ಈರುಳ್ಳಿ ಎಲ್ಲರ ಮನೆಯ ಅಚ್ಚುಮೆಚ್ಚಿನ ತರಕಾರಿ. ಈರುಳ್ಳಿ ಇಲ್ಲದೆ ಅಡುಗೆಯೇ ಇಲ್ಲ. ವಗ್ಗರಣೆ, ಸಾಂಬಾರು, ಪಲ್ಯ, ಉಪ್ಪಿಟ್ಟು ಮತ್ತಿತರ ತಿಂಡಿಗಳು, ಪಲಾವು ಸೇರಿ ಹತ್ತು ಹಲವು ಬಗೆಯ ರೈಸ್ ಬಾತುಗಳು... ಇವೆಲ್ಲಕ್ಕೂ ಈರುಳ್ಳಿ ಇಲ್ಲವೆಂದರೆ ನಡೆಯುವುದೇ ಇಲ್ಲ. ಅದರಲ್ಲೂ ಭಾರತದಲ್ಲಿ ಈರುಳ್ಳಿಗಳು ಅಡುಗೆ ಮನೆಯ ಅನಿವಾರ್ಯ ಮತ್ತು ಅವಿಭಾಜ್ಯ ಅಂಗಗಳಾಗಿವೆ.
ಗೃಹಿಣಿಯರು ಬೆಳಗ್ಗೆ ಎದ್ದು ಅಡುಗೆ ಮನೆಗೆ ಹೋದಾಗ ಕೈಗೆ ಈರುಳ್ಳಿ ಸಿಗದಿದ್ದದರೆ ಅಥವಾ ಈರುಳ್ಳಿ ಬುಟ್ಟಿ ಖಾಲಿಯಾಗಿದ್ದರೆ ಅಡುಗೆ ತಯಾರಿ ಅಲ್ಲಿಗೇ ನಿಂತು ಹೋಗುತ್ತದೆ. ತರಕಾರಿ ಅಂಗಡಿಗೆ ಹೋಗಿ ಈರುಳ್ಳಿ ಖರೀದಿಸಿ ತರುವವರೆಗೂ ಅಡುಗೆ ಕೆಲಸ ತಾತ್ಕಾಲಿಕವಾಗಿ ನಿಂತಿರುತ್ತದೆ. ಅಡುಗೆ ಮನೆಗಳಲ್ಲಿ ಇಷ್ಟೊಂದು ಹಾಸುಹೊಕ್ಕಾಗಿರುವ ಈ ಈರುಳ್ಳಿಗಳ ಉಲ್ಲೇಖವನ್ನು ಖ್ಯಾತ ಸಾಹಿತಿಗಳೆಲ್ಲರೂ ತಮ್ಮ ತಮ್ಮ ಪುಸ್ತಕಗಳಲ್ಲಿ ಮಾಡಿದ್ದಾರೆ. ಈ ಉಳ್ಳಾಗಡ್ಡಿಗಳು ಅದೆಷ್ಟು ಫೇಮಸ್ ಎಂದರೆ ಸಿನಿಮಾಗಳಲ್ಲೂ ಇವುಗಳ ಛಾಪು ಇದೆ. ದಂಪತಿಗೆ ಮಕ್ಕಳಾಗದಿದ್ದರೆ, ಪುರುಷನಿಗೆ ಈರುಳ್ಳಿ ಹೆಚ್ಚಾಗಿ ತಿನ್ನಿಸಬೇಕು ಎಂಬ ಅಲಿಖಿತ ಮದ್ದು ತಾತ ಮುತ್ತಾತರ ಕಾಲದಿಂದಲೂ ಬಳಕೆಯಲ್ಲಿದೆ.
ಆದರೆ ಈ ಈರುಳ್ಳಿಗಳ ಬಗ್ಗೆ ನೀವು ಕೇಳದೇ ಇರುವ ವಿಷಯ ಒಂದಿದೆ. ಅದೇನೆಂದರೆ ಅವುಗಳು ವಿಷಕಾರಿ ಅಂಶವನನ್ನು ತಮ್ಮೊಳಗೆ ಅಡಗಿಸಿಟ್ಟುಕೊಂಡಿವೆ. ಕೇಳಲು ಅಚ್ಚರಿ ಎನಿಸಿದರೂ ಇದು ಸತ್ಯ. ಆದರೆ ನೀವು ಇವುಗಳನ್ನು ಕತ್ತರಿಸಿ ತಕ್ಷಣ ಉಪಯೋಗಿಸಿದರೆ ಯಾವುದೇ ತೊಂದರೆ ಇಲ್ಲ. ಕತ್ತರಿಸಿದ ನಂತರ ಕೆಲ ಸಮಯದವರೆಗೆ ಹಾಗೇ ಇಟ್ಟಿರೆಂದರೆ ಇವುಗಳು ಹಾನಿಕಾರಕ ವಿಷಯವನ್ನು ಉತ್ಪತ್ತಿ ಮಾಡಬಲ್ಲವು ಎಂದು ಕೆಲ ವಿಜ್ಞಾನಿಗಳು ಎಚ್ಚರಿಕೆ ನೀಡಿದ್ದಾರೆ.
