ದಿನನಿತ್ಯ ಸೇವಿಸುವ ಆಹಾರಗಳಲ್ಲಿ ವಿವಿಧ ಬಣ್ಣಗಳನ್ನು ಕಾಣುತ್ತೇವೆ. ಹಸಿರು, ಹಳದಿ, ಕೆಂಪು, ಕಿತ್ತಳೆ, ಬಿಳಿ, ನೀಲಿ ಇತ್ಯಾದಿ, ಇವುಗಳಿಂದ ನಮ್ಮ ಆಹಾರವು ಕಣ್ಣಿಗೆ ಅಂದ ಹಾಗೂ ವೈವಿದ್ಯತೆಯನ್ನು ನೀಡುತ್ತಿವೆ. ಆಹಾರವನ್ನು ಆಕರ್ಷಣೀಯವಾಗಿ ಸೇವಿಸಲು ಪ್ರಚೋದಿಸುತ್ತಿರುವುದು ಅಷ್ಟೇ ಅಲ್ಲ, ಅವು ಅಗತ್ಯ ಪೋಷಕಾಂಶಗಳನ್ನು ಕೂಡ ಒದಗಿಸುತ್ತವೆ. ಆಹಾರದಲ್ಲಿರುವ ಬಣ್ಣಗಳು ಅಥವಾ ವರ್ಣಗಳು ಶಕ್ತಿಯುತವಾದ ಉತ್ಕರ್ಷಣ ನಿರೋಧಕ ಗುಣಲಕ್ಷಣಗಳನ್ನು ಹೊಂದಿರುತ್ತವೆ. ಹಾಗೂ ಆರೋಗ್ಯದ ಮೇಲೆ ತೀವ್ರ ಪರಿಣಾಮ ಬೀರುತ್ತದೆ.
ಆಹಾರದಲ್ಲಿರುವ ಈ ವರ್ಣಗಳು ಪೈಟೋಕೆಮಿಕಲ್ಸಗಳು ಸಸ್ಯಗಳನ್ನು ಪರಿಸರದ ಸವಾಲುಗಳಿಂದ ರಕ್ಷಿಸಲು ಸಹಾಯ ಮಾಡುತ್ತವೆ. ರೋಗ, ಕೀಟಗಳು, ಬರ, ಅತಿಯಾದ ಶಾಖ, ನೇರಳಾತೀತ ಕಿರಣಗಳು ಮತ್ತು ಗಾಳಿ ಮತ್ತು ಮಣ್ಣಿನಲ್ಲಿರುವ ವಿಷ ಅಥವಾ ಮಾಲಿನ್ಯಕಾರಕಗಳಿಂದ ಸಸ್ಯಗಳನ್ನು ರಕ್ಷಿಸಲು ಸಹಾಯ ಮಾಡುತ್ತವೆ. ಇವು ಸಸ್ಯದ ಪ್ರತಿರಕ್ಷಣಾ ವ್ಯವಸ್ಥೆಯ ಭಾಗವಾಗಿರುತ್ತವೆ.
ಸಸ್ಯಗಳಲ್ಲಿರುವ ಪೈಟೋನ್ಯೂಟ್ರಿಯಂಟ್ಗಳ ಕಾರ್ಯ ಅತೀ ಪ್ರಾಮುಖ್ಯತೆಯನ್ನು ಪಡೆದಿವೆ.
ಪೈಟೋನ್ಯೂಟ್ರಿಯಂಟ್ಗಳ ಕಾರ್ಯ :
ಗುಣಮಟ್ಟದ ಆರೋಗ್ಯ, ಯೋಗಕ್ಷೇಮ, ರೋಗ ನಿರೋಧಕ ಶಕ್ತಿ ಮತ್ತು ಬಹುಶಃ ದೀರ್ಷಾಯುಷ್ಯಕ್ಕೆ ಪೈಟೊಕೆಮಿಕಲ್ಸ್ ಅವಶ್ಯಕವೆಂದು ತೋರುತ್ತದೆ.
