ಇಲ್ಲಿದೆ ಕೇವಲ ರೂ.70 ಹೂಡಿಕೆ ಮಾಡಿ 1.50 ಲಕ್ಷದವರೆಗೆ ಲಾಭಾಂಶ ಪಡೆಯಬಹುದಾದ ಅಂಚೆ ಇಲಾಖೆಯ ಯೋಜನೆ. ಮಕ್ಕಳ ಭವಿಷ್ಯದ ದೃಷ್ಟಿಯಿಂದ ಹೂಡಿಕೆ ಮಾಡುವ ಕುರಿತು ಯೋಜನೆ ಮಾಡುತ್ತಿದ್ದರೆ ಇಲ್ಲಿದೆ ನಿಮಗೊಂದು ಅದ್ಬುತ ಅವಕಾಶ. ಹೆಚ್ಚಿನ ಮಾಹಿತಿಗಾಗಿ ಓದಿರಿ.
ಇದನ್ನೂ ಓದಿರಿ:
ಪಿಎಂ ಕಿಸಾನ್: 11ನೇ ಕಂತು ಶೀಘ್ರದಲ್ಲೆ ಬಿಡುಗಡೆ! ಫಲಾನುಭವಿಗಳ ಪಟ್ಟಿಯಲ್ಲಿ ಈಗಲೇ ನಿಮ್ಮ ಹೆಸರು ಪರಿಶೀಲಿಸಿ
7th Pay Commision: ಈ ತಿಂಗಳ ಅಂತ್ಯದೊಳಗೆ ಹೆಚ್ಚುತ್ತಾ ಕೇಂದ್ರ ಸರ್ಕಾರಿ ನೌಕರರ HRA..?
ಕಾರು, ಮನೆ ಖರೀದಿ, ಮಕ್ಕಳ ವಿದ್ಯಾಭ್ಯಾಸ, ನಿವೃತ್ತಿ ಜೀವನಕ್ಕೆ ದುಡಿದ ಹಣವನ್ನು ಉಳಿತಾಯ ಮತ್ತು ಹೂಡಿಕೆ ಮಾಡಲು ಹತ್ತಾರು ಕಾರಣಗಳಿರುತ್ತವೆ. ಆದರೆ ಉಳಿತಾಯ ಮಾಡುವ ಮುನ್ನ ಎಲ್ಲಿ ಮಾಡಬೇಕು? ಯಾವ ಯೋಜನೆ ಉತ್ತಮ? ಎಷ್ಟು ವರ್ಷದ ಅವಧಿ? ಬಡ್ಡಿದರ ಎಷ್ಟು? ಹೀಗೆ ಹತ್ತಾರು ಪ್ರಶ್ನೆಗಳು ಮೂಡುವುದು ಸಹಜ.
ಅಧಿಕ ಬಡ್ಡಿದರದ ಆಸೆಗೆ ಬಿದ್ದು ಕಷ್ಟಪಟ್ಟು ದುಡಿದ ಹಣವನ್ನು ಕಳೆದುಕೊಂಡವರ ಸಂಖ್ಯೆಯೇನು ಕಡಿಮೆಯಿಲ್ಲ. ಹೀಗಿರುವಾಗ ಹಣಕ್ಕೆ ಸುರಕ್ಷತೆ ನೀಡುವ ಸಂಸ್ಥೆಯಲ್ಲಿ ಹೂಡಿಕೆ ಮಾಡುವುದು ಬೆಸ್ಟ್. ಈ ವಿಚಾರದಲ್ಲಿ ಭಾರತೀಯರಿಗೆ ಅಚ್ಚುಮೆಚ್ಚಿನ ಸಂಸ್ಥೆಯೆಂದ್ರೆ ಅದು ಅಂಚೆಕಚೇರಿ.
ಭಾರತೀಯ ಮಧ್ಯಮ ವರ್ಗದ ಜನರು ಉತ್ತಮ ರಿಟರ್ನ್ಸ್ ನೀಡುವ ಹಾಗೂ ಸುರಕ್ಷತೆ ಒದಗಿಸಬಲ್ಲ ಯೋಜನೆಯಲ್ಲಿ ಹೂಡಿಕೆ ಮಾಡಲು ಬಯಸುತ್ತಾರೆ. ಹೀಗಾಗಿ ಮಧ್ಯಮ ವರ್ಗದ ಜನರು ಹೂಡಿಕೆಗೆ ಮೊದಲು ಆಯ್ಕೆ ಮಾಡುವುದು ಅಂಚೆ ಇಲಾಖೆಯ ಯೋಜನೆಗಳನ್ನು.
ಅಂಚೆ ಇಲಾಖೆ ಅನೇಕ ವರ್ಗದ, ವಯೋಮಾನದ ಜನರಿಗೆ ವಿವಿಧ ಉಳಿತಾಯ ಯೋಜನೆಗಳನ್ನು ಹೊಂದಿದೆ. ಆದ್ರೆ ಎಲ್ಲ ವರ್ಗದವರಿಗೂ ಅನ್ವಯಿಸಬಲ್ಲ ಉತ್ತಮ ರಿಟರ್ನ್ಸ್ ನೀಡುವ ಯೋಜನೆಯೆಂದ್ರೆ ಅದು ರಿಕರಿಂಗ್ ಡೆಫಾಸಿಟ್ (ಆರ್ ಡಿ).
5 ವರ್ಷಗಳ ಅವಧಿಯ ಈ ಯೋಜನೆಯ ಮುಖ್ಯ ಆಕರ್ಷಣೆಯೆಂದ್ರೆ ನೀವು ನಿಮ್ ಮಗುವಿನ ಹೆಸರಿನಲ್ಲಿ ಕೂಡ ಈ ಖಾತೆ ತೆರೆಯಬಹುದು. ಆ ಮೂಲಕ ಮಗುವಿನ ಭವಿಷ್ಯಕ್ಕೆ ಭದ್ರತೆ ಒದಗಿಸಬಹುದು.