ರೈತರ ಬಲಿ ಪಡೆದಿದ್ದ ಜ್ವರ
ಇದು 1919ರ ಮಾತು. ಆಗ ಜಗತ್ತಿನಾದ್ಯಂತ ಹರಡಿದ್ದ ವಿಚಿತ್ರ ಸಾಂಕ್ರಾಮಿಕ ಜ್ವರ (ಫ್ಲೂ) ಕೋಟ್ಯಂತರ ಜನರನ್ನು ಬಲಿ ತೆಗೆದುಕೊಂಡಿತ್ತು. ಅದರಲ್ಲೂ ಅಧಿಕ ಸಂಖ್ಯೆಯಲ್ಲಿ ರೈತರೇ ಈ ಜ್ವರಕ್ಕೆ ಬಲಿಯಾಗಿದ್ದರು. ಆಗಿನ ಕಾಲಕ್ಕೆ ವೈದ್ಯಲೋಕಕ್ಕೆ ಇದೊಂದು ದೊಡ್ಡ ಸವಾಲಾಗಿತ್ತು. ಈ ಜ್ವರಕ್ಕೆ ರೈತರು ಬಲಿಯಾಗುತ್ತಿರಲು ಕಾರಣವೇನು? ರೋಗದ ವಿರುದ್ಧ ಪರಿಣಾಮಕಾರಿಯಾಗಿ ಹೋರಾಡುವುದು ಹೇಗೆ? ಇದಕ್ಕೆ ಮದ್ದಾದರೂ ಏನು? ಎಂಬ ಹಲವು ಪ್ರಶ್ನೆಗಳು ಹಾಗೂ ಕುತೂಹಲದೊಂದಿಗೆ ವೈದ್ಯರು, ವಿಜ್ಞಾನಿಗಳು ಮೃತರನ್ನು ನೋಡಿ, ಪರೀಕ್ಷಿಸಲು ಹೋಗುತ್ತಿದ್ದರು.
ಮದ್ದಾಯಿತು ಈರುಳ್ಳಿ
ಪಂಜಾಬ್ನ ಕುಗ್ರಾಮ ಒಂದರಲ್ಲಿ ಈ ಜ್ವರಕ್ಕೆ ಬಹಳಷ್ಟು ರೈತರು, ಅವರ ಕುಟುಂಬದ ಸದಸ್ಯರು ಅಸುನೀಗಿದ್ದರು. ಆದರೆ ಅದೇ ಗ್ರಾಮದ ಒಂದು ಮನೆ ಮತ್ತು ಅಲ್ಲಿ ವಾಸವಿದ್ದ ಮಂದಿ ಮಾತ್ರ ಆ ಜ್ವರ ಹಾಗೂ ತಮಗೆ ಯಾವುದೇ ಸಂಬAಧ ಇಲ್ಲ ಎನ್ನುವಂತೆ ಆರೋಗ್ಯವಾಗಿದ್ದರು. ತಜ್ಞರ ತಂಡ ಆ ಮನೆಗೆ ಭೇಟಿ ನೀಡಿ, ‘ಜ್ವರದ ಹೊಡೆತಕ್ಕೆ ಸಿಲುಕಿ ಊರಿಗೆ ಊರೇ ಸ್ಮಶಾನವಾಗಿದೆ. ನೀವು ಮಾತ್ರ ಸೋಂಕಿನ ಸುಳಿವಿಲ್ಲದೆ ಇಷ್ಟೊಂದು ಆರೋಗ್ಯವಾಗಿರಲು ಕಾರಣವೇನು’ಎಂದು ಮನೆಯವರನ್ನು ಕೇಳಿದರಂತೆ. ಆಗ ಉತ್ತರಿಸಿದ ಮನೆಯ ಯಜಮಾನ, ಸಣ್ಣ ತಟ್ಟೆಗಳಲ್ಲಿ ಸಿಪ್ಪೆ ಸುಲಿಯದ, ಎರಡೂ ತುದಿ ಕತ್ತರಿಸಿದ ಒಂದೊAದು ಈರುಳ್ಳಿ ಇರಿಸಿ ಆ ತಟ್ಟೆಗಳನ್ನು ಮನೆಯ ನಾಲ್ಕೂ ಮೂಲೆ ಹಾಗು ಕೋಣೆಗಳಲ್ಲಿ ಇಟ್ಟಿದ್ದೇವೆ. ಬಹುಷಃ ಅದೇ ಕಾರಣದಿಂದಲೇ ನಮಗೆ ಜ್ವರ ಬಂದಿರಲಿಕ್ಕಿಲ್ಲ ಎಂದರು.
