1. ಪಶುಸಂಗೋಪನೆ

ಕರ್ನಾಟಕ ಆದಿ ಜಾಂಬವ ಅಭಿವೃದ್ಧಿ ನಿಗಮದ ವತಿಯಿಂದ ಕುರಿ, ಮೇಕೆ ಘಟಕ ಸ್ಥಾಪಿಸಲು ಶೇ. 50 ರಷ್ಟು ಸಹಾಯಧನ ನೀಡಲು ಅರ್ಜಿ ಆಹ್ವಾನ

goat shed

ಕರ್ನಾಟಕ ಆದಿ ಜಾಂಬವ ಅಭಿವೃದ್ಧಿ ನಿಗಮದ ವತಿಯಿಂದ ಕುರಿ/ಹಂದಿ/ಮೊಲ ಸಾಕಾಣಿಕೆ, ತಳ್ಳುವ ಗಾಡಿ ಘಟಕಗಳನ್ನು ಸ್ಥಾಪಿಸಲು ಶೇಕಡಾ 50 ರಷ್ಟು ಸಹಾಯಧನ ನೀಡಲು ರೈತರಿಂದ ಅರ್ಜಿ ಆಹ್ವಾನಿಸಲಾಗಿದೆ.

ಗರಿಷ್ಟ ಘಟಕ ವೆಚ್ಚ ರೂ. 50,000/- (ಶೇ. 50 ಸಾಲ ಮತ್ತು ಶೇ. 50 ಸಹಾಯಧನ) ನೀಡಲಾಗುವುದು. ಯೋಜನೆಯ ಘಟಕ ವೆಚ್ಚ ರೂ. 50,000/- ಗಳಾಗಿದ್ದು, ಈ ಪೈಕಿ ರೂ. 25,000/- ಸಹಾಯಧನ ಮತ್ತು ರೂ. 25,000/- ಸಾಲವಾಗಿರುತ್ತದೆ. ಸಾಲದ ಮೊತ್ತವನ್ನು ಶೇ. 4ರ ಬಡ್ಡಿದರದಲ್ಲಿ 30 ಸಮಾನ ಕಂತುಗಳಲ್ಲಿ ನಿಗಮಕ್ಕೆ ಮರು ಪಾವತಿಸಬೇಕಾಗುತ್ತದೆ. ಭರ್ತಿ ಮಾಡಿದ ಅರ್ಜಿಗಳನ್ನು ಸೆಪ್ಟೆಂಬರ್ 1 ರೊಳಗಗಾಗಿ ಅರ್ಜಿ ಸಲ್ಲಿಸಬೇಕು.

ಕರ್ನಾಟಕ ಆದಿಜಾಂಬವ ಅಭಿವೃದ್ದಿ ನಿಗಮದ ವ್ಯಾಪ್ತಿಗೆ ಬರುವ ಈ ಕೆಳಕಂಡ ಜಾತಿಗೆ ಸೇರಿರುವವರು ಮಾತ್ರ ಅರ್ಜಿ ಸಲ್ಲಿಸಬಹುದು. ಅರುಂಧತಿಯಾರ್, ಭಂಗಿ, ಮೆಹತರ್, ಓಲ್ಗಾನ, ರೂಖಿ, ಮಲ್ಕಾನ, ಹಲಾಲಕೋರ, ಲಾಲ್‍ಬೇಗಿ, ಬಾಲ್ಮಿಕಿ, ಕೊರರ್, ಜಾಡಮಾಲಿ, ಬಾಂಬಿ, ಭಾಂಭಿ, ಅಸಾದರು, ಅಸೋಡಿ, ಚಮ್ಮಡಿಯ, ಚಮ್ಮಾರ್, ಚಂಭಾರ್, ಚಮಗಾರ್, ಹರಳಯ್ಯ, ಹರಲಿ, ಖಲ್ಪ, ಮಚಗಾರ್, ಮೋಚಿಗಾರ್, ಮಾದರ್, ಮಾದಿಗ್, ಮೋಚಿ, ಮೂಚಿ, ತೆಲುಗುಮೋಚಿ, ಕಾಮಟಿಮೋಚಿ, ರಾಣಿಗರ್, ರೋಹಿದಾಸ್, ರೋಹಿತ್, ಸಮಗಾರ್, ಬಿಂಡ್ಲಾ, ಚಕ್ಕಿಲಿಯನ್, ದಕ್ಕಲ್, ದೊಕ್ಕಲವಾರ್, ದಕ್ಕಲಿಗ, ಡೋರ್, ಕಕ್ಕಯ್ಯ, ಕನ್‍ಕಯ್ಯ, ಜಾಂಬುವುಲ, ಮಾಚಾಲ, ಮಾದಿಗ, ಮಾಂಗ್, ಮಾತಂಗ್, ಮಿನಿ ಮಾದಿಗ್, ಮಾಂಗಗಾರುಡಿ, ಮಾಂಗಗಾರೋಡಿ, ಮಾಷ್ಟಿ, ಸಮಗಾರ, ಸಿಂದೊಲ್ಲು, ಚಿಂದೊಲ್ಲು. ಜಾತಿಗೆ ಸೇರಿದವರು ಅರ್ಜಿ ಸಲ್ಲಿಸಬೇಕು.

ಅರ್ಜಿ ಸಲ್ಲಿಸಲು ಅರ್ಹತೆ:

ಅರ್ಜಿದಾರರು ಪರಿಶಿಷ್ಟ ಜಾತಿಯ ಮಾದಿಗ ಮತ್ತು ಸಂಬಂಧಿತ ಜಾತಿಗಳಿಗೆ ಸೇರಿದವರಾಗಿರಬೇಕು. ಆದಿ ಕರ್ನಾಟಕ, ಆದಿ ಆಂದ್ರ, ಆದಿ ದ್ರಾವಿಡ ಎಂಬ ಹೆಸರಿನಲ್ಲಿ ಜಾತಿ ಪ್ರಮಾಣ ಪತ್ರವನ್ನು ಸಲ್ಲಿಸಿದಲ್ಲಿ ಕಡ್ಡಾಯವಾಗಿ ಮೂಲ ಜಾತಿಯನ್ನು ನಮೂದಿಸಿ ಸ್ವಯಂ ಘೋಷಣೆ ಪ್ರಮಾಣ ಪತ್ರವನ್ನು ಸಲ್ಲಿಸಬೇಕು. ಕರ್ನಾಟಕ ರಾಜ್ಯದ ನಿವಾಸಿಯಾಗಿರಬೇಕು. ಅರ್ಜಿದಾರರು/ ಕುಟುಂಬದ ಅವಲಂಬಿತ ಯಾವುದೇ ಸದಸ್ಯರು ಈ ಹಿಂದೆ ನಿಗಮದಿಂದ ಸೌಲಭ್ಯ ಪಡೆದಿದ್ದಲ್ಲಿ, ಅಂತಹ ಫಲಾನುಭವಿಗಳು ಅರ್ಹರಿರುವುದಿಲ್ಲ. ಅರ್ಜಿದಾರರು ಘಟಕವನ್ನು ಸ್ಥಾಪಿಸಲು ಅವಶ್ಯವಿರುವ ಸ್ಥಳಾವಕಾಶವನ್ನು ಹೊಂದಿರಬೇಕು.

ನಿಯಮಗಳು:

ಅರ್ಜಿದಾರರು ಆಯ್ಕೆ ಸಮಿತಿಯಿಂದ ಆಯ್ಕೆಯಾಗಿರಬೇಕು. ಅರ್ಜಿದಾರರ ಕುಟುಂಬದ ವಾರ್ಷಿಕ ವರಮಾನವು ಗ್ರಾಮೀಣ ಪ್ರದೇಶದವರಿಗೆ ರೂ.1,50,000/- ಹಾಗೂ ನಗರ ಪ್ರದೇಶದವರಿಗೆ ರೂ.2,00,000/- ಗಳ ಮಿತಿಯೊಳಗಿರಬೇಕು. ಅರ್ಜಿದಾರರು 21 ವರ್ಷದಿಂದ 50 ವರ್ಷದವರೆಗಿನ ವಯೋಮಾನದವರಾಗಿರಬೇಕು. ಮಂಜೂರಾತಿ ಪಡೆದ ಫಲಾನುಭವಿಯು ಅನರ್ಹರೆಂದು ಕಂಡು ಬಂದಲ್ಲಿ ಮಂಜೂರಾತಿಯನ್ನು ಯಾವುದೇ ಹಂತದಲ್ಲಿ ರದ್ದುಪಡಿಸಲಾಗುತ್ತದೆ. ಸಹಾಯಧನ ಮತ್ತು ಸಾಲವನ್ನು ನೇರವಾಗಿ ಫಲಾನುಭವಿಗಳಿಗೆ/ಮಾರಾಟಗಾರರಿಗೆ ಬಿಡುಗಡೆ ಮಾಡಲಾಗುವುದು.

ಅರ್ಜಿಯನ್ನು ಆನ್ಲೈನ್ ಮೂಲಕ ಸಲ್ಲಿಸಬೇಕು. ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು https://adijambava.online/

ಮೇಲೆ ಕ್ಲಿಕ್ ಮಾಡಬೇಕು. ಸ್ವಯಂ ಉದ್ಯೋಗ ನೇರ ಸಾಲ ಯೋಜನೆಯ ಮಂದೆ ಇರುವ ಅರ್ಜಿ ನಮೂನೆ (ಆನ್ಲೈನ್ ಸಲ್ಲಿಕೆ ಮೇಲೆ ಕ್ಲಿಕ್ ಮಾಡಿದ ನಂತರ ಇನ್ನೊಂದು ಪೇಜ್ ಓಪನ್ ಆಗುತ್ತದೆ. ಅಲ್ಲಿ ಕೇಳಲಾದ ಎಲ್ಲಾ ಮಾಹಿತಿಗಳನ್ನು ಭರ್ತಿ ಮಾಡಿ ಸಬ್ಮಿಟ್ ಮಾಡಬೇಕು.

ಫಲಾಪೇಕ್ಷಿಯು ಅರ್ಜಿಯೊಂದಿಗೆ ಸಲ್ಲಿಸಬೇಕಾದ ದಾಖಲಾತಿಗಳು:

ಅರ್ಜಿ, ಭಾವಚಿತ್ರ, ಜಾತಿ ಪತ್ರ (ಆರ್.ಡಿ. ಸಂಖ್ಯೆ ಹೊಂದಿರಬೇಕು). ಆಧಾಯ ಪತ್ರ (ಆರ್.ಡಿ. ಸಂಖ್ಯೆ ಹೊಂದಿರಬೇಕು). ಆಧಾರ್ ಕಾರ್ಡ್ ಹಾಗೂ ಬ್ಯಾಂಕ್ ಪಾಸ್ಬುಕ್ ಹೊಂದಿರಬೇಕು. ಹೆಚ್ಚಿನ ಮಾಹಿತಾಗಿ https://adijambava.online/ ಗೆ ಸಂಪರ್ಕಿಸಬಹುದು.

Published On: 04 August 2021, 08:51 AM English Summary: Fifty percentage subsidy for setting up sheep and goat unit

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.