ಪಿಎಂ ಕಿಸಾನ್ ನಿಧಿಯ ಹಣ ಫೆಬ್ರವರಿ ಬಜೆಟ್ ನಲ್ಲಿ 10 ಸಾವಿರ ಘೋಷಣೆ ಸಾಧ್ಯತೆ-ನೋಂದಣಿಗೆ ಇಲ್ಲಿ ಕ್ಲಿಕ್ ಮಾಡಿ

KJ Staff
KJ Staff

2021ರ ಫೆಬ್ರವರಿ 1ರಂದು ಸಂಸತ್ತಿನಲ್ಲಿ ಕೇಂದ್ರ ಬಜೆಟ್ ಮಂಡನೆ ಮಾಡಲು ಸರ್ಕಾರ ಸಕಲ ಸಿದ್ಧತೆ ಗಳನ್ನು ಮಾಡಿಕೊಂಡಿದೆ. ಕೊರೊನಾ ಮಧ್ಯದ ಬಜೆಟ್ ಮೇಲೆ ಈ ,ಸ ಸಾಕಷ್ಟು ನಿರೀಕ್ಷೆಯಿದೆ. ಬಜೆಟ್ ನಲ್ಲಿ ರೈತರಿಗೆ ಸರ್ಕಾರ ಮತ್ತಷ್ಟು ಖುಷಿ ಸುದ್ದಿ ನೀಡುವ ಸಾಧ್ಯತೆಯಿದೆ.

ಭಾರತದ ಆರ್ಥಿಕತೆಗೆ ಮತ್ತಷ್ಟು ಉತ್ತೇಜನ ನೀಡುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಬಜೆಟ್ ನಲ್ಲಿ ವಿಶೇಷವಾಗಿ ಕೃಷಿ ವಲಯಕ್ಕೆ ಹೆಚ್ಚು ಒತ್ತು ನೀಡಲಾಗುದು ಎಂದು ಮೂಲಗಳಿಂದ ತಿಳಿದುಬಂದಿದೆ.

ದೇಶದ್ಯಂತ ಈಗಾಗಲೇ ಕೇಂದ್ರ ಸರ್ಕಾರದ ವಿರುದ್ಧ ತಿರುಗಿಬಿದ್ದ ರೈತರ ಆಕ್ರೋಶವನ್ನು ಶಮನಗೊಳಿಸಲು ಕೇಂದ್ರ ಸರ್ಕಾರವು ಪಿಎಂ ಕಿಸಾನ್ ನಿಧಿ ಯೋಜನೆಯಡಿ ನೀಡುವ ಮೊತ್ತವನ್ನು 10 ಸಾವಿರಕ್ಕೆ ಹೆಚ್ಚಿಸುವ ಸಾಧ್ಯತೆಯಿದೆ.

ಪಿಎಂ ಕಿಸಾನ್ ಸಮ್ಮಾನ್ ನಿಧಿಯಲ್ಲಿ ಸರ್ಕಾರ ತಿಂಗಳಿಗೆ ನೀಡುವ 500 ರೂಪಾಯಿ ಸಾಲುವುದಿಲ್ಲ. ಒಂದು ಎಕರೆ ಭತ್ತದ ಬೆಲೆಗೆ 3ರಿಂದ 3.5 ಸಾವಿರ ರೂಪಾಯಿ ಖರ್ಚಾಗುತ್ತದೆ. ಕಬ್ಬಿನ ಬೆಳೆಗೆ 2ರಿಂದ ಎರಡೂವರೆ ಸಾವಿರ ಖರ್ಚಾಗುತ್ತದೆ. ಇದೇ ರೀತಿ ಇತರ ಬೆಳೆಗಳಿಗೂ ಹೆಚ್ಚು ಖರ್ಚು ತಗಲುತ್ತಿದೆ. ಆದಕ್ಕಾರಣ ಸರ್ಕಾರ ಪಿಎಂ ಕಿಸಾನ್ ನಿಧಿ ಹಣ ಹೆಚ್ಚಿಸಬೇಕೆಂಬ ಒತ್ತಾಯ ಕೇಳಿ ಬರುತ್ತಿರುವುದರಿಂದ ಹಣ ಹೆಚ್ಚಿಸುವ ಸಾಧ್ಯತೆ ಎಂದು ಹೇಳಲಾಗುತ್ತಿದೆ.

