PM Suraksha Bima Yojana : ಸರ್ಕಾರದಿಂದ ಸಾರ್ವಜನಿಕರ ಹಿತದೃಷ್ಟಿಯಿಂದ ಸಾಕಷ್ಟು ಯೋಜನೆಗಳನ್ನ ರೂಪಿಸಲಾಗಿದ್ದು, ಅದರಲ್ಲಿ ಈ ಪ್ರಧಾನ ಮಂತ್ರಿ ಸುರಕ್ಷಾ ವಿಮಾ ಯೋಜನೆ (Pradhan Mantri Suraksha Bima Yojana) ಕೂಡ ಒಂದಾಗಿದೆ. ಇದರ ಪ್ರಯೋಜನ ಏನೆಂದು ಇಲ್ಲಿ ತಿಳಿದುಕೊಳ್ಳೋಣ ಬನ್ನಿ…
ಏನಿದು ಪ್ರಧಾನ ಮಂತ್ರಿ ಸುರಕ್ಷಾ ವಿಮಾ ಯೋಜನೆ ? What is Pradhan Mantri Suraksha Bima Yojana?
ಪ್ರಧಾನಮಂತ್ರಿ ಸುರಕ್ಷಾ ವಿಮಾ ಯೋಜನೆ (PMSBY) ಇದೊಂದು ವಾರ್ಷಿಕ ಅಪಘಾತ ವಿಮಾ ಯೋಜನೆಯಾಗಿದ್ದು, ವರ್ಷದಿಂದ ವರ್ಷಕ್ಕೆ ನವೀಕರಣ ಮಾಡಿಕೊಳ್ಳಬೇಕಿದ್ದು, ಅಪಘಾತದಿಂದ ಮರಣ ಅಥವಾ ಅಂಗ ವೈಕಲ್ಯಕ್ಕೆ ಒಳಗಾದರೆ ಈ ವಿಮಾ ಮೂಲಕ ಸಂತ್ರಸ್ತರಿಗೆ ಪರಿಹಾರ ದೊರೆಯಲಿದೆ.
ಅಂದರೆ ಮೊದಲಿಗೆ ಪಿಎಂ ಸುರಕ್ಷಾ ವಿಮಾ ಯೋಜನೆಯ ಈ ಯೋಜನೆಗೆ ನೀವು ನೋಂದಾಯಿಸಿಕೊಂಡು, ಇದರ ಸದಸ್ಯತ್ವ ಪಡೆದುಕೊಂಡಿದ್ದರೆ ಇದರ ಲಾಭ ಪಡೆಯಲು ನೀವು ಅರ್ಹರಾಗಿರುತ್ತೀರಿ.
ಅಪಘಾತಗಳು ಯಾವಾಗಲೂ ಅಚಾನಕ್ಕಾಗಿ ನಡೆಯುವ ದುರ್ಘಟನೆಗಳು. ಇಂತಹ ಸಂದರ್ಭದಲ್ಲಿ ಪ್ರತಿಯೊಬ್ಬರಿಗೂ ಆರ್ಥಿಕವಾಗಿ ನಿಭಾಯಿಸಬಲ್ಲ ಶಕ್ತಿ ಇರುವುದಿಲ್ಲ. ಆದ್ದರಿಂದ ಅಂಥ ಜನರಿಗಾಗಿ ಈ ಪಿಎಂ ಸುರಕ್ಷಾ ವಿಮಾ ಯೋಜನೆ (PM Suraksha Bima Yojana) ಜಾರಿಗೆ ತರಲಾಗಿದೆ.
ಪಿಎಂ ಸುರಕ್ಷಾ ಯೋಜನೆಯ ವೈಶಿಷ್ಟ್ಯಗಳು? Features of PM Suraksha Scheme?
