೆ. ಬೆಳೆದ ಕಬ್ಬುಗಳನ್ನು ಸೀಳಿ ನೋಡಿದರೆ ಗಣ್ಣುಗಳ ನಡುವಿನ ಭಾಗವು ಕೆಂಪಾಗಿರುತ್ತದೆ.

ಅಲ್ಲಲ್ಲಿ ಬಿಳಿಯ ಅಡ್ಡ ಪಟ್ಟಿಗಳು ಕಂಡು ಬರುತ್ತದೆ. ರೋಗ ಉಲ್ಬಣಿಸಿದಂತೆ ಕಬ್ಬಿನಿಂದ ಕೆಟ್ಟ ವಾಸನೆ ಹೊರಡುತ್ತದೆ. ಎಲೆಗಳ ಮುಖ್ಯ ನರದ ಮೇಲೆ ಕೆಂಪು ಚುಕ್ಕೆಗಳು ಕಂಡು ಬರುತ್ತದೆ. ದಿನಗಳೆದಂತೆ ಈ ಚುಕ್ಕೆಗಳು ದೊಡ್ಡವಾಗುತ್ತ ಪೂರ್ತಿ ನರವನ್ನು ವ್ಯಾಪಿಸಬಹುದು. 

ನಿರ್ವಹಣೆ

  • ಕೂಳೆ ಮತ್ತು ಒಣಗಿದ ಎಲೆ ಮುಂತಾದವುಗಳನ್ನು ಹೊಲದಲ್ಲಿ ಸುಡಬೇಕು.
  • ರೋಗ ತಗುಲಿದ ಗಿಡಗಳನ್ನು ಬುಡಸಮೇತ ಕಿತ್ತು ನಾಶಮಾಡಬೇಕು.
  • ಹೊಲವನ್ನು ಸ್ವಚ್ಛವಾಗಿಡಬೇಕು.
  • ಬಸಿಕಾಲುವೆಗಳನ್ನು ತೆಗೆದು ಹೊಲದಲ್ಲಿ ನೀರು ನಿಲ್ಲದಂತೆ ವ್ಯವಸ್ಥೆ ಮಾಡಿರಬೇಕು.
  • ರೋಗ ಕಂಡು ಬಂದ ಹೊಲದಲ್ಲಿ ಕೂಳೆ ಬೆಳೆ ತೆಗೆಯಬಾರದು.
  • ಭತ್ತ ಹಾಗೂ ಹಸಿರೆಲೆ ಗೊಬ್ಬರಗಳಿಂದ ಬೆಳೆ ಪರಿವರ್ತನೆ ಪಾಲಿಸುತ್ತಿರಬೇಕು.

ರೋಗ ನಿರೋಧಕ ತಳಿಗಳನ್ನು ಬೆಳೆಯುವುದು ಅತೀಸೂಕ್ತ.  ಭಾರತದ ವಿವಿಧ ರಾಜ್ಯಗಳಲ್ಲಿ ಸೂಕ್ತವಾದ ನಿರೋಧಕ ತಳಿಗಳು ಇಂತಿವೆ: ಸಿಓ- 8021, ಸಿಓ-7704, ಸಿಓ-86010, ಸಿಓ-86249, ಸಿಓ- 6806 ಮತ್ತು ಸಿಓಜಿ-93076.

ಕೆಂಪು ಕೊಳೆ ರೋಗಪೀಡಿತ ಪ್ರದೇಶದಿಂದ ಬೀಜ ಮತ್ತು ಬೀಜ ಸಾಮಾಗ್ರಿಗಳನ್ನು ತರಬಾರದು.

3) ಅನಾನಸ್ ರೋಗ (ತುಂಡು ಕೊಳೆ ರೋಗ):-

ರೋಗ ತಗುಲಿದ ಮೊಳಕೆ 6-8 ಅಂಗುಲ ಎತ್ತರದಲ್ಲಿದ್ದಾಗಲೇ ಒಣಗಲಾರಂಭಿಸುವುದು. ಕಬ್ಬು ಸೀಳಿದಾಗ ಅನಾನಸ್ ಹಣ್ಣಿನ ವಾಸನೆ ಬರುತ್ತದೆ. ಅಲ್ಲದೇ ಕೆಂಪು ಬಣ್ಣದ ಗೆರೆಗಳಿರುತ್ತವೆ.