ಮಕ್ಕಳ ಹೆಸರಲ್ಲಿ ಖಾತೆ ತೆರೆಯೋದು ಹೇಗೆ?
ಪೋಷಕರು ಲೀಗಲ್ ಗಾರ್ಡಿಯನ್ ಆಗಿ ಮಗುವಿನ ಹೆಸರಲ್ಲಿ ಅಂಚೆ ಕಚೇರಿಯಲ್ಲಿ ಆರ್ ಡಿ ಖಾತೆ ತೆರೆಯಬಹುದು. ಈ ಖಾತೆಯ ಮೆಚ್ಯುರಿಟಿ ಅವಧಿ 5 ವರ್ಷಗಳು.
ಬರೀ 24 ಗುಂಟೆ ಪೇರಲ ಬೆಳೆದು ವರ್ಷಕ್ಕೆ 25 ಲಕ್ಷ ಆದಾಯ ಗಳಿಸುತ್ತಿರುವ ಯವ ರೈತ!
ಬಿರು ಬಿಸಿಲ ನಾಡು ಯಾದಗಿರಿಯಲ್ಲಿ ಹರಡಿದೆ ಕೆಂಪು ಡ್ರಾಗನ್ ಹಣ್ಣುಗಳ ಕಂಪು
ಉತ್ತಮ ರಿಟರ್ನ್ಸ್ ಪಡೆಯಲು ಹೀಗೆ ಮಾಡಿ
ಮಕ್ಕಳ ಭವಿಷ್ಯಕ್ಕೆ ಒಂದಿಷ್ಟು ಕೂಡಿಡುವ ಆಲೋಚನೆಯಲ್ಲಿರುವ ಪೋಷಕರಿಗೆ ಅಂಚೆ ಇಲಾಖೆ ಆರ್ ಡಿ ಖಾತೆ ಉತ್ತಮ ಆಯ್ಕೆ. ಈ ಖಾತೆಯಲ್ಲಿರುವ ಹಣಕ್ಕೆ ಉತ್ತಮ ಬಡ್ಡಿ ಸಿಗುವ ಜೊತೆಗೆ ಭದ್ರತೆಯೂ ಇರುವ ಕಾರಣ ಯಾವುದೇ ಚಿಂತೆಯಿಲ್ಲದೆ ಹೂಡಿಕೆ ಮಾಡಬಹುದು.
ಮಗುವಿನ ಹೆಸರಲ್ಲಿ ಆರ್ ಡಿಯಲ್ಲಿ ಹೂಡಿಕೆ ಮಾಡಿ ಉತ್ತಮ ರಿಟರ್ನ್ಸ್ ಪಡೆಯಲು ನೀವು ದಿನಕ್ಕೆ ಕೇವಲ 70ರೂ. ಠೇವಣಿಯಿಟ್ಟರೆ ಸಾಕು. ಅಂದ್ರೆ ತಿಂಗಳಿಗೆ 2,100 ರೂ. ಐದು ವರ್ಷ ಮುಗಿದ ಬಳಿಕ ಈ ಖಾತೆಯಲ್ಲಿ 1,26,000ರೂ. ಉಳಿತಾಯವಾಗಿರುತ್ತದೆ. ಅಂಚೆ ಇಲಾಖೆ ಆರ್ ಡಿ ಖಾತೆಯಲ್ಲಿರುವ ಹಣಕ್ಕೆ 2020ರ ಏಪ್ರಿಲ್ ನಿಂದ ಶೇ.5.8 ಬಡ್ಡಿದರ ನೀಡಲಾಗುತ್ತಿದೆ. ಹೀಗಾಗಿ ಐದು ವರ್ಷದ ಬಳಿಕ ಬಡ್ಡಿ ಸೇರಿಸಿ ನಿಮಗೆ ಅಂದಾಜು 1,50,000ರೂ. ಸಿಗುತ್ತದೆ.
ಅರ್ಹತೆ:
ಯಾವುದೇ ಭಾರತೀಯ ಒಂದು ಪ್ರತ್ಯೇಕ ಅಥವಾ ಜಂಟಿ ಆರ್ ಡಿ ಖಾತೆ ತೆರೆಯಬಹುದು. ಅಲ್ಲದೆ, ಅಪ್ರಾಪ್ತರ ಹೆಸರಿನಲ್ಲಿ ಅವರ ಪೋಷಕರು ಖಾತೆ ತೆರೆಯಲು ಅವಕಾಶವಿದೆ. ಹಾಗೆಯೇ 10 ವರ್ಷ ಮೇಲ್ಪಟ್ಟ ಅಪ್ರಾಪ್ತರಿಗೆ ಅವರ ಹೆಸರಿನಲ್ಲೇ ಆರ್ ಡಿ ಖಾತೆ ತೆರೆಯಲು ಅವಕಾಶವಿದೆ.
SBI ಅಲರ್ಟ್: ಮೊಬೈಲ್‌ನಲ್ಲಿ ದುಡ್ಡು ಕಳಿಸುವಾಗ ತಪ್ಪದೆ ಗಮನಿಸಿ ಈ ಅಂಶಗಳನ್ನು
ಈ 4 ಸ್ಟೆಪ್ಸ್‌ಗಳಿಂದ E-mail ಐಡಿ ಹಾಗೂ ಮೊಬೈಲ್ ನಂಬರ್ ಅನ್ನು ಆಧಾರ್ ಕಾರ್ಡ್‌ಗೆ ಲಿಂಕ್ ಮಾಡಿ
Share your comments