ಮನೆ ಯಜಮಾನನ ಉತ್ತರದಿಂದ ಅಚ್ಚರಿಕೊಂಡ ತಜ್ಞರು, ಮನೆಯ ಮೂಲೆಯಲ್ಲಿ ಇರಿಸಿದ್ದ ಈರುಳ್ಳಿ ತರಿಸಿ, ಅದನ್ನು ಸೂಕ್ಷ್ಮದರ್ಶಕದ ಸಹಾಯದಿಂದ ನೋಡಿದಾಗ ಜ್ವರಕ್ಕೆ ಕಾರಣವಾಗಿದ್ದ ಸೂಕ್ಷ್ಮಾಣು ಜೀವಿಗಳು ಆ ಈರುಳ್ಳಿ ಸುತ್ತ ಅಂಟಿಕೊAಡದ್ದು ಕಂಡುಬAತು. ಆ ಮನೆಯವರು ತಿಳಿದೋ, ತಿಳಿಯದೆಯೋ ಇರಿಸಿದ್ದ ಈರುಳ್ಳಿಗಳು ರೋಗಕಾರಕ ಸೂಕ್ಷ್ಮಾಣುಗಳನ್ನು ತಮ್ಮತ್ತ ಸೆಳೆದು ಮನೆಯವರನ್ನು ಸುರಕ್ಷಿತವಾಗಿ ಇರಿಸಿದ್ದರು. ಈ ವಿಷಯ ತಿಳಿದ ನಂತರ ಬಹುತೇಕ ಎಲ್ಲ ಮನೆಗಳಲ್ಲೂ ‘ಈರುಳ್ಳಿ ಮದ್ದು’ಪ್ರಯೋಗಿಸಲಾಯಿತಂತೆ.
ವೈದ್ಯರಿಂದಲೂ ಪ್ರಯೋಗ
ನ್ಯುಮೋನಿಯಾಗೆ ತುತ್ತಾಗಿ ಇನ್ನಿಲ್ಲದಂತೆ ಬಳಲಿ ಬೆಂಡಾಗಿದ್ದ ಲಂಡನ್ನ ಖ್ಯಾತ ವೈದ್ಯರೊಬ್ಬರು ಅದೊಂದು ದಿನ ಒಂದು ಈರುಳ್ಳಿ ತೆಗೆದುಕೊಂಡು, ಅದರ ಎರಡೂ ತುದಿಗಳನ್ನು ಕತ್ತರಿಸಿ, ಅದನ್ನು ಖಾಲಿ ಬಟ್ಟಲಿನಲ್ಲಿ ಇರಿಸಿ ತಮ್ಮ ಪಕ್ಕದಲ್ಲೇ ಇರಿಸಿಕೊಂಡು ಮಲಗಿದರಂತೆ. ಬೆಳಗ್ಗೆ ಏಳುವ ಹೊತ್ತಿಗೆ ಅವರ ಆರೋಗ್ಯ ಸುಧಾರಿಸಿ, ಸುಸ್ತು ಕಡಿಮೆಯಾಗಿತ್ತಂತೆ. ಜೊತೆಗೆ ಈರುಳ್ಳಿ ಕಪ್ಪು ಬಣ್ಣಕ್ಕೆ ತಿರುಗಿತ್ತಂತೆ!