ನಿರ್ವಹಣಾ ಕ್ರಮಗಳು:

ನಾಟಿ ಮಾಡುವ ಜಮೀನನ್ನು ಆಳವಾಗಿ ಉಳುಮೆ ಮಾಡಿ ಸ್ವಚ್ಛತೆಯನ್ನು ಕಾಪಾಡಿಕೊಳ್ಳಬೇಕು. ಬೀಜದ ತುಂಡುಗಳನ್ನು ಟ್ರೈಕೋಡರ್ಮಾ ಹಾರ್ಜಿಯಾನಮ್ 10 ಗ್ರಾಂ. ಪ್ರತಿ.ಲೀ. ನೀರಿನಲ್ಲಿ ಕರಗಿಸಿ ತಯಾರಿಸಿದ ದ್ರಾವಣದಲ್ಲಿ ಅದ್ದಿ ನಾಟಿ ಮಾಡಬೇಕು.

Goat&Sheep:ಕುರಿ-ಮೇಕೆ ಸಾಕಾಣಿಕೆದಾರರಿಗೆ ಗುಡ್‌ನ್ಯೂಸ್‌-8 ಲಕ್ಷದವರೆಗೆ ಸಬ್ಸಿಡಿ

Pig Farming:ಹಂದಿ ಸಾಕಾಣಿಕೆದಾರರಿಗೆ ಬಂಪರ್.. ಶೇ 98 ರಷ್ಟು ಸಬ್ಸಿಡಿ ಸಿಗುತ್ತೆ!

ಪ್ರಮುಖ ಕೀಟಗಳ ಸಮಗ್ರ ಹತೋಟಿ ಕ್ರಮಗಳು:

1)ಗೊಣ್ಣೆಹುಳು

ಗೊಣ್ಣೆಹುಳುಗಳು ರಾಷ್ಟ್ರೀಯ ಪ್ರಾಮುಖ್ಯತೆ ಪಡೆದು ಬಹು ಭಕ್ಷಕ ಸಸ್ಯಹಾರಿಗಳಾಗಿದ್ದು ದುಂಬಿ ಮತ್ತು ಮರಿ ಎರಡೂ ಹಂತದಲ್ಲಿ ಧೀರ್ಘಾವಧಿ ವಾಣಿಜ್ಯ ಬೆಳೆಗಳಾದ ಕಬ್ಬಿನಲ್ಲಿ ಹೆಚ್ಚಿನ ಹಾನಿಯನ್ನುಂಟು ಮಾಡುತ್ತದೆ. ಸ್ಥಾನಿಕ ಪ್ರದೇಶಗಳಲ್ಲಿ ಹಾನಿಯ ಪ್ರಮಾಣ ಶೇ. 20-100 ರಷ್ಟಿರುತ್ತದೆ.

ವಿವಿಧ ಗೊಣ್ಣೆ ಹುಳುಗಳಲ್ಲಿ ಹೊಲೋಟ್ರೈಕಿಯಾ ಸರ್ರೇಟಾ, ಹೊಲೊಟ್ರೈಕಿಯಾ ಫಿಸ್ಸಾ, ಮತ್ತು ಲ್ಯೂಕೋಫೊಲಿಸ್ ಲೆಪಿಡೋಫೊರಾ, ಲ್ಯೂಕೋಫೊಲಿಸ್ ಕೋನಿಯೋಪೋರಾ ಹಾಗೂ ಲ್ಯೂಕೋಫೊಲಿಸ್ ಬರ್ಮೆಸ್ಟ್ರಿ ಹೆಚ್ಚು ಪ್ರಾಮುಖ್ಯತೆಯನ್ನು ಪಡೆದಿವೆ. ಇದರ ಬಾಧೆ ಜೂನ್-ಆಗಸ್ಟ್ ತಿಂಗಳಲ್ಲಿ ತೀವ್ರವಾಗಿರುತ್ತದೆ. ತೇವಾಂಶದ ಕೊರತೆಯಾದಲ್ಲಿ ಬರ ಪೀಡಿತವಾದರೆ ಬಾಧೆಯು ವಿಪರೀತವಾಗಿ ಶೇ. 80-100 ರಷ್ಟು ಹಾನಿಯಾಗಿರುತ್ತದೆ. ಕೀಟದ ಬಾಧೆ ತೀವ್ರವಿದ್ದ ವರ್ಷವಲ್ಲದೇ ಮರುವರ್ಷವೂ ಇದರ ಹಾವಳಿ ಹೆಚ್ಚಾಗುತ್ತದೆ.