ವರ್ಣರಂಜಿತ ಆಹಾರಗಳಲ್ಲಿರುವ ಪೈಟೋನ್ಯೂಟ್ರಿಯಂಟ್ಗಳನ್ನು ಸೇವಿಸುವುದರಿಂದ ಆರೋಗ್ಯದಲ್ಲಿ ಕೆಲವು ಪ್ರಯೋಜನಗಳನ್ನು ಮತ್ತು ಪ್ರತಿರಕ್ಷಣಾ ವ್ಯವಸ್ಥೆಯ ಚಟುವಟಿಕೆಯನ್ನು ಹೆಚ್ಚಿಸುತ್ತವೆ. ಕ್ಯಾನ್ಸರ್ ವಿರುದ್ಧ ರಕ್ಷಿಸುವುದು, ಕಣ್ಣು ಮತ್ತು ಹೃದಯದ ಆರೋಗ್ಯವನ್ನು ಬೆಂಬಲಿಸುವುದು, ಕೋಶಗಳ ನಡುವಿನ ಸಂವಹನವನ್ನು ಸುಧಾರಿಸುವುದು ಮತ್ತು ಡಿಎನ್ಎ ಹಾನಿಯನ್ನು ಸರಿಪಡಿಸುವುದು, ಆಂಟಿಆಕ್ಸಿಡೆಂಟ್ಗಳು ದೇಹದ ಜೀವಕೋಶಗಳಲ್ಲಿ ಪಡೆಯುವ ಆಕ್ಸಿಡೀಕರಣದ ಉಪ-ಉತ್ಪನ್ನಗಳನ್ನು ಸ್ವಚ್ಚಗೊಳಿಸುವ ಮೂಲಕ ವಯಸ್ಸಾದ ಚಿನ್ಹೆಗಳನ್ನು ನಿಧಾನಗೊಳಿಸಲು ಸಹಾಯ ಮಾಡುತ್ತವೆ.
ಕೆಂಪು ಆಹಾರಗಳು :
ಟೊಮ್ಯಾಟೊ, ಗುಲಾಬಿ, ದ್ರಾಕ್ಷಿ ಹಣ್ಣು, ಕಲ್ಲಂಗಡಿ ಮತ್ತು ಪಪ್ಪಾಯ ಮುಂತಾದವು ಇವುಗಳಲ್ಲಿ ಲೈಕೋಪೀನ್ (ಕ್ಯಾರೋಟಿನಾಯ್ಡ) ಸಮೃದ್ಧವಾದರೆ ಈ ಲೈಕೋಪಿನ್ ಉತ್ಕರ್ಷಣ ನಿರೋಧಕ ಚಟುವಟಿಕೆಯ ಜೊತೆಗೆ, ದೇಹದಲ್ಲಿ ಗೆಡ್ಡೆಗಳ ಬೆಳವಣಿಗೆಯನ್ನು ನಿರ್ವಹಿಸುತ್ತದೆ. ಜೀವಕೋಶಗಳ ನಡುವಿನ ಕಳಪೆ ಸಂವಹನವು ಜೀವಕೋಶಗಳ ಅಸಹಜ ಬೆಳವಣಿಗೆಗೆ ಒಂದು ಕಾರಣ ಎಂದು ಸಂಶೋಧಕರು ನಂಬಿದ್ದಾರೆ. ಇದು ಅಂತಿಮವಾಗಿ ವಿವಿಧ ರೀತಿಯ ಕ್ಯಾನ್ಸರ್ ಬೆಳವಣಿಗೆಗೆ ಕಾರಣವಾಗಬಹುದು. ಜೀವಕೋಶದ ನಡುವಿನ ಸಂವಹನವನ್ನು ಉತ್ತೇಜಿಸುವ ಮೂಲಕ ಲೈಕೋಪಿನ್ ಗೆಡ್ಡೆಯ ಬೆಳವಣಿಗೆಯನ್ನು ಮಿತಗೊಳಿಸುವ ಒಂದು ಮಾರ್ಗವಾಗಿದೆ. ಜೀವಕೋಶದ ಪೊರೆಗಳನ್ನು ಹಾನಿಗೊಳಿಸುವ ಸ್ವತಂತ್ರ ರಾಡಿಕಲ್ಸಗಳನ್ನು ತಣಿಸಲು ಲೈಕೋಪಿನ್ ವಿಶೇಷವಾಗಿ ಪರಿಣಾಮಕಾರಿಯಾಗಿದೆ.