ಪಿಎಂ ಸುರಕ್ಷಾ ಯೋಜನೆಯೂ ತನ್ನದೇ ಆದ ಒಂದಷ್ಟು ವೈಶಿಷ್ಟ್ಯಗಳನ್ನು ಹೊಂದಿದೆ. ಈಗಾಗಲೇ ಸಾಕಷ್ಟು ಸರ್ಕಾರದ ಯೋಜನೆಗಳಿದ್ದರೂ, ಅವುಗಳಲ್ಲಿ ಈ ಪ್ರಧಾನ ಮಂತ್ರಿ ಸುರಕ್ಷಾ ವಿಮಾ ಯೋಜನೆ ತುಸು ವಿಶೇಷವಾಗಿದೆ(PMSBY). ಏಕೆಂದರೆ ಈ ಯೋಜನೆಯೂ ಪ್ರತಿಯೊಬ್ಬರಿಗೂ ಪಡೆದುಕೊಳ್ಳಲು ಸಾಧ್ಯವಾಗುವ ಕಂತು ಹೊಂದಿದೆ.
ಅಂದರೆ, ಈ ವಿಮಾ ಕಂತು ಒಂದು ವರ್ಷಕ್ಕೆ ಒಂದು ಬಾರಿ ಕೇವಲ 20 ರೂಪಾಯಿಗಳನ್ನು ಪಡೆಯುವ ಮೂಲಕ ನಿಮ್ಮ ವಿಮಾವನ್ನ ಪಡೆಯಲಾಗುತ್ತದೆ. ಇಲ್ಲಿ ನೀವು ಕೇವಲ ಭರಿಸಬೇಕಾದ ಹಣ 20 ರೂಪಾಯಿ ಮಾತ್ರ.
PMSBY ಯೋಜನೆಗೆ ಅರ್ಹ ವಯೋಮಿತಿ | Eligible age limit for PMSBY scheme
ಪ್ರಧಾನ ಮಂತ್ರಿ ಸುರಕ್ಷಾ ವಿಮಾ ಯೋಜನೆಗೆ ನಿರ್ದಿಷ್ಟವಾದ ವಯಸ್ಸಿನ ಮಿತಿಯನ್ನು ನಿಗದಿಪಡಿಸಲಾಗಿದೆ. ಈ ಯೋಜನೆಯ ಲಾಭ ಕೇವಲ ಈ ನಿಗದಿತ ವಯೋಮಿತಿಯನ್ನು ಹೊಂದಿದವರು ಮಾತ್ರ ಪಡೆಯಬಹುದಾಗಿದೆ.
ಹೌದು, ಕನಿಷ್ಠ 18ನೇ ವಯಸ್ಸಿನಿಂದ ಗರಿಷ್ಠ 70 ವರ್ಷದವರೆಗಿನ ವಯೋಮಿತಿ ಹೊಂದಿದ ನಾಗರಿಕರು ಈ ಯೋಜನೆಯ ಲಾಭವನ್ನು ಪಡೆಯಬಹುದಾಗಿದೆ.
ಪಿಎಂ ಸುರಕ್ಷಾ ಯೋಜನೆ ಮೊತ್ತವೆಷ್ಟು? What is the insurance amount for PMSBY?
ಪ್ರಧಾನ ಮಂತ್ರಿ ಸುರಕ್ಷಾ ವಿಮಾ ಯೋಜನೆಯುಡಿ 20 ರೂಪಾಯಿ ಹೂಡಿಕೆ ಮಾಡುವ ಪ್ರತಿಯೊಬ್ಬರಿಗೂ 2 ಲಕ್ಷದವರೆಗೆ ವಿಮಾ ಮೊತ್ತವನ್ನು ನೀಡಲಾಗುವುದು. ಇದು ಸಂಭವಿಸಿದ ಅಪಘಾತದ ಮೇಲೆ ಹಾಗೂ ಅದರಿಂದಾದ ನಷ್ಟದ ಮೇಲೆ ಸಂತ್ರಸತ್ರ ಆರೋಗ್ಯ ವಿಚಾರಣೆ ಮಾಡಿ ನೀಡಲಾಗುತ್ತದೆ.