ದುಂಬಿಗಳು ಮುಖ್ಯವಾಗಿ ಎಲೆಗಳನ್ನು ತಿನ್ನುತ್ತವೆ. ಮರಿಹುಳಗಳು ಮುಖ್ಯವಾಗಿ ಬೇರುಗಳನ್ನು ತಿಂದು ನಾಶಪಡಿಸುತ್ತವೆ. ಇದರಿಂದ ಪೈರು ಬಾಡಿದಂತಾಗಿ ಒಣಗಲು ಪ್ರಾರಂಭಿಸುತ್ತವೆ ಹಾನಿಗೊಳಗಾದ ಸಸ್ಯಗಳನ್ನು ಎಳೆದಾಗ ಅವು ಸುಲಭವಾಗಿ ಬೇರ್ಪಡುತ್ತವೆ. ಬೆಳೆಯ ಬೇರು ಒಣಗಿ ಗಿಡಗಳು ಬಾಡಿದಾಗ, ಗೊಣ್ಣೆ ಹುಳುವಿನ ಇರುವಿಕೆಯನ್ನು ನಿರೀಕ್ಷಿಸಬಹುದು.

POULTRY Farming ತುಂಬಾ ಲಾಭದಾಯಕ ಉದ್ಯೋಗ! ಮತ್ತು ಸರ್ಕಾರದಿಂದ ಸಹಾಯ?

ಹೈನುಗಾರಿಕೆಯಲ್ಲಿ ಯಾರಿಗೆ 'ಡಬಲ್' ಲಾಭ ಬೇಕು!

1)ಗೊಣ್ಣೆ ಹುಳದ ದುಂಬಿ 2) ಗೊಣ್ಣೆ ಹುಳು 3) ಗೊಣ್ಣೆ ಹುಳದ ಕೀಡೆಯು ಬೇರುಗಳನ್ನು ತಿಂದು ಕಬ್ಬು ಬಿದ್ದು ನಾಶವಾಗಿರುವದು

(ಅ)  ಸಮಗ್ರ ನಿರ್ವಹಣಾ ಕ್ರಮಗಳು

ಮುಂಜಾಗ್ರತ ಕ್ರಮಗಳು:

ಇವುಗಳನ್ನು ಕೊಲ್ಲುವ ಎರಡು ಸಮಯಗಳೆಂದರೆ, ಅವು ಭೂಮಿಯಿಂದ ಹೊರಗೆ ಬರುವ ಕಾಲ ಮತ್ತು ಮೊಟ್ಟೆ ಇಟ್ಟು ಮರಿಗಳಾದನಂತರ ಎರಡು ಮೂರು ವಾರಗಳು ಭೂಮಿಯ ಮೇಲ್ಪದರದಲ್ಲಿ ಜೀವಿಸುತ್ತಿರುವ ಕಾಲ. ಸಾಯಂಕಾಲ ಹೊರಬರುವ ದುಂಬಿಗಳನ್ನು ಆಶ್ರಿತ ಸಸ್ಯಗಳಾದ ಬೇವು, ಕರಿಜಾಲಿ, ದ್ರಾಕ್ಷಿ, ಹುಣಸೆ ಮತ್ತು ನೇರಳೆ ಮುಂತಾದ ಮರಗಳ ಹತ್ತಿರ ಮತ್ತು ಏಪ್ರಿಲ್- ಮೇ ತಿಂಗಳಲ್ಲಿ ಮುಂಗಾರು ಮಳೆ ಬಂದ ಸಾಯಂಕಾಲ ಹೊರ ಬರುವ ದುಂಬಿಗಳನ್ನು ಪೆಟ್ರೋಮ್ಯಾಕ್ಸ್ ದೀಪದ (ಲೈಟ್ ಟ್ರ್ಯಾಪ್) ಸಹಾಯದಿಂದ ಆಕರ್ಷಿಸಿ, ಹಿಡಿದು ನಾಶಪಡಿಸಬೇಕು.