ನೇರಳೆ ಮತ್ತು ಕೆಂಪು ಆಹಾರಗಳು :
ಕೆನ್ನೇರಳೆ ಮತ್ತು ಕೆಂಪು ಮಿಶ್ರಿತ ಕಪ್ಪು ಹಣ್ಣುಗಳು ಮತ್ತು ತರಕಾರಿಗಳಾದ ಬೆರಿಹಣ್ಣುಗ, ಕ್ಯ್ರಾನ್ಬೆÉರಿಗಳು, ಬ್ಲ್ಯಾಕ್ಬೆರಿಗಳು ಬಿಳಿಬದನೆ ಮತ್ತು ಪ್ಲಮ್ ಆಂಥೋಸಯಾನಿನ್ ಎಂಬ ಸಂಯುಕ್ತಗಳನ್ನು ಒಳಗೊಂಡಿರುತ್ತವೆÉ. ಇದು ಕೂಡ ಪ್ಲೆವೊನೈಗಳ ಒಂದು ವರ್ಗ .
1) ಇದು ಕ್ಯಾನ್ಸರ್, ಪಾಶ್ರ್ವವಾಯು ಮತ್ತು ಹೃದ್ರೋಗ ಅಪಾಯವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
2) ಗೆಡ್ಡೆಗಳ ಬೆಳವಣಿಗೆಯನ್ನು ತಡೆಗಟ್ಟುತ್ತದೆ.
3) ಮಧುಮೇಹ ಮತ್ತು ಹುಣ್ಣು ಚಿಕಿತ್ಸೆಯಲ್ಲಿ ಪಾತ್ರ ವಹಿಸುತ್ತದೆ.
4) ಆಂಟಿವೈರಲ್ ಮತ್ತು ಆಂಟಿ ಮೈಕ್ರೋಬಿಯಲ್ ಗುಣಲಕ್ಷಣಗಳನ್ನು ಹೊಂದಿದೆ.
ಹಸಿರು ಬಣ್ಣದ ಆಹಾರಗಳು :
ಕಡು ಹಸಿರು ಬಣ್ಣದ ಸೊಪ್ಪುಗಳಾದ ಪಾಲಕ್, ಮೆಂತ್ಯ, ಸಬ್ಬಸಿಗೆ ಮತ್ತು ಎಲೆಕೋಸುಗಳಲ್ಲಿ ‘ಲುಟೀನ್’ ಎನ್ನುವ ಅಂಶವನ್ನು ಹೊಂದಿರುತ್ತವೆ ಹಾಗೂ ಮತ್ತೊಂದು ಕ್ಯಾರೋಟಿನಾಯ್ಡ್ ಉತ್ಕರ್ಷಣ ನಿರೋಧಕವಾಗಿದೆ. ಇದು ಚÀರ್ಮ ಮತ್ತು ಕಣ್ಣಿನ ಆರೋಗ್ಯಕ್ಕೆ ಮುಖ್ಯವಾಗಿದೆ. ಗಾಢ ಹಸಿರು ಆಹಾರಗಳು ಬಿ-ವಿಟಮಿನ್ ಪೋಲೇಟ್ನ ಉತ್ತಮ ಮೂಲವಾಗಿದೆ. ಇವುಗಳ ಹೊಸ ಕೋಶಗಳನ್ನು ಉತ್ಪಾದಿಸಲು ಮತ್ತು ನಿರ್ವಹಿಸಲು ಸಹಾಯ ಮಾಡುತ್ತವೆ. ಜೀವಕೋಶಗಳ ಬಿಲ್ಡಿಂಗ್ ಬ್ಲಾಕ್ಗಳಾದ ಡಿ.