- ಸಂಭವಿಸಿದ ಅಪಘಾತದಲ್ಲಿ ಮರಣ ಹೊಂದಿದರೆ - 2 ಲಕ್ಷ ರೂಪಾಯಿ
- ಎರಡೂ ಕಣ್ಣುಗಳ ಸಂಪೂರ್ಣ ಮತ್ತು ಸರಿಪಡಿಸಲಾಗದ ನಷ್ಟ. ಇಲ್ಲವೇ ಎರಡೂ ಕೈಗಳು ಅಥವಾ ಕಾಲುಗಳ ಶಾಶ್ವತ ಊನ ಅಥವಾ ಒಂದು ಕಣ್ಣಿನ ದೃಷ್ಟಿ ನಷ್ಟ ಮತ್ತು ಕೈ ಅಥವಾ ಪಾದವು ಊನಗೊಳ್ಳುವುದು - 2 ಲಕ್ಷ ರೂಪಾಯಿ
- ಒಂದು ಕಣ್ಣಿನ ಸಂಪೂರ್ಣ ಮತ್ತು ಸರಿಪಡಿಸಲಾಗದ ದೃಷ್ಟಿ ಹೀನತೆ ಉಂಟಾಗುವಿಕೆ ಅಥವಾ ಒಂದು ಕೈ ಅಥವಾ ಪಾದವು ಊನಗೊಳ್ಳುವುದು - 1 ಲಕ್ಷ ರೂಪಾಯಿ
Tomato Price Hike : ಚಿತ್ರ ವಿಚಿತ್ರ ಘಟನೆಗಳು | ತಪ್ಪದೇ ನೋಡಬೇಕಾದ ಅಚ್ಚರಿಯ ವಿಡಿಯೋ | Tomato Price Explosion
ಪಿಎಂ ಸುರಕ್ಷಾ ವಿಮಾ ಯೋಜನೆ ಅವಧಿ | PM Suraksha Insurance Scheme Duration
ಪ್ರತಿ ವಾರ್ಷಿಕ ಕವರೇಜ್ ಅವಧಿಯು ಜೂನ್ 1 ರಂದು ಅಥವಾ ಅದಕ್ಕೂ ಮೊದಲು ಇರುತ್ತದೆ. ಇದನ್ನು 'ಆಟೋ ಡೆಬಿಟ್' (Auto Debit) ಸೌಲಭ್ಯದ ಮೂಲಕ ಖಾತೆದಾರರ ಬ್ಯಾಂಕ್ ಖಾತೆಯಿಂದ ವಿಮಾ ಕಂತನ್ನು ಒಂದೇ ಕಂತಿನಲ್ಲಿ ಕಡಿತಗೊಳಿಸಲಾಗುತ್ತದೆ.
ಪಿಎಂ ಸುರಕ್ಷಾ ಯೋಜನೆ ಮೊತ್ತ ಪಡೆಯುವುದು ಹೇಗೆ? How to claim money from PMSBY?
ಪಿಎಂಎಸ್ಪಿವೈ ನವೀಕರಿಸಬಹುದಾದ ವಾರ್ಷಿಕ ವಿಮಾ ಯೋಜನೆಯಾಗಿದ್ದು, ಆಕಸ್ಮಿಕ ಸಾವು ಮತ್ತು ಅಂಗವೈಕಲ್ಯಕ್ಕೆ ತುತ್ತಾದರೆ ಪರಿಹಾರ ದೊರೆಯುತ್ತದೆ.
ಬ್ಯಾಂಕ್ ಖಾತೆ ಅಥವಾ ಅಂಚೆ ಕಚೇರಿಯಲ್ಲಿ ಖಾತೆ ಹೊಂದಿರುವ 18 ರಿಂದ 70 ವರ್ಷ ವಯೋಮಿತಿಯ ವ್ಯಕ್ತಿಗಳು ಯೋಜನೆಯಡಿ ನೋಂದಣಿಯಾಗಬಹುದು.
ಪಿಎಂ ಸುರಕ್ಷಾ ಯೋಜನೆಗೆ ಅರ್ಜಿ ಸಲ್ಲಿಕೆ ಹೇಗೆ? How to apply for PM Suraksha Yojana?
ಮೊದಲಿಗೆ ನಿಮ್ಮ ಹತ್ತಿರದ ಬ್ಯಾಂಕ್ (Bank) ಅಥವಾ ಪೋಸ್ಟ್ ಆಫೀಸ್ (Post Office) ಖಾತೆಗೆ ನಿಮ್ಮ ಆಧಾರ್ ಕಾರ್ಡ್‌ನ ಪ್ರಾಥಮಿಕ ಕೆವೈಸಿಯನ್ನು (Ekyc) ಮಾಡಿಸಿರಬೇಕು.