ಇದನ್ನು  ಫೆಬ್ರವರಿ 1 ರಂದು ಮಂಡಿಸಲಿರುವ ಬಜೆಟ್ ನಲ್ಲಿ ರೈತರಿಗೆ ಬಂಪರ್ ಕೊಡುಗೆ ನೀಡಲು ಚಿಂತಿಸಿದೆ. ದೇಶದ ಪ್ರತಿಯೊಬ್ಬ ಸಣ್ಣ, ಮಾಧ್ಯಮ ರೈತನಿಗೆ ವಾರ್ಷಿಕ 6 ಸಾವಿರ ರೂಪಾಯಿ ನೀಡುವ ಪಿಎಂ. ಕಿಸಾನ್ ಯೋಜನೆಯಡಿ ಈ ವರ್ಷದಿಂದ 10 ಸಾವಿರ ನೀಡಬಹುದು. ಆದಕ್ಕಾರಣ ಇನ್ನೂ ಪಿಎಂ. ಕಿಸಾನ್ ನಿಧಿ ಯೋಜನೆಯಡಿ ಹೆಸರು ನೋಂದಾಯಿಸದೆ ಇದ್ದರೆ ಫಲಾನುಭವಿಯಾಗಲು ಕೂಡಲೇ ಹೆಸರು ನೋಂದಾಯಿಸಿಕೊಳ್ಳಿ

ದಾಖಲಾತಿಗಳು(Documents):

ಪಿಎಂ ಕಿಸಾನ್ ಯೋಜನೆಯಡಿ ಸಹಾಯ ಧನವನ್ನು ಪಡೆಯಲು ಆಧಾರ್ ಕಾರ್ಡ್ ಕಡ್ಡಾಯಗೊಳಿಸಲಾಗಿದೆ. ಆಧಾರ್ ಇಲ್ಲದ ರೈತರು ತಾತ್ಕಾಲಿಕವಾಗಿ ಬೇರೆ ಗುರುತಿನ ದಾಖಲೆ ಒದಗಿಸಬೇಕಿದೆ. ಮೊದಲನೇ ಕಂತಿನ ಸಹಾಯ ಧನ ಪಡೆಯಲು ಆಧಾರ್ ಇಲ್ಲದ ರೈತರು ಮತದಾರರ ಗುರುತಿನ ಚೀಟಿ, ಡಿಎಲ್ ಇಲ್ಲವೇ, ಕೇಂದ್ರ ಮತ್ತು ರಾಜ್ಯ ಸರ್ಕಾರದಿಂದ ನೀಡಿರುವ ಫೋಟೋ ಸಹಿತ ಯಾವುದಾದರೂ ಗುರುತಿನ ಚೀಟಿಯನ್ನು ಕಡ್ಡಾಯವಾಗಿ ಒದಗಿಸಬೇಕಿದೆ.

ಹೆಸರು ನೋಂದಾಯಿಸುವುದು ಹೇಗೆ?

ಫಲಾನುಭವಿಗಳಾಗಲು ಈ ಲಿಂಕ್   https://www.pmkisan.gov.in/RegistrationForm.aspx  ಮೇಲೆ ಕ್ಲಿಕ್ ಮಾಡಿ ಅಗತ್ಯ ಮಾಹಿತಿಗಳನ್ನು ನೀಡಿ ಹೆಸರು ನೋಂದಾಯಿಸಿಕೊಳ್ಳಿ.

ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ:

ಪಿಎಂ. ಕಿಸಾನ್ ಯೋಜನಾ ಹೆಲ್ಪ್ ಲೈನ್ ನಂಬರ್ 011-24300606, ಅಥವಾ ಪಿಎಂ ಕಿಸಾನ್ ಯೋಜನೆ ಟೋಲ್ ಫ್ರಿ ನಂ. 1800115526 ಗೆ ಸಂಪರ್ಕಿಸಬಹುದು.ಇದಲ್ಲದೆ ಹೆಲ್ಪ್ ಲೈನ್ 155261 ಕರೆ ಸಮಸ್ಯೆ ಬಗೆಹರಿಸಿಕೊಳ್ಳಬಹುದು. ಇದು ಬಿಟ್ಟು ಕೇಂದ್ರ ಕೃಷಿ ಸಚಿವಾಲಯ 011-23381092 ಗೆ ಕರೆ ಮಾಡಬಹುದು.

Published On: 25 January 2021, 06:13 PM English Summary: PM Kisan: Register now and get 10000 per year

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.