ಒಂದು ಬಕೆಟ್ಟಿಗೆ 100 ಮಿ.ಲೀ. ಸೀಮೆಎಣ್ಣೆ ಮೀಶ್ರಿತ ನೀರಿನಲ್ಲಿ ಹಿಡಿದ ದುಂಬಿಗಳನ್ನು ಹಾಕಿದರೆ ಸಾಯುತ್ತವೆ. ಹೀಗೆ ದುಂಬಿ ಹಾರುವ ಸಮಯದಲ್ಲಿ ಸತತವಾಗಿ ಸಂಜೆ ಹೊತ್ತು ಸಾಮೂಹಿಕವಾಗಿ ಒಂದರೆಡು ವಾರ ಹಿಡಿದರೆ ಬಹುತೇಕ ದುಂಬಿಗಳನ್ನು ಮೊಟ್ಟೆ ಇಡುವ ಮುನ್ನವೇ ಕೊಲ್ಲಬಹುದು. ಈ ಕ್ರಮವನ್ನು ಸಾಮೂಹಿಕವಾಗಿ ಕೈಗೊಂಡಲ್ಲಿ ಮಾತ್ರ ಹತೋಟಿ ಪರಿಣಾಮಕಾರಿಯಾಗುತ್ತದೆ.

ಮಾಗಿ ಉಳುಮೆ ಮಾಡುವುದರಿಂದ ಭೂಮಿಯೊಳಗಿನ ಗೊಣ್ಣೆ ಹುಳುಗಳು ಮೇಲೆ ಬಂದು, ಹಂದಿ, ಕಾಗೆ, ಮೈನಾ ಪಕ್ಷಿಗಳಿಗೆ ಆಹಾರವಾಗುವುದರಿಂದ, ಬಹುತೇಕ ಗೊಣ್ಣೆ ಹುಳುಗಳನ್ನು ನಿಯಂತ್ರಿಸಬಹುದು.

ನಿರ್ವಹಣಾ ಕ್ರಮಗಳು:

ಬೆಳೆದುನಿಂತ ಬೆಳೆಯಲ್ಲಿ ಗೊಣ್ಣೆ ಹುಳದ ಬಾಧೆ ಕಂಡು ಬಂದಲ್ಲಿ ಪ್ರತಿ ಲೀಟರ್ ನೀರಿಗೆ 10 ಮಿ.ಲೀ. ಕ್ಲೋರ್‍ಪೈರಿಫಾಸ್ 20 ಇ.ಸಿ ಯನ್ನು ಬೆರೆಸಿ, ಬೆಳೆಯ ಬುಡದಲ್ಲಿ ಭೂಮಿ ನೆನೆಯುವಂತೆ ಮಾಡುವುದರಿಂದ ಹಾನಿಯನ್ನು ಕಡಿಮೆಗೊಳಸಬಹುದು.

ಆಕರ್ಷಕ ಬೆಳೆಗಳಾದ (ಟ್ರ್ಯಾಪ್ ಕ್ರಾಪ್ಸ್) ಈರುಳ್ಳಿ ಹಾಗೂ ಕೋತಂಬರಿಯನ್ನು ಜನೇವರಿ-ಮಾರ್ಚ್ ತಿಂಗಳ ಅವಧಿಯಲ್ಲಿ ಬೆಳೆಗಳ ಮಧ್ಯದಲ್ಲಿ ಬೆಳೆಯುವುದರಿಂದ ಮುಖ್ಯ ಬೆಳೆಗಾಗುವ ಬಾಧೆಯನ್ನು ತಕ್ಕ ಮಟ್ಟಿಗೆ ಕಡಿಮೆ ಮಾಡಬಹುದು.