ಎನ್.ಎ. ಮತ್ತು ಆರ್.ಎನ್.ಎ. ರಚನೆಗೆ ಪೋಲೇಟ್ ಅವಶ್ಯಕ. ಕ್ಯಾನ್ಸರ್ಗೆ ಕಾರಣವಾಗುವ ಜೀವಕೋಶಗಳಲ್ಲಿನ ಡಿ.ಎನ್.ಎ. ಬದಲಾವಣೆಗಳನ್ನು ತಡೆಯಲೂ ಸಹ ಇದು ಸಹಾಯ ಮಾಡುತ್ತದೆ. ಕಿತ್ತಳೆ, ಹಳದಿ ಮತ್ತು ಹಸಿರು ಆಹಾರಗಳಾದ ಸಿಹಿ ಆಲೂಗಡ್ಡೆ, ಕ್ಯಾರೆಟ್, ಮಾವಿನ ಹಣ್ಣು, ಪಾಲಕ್ ಮತ್ತು ಕುಂಬಳಕಾಯಿ ಇವು ಬೀಟಾ ಕ್ಯಾರೋಟಿನ್ ಅನ್ನು ಹೊಂದಿರುತ್ತವೆ. ಇದನ್ನು ದೇಹವು ರೆಟಿನಾಲ್ ಅಂದರೆ ವಿಟಮಿನ್ ‘ಎ’ ಯಾಗಿ ಪರಿವರ್ತಿಸುತ್ತದೆ. ಇದು ಪ್ರಭಲವಾದ ಉತ್ಕರ್ಷಣ ನಿರೋಧಕವ.Å ಕಣ್ಣಿನ ಆರೋಗ್ಯ, ಪ್ರತಿರಕ್ಷಣಾ ವ್ಯವಸ್ಥೆಯ ಕಾರ್ಯ ಮತ್ತು ಆರೋಗ್ಯಕರ ಹೃದಯಕ್ಕೆ ಪ್ರಯೋಜನಕಾರಿಯಾಗಿದೆ. ಬೀಟಾ ಕ್ಯಾರೋಟಿನ್ ಸಮೃದ್ಧ ಆಹಾರಗಳಾದ ಕಿತ್ತಳೆ, ಪಪ್ಪಾಯ, ದಪ್ಪ ಮೆಣಸು ಮತ್ತು ಕೀವಿಹಣ್ಣು ಸಹ ವಿಟಾಮಿನ್ ’ಸಿ’ ಯನ್ನು ಹೊಂದಿರುತ್ತದೆ ಇದು ಚರ್ಮ ಮತ್ತು ರೋಗ ನಿರೋಧಕ ವ್ಯವಸ್ಥೆಯ ಆರೋಗ್ಯವನ್ನು ಉತ್ತೇಜಿಸುತ್ತದೆ ಹಾಗೂ ಕೋಶಗಳ ಹಾನಿಯನ್ನು ತಪ್ಪಿಸುತ್ತದೆ.
ಬಿಳಿ ಹಣ್ಣು ಮತ್ತು ತರಕಾರಿಗಳು :
ಬಿಳಿ ಹಣ್ಣು ಮತ್ತು ತರಕಾರಿಗಳಾದ ಬಾಳೆ ಹಣ್ಣು, ಆಲೂಗಡ್ಡೆ, ಬೆಳ್ಳುಳ್ಳಿ ಇವುಗಳ ಬಿಳಿ ಬಣ್ಣವನ್ನು ಆಂಥೋಜ್ಯಾನ್ಥಿನ್ ಎಂಬ ವರ್ಣದ್ರವ್ಯಗಳಿಂದ ತೆಗೆದುಕೊಳ್ಳುತ್ತದೆ. ಇವುಗಳಲ್ಲಿ ಆರೋಗ್ಯ ವೃದ್ಧಿಸುವ ಆಲಿಸಿನ್ ಇದ್ದು, ಇದು ಕೊಲೆಸ್ಟ್ರಾಲ್ ಮತ್ತು ರಕ್ತದೊತ್ತಡವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ ಮತ್ತು ಮಾನವರಲ್ಲಿ ಹೊಟ್ಟೆಯ ಕ್ಯಾನ್ಸರ್ ಮತ್ತು ಹೃದ್ರೋಗದ ಅಪಾಯವನ್ನು ಕಡಿಮೆ ಮಾಡಲು ಸಹಾಯ ಮಾಡುವಲ್ಲಿ ಸಹಕಾರಿ.
ಆಲೂಗಡ್ಡೆ ಮತ್ತು ಬಾಳೆ ಹಣ್ಣಿನಂತಹ ಕೆಲವು ಬಿಳಿ ಆಹಾರಗಳು ಪೊಟ್ಯಾಷಿಯಂನ ಉತ್ತಮ ಮೂಲಗಳಾಗಿವೆ. ಇದು ನರ ಮತ್ತು ಸ್ನಾಯುಗಳ ಕಾರ್ಯ ಚಟುವಟಿಕೆಗೆ ಮತ್ತು ರಕ್ತದೊತ್ತಡಕ್ಕೆ ಅಗತ್ಯವಾಗಿರುತ್ತದೆ.
ಐಸೋಪ್ಲೋವೊನ್ಸ್ :
ಅಗಸೆ, ರೈ ಮತ್ತು ಸೋಯಾಅವರೆಗಳಲ್ಲಿ ಕಂಡುಬರುವ ಐಸೋಪ್ಲಾವೊನ್ಗಳನ್ನು ಸ್ತನ ಕ್ಯಾನ್ಸರನಂತಹ ಹಾರ್ಮೋನ್ ಅವಲಂಬಿತ ಕ್ಯಾನ್ಸರ್ಗಳಿಂದ ರಕ್ಷಿಸುವ ಸಾಮಥ್ರ್ಯವಿದೆ ಎಂದು ಸಂಶೋಧನೆ ಮೂಲಕ ತಿಳಿದು ಬಂದಿದೆ.
ಆಹಾರವು ವರ್ಣಮಯವಾಗಿದ್ದಷ್ಟು ಆಹಾರದ ಪೌಷ್ಠಿಕತೆ ಹೆಚ್ಚಾಗಿರುತ್ತದೆ. ಆದ್ದರಿಂದ ದಿನನಿತ್ಯ ನಮ್ಮ ಆಹಾರದಲ್ಲಿ ಇಂದ್ರಧನುಷ್ನಲ್ಲಿ ಇರುವಂತೆÉ ಹಲವಾರು ವರ್ಣಮಯ ಆಹಾರಗಳನ್ನು ಬಳಕೆ ಮಾಡಿ ಆರೋಗ್ಯ ವೃದ್ಧಿಸಿಕೊಳ್ಳಬೇಕು.
ಲೇಖನ: ಡಾ. ಲತಾ ಆರ್ ಕುಲಕರ್ಣಿ, ಡಾ. ಸವಿತಾ ಎಸ್ ಮಂಗಾನವರ ಮತ್ತು ರಂಜಿತಕುಮಾರ ಎಸ್. ಕೃಷಿ ವಿಜ್ಞಾನ ಕೇಂದ್ರ, ರಾಮನಗರ
Share your comments