ಕತ್ತರಿಸಿಟ್ಟ ಈರುಳ್ಳಿ ತಿನ್ನಬೇಡಿ
ಕತ್ತರಿಸಿದ ಈರುಳ್ಳಿಗೆ ಸೂಕ್ಷ್ಮಾಣುಗಳನ್ನು ತನ್ನತ್ತ ಆಕರ್ಷಿಸುವ, ಹೀರಿಕೊಳ್ಳುವ ಗುಣವಿದೆ. ಈ ಕಾರಣಕ್ಕೇ ಮೇಲೆ ಹೇಳಿದ ಮೊದಲ ಘಟನೆಯಲ್ಲಿ ಕುಟುಂಬದ ಸದಸ್ಯರಿಗೆ ಜ್ವರ ಬರಲಿಲ್ಲ. ಹಾಗೇ ಎರಡನೇ ಘಟನೆಯಲ್ಲಿ ವೈದ್ಯರ ನ್ಯುಮೋನಿಯಾ ವಾಸಿಯಾಯಿತು. ಹಾಗಾಗಿ ಕತ್ತರಿಸಿದ ಬಳಿಕ ಗಂಟೆಗಳ ಕಾಲ ಹಾಗೇ ಇರಿಸಿದ ಈರುಳ್ಳಿಗಳನ್ನು ಮನುಷ್ಯರು ತಿನ್ನಬಾರದು. ಒಂದೊಮ್ಮೆ ತಿಂದರೆ ಹೊಟ್ಟೆ ನೋವಿನಂತಹ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ.
ಮುಂಚಿತವಾಗಿ ಕತ್ತರಿಸಿ ಇಡಬೇಡಿ
ಬಹುತೇಕ ಗೃಹಿಣಿಯರು ಅಡುಗೆಗೆ ಬಳಸಿ ಉಳಿದ, ಕತ್ತರಿಸಿದ ಈರುಳ್ಳಿಗಳನ್ನು ಮಧ್ಯಾಹ್ನ ಅಥವಾ ರಾತ್ರಿ ಅಡುಗೆಗೆ ಬಳಸುತ್ತಾರೆ. ಇನ್ನೂ ಕೆಲವರು ಬೆಳಗಿನ ತಿಂಡಿಗೆ ಅಗತ್ಯವಿರುವ ಈರುಳ್ಳಿಗಳನ್ನು ರಾತ್ರಿಯೇ ಕಟ್ ಮಾಡಿ ರೆಫ್ರಿಜರೇಟರ್ನಲ್ಲಿ ಇರಿಸುತ್ತಾರೆ. ಆದರೆ ಕತ್ತರಿಸಿದ ಈರುಳ್ಳಿಗಳನ್ನು ಫ್ರಿಜ್ನಲ್ಲಿ ಇರಿಸಿದರೂ ಸುರಕ್ಷಿತವಲ್ಲ. ಬದಲಿಗೆ ಅವು ಇನ್ನಷ್ಟು ವಿಷಕಾರಿಯಾಗುತ್ತವೆ. ಹಾಗೇ ಶ್ವಾನಗಳಿಗೆ ಈರುಳ್ಳಿಯನ್ನು ಜೀರ್ಣಿಸಿಕೊಳ್ಳುವ ಶಕ್ತಿ ಇರುವುದಿಲ್ಲ. ಆದ್ದರಿಂದ ಅವುಗಳಿಗೆ ಈರುಳ್ಳಿ ತಿನ್ನಿಸಬಾರದು.
ಈರುಳ್ಳಿಯನ್ನು ರಾತ್ರಿ ಕತ್ತರಿಸಿಟ್ಟು ಮರುದಿನ ಅಡುಗೆಗೆ ಬಳಸುವುದು ಅತ್ಯಂತ ಅಪಾಯಕಾರಿ. ಏಕೆಂದರೆ ಕತ್ತರಿಸಿದ ಈರುಳ್ಳಿಯು ಒಂದು ರಾತ್ರಿಯಲ್ಲಿ ಅತ್ಯಂತ ಅಪಾಯಕಾರಿಯಾಗಿರುವ ಲಕ್ಷಾಂತರ ಸೂಕ್ಷ್ಮಾಣುಗಳನ್ನು ಸೃಷ್ಟಿಸುತ್ತದೆ. ಇದರಿಂದ ಉದರಬೇನೆ, ನಿರ್ನಾಳ ಗ್ರಂಥಿಗಳ ಸ್ರಾವದ ಸಾಧ್ಯತೆ ಇರುತ್ತದೆ. ಜೊತೆಗೆ ಅವುಗಳನ್ನು ಬಳಸಿ ಮಾಡಿದ ಆಹಾರ ಕೂಡ ವಿಷವಾಗುತ್ತದೆ.
ಈಗ ಹೇಳಿ ಬೆಳಗಿನ ತಿಂಡಿಗಾಗಿ ಹಿಂದಿನ ರಾತ್ರಿಯೇ ಈರುಳ್ಳಿ ಕತ್ತರಿಸಿ ಇಡುತ್ತೀರಾ..?
Share your comments