ಶ್ರೀಗಂಧ ಬೆಳೆದು 6 ಲಕ್ಷ ರೂಪಾಯಿ ಗಳಿಸಬಹುದು..ಮಾರುಕಟ್ಟೆಯಲ್ಲೂ ಸಿಕ್ಕಾಪಟ್ಟೆ ಡಿಮ್ಯಾಂಡ್‌

ಅಚ್ಚರಿ ಆದರು ಸತ್ಯ..ಅಣಬೆಗಳು ತಮ್ಮೊಳಗೆ ಮಾತನಾಡಿಕೊಳ್ಳುತ್ತವೆ..!-ಅಧ್ಯಯನ

ಜೈವಿಕ ಹತೋಟಿ :

ಕಬ್ಬಿನಲ್ಲಿ ಗೊಣ್ಣೆ ಹುಳುವಿನ ಹತೋಟಿಗಾಗಿ ಜನೇವರಿ-ಫಬ್ರುವರಿ ತಿಂಗಳಲ್ಲಿ ಪ್ರತಿ ಎಕರೆಗೆ 5-10 ಕಿ.ಗ್ರಾಂ ಮೆಟಾರೈಝಿಯಂ ಶಿಲೀಂಧ್ರವನ್ನು 100 ಕಿ.ಗ್ರಾಂ ಚೆನ್ನಾಗಿ ಕಳಿತ ಕೊಟ್ಟಿಗೆ ಗೊಬ್ಬರದೊಂದಿಗೆ ಮಿಶ್ರಣ ಮಾಡಿ ಮಣ್ಣಿಗೆ ಸೇರಿಸಿ ನೀರು ಹಾಯಿಸುವುದರಿಂದ ಮೊದಲೆರಡು ಹಂತದ ಮರಿಗಳನ್ನು ಪರಿಣಾಮಕಾರಿಯಾಗಿ ನಿಯಂತ್ರಿಸಬಹುದು.

2) ಉಣ್ಣೆ ಹೇನು

ಈ ಕೀಟವು ಗುಂಪು ಗುಂಪಾಗಿ ಎಲೆಗಳ ಕೆಳಭಾಗದಲ್ಲಿದ್ದು ರಸ ಹೀರುವವು. ಇಂತಹ ಎಲೆಗಳು ಕ್ರಮೇಣ ತುದಿಯಿಂದ ಅಂಚುಗಳಲ್ಲಿ ಹಳದಿ ವರ್ಣಕ್ಕೆ ತಿರುಗಿ ನಂತರ ಒಣಗಲಾರಂಭಿಸುವವು. ಕೆಳಗಿನ ಎಲೆಯ ಮೇಲ್ಭಾಗದಲ್ಲಿ ಕಪ್ಪು ಬೂಷ್ಟ್ ಬೆಳೆದು ದ್ಯುತಿಸಂಶ್ಲೇಷಣಾ ಕ್ರಿಯೆಗೆ ತೊಂದರೆಯಾಗುವುದು. ಕಬ್ಬಿನ ಇಳುವರಿಯು ಶೇ. 22 ರಿಂದ 25 ರಷ್ಟು ಹಾಗೂ ಸಕ್ಕರೆಯ ಇಳುವರಿಯು ಶೇ. 24 ರಷ್ಟು ಕಡಿಮೆಯಾಗುತ್ತದೆ.

ಸಮಗ್ರ ಹತೋಟಿ ಕ್ರಮಗಳು

  • ಬಾಧೆಗೊಳಗಾದ ಕಬ್ಬನ್ನು ನಾಟಿಗೆ ಉಪಯೋಗಿಸಬಾರದು.
  • ಕಬ್ಬಿನ ಗದ್ದೆಗಳಲ್ಲಿ ನೀರು ಬಸಿದು ಹೋಗುವಂತೆ ನೋಡಿಕೊಳ್ಳಬೇಕು.
  • ಸಾರಜನಕಯುಕ್ತ ಗೊಬ್ಬರವನ್ನು ಹೆಚ್ಚಾಗಿ ಬಳಸದೆ, ಉಳಿದ ಪೋಷಕಾಂಶಗಳೊಂದಿಗೆ ಸಮತೋಲನವಾಗಿ ಕಾಪಾಡಬೇಕು.