ನಂತರ ಬ್ಯಾಂಕ್ ಖಾತೆದಾರರು, ನಿಮ್ಮ ಶಾಖೆಗಳು ಅಥವಾ ಕೇಂದ್ರಗಳು ಅಥವಾ ವೆಬ್ ಸೈಟ್ ಗಳಿಗೆ ಭೇಟಿ ನೀಡುವ ಮೂಲಕ ಅಥವಾ ಅಂಚೆ ಕಚೇರಿಗಳ ಉಳಿತಾಯ ಖಾತೆಗಳ (Post Office Saving scheme) ಮೂಲಕ ಯೋಜನೆಯಡಿ ನೋಂದಣಿ ಮಾಡಿಕೊಳ್ಳಬಹುದು.
ಈ ಯೋಜನೆಯಡಿ ವಾರ್ಷಿಕ ಪ್ರೀಮಿಯಂ ಮೊತ್ತ ಒಂದು ಬಾರಿಗೆ ಖಾತೆದಾರರ ಅನುಮತಿಯೊಂದಿಗೆ ಸ್ವಯಂ ಚಾಲಿತವಾಗಿ ಕಡಿತಗೊಳ್ಳುತ್ತದೆ.
ಯೋಜನೆ ಕುರಿತು ಹೆಚ್ಚಿನ ಮಾಹಿತಿ ಮತ್ತು ಅರ್ಜಿ ನಮೂನೆಗಳನ್ನ ನಿಮಗೆ ಬೇಕಾದ ಭಾಷೆಯಲ್ಲಿ ಪಡೆಯಲು ಈ ಲಿಂಕ್ ಬಳಸಿಕೊಳ್ಳಬಹುದು : https://jansuraksha.gov.in ಅಥವಾ ಸಹಾಯವಾಣಿ : 1800-4259-7777 ಯನ್ನು ಬಳಸಬಹುದು.
Red Banana: ಆಧುನಿಕ ಕೃಷಿ ಪದ್ದತಿಯಿಂದ ́ಕೆಂಪು ಬಾಳೆʼ ಬೆಳೆದು ₹35 ಲಕ್ಷ ಗಳಿಸುತ್ತಿರುವ ಯುವ ರೈತ!
ಮುಕ್ತಾಯ : ಒಟ್ಟಾರೆಯಾಗಿ ಸರ್ಕಾರದಿಂದ ಸಾರ್ವಜನಿಕರ ಹಿತದೃಷ್ಟಿಯಿಂದ ಸಾಕಷ್ಟು ಯೋಜನೆಗಳನ್ನ ರೂಪಿಸಲಾಗಿದ್ದು, ಅದರಲ್ಲಿ ಈ ಪ್ರಧಾನ ಮಂತ್ರಿ ಸುರಕ್ಷಾ ವಿಮಾ ಯೋಜನೆ ಮುಖ್ಯವಾಗಿದೆ. ಈ ವಿಮಾ ಯೋಜನೆಯೂ ತುರ್ತು ಅಪಘಾತಗಳು, ದೈಹಿಕ ಹಾನಿಗಳು ಉಂಟಾದ ಸಮಯದಲ್ಲಿ ಸಂತ್ರಸ್ತರಿಗೆ ಸಾಮಾಜಿಕ ಹಾಗೂ ಆರ್ಥಿಕ ಬೆಂಬಲ ನೀಡುವ ನಿಟ್ಟಿನಲ್ಲಿ ರೂಪಿಸಲಾಗಿದ್ದು, ಪ್ರತಿಯೊಬ್ಬರು ಇಂತಹ ಯೋಜನೆಗಳ ಸದುಪಯೋಗ ಪಡಿಸಿಕೊಳ್ಳಬೇಕು. ಈ ಲೇಖನ ನಿಮಗೆ ಇಷ್ಟವಾಗಿದ್ದರೆ, ಮಾಹಿತಿ ನಿಮಗೆ ಉಪಯುಕ್ತವೆನಿಸಿದರೆ ನಿಮ್ಮ ಅಭಿಪ್ರಾಯವನ್ನ ನಮ್ಮೊಂದಿಗೆ ಕಮೆಂಟ್ ಬಾಕ್ಸ್‌ನಲ್ಲಿ ಹಂಚಿಕೊಳ್ಳಲು ಮರೆಯದಿರಿ.
Share your comments