ಸಸ್ಯಗಳಿಗೆ ಪೋಷಕಾಂಶಗಳ ಪೂರೈಕೆಯಲ್ಲಿ ನ್ಯಾನೋ ಯೂರಿಯಾದ ಮಹತ್ವದ ಕುರಿತು ಮೂಡಿಗೆರೆ ತೋಟಗಾರಿಕೆ ವಿಶ್ವವಿದ್ಯಾಲಯದ ಸಹಾಯಕ ಪ್ರಾಧ್ಯಾಪಕಿ ಡಾ. ಪ್ರಿಯಾಂಕಾ ಎಂ., ಮತ್ತು ಡೀನ್ ಡಾ. ನಾರಾಯಣ ಎಸ್. ಮಾವರ್ಕರ್ ಅವರು ಬರೆದ ಲೇಖನ ಇಲ್ಲಿದೆ.
ಇದನ್ನೂ ಓದಿರಿ: ಕಬ್ಬಿನಲ್ಲಿ ಪ್ರಮುಖ ರೋಗ ಮತ್ತು ಕೀಟಗಳು- ಸಮಗ್ರ ನಿರ್ವಹಣಾ ಕ್ರಮಗಳು
ಸಸ್ಯಗಳಿಗೆ ಪೋಷಕಾಂಶಗಳು ಅತ್ಯಮೂಲ್ಯವಾದದ್ದು. ಪ್ರಮುಖ ಪೋಷಕಾಂಶಗಳಲ್ಲಿ ಒಂದಾದ ಸಾರಾಜನಕದ ಅಗತ್ಯವು ಬಹುಮುಖ್ಯವಾಗಿದೆ.
1.5% ರಷ್ಟು ಸಸ್ಯದಲ್ಲಿ ಸಾರಾಜನಕದ ಅಂಶವಿರುತ್ತದೆ. ಸಾರಾಜನಕವನ್ನು ಯೂರಿಯಾ ಮೂಲಕ ಸಸ್ಯಗಳಿಗೆ ಒದಗಿಸಲು ಬಳಸುತ್ತಾರೆ. ಇಫ್ಕೋ ಕಂಪನಿಯು ಪ್ರಪ್ರಥಮ ಬಾರಿಗೆ ನ್ಯಾನೋ ಯೂರಿಯಾವನ್ನು ಅಭಿವೃದ್ಧಿ ಪಡಿಸಿತು. 2019 ರಲ್ಲಿ ರೈತರಿಗೆ ವಿತರಣೆ ಮಾಡಲು ಪ್ರಾರಂಭಿಸಲಾಯಿತು.
ನ್ಯಾನೋ ಯೂರಿಯಾ ಅತಿ ಸೂಕ್ಷ್ಮವಾಗಿದ್ದು ಪರಿಣಾಮಕಾರಿಯಾಗಿ ಸಸ್ಯಗಳು ಹೀರಿಕೊಳ್ಳುತ್ತವೆ. ನ್ಯಾನೋ ಯೂರಿಯಾವನ್ನು ಭೂಮಿಗೆ ಹಾಕುವಂತಿಲ್ಲ ನೇರವಾಗಿ ಸಸ್ಯಗಳಿಗೆ ಸಿಂಪಡಿಸಬೇಕು. ನ್ಯಾನೋ ಯೂರಿಯಾ ಬಾಟಲ್ಗಳಲ್ಲಿ ಲಭ್ಯವಿದ್ದು 2021 ರಲ್ಲಿ ಮಾರುಕಟ್ಟೆಗೆ ಬಂದ ವರ್ಷವಾಗಿದೆ.
ಕರ್ನಾಟಕ ರಾಜ್ಯದಲ್ಲಿ ರೈತರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ನ್ಯಾನೋ ಯೂರಿಯಾವನ್ನು ಎಲ್ಲಾ ಬೆಳೆಗಳಿಗೆ ಮತ್ತು ಬೆಳೆಗಳ ಉತ್ತಮ ಇಳುವರಿಗಾಗಿ ಬಳಸಬಹುದು. 11,000 ಕ್ಕೂ ಹೆಚ್ಚು ರೈತರ ಕ್ಷೇತ್ರಗಳಲ್ಲಿ 94 ಬೆಳೆಗಳ ಮೇಲೆ ಪರೀಕ್ಷಿಸಿ ICAR, SAU ಮತ್ತು KVK ಗಳು ಅನುಮೋದಿಸಿದೆ.
ಉತ್ತಮ ಇಳುವರಿ ನೀಡುವ ರೋಗ ನಿರೋಧಕ ಭತ್ತದ ತಳಿಗಳ ಕುರಿತು ಇಲ್ಲಿದೆ ಸಮಗ್ರ ಮಾಹಿತಿ…
ನ್ಯಾನೋ ಯೂರಿಯಾ ಬಳಸುವುದರಿಂದ ಸಾಂಪ್ರದಾಯಿಕ ಯೂರಿಯಾ ಬಳಕೆಯನ್ನು 50% ರಷ್ಟು ಕಡಿಮೆ ಮಾಡಬಹುದು ಹಾಗೂ 1 ಚೀಲ(45 ಕೆ.ಜಿ) ಸಾಂಪ್ರದಾಯಿಕ ಯೂರಿಯಾ 50 ಎಂ.ಎಲ್ ಬಾಟಲ್ಗೆ ಸಮ ಇದರಿಂದ ಶೇ.15 ರಷ್ಟು ಖರ್ಚು ಕಡಿಮೆ ಇಳುವರಿಯನ್ನು ಸಹ ಹೆಚ್ಚಿಸುತ್ತದೆ.
ನ್ಯಾನೋ ಯೂರಿಯಾ ಬಳಸುವುದರಿಂದ ಹೆಚ್ಚಿನ ಸಂಖ್ಯೆಯ ಯೂರಿಯಾ ಚೀಲಗಳ ಬಳಕೆಯನ್ನು ಕಡಿತಗೊಳಿಸುತ್ತದೆ. ಇದು ನ್ಯಾನೋ ತಂತ್ರಜ್ಞಾನ ಬಳಸಿಕೊಂಡು ಅಭಿವೃದ್ಧಿಪಡಿಸಿದಂತಹ ಒಂದು ಉತ್ಪನ್ನವಾಗಿದೆ.
260ರೂ 50ಎಂ.ಎಲ್ ನ್ಯಾನೋ ಯೂರಿಯಾ ಬಾಟಲ್ನ ಬೆಲೆಯಾಗಿದೆ. ಇದನ್ನು ಗಿಡಕ್ಕೆ ಸಿಂಪಡಿಸುವುದರಿಂದ ಮಣ್ಣಿನ ಆರೋಗ್ಯ ಕಾಪಾಡುವುದರ ಜೊತೆಗೆ ನೀರು ಕಲುಷಿತಗೊಳ್ಳುವುದನ್ನು ತಡೆಯುತ್ತದೆ.
ನ್ಯಾನೋ ಯೂರಿಯಾ ಬಳಸುವುದರಿಂದ ಆಗುವ ಉಪಯೋಗಗಳು:
- ಸಾಂಪ್ರದಾಯಿಕ ಯೂರಿಯಾಕ್ಕೆ ಹೋಲಿಸಿದರೆ ಕಡಿಮೆ ಪ್ರಮಾಣದ ಬಳಕೆಯನ್ನು ಹೊಂದಿದೆ
- ಬೆಳೆ ಉತ್ಪಾದಕತೆಯನ್ನು ಹೆಚ್ಚಿಸುತ್ತದೆ.
- ಶೂನ್ಯ ವ್ಯರ್ಥ
- ಸುಲಭ ಸಾಗಣೆ ಮತ್ತು ಪರಿಸರ ಸ್ನೇಹಿ
- ಆರ್ಥಿಕವಾಗಿ ಕೈಗೆಟುಕುವುದು
- ಸಸ್ಯ ಮತ್ತು ಪ್ರಾಣಿಗಳಿಗೆ ವಿಷಕಾರಿಯಲ್ಲ
- ಆಹಾರ ಮತ್ತು ಪರಿಸರಕ್ಕೆ ಸುರಕ್ಷಿತ ಮತ್ತು ಸುಸ್ಥಿರ
- ನಿಖರ ಕೃಷಿಗೆ ಉಪಯುಕ್ತವಾಗಿದೆ.
ಕಪ್ಪು ಗೋಧಿಯ ಬಗ್ಗೆ ನಿಮಗೆ ಗೊತ್ತೆ? ಇಲ್ಲಿದೆ ರೈತರಿಗೆ ಲಾಭದಾಯಕ ಕೃಷಿಯ ಐಡಿಯಾ!
ರಾಜ್ಯದ ರೈತರು ನ್ಯಾನೋ ಯೂರಿಯಾ ಬಳಕೆಯ ಕಡೆ ಒಲವು ಹೆಚ್ಚಿಸುತ್ತಿದ್ದಾರೆ. ಮುಂದೆ ಬರುವ ವರ್ಷಗಳಲ್ಲಿ ಹರಳಿನ ಯೂರಿಯಾ ಬಳಕೆ ಕ್ಷೀಣಿಸುವುದರಲ್ಲಿ ಅನುಮಾನವೇ ಇಲ್ಲ ಎನ್ನಬಹುದಾಗಿದೆ.
ನ್ಯಾನೋ ಯೂರಿಯಾವನ್ನು ಕೀಟನಾಶಕ ಹಾಗೂ ಶಿಲೀಂದ್ರನಾಶಕಗಳ ಜೊತೆ ಬಳಸುವ ಬಗ್ಗೆ ಹೆಚ್ಚಿನ ಸಂಶೋಧನೆ ನಡೆಸುತ್ತಿದ್ದು IFFCO ಉತ್ತಮ ಫಲಿತಾಂಶದ ನಿರೀಕ್ಷೆಯಲ್ಲಿದ್ದಾರೆ.
ಡಾ. ಪ್ರಿಯಾಂಕ, ಎಂ ಮತ್ತು ಡಾ. ನಾರಾಯಣ ಎಸ್. ಮಾವರ್ಕರ್
ಸಹಾಯಕ ಪ್ರಾಧ್ಯಪಕಿ, ಬೀಜ ವಿಜ್ಞಾನ ಮತ್ತು ತಂತ್ರಜ್ಞಾನ ವಿಭಾಗ, ತೋಟಗಾರಿಕೆ ಮಹಾವಿದ್ಯಾಲಯ, ಮೂಡಿಗೆರೆ,
ಡೀನ್ (ತೋಟಗಾರಿಕೆ.) ತೋಟಗಾರಿಕೆ ಮಹಾವಿದ್ಯಾಲಯ, ಮೂಡಿಗೆರೆ.
Share your comments