ಜೈವಿಕ ವಿಧಾನದಲ್ಲಿ ಮೈಕ್ರೋಮಸ್ ಇಗೋರೇಟಸ್( ಹೇನು ಸಿಂಹ) ಅಥವಾ ಡೈಫಾ ಎಫಿಡಿವೋರಾದ ಕೋಶ, ಮರಿಗಳನ್ನು ಬಿಡುವುದು ಸೂಕ್ತ. ಪ್ರತಿ ಎಕರೆ ಪ್ರದೇಶಕ್ಕೆ ಸುಮಾರು 400-600 ಮರಿ ಅಥವಾ ಕೋಶ ಬಿಡುಗಡೆ ಮಾಡಬೇಕು. ಕಟಾವಿಗೆ ಸಿದ್ಧವಾದ ಕಬ್ಬಿನ ಬೆಳೆಯಲ್ಲಿ ಪರಭಕ್ಷಕ ಕೀಟ ಬಿಡುಗಡೆ ಮಾಡಬಾರದು.             

ಡೈಫಾ ಎಫಿಡಾವೋರಾ : ಕಬ್ಬಿನ ಬಿಳಿ ಉಣ್ಣೆ ಹೇನಿನ ಪರಭಕ್ಷಕ

 ಒಂದು ಗ್ರಾಂ. ಅಸಿಫೇಟ್ 75 ಡಬ್ಲೂ.ಪಿ. ಅಥವಾ 2 ಮಿ.ಲೀ. ಕ್ಲೋರ್Àಫೈರಿಫಾಸ್ 20 ಇ.ಸಿ. ಅಥವಾ 2.00 ಮಿ.ಲೀ. ಮೆಲಾಥಿಯಾನ್ 50 ಇ.ಸಿ. ಅಥವಾ 1.5 ಮಿ.ಲೀ. ಮೆಟಾಸಿಸ್ಟಾಕ್ಸ್ 25 ಇ.ಸಿ. ಅಥವಾ 0.26 ಗ್ರಾಂ. ಥಯಾಮಿಥಾಕ್ಸಾಮ್ 25 ಡಬ್ಲೂ.ಜಿ. ಒಂದು ಲೀ. ನೀರಿನಲ್ಲಿ ಬೆರೆಸಿ ಸಿಂಪಡಿಸಬೇಕು.

ಬೀಳಿ ಉಣ್ಣೆ ಹೇನು ನಿರೋಧಕ ತಳಿ ಎಸ್‍ಎನ್‍ಕೆ - 044 ನ್ನು ಬೆಳೆಯುವುದು ಸೂಕ್ತ.

  1. ಸುಳಿ ಕೊರೆಯುವ ಹುಳು:

ಕಬ್ಬು 40-60 ದಿನಗಳ ಅವಧಿಯಲ್ಲಿದ್ದಾಗ (ಡಿಸಂಬರ್-ಫೆಬ್ರವರಿ ತಿಂಗಳ ನಾಟಿ) ಕೀಡೆಯು ಕಬ್ಬಿನ ಸುಳಿಯನ್ನು ಕೊರೆಯುವುದರಿಂದ ಬಾಧೆಗೊಳಪಟ್ಟ ಸುಳಿಯು ಕ್ರಮೇಣವಾಗಿ ಒಣಗುವುದು. ಇದರಿಂದ ಸಾಕಷ್ಟು ಸಸಿಗಳ ಸಂಖ್ಯೆ ಕಡಿಮೆಯಾಗುವುದು.

1) ಸುಳಿ ಕೊರೆಯುವ ಹುಳುವಿನ ಪತಂಗ  2) ಸುಳಿ ಕೊರೆಯುವ ಹುಳು  3) ಬಾಧೆಗೊಳಗಾದ ಬೆಳೆ

ನಿರ್ವಹಣೆ

  • ಮೊಟ್ಟೆಯ ಗುಂಪುಗಳನ್ನು ನಾಶಪಡಿಸಬೇಕು.
  • ಜೈವಿಕ ಕ್ರಮದಿಂದ ಈ ಪೀಡೆಯನ್ನು ನಾಶಪಡಿಸಲು ಟ್ರೈಕೋಗ್ರಾಮ ಪರತಂತ್ರ ಜೀವಿಗಳನ್ನು ಎಕರೆಗೆ 50,000 ರಂತೆ ವಾರಕ್ಕೊಮ್ಮೆ 5 ಸಲ ಕಬ್ಬು ನೆಟ್ಟಿ 4 ವಾರಗಳ ನಂತರ ಬಿಡಬೇಕು.
  • ನಾಟಿ ಮಾಡಿದ 6-10 ವಾರಗಳ ನಂತರ ಸಾಲಿನ ಎರಡು ಬದಿಯಿಂದಲೂ ಮಣ್ಣನ್ನು ಏರಿಸಬೇಕು.
  • ಸುಳಿಯಿಂದ ಒಣಗಿದ ಕಬ್ಬನ್ನು ನಾಶಪಡಿಸಬೇಕು.
  • ತಡವಾಗಿ (ಡಿಸಂಬರ್) ನಾಟಿ ಮಾಡಿದ ಕಬ್ಬಿನಲ್ಲಿ ಈರುಳ್ಳಿ, ಕೋತಂಬರಿ ಅಥವಾ ಬೆಳ್ಳುಳ್ಳಿ ಯನ್ನು ಬೋದಿನ ಒಂದು ಬದಿಯಲ್ಲಿ ಬೆಳೆಯುವುದರಿಂದ ಕೀಟದ ಬಾಧೆ ಕಡಿಮೆಯಾಗಿ ಹೆಚ್ಚಿನ ಇಳುವರಿ ಬರುವುದು.

ಗೆದ್ದಲು ಹುಳು

ಕಬ್ಬು ನಾಟಿ ಆದ ಮೇಲೆ ಅತೀ ಕಡಿಮೆ ಮೊಳಕೆ, ಸಸ್ಯಗಳು ಒಣಗುವುದು ಹಾಗೂ ಕಿತ್ತಾಗ ಮಣ್ಣನ್ನು ತೊಂಬಿಕೊಂಡು ಅತೀ ಸರಳವಾಗಿ ಹೊರಬರುವುದು.

ನಿರ್ವಹಣೆ

  • ಹುತ್ತದಲ್ಲಿರುವ ರಾಣಿ ಹುಳುವನ್ನು ನಾಶಪಡಿಸುವುದು.
  • ಬೆಳೆಗಳಿಗೆ ಆಗಾಗ ನೀರು ಹಾಯಿಸುವುದು ಹಾಗೂ ಅಂತರ ಬೇಸಾಯ ಮಾಡುವುದು.
  • ಪ್ರತಿ ಲೀ. ನೀರಿಗೆ 10 ಮಿ.ಲೀ. ಕ್ಲೋರೋಪೈರಿಫಾಸ್ 20 ಇ.ಸಿ ಯನ್ನು ಸೇರಿಸಿ ಎಕರೆಗೆ 200 ಲೀ.ನಂತೆ ಮಣ್ಣಿಗೆ ಸಿಂಪಡಿಸಿ.
  • ಕಬ್ಬನ್ನು ನಾಟಿ ಮಾಡುವಾಗ ತುಂಡುಗಳ ಮೇಲೆ ಇದೇ ಸಿಂಪರಣೆ ಅನುಸರಿಸಬೇಕು.

ಲೇಖಕರು:

ಡಾ.ಸೈಯದ ಸಮೀನ ಅಂಜುಮ್ 9739321487,

ಡಾ. ಆರ್. ಬಿ. ನೆಗಳೂರ ಮತ್ತು ಹೀನ, ಎಮ್.ಎಸ್

ಐ.ಸಿ.ಎ.ಆರ್.ಕೃಷಿ ವಿಜ್ಞಾನ ಕೇಂದ್ರ, ಸ್ಟೇಶನ್ ರೋಡ್, ಇಂಡಿ

Published On: 13 June 2022, 05:09 PM English Summary: Major Disease and Insects in Sugarcanes...

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.