ಹಸಿ ಬಟಾಣಿ ಅಂದ್ರೆ ಯಾರೀಗೆ ತಾನೇ ಇಷ್ಟ ಇಲ್ಲ ಹೇಳಿ..ಮಾರುಕಟ್ಟೆಯಲ್ಲಿ ನಿರ್ದಿಷ್ಟ ಅವಧಿಗೆ ಮಾತ್ರ ದೊರಕುವ ಈ ತರಕಾರಿ ಸಾಕಷ್ಟು ಆರೋಗ್ಯದ ಖನಿಜವನ್ನೆ ತನ್ನೊಳಗೆ ಅಳವಡಿಸಿಕೊಂಡಿದೆ. ಚಿಕ್ಕ ಮಕ್ಕಳಿಂದ ಹಿಡಿದು ದೊಡ್ಡವರ ವರೆಗೂ ಈ ಬಟಾಣಿ ಅಂದ್ರೆ ಬಲು ಅಚ್ಚು ಮೆಚ್ಚು. ಸ್ವಲ್ಪ ದುಬಾರಿ ಅಂತಾ ಮೂಗು ಮುರಿದುಕೊಂಡು ಹೋದ್ರೆ ಆರೋಗ್ಯ ಸಂಪತ್ತಿನ ತರಕಾರಿಯಿಂದ ವಂಚಿತರಾಗೋದು ಮಾತ್ರ ಫಿಕ್ಸ್..
ಇದನ್ನೂ ಓದಿ: ಯುವಜನರಲ್ಲಿ ಹೆಚ್ಚುತ್ತಿರುವ ʼಹಾರ್ಟ್ ಅಟ್ಯಾಕ್ʼ..! ತಪ್ಪಿಸಲು ಇರೋ ಮಾರ್ಗಗಳೇನು..?
ರೋಗ ನಿರೋಧಕ ಶಕ್ತಿಯ ವರ್ಧಕ
ಹಸಿ ಬಟಾಣಿಯಲ್ಲಿ ರೋಗ - ನಿರೋಧಕ ಶಕ್ತಿಯನ್ನು ವೃರ್ಧಿಸುವಂತಹ ವಿಟಮಿನ್ ' ಸಿ ' ಅಂಶ ಇದೆ. ಹಾಗಾಗಿ ಇದೊಂದು ಅತ್ಯುತ್ತಮ ಆಹಾರ ಎನ್ನಲಾಗಿದೆ. ಜೊತೆಗೆ ಆಂಟಿ - ಆಕ್ಸಿಡೆಂಟ್ ಅಂಶಗಳು ಕೂಡ ಸಾಕಷ್ಟು ಪ್ರಮಾಣದಲ್ಲಿ ಕಂಡು ಬರುತ್ತವೆ ಎಂದು ಸಂಶೋಧನೆಗಳು ಹೇಳುತ್ತಿದ್ದು ಸಮತೋಲಿತ ಆಹಾರಕ್ಕಾಗಿ ಈ ಬಟಾಣಿ ಫರಫೆಕ್ಟ್.. ಫೈಟೋ - ಅಲೆಕ್ಸಿನ್ ಎಂಬ ಆಂಟಿ - ಆಕ್ಸಿಡೆಂಟ್ ಅಂಶ ಕರುಳಿನ ಭಾಗದ ಹುಣ್ಣುಗಳನ್ನು ಸರಿ ಪಡಿಸಿ ಕರುಳಿನ ಕ್ಯಾನ್ಸರ್ ಸಮಸ್ಯೆಯನ್ನು ಕಡಿಮೆ ಮಾಡಲು ಸಹಕಾರಿಯಾಗಿದೆ.
ಇದನ್ನೂ ಓದಿ: ಆರೋಗ್ಯವೇ ಭಾಗ್ಯ: ʼsugar free potatoʼ ಬಗ್ಗೆ ನಿಮಗೆಷ್ಟು ಗೊತ್ತು..? ಇಲ್ಲಿದೆ ಮಾಹಿತಿ
ಕಣ್ಣುಗಳ ಆರೋಗ್ಯ ಕಾಪಾಡುತ್ತದೆ
ವಯಸ್ಸಾದಂತೆ ಎದುರಾಗುವ ಕಣ್ಣಿನ ಪೊರೆ ಸಮಸ್ಯೆ ಕೆಲವರನ್ನ ನಾನಾ ಸಂಕಷ್ಟಗಳಿಗೆ ಗುರಿ ಮಾಡುತ್ತದೆ.
ಇನ್ನು ಚಿಕ್ಕ ವಯಸ್ಸಿನಲ್ಲಿ ಮಕ್ಕಳಿಗೆ ಹಾಗೂ ವಯಸ್ಕರಿಗೆ ಕಣ್ಣಿಗೆ ಸಂಬಂಧ ಪಟ್ಟ ಹಲವಾರು ಸಮಸ್ಯೆಗಳು ಎದುರಾಗುತ್ತವೆ.
ಲ್ಯೂಟೀನ್ ಅಂಶ ಹಸಿ ಬಟಾಣಿ ಕಾಳುಗಳಲ್ಲಿ ಸಾಕಷ್ಟು ಇದೆ ಎಂದು ಹೇಳುತ್ತಾರೆ. ಇದರ ನಿರಂತರ ಸೇವನೆಯಿಂದ ದೂರದೃಷ್ಟಿ ಅಥವಾ ಹತ್ತಿರದ ದೃಷ್ಟಿ ಸಮಸ್ಯೆಯನ್ನು ಕೂಡ ಇದು ಪರಿಹಾರ ಮಾಡುವಲ್ಲಿ ಕಾರ್ಯ ನಿರ್ವಹಿಸುತ್ತದೆ.
ಇದನ್ನೂ ಓದಿ:ಗರ್ಭಾವಸ್ಥೆಯಲ್ಲಿ ಅಧಿಕ ರಕ್ತದೊತ್ತಡವನ್ನು ನಿರ್ವಹಿಸುವುದು ಹೇಗೆ ?
ಹೃದಯವನ್ನು ಕಾಯಿಲೆಗಳಿಂದ ರಕ್ಷಿಸುತ್ತದೆ
ಹಸಿ ಬಟಾಣಿಯಲ್ಲಿರುವ ಆಂಟಿ ಆಕ್ಸಿಡೆಂಟುಗಳು ವಿಶೇಷವಾಗಿ ರಕ್ತನಾಳಗಳನ್ನು ಬಲಗೊಳಿಸಿ ಇದರಿಂದ ಹೃದಯದ ಮೇಲೆ ಬೀಳುವ ಭಾರವನ್ನು ಕಡಿಮೆಗೊಳಿಸುತ್ತವೆ. ಜೊತೆಗೆ ಹೃದಯದ ಕ್ಷಮತೆಯನ್ನು ಹೆಚ್ಚಿಸುತ್ತವೆ. ರಕ್ತದಲ್ಲಿ ಕೆಟ್ಟ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆಗೊಳಿಸಲು ನೆರವಾಗುತ್ತವೆ.
ಭಾರತೀಯ ಭಾಷೆಗಳಲ್ಲಿ ಹಸಿರು ಬಟಾಣಿಗೆ ಇರೋ ಹೆಸರುಗಳೇನು..?
ಇಂಗ್ಲೀಷ್: ಗ್ರೀನ್ ಪೀಸ್
ತಮಿಳು: ಪಟ್ಟಾನಿ
ಮಲಯಾಳಂ: ಪಟ್ಟಾನಿ
ತೆಲುಗು: ಪಚ್ಚಬತ್ತನಿ/ ಬಟನೀಲು
ಕನ್ನಡ: ಬಟ್ಟನಿ
ಹಿಂದಿ: ಮುಟ್ಟರ್/ಮಾಟರ್
ಬೆಂಗಾಲಿ: ಮತರ್
ಇದನ್ನೂ ಓದಿ: ಅತಿಯಾಗಿ ಮೊಟ್ಟೆ ತಿಂದರೆ ಏನೆಲ್ಲಾ ಅಡ್ಡ ಪರಿಣಾಮಗಳು ಇವೆ ಗೊತ್ತಾ..?
ಕೊಂಕಣಿ: ಅಟ್ಟಾನೊ/ಬಟಾನಿ
ಮರಾಠಿ: ವಟಾನಾ/ಮತ್ತಾರ್/ವಾತನೆ
ಒರಿಯಾ: ಮಾತರಾ/ಮಾಟರ್
ಪಂಜಾಬಿ: ಕಬ್ಲಿ ಚೋಲೆ/ಮತ್ತಾರ್
ತುಳು: ಬಟನಿ
Share your comments