ರೈತರಿಗೆ ಆದಾಯ ತರುವ ಬಿದಿರು ಕೃಷಿ
ಬಿದಿರು ಕೃಷಿ ರೈತರಿಗೆ ಆದಾಯ ತರುವ ಜೊತೆಗೆ ಅಳಿವಿನಂಚಿನಲ್ಲಿರುವ ಗುಡಿ ಕೈಗಾರಿಕೆ ಮತ್ತು ಬುಡಕಟ್ಟು ಜನಾಂಗದ ಆರ್ಥಿಕ ಸ್ಥಿತಿ ಸುಧಾರಿಸುವಂತ ಲಾಭದಾಯಕ ಕೃಷಿ. ಆದರೆ ಬಿದಿರು ಕೃಷಿ ಮತ್ತು ಸಂರಕ್ಷಣೆಗೆ ಕಟ್ಟುನಿಟ್ಟಿನ ನಿಯಮಗಳಿರುವ ಹಿನ್ನಲೆಯಲ್ಲಿ ಹೆಚ್ಚಿನ ಬಳಕೆಗೆ ಸಿಗುತ್ತಿರಲಿಲ್ಲ. ಹೀಗಾಗಿ ಕೇಂದ್ರ ಸರ್ಕಾರ ಮರಕ್ಕಿದ್ದ ಸಂರಕ್ಷಣೆ ನಿಯಮಗಳನ್ನು ಸಡಿಲಿಸುವ ಮೂಲಕ, ಅರಣ್ಯೇತರ ಪ್ರದೇಶಗಳಲ್ಲಿ ಬೆಳೆದ ಬಿದಿರಿನ ಮಾರಾಟಕ್ಕೆ ಅನುಕೂಲ ಕಲ್ಪಿಸಿದೆ.
ಪರಿಸರ ಸಂರಕ್ಷಣೆ ಮತ್ತು ನೈತಿಕ ಸಂಪತ್ತಿನ ಸದ್ಬಳಕೆ ಮಾಡುವ ಉದ್ದೇಶದಿಂದ ಹಾಗೂ 2022 ವೇಳೆಗೆ ರೈತರ ಆದಾಯ ಹೆಚ್ಚುಗೊಳಿಸುವ ಸಂಕಲ್ಪವಿಟ್ಟುಕೊಂಡು ಸರ್ಕಾರ ಕಾರ್ಯಪ್ರವೃತ್ತವಾಗಿದೆ. ಅರಣ್ಯೇತರ ಪ್ರದೇಶಗಳಲ್ಲಿ ಬೆಳೆದ ಬಿದಿರನ್ನು ಕಡಿದು ಸಾಗಣೆ ಮಾಡಲು ಅನುಕೂಲವಾಗುವಂತೆ ಅರಣ್ಯ ಕಾಯ್ದೆಗೆ ತಿದ್ದುಪಡಿ ತಂದಿದೆ. ಈ ಕುರಿತು ಈಗಾಗಲೇ ಸುಗ್ರೀವಾಜ್ಞೆ ಹೊರಡಿಸಲಾಗಿತ್ತು. ಹಾಗೇ 1927 ಅರಣ್ಯ ಕಾಯ್ದೆ ಜಾರಿಗೆ ಬಿದಿರಿನ ಕುರಿತು ಮಹತ್ತರ ತಿದ್ದುಪಡಿಗೆ ಒಳಗೊಂಡ ಭಾರತೀಯ ಅರಣ್ಯ ಮಸೂದೆ 2017ಕ್ಕೆ ಡಿಸೆಂಬರ್ 20 ರಂದು ಲೋಕಸಭೆ ಅನುಮೋದನೆ ನೀಡಿದೆ.
ಇದನ್ನು ಓದಿರಿ:
Big Announce! ರೈತರ income ಹೆಚ್ಚಿಸಲು 100 ಕೋಟಿ ಮೀಸಲು CM ಬೊಮ್ಮಾಯಿ ಅವರಿಂದ Big GIft, ಬಜೆಟ್‌ನಲ್ಲಿ ಘೋಷಣೆ
ಬಿದಿರು ಕೃಷಿ ಹೇಗೆ?
ಬಿದಿರು ಕೃಷಿ ಸುಲಭ ಮತ್ತು ಲಾಭದಾಯಕ ಗದ್ದೆಯ ಬದು, ಇಲ್ಲವೇ ತೋಟದ ಅಕ್ಕ-ಪಕ್ಷ, ಖುಷ್ಕಿ ಜಾಗಗಳಲ್ಲೂ ಬೆಳೆಯಬಹುದಾಗಿದೆ. ಮತ್ತೆ ವಿಶೇಷ ಆರೈಕೆ ಬೇಕಿಲ್ಲ. ಹನಿ ನೀರಾವರಿಯ ವ್ಯವಸ್ಥೆ ಮಾಡಿದರೆ ಮುಖ್ಯ ಬೆಳೆಯಾಗಿಯೇ ಬಿದಿರನ್ನು ಬೆಳೆಯಬಹುದು. ಬಿದಿರು ಮಣ್ಣಿನ ಸವಕಳಿ ತಪ್ಪಿಸುವುದಲ್ಲದೆ ನೀರಿನ ಇಂಗಿಸುವಿಕೆಗೂ ಅನುಕೂಲವಾಗಿದೆ.
ಬಿದಿರಿನ ತಳಿಗಳು : ಬರ್ಮಾ, ಭೀಮಾ, ಶಮೆ, ಡೌಗಾ, ಮಾರಿಹಾಳ ಸೇರಿ ಸುಮಾರು 150ಕ್ಕೂ ಹೆಚ್ಚು ತಳಿಗಳಿವೆ.
UNIDO ವರದಿಯಲ್ಲಿ ಏನಿದೆ?
United nations Industrial development organization (UNIDO) ವರದಿ ಪ್ರಕಾರ, ಮುಂದಿನ 10 ವರ್ಷಗಳಲ್ಲಿ ಕೇವಲ ಈಶಾನ್ಯ ಭಾಗದ ಪ್ರದೇಶಗಳಲ್ಲಿ ಸುಮಾರು 5000 ಕೋಟಿ ರೂಪಾಯಿ ವಹಿವಾಟು ನಡೆಸುವ ಸಾಮರ್ಥ್ಯ ಬಿದಿರು ಆಧಾರಿತ ಉದ್ಯಮಕ್ಕಿದೆ. ಕಾನೂನು ಸಡಿಲಗೊಂಡಿರುವುದರಿಂದ ಈಗಾಗಲೇ ಬೆಳೆಯಲು ಯೋಗ್ಯವಿದ್ದೂ ಪಾಳು ಬಿಟ್ಟಿದ್ದ ಅಂದಾಜು 1.26 ಕೋಟಿ ಹೆಕ್ಟೇರ್ ಪ್ರದೇಶದಲ್ಲಿ ಬಿದಿರು ಕೃಷಿ ಮಾಡಬಹುದು ಎಂದು ಕೇಂದ್ರ ಪರಿಸರ ಸಚಿವಾಲಯ ವರದಿಯೊಂದು ತಿಳಿಸಿದೆ.
ಇನ್ನಷ್ಟು ಓದಿರಿ:
ಪಳ-ಪಳ ಹೊಳೆಯುವ ಸೌಂದರ್ಯ ನಿಮ್ಮದಾಗಬೇಕೆ? Vitamin E ನಲ್ಲಿದೆ ರಹಸ್ಯ.
BENEFITS OF ONION! ಈರುಳ್ಳಿ ಏಕೆ ಬೇಕು ಆರೋಗ್ಯಕ್ಕೆ? #Onion
ಏನಿದು ಅರಣ್ಯ ಕಾಯ್ದೆ ?
ಅರಣ್ಯ ಕಾಯ್ದೆ 1927 ಸೆಕ್ಷನ್ 2 (7) ಕ್ಕೆ ತಿದ್ದುಪಡಿ ತರಲಾಗಿದ್ದು, ಇದರ ಪ್ರಕಾರ ಅರಣ್ಯೇತರ ಪ್ರದೇಶದಲ್ಲಿ ಬೆಳೆದ ಬಿದಿರು ಮರ ಅಲ್ಲ ಹಾಗಾಗಿ ಕಟಾವು , ಸಾಗಣೆಗೆ ಅರಣ್ಯ ಇಲಾಖೆಯ ಅನುಮತಿ ಪಡೆಯುವ ಅಗತ್ಯವಿಲ್ಲ. ಆದರೆ, ಅರಣ್ಯದಲ್ಲಿ ಬೆಳೆದ ಬಿದಿರು ಮಾತ್ರ ಮರವಾಗಿಯೇ ಪರಿಗಣನೆ ಆಗಲಿದ್ದು, ಇದನ್ನು ಕಡಿಯುವುದು ಅಪರಾಧವಾಗಿದೆ. ಬಿದಿರಿನಲ್ಲಿ ಅಂದಾಜು 150 ಪ್ರಭೇದಗಳು ನೈಸರ್ಗಿಕವಾಗಿ ಭಾರತದಲ್ಲಿ ಕಂಡು ಬರುತ್ತವೆ. ಅದರಲ್ಲಿ ಬಹುಪಯೋಗಿ ಬಿದಿರುಗಳ ಪ್ರಭೇದಗಳು ಕೆಳಗಿನಂತಿವೆ.
ಮುಳ್ಳು ಬಿದಿರು, ಗಂಡು ಬಿದಿರು, ಹೆಬ್ಬಿದಿರು, ಸೀಮೆ ಬಿದಿರು, ಬರ್ಮಾ ಬಿದಿರು, ಅಸ್ಪರ್ ಬಿದಿರು, ಸಿಹಿ ಬಿದಿರು, ರಾಗಿ ಬಿದಿರು, ಗಡುವಾ ಬಿದಿರು, ಟುಲ್ಡ ಬಿದಿರು ಹಾಗೂ ಭೀಮಾ ಬಿದಿರು.
ಆರ್ಥಿಕವಾಗಿ ಲಾಭದಾಯಕ ಬಿದಿರುಗಳು :
ಬರ್ಮಾ ಬಿದಿರು ಬರ್ಮ ಬಿದಿರು ಒಂದು ಹುಲ್ಲು ಜಾತಿಯ ವರ್ಗಕ್ಕೆ ಸೇರಿದ ಸಸ್ಯವಾಗಿದ್ದು, ಸ್ಥಳೀಯ ಬಿದಿರಿಗಿಂತ ವಿಭಿನ್ನವಾಗಿದೆ. ಇದನ್ನು ಕರ್ನಾಟಕ ಕೊಡಗು ಜಿಲ್ಲೆಯಲ್ಲಿ 1913 ರಲ್ಲಿ ಕಂಡುಕೊಳ್ಳಲಾಯಿತು. ಈ ಬಿದಿರು ಮುಳ್ಳುರಹಿತವಾಗಿದ್ದು ನೇರವಾಗಿ ಬೆಳೆಯುವ ಗುಣಗಳನ್ನು ಹೊಂದಿರುವುದರಿಂದ ಉದ್ಯಮಶೀಲರಲ್ಲಿ ಆಸಕ್ತಿಯನ್ನು ಹುಟ್ಟಿಸಿದೆ. