ದೇಶದ ಜನರಿಗೆ ಸ್ವಂತ ಉದ್ಯೋಗ ಮಾಡಿ ತಮ್ಮ ಕಾಲ ಮೇಲೆ ತಾವು ನಿಲ್ಲಲು ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಮುಂದಾಗಿದೆ. ಈ ಮೂಲಕ ಜನರ ಬೇಡಿಕೆಗಳನ್ನು ಪೂರೈಸುವ ಜೊತೆಗೆ ಉದ್ಯೋಗ ಸೃಷ್ಟಿಗೂ ಕಾರಣವಾಗುತ್ತದೆ. ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರ 'ಪ್ರಧಾನ ಮಂತ್ರಿ ಉದ್ಯೋಗ ಸೃಷ್ಟಿ ಕಾರ್ಯಕ್ರಮ'ವನ್ನು (Pm Employment Generation Programme) ಜಾರಿ ಮಾಡಿದೆ. ಈ ಮೂಲಕ ವಹಿವಾಟು ಆರಂಭಿಸಲು ಬಯಸುವ ಜನರಿಗೆ ಪ್ರೋತ್ಸಾಹ ನೀಡಲಾಗುತ್ತಿದೆ.
ಏನಿದು PMEGP ಯೋಜನೆ
ಯೋಜನೆಯ ಪೂರ್ಣ ಹೆಸರು: 'ಪ್ರಧಾನ ಮಂತ್ರಿ ಉದ್ಯೋಗ ಸೃಷ್ಟಿ ಕಾರ್ಯಕ್ರಮ (Pm Employment Generation Programme)
ಜಾರಿ ಮಾಡಿದವರು: ಕೇಂದ್ರ ಸರ್ಕಾರ (Central Govt)
ಫಲಾನುಭವಿಗಳು: ನಿರುದ್ಯೋಗಿಗಳು (Un employees)
ಅಧಿಕೃತ ವೆಬ್ಸೈಟ್: https://www.kviconline.gov.in/
ಏನಿದು ಪ್ರಧಾನ ಮಂತ್ರಿ ಉದ್ಯೋಗ ಸೃಷ್ಟಿ ಕಾರ್ಯಕ್ರಮ?
ಉದ್ಯೋಗ ಸೃಷ್ಟಿಗಾಗಿ ಕೇಂದ್ರ ಸರ್ಕಾರವು ಹಲವು ಯೋಜನೆಗಳು ಮತ್ತು ಕಾರ್ಯಕ್ರಮಗಳನ್ನು ಜಾರಿ ಮಾಡಿದೆ. ಈ ಮೂಲಕ ದೇಶದ ಯುವಜನರು ಉದ್ಯಮ ಆರಂಭಿಸಲು ಪ್ರೋತ್ಸಾಹಿಸಲಾಗುತ್ತಿದೆ. ಹೊಸ ಉದ್ಯಮಗಳನ್ನು ಪ್ರಾರಂಭಿಸುವ ಮೂಲಕ ದೇಶದ ಆರ್ಥಿಕ ಬೆಳವಣಿಗೆ ಉದ್ಯೋಗ ಸೃಷ್ಟಿಗೂ ಸಹಾಯವಾಗಲಿದೆ. ಪ್ರಧಾನಮಂತ್ರಿ ಉದ್ಯೋಗ ಸೃಷ್ಟಿ ಕಾರ್ಯಕ್ರಮವು (PM job creation program) ಪ್ರಸ್ತುತ ದೇಶದಲ್ಲಿ ಜಾರಿಯಲ್ಲಿರುವ ಬೃಹತ್ ಯೋಜನೆಗಳಲ್ಲಿ ಒಂದಾಗಿದೆ. ಈ ಯೋಜನೆಯಡಿ ಉದ್ಯಮ ಆರಂಭಿಸಲು ಜನರನ್ನು ಉತ್ತೇಜಿಸಲು ಸಾಲ (loans) ಸೌಲಭ್ಯ ನೀಡಲಾಗುತ್ತಿದೆ.
ಪ್ರಧಾನಮಂತ್ರಿ ಉದ್ಯೋಗ ಸೃಷ್ಟಿ ಯೋಜನೆಯು ಕೇಂದ್ರ ಸರ್ಕಾರ ನಡೆಸುತ್ತಿರುವ ಉತ್ತಮ ಯೋಜನೆಗಳಲ್ಲೊಂದು. ಈ ಯೋಜನೆಯಡಿ ನಿರುದ್ಯೋಗಿ ಯುವಕರು ರೂ. 10 ಲಕ್ಷದಿಂದ 25 ಲಕ್ಷ ರೂಪಾಯಿ ಬಂಡವಾಳದೊಂದಿಗೆ ಹೊಸ ಉದ್ಯಮ ಆರಂಭಿಸಬಹುದು. ಇದಕ್ಕಾಗಿ ಕೇಂದ್ರ ಸರ್ಕಾರವು ಸಾಲ ಸೌಲಭ್ಯ (25 lakh loans under PM job creation program) ಒದಗಿಸಲಿದೆ.
ಇದನ್ನೂ ಓದಿರಿ:
ಪಿಎಂ ಕಿಸಾನ್: 11ನೇ ಕಂತು ಶೀಘ್ರದಲ್ಲೆ ಬಿಡುಗಡೆ! ಫಲಾನುಭವಿಗಳ ಪಟ್ಟಿಯಲ್ಲಿ ಈಗಲೇ ನಿಮ್ಮ ಹೆಸರು ಪರಿಶೀಲಿಸಿ
7th Pay Commision: ಈ ತಿಂಗಳ ಅಂತ್ಯದೊಳಗೆ ಹೆಚ್ಚುತ್ತಾ ಕೇಂದ್ರ ಸರ್ಕಾರಿ ನೌಕರರ HRA..?
PMEGP ಯೋಜನೆಯ ಪ್ರಯೋಜನಗಳು
ಪ್ರಧಾನ ಮಂತ್ರಿ ಉದ್ಯೋಗ ಸೃಷ್ಟಿ ಯೋಜನೆಯಡಿ ನಿರುದ್ಯೋಗಿ ಯುವಕರಿಗೆ ಗ್ರಾಮೀಣ ಪ್ರದೇಶಗಳಲ್ಲಿ ಉದ್ಯಮ ಆರಂಭಿಸಲು ಶೇ.15ರವರೆಗೆ ಸಹಾಯಧನ ನೀಡಲಾಗುವುದು. ನಗರ ಪ್ರದೇಶಗಳಲ್ಲಿ ಉದ್ಯಮ ಆರಂಭಿಸಲು ಶೇ.25ರವರೆಗೆ ಸಹಾಯಧನ ಒದಗಿಸಲಾಗುತ್ತದೆ. ಉದ್ಯಮ ಆರಂಭಿಸಲು ಬೇಕಾಗುವ ಒಟ್ಟು ವೆಚ್ಚದ ಶೇ.10ರಷ್ಟನ್ನು ತಮ್ಮ ಸ್ವಂತ ಹೂಡಿಕೆ ಮಾಡಬೇಕು. ಎಸ್ಸಿ, ಎಸ್ಟಿ, ಒಬಿಸಿ ಹಾಗೂ ಮಾಜಿ ಸೈನಿಕರು ಯೋಜನೆಯಡಿ ಉದ್ಯಮ ಆರಂಭಿಸಿದರೆ, ಅವರಿಗೆ ಗ್ರಾಮೀಣ ಪ್ರದೇಶದಲ್ಲಿ ಉದ್ಯಮ ಆರಂಭಿಸಲು ಶೇ.35 ರಷ್ಟು ಸಹಾಯಧನ ಮತ್ತು ನಗರ ಪ್ರದೇಶದಲ್ಲಿ ಉದ್ಯಮ ಆರಂಭಿಸಲು ಶೇ. 25 ರಷ್ಟು ಸಹಾಯಧನ ನೀಡಲಾಗುತ್ತದೆ. ಇವರು ಒಟ್ಟು ವೆಚ್ಚದ ಶೇ. 5 ರಷ್ಟನ್ನು ಸ್ವಂತ ಬಂಡವಾಳ ಹೂಡಿಕೆ ಮಾಡಬೇಕು.
PMEGP ಯೋಜನೆಯ ಉದ್ದೇಶ
ಪ್ರಧಾನಮಂತ್ರಿ ಉದ್ಯೋಗ ಸೃಷ್ಟಿ ಕಾರ್ಯಕ್ರಮವು ಪ್ರಸ್ತುತ ದೇಶದಲ್ಲಿ ಜಾರಿಯಲ್ಲಿರುವ ಬೃಹತ್ ಉದ್ಯೋಗ ಸೃಷ್ಟಿ ಯೋಜನೆಗಳಲ್ಲಿ ಒಂದಾಗಿದೆ. ಈ ಯೋಜನೆಯಡಿ ಕೇಂದ್ರ ಸರ್ಕಾರವು ಯುವಜನರಿಗೆ ಉದ್ಯಮ ಪ್ರಾರಂಭಿಸಲು ಸಾಲ ನೀಡುವ ಮೂಲಕ ನಿರುದ್ಯೋಗ ದರ ಕಡಿಮೆ ಮಾಡಲು ಪ್ರಯತ್ನಿಸುತ್ತಿದೆ. ಯುವಕರು ಸ್ವಯಂ ಉದ್ಯೋಗ ಆರಂಭಿಸಲು ಸಾಲದ ಮೇಲೆ ಸಬ್ಸಿಡಿ ನೀಡುವ ಮೂಲಕ ಪ್ರೋತ್ಸಾಹಿಸುವುದು ಈ ಯೋಜನೆಯ ಪ್ರಮುಖ ಉದ್ದೇಶವಾಗಿದೆ.
PMAGY: ಬುಡಕಟ್ಟು ಹಳ್ಳಿಗಳ ಸುಧಾರಣೆಗೆ ಗುರಿ
ಏಪ್ರಿಲ್ ಕೊನೆಯ15 ದಿನಗಳಲ್ಲಿ ಈ ಬೆಳೆಗಳನ್ನು ಬೆಳೆಸಿ, ಬಂಪರ್ ಇಳುವರಿ ಪಡೆಯಿರಿ
PMEGP ಯೋಜನೆಗೆ ಅರ್ಹತೆಗಳು
ಪ್ರಧಾನ ಮಂತ್ರಿ ಉದ್ಯೋಗ ಸೃಷ್ಟಿ ಕಾರ್ಯಕ್ರಮದ ಮೂಲಕ ಲಕ್ಷಗಟ್ಟಲೆ ಯುವಕರು ಉದ್ಯಮ ಆರಂಭಿಸಲು ಸಹಾಯ ಮಾಡಲಾಗುತ್ತಿದೆ. ನೀವು ಕೂಡ ಯೋಜನೆಯ ಪ್ರಯೋಜನ ಪಡೆಯಲು ಕೆಲವು ಅರ್ಹತೆಗಳನ್ನು ಹೊಂದಿರಬೇಕು.
ಅರ್ಜಿದಾರರು ಭಾರತೀಯ ಪ್ರಜೆಯಾಗಿರಬೇಕು.
ಅರ್ಜಿದಾರರ ವಯಸ್ಸು 18 ವರ್ಷ ಅಥವಾ ಮೇಲ್ಪಟ್ಟವರಾಗಿರಬೇಕು.
ಯೋಜನೆಯ ಲಾಭ ಪಡೆಯಲು, ಅರ್ಜಿದಾರರು ಕನಿಷ್ಠ 8ನೇ ತರಗತಿ ಉತ್ತೀರ್ಣರಾಗಿರಬೇಕು.
ಹೊಸ ಉದ್ಯಮ ಆರಂಭಿಸಲು ಮಾತ್ರ ಯೋಜನೆಯಡಿ ನೆರವು ನೀಡಲಾಗುತ್ತದೆ. ಉದ್ಯಮವನ್ನು ವಿಸ್ತರಿಸಲು ನೆರವು ನೀಡಲಾಗದು.
ಸರ್ಕಾರಿ ಶಿಕ್ಷಣ ಸಂಸ್ಥೆಗಳಿಂದ ತರಬೇತಿ ಪಡೆಯುವ ಯುವಕರಿಗೆ ಆದ್ಯತೆ ನೀಡಲಾಗುವುದು.
ಅರ್ಜಿದಾರರು ಅಂತಹ ಯಾವುದೇ ಯೋಜನೆಯಿಂದ ಸಹಾಯಧನ ತೆಗೆದುಕೊಳ್ಳುತ್ತಿದ್ದರೆ, ನಂತರ ಅವರು ಈ ಯೋಜನೆಯ ಪ್ರಯೋಜನವನ್ನು ಪಡೆಯಲು ಸಾಧ್ಯವಾಗುವುದಿಲ್ಲ.
PMEGP ಅಗತ್ಯ ದಾಖಲೆಗಳು
ಯೋಜನೆಯ ಲಾಭ ಪಡೆಯಲು, ಅರ್ಜಿದಾರರು ಮೊಬೈಲ್ ಸಂಖ್ಯೆ ಮತ್ತು ಪಾಸ್ಪೋರ್ಟ್ ಅಳತೆಯ ಭಾವಚಿತ್ರದೊಂದಿಗೆ ಆಧಾರ್ ಕಾರ್ಡ್, ಪ್ಯಾನ್ ಕಾರ್ಡ್, ಜಾತಿ ಪುರಾವೆ ಅರ್ಹತೆ, ನಿವಾಸ ಪುರಾವೆ, ಮಾರ್ಕ್ ಶೀಟ್ಗಳು ಮುಂತಾದ ಎಲ್ಲಾ ಅಗತ್ಯ ದಾಖಲೆಗಳನ್ನು ಹೊಂದಿರಬೇಕು.
POULTRY Farming ತುಂಬಾ ಲಾಭದಾಯಕ ಉದ್ಯೋಗ! ಮತ್ತು ಸರ್ಕಾರದಿಂದ ಸಹಾಯ?
ಹೈನುಗಾರಿಕೆಯಲ್ಲಿ ಯಾರಿಗೆ 'ಡಬಲ್' ಲಾಭ ಬೇಕು!
PMEGP ಗೆ ಅರ್ಜಿ ಸಲ್ಲಿಕೆ ಹೇಗೆ?
ಪ್ರಧಾನ ಮಂತ್ರಿ ಉದ್ಯೋಗ ಸೃಷ್ಟಿ ಯೋಜನೆಗೆ ಅರ್ಜಿ ಸಲ್ಲಿಸುವುದು ತುಂಬ ಸರಳ. ಈ ಕೆಳಗಿನ ಹಂತಗಳನ್ನು ಅನುಸರಿಸುವ ಮೂಲಕ ಆನ್ಲೈನ್ನಲ್ಲಿ ಅರ್ಜಿ ಸಲ್ಲಸಬಹುದು.
ಮೊದಲಿಗೆ ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡಿ
ವೆಬ್ಸೈಟ್ನ ಮುಖಪುಟದ ಕೆಳಭಾಗದಲ್ಲಿ ಕಾಣುವ PMEGP ಆಯ್ಕೆಯನ್ನು ಕ್ಲಿಕ್ ಮಾಡಿ.
ನಂತರ PMEGP E ಪೋರ್ಟಲ್ನ ಆಯ್ಕೆ ಮೇಲೆ ಕ್ಲಿಕ್ ಮಾಡಿ.
ನಂತರ 'ಆನ್ಲೈನ್ ಅರ್ಜಿ ನಮೂನೆ' ಮೇಲೆ ಕ್ಲಿಕ್ ಮಾಡಿ.
PMEGP ಯೋಜನೆಯ ಕರಪತ್ರದ PDF ಡೌನ್ಲೋಡ್ ಮಾಡಿ. ಈಗ ಅರ್ಜಿ ನಮೂನೆಯು ತೆರೆದುಕೊಳ್ಳುತ್ತದೆ. ಇದರಲ್ಲಿ ಎಲ್ಲ ಅಗತ್ಯ ಮಾಹಿತಿಯನ್ನು ಭರ್ತಿ ಮಾಡಿ.
ಎಲ್ಲ ಮಾಹಿತಿಯನ್ನು ಭರ್ತಿ ಮಾಡಿದ ನಂತರ, ಎಲ್ಲ ಅಗತ್ಯ ದಾಖಲೆಗಳ ಸ್ಕ್ಯಾನ್ ಮಾಡಿದ ಪ್ರತಿಯನ್ನು ಅಪ್ಲೋಡ್ ಮಾಡಬೇಕು.
ಅಂತಿಮವಾಗಿ 'ಸಬ್ಮಿಟ್' ಬಟನ್ ಕ್ಲಿಕ್ ಮಾಡುವ ಮೂಲಕ ಅರ್ಜಿ ಸಲ್ಲಿಸಬೇಕು.
ಅರ್ಜಿ ಸಲ್ಲಿಸಿದ ನಂತರ, ನೀವು ಪ್ರಿಂಟ್ಔಟ್ ತೆಗೆದುಕೊಂಡು ಅದನ್ನು ಹತ್ತಿರದ KVIC/KVIB ಅಥವಾ DIC ಗೆ ಸಲ್ಲಿಸಬೇಕು.
ಅರ್ಜಿ ಸ್ವೀಕರಿಸಿದ ನಂತರ ಬ್ಯಾಂಕ್ನಿಂದ ಸಾಲ ನೀಡಲಾಗುತ್ತದೆ ಮತ್ತು ಸಾಲದ ಮೇಲೆ ಸಹಾಯಧನವೂ ಸಿಗುತ್ತದೆ.
ಪಿಎಂ ಕಿಸಾನ್: 11ನೇ ಕಂತು ಶೀಘ್ರದಲ್ಲೆ ಬಿಡುಗಡೆ! ಫಲಾನುಭವಿಗಳ ಪಟ್ಟಿಯಲ್ಲಿ ಈಗಲೇ ನಿಮ್ಮ ಹೆಸರು ಪರಿಶೀಲಿಸಿ
7th Pay Commision: ಈ ತಿಂಗಳ ಅಂತ್ಯದೊಳಗೆ ಹೆಚ್ಚುತ್ತಾ ಕೇಂದ್ರ ಸರ್ಕಾರಿ ನೌಕರರ HRA..?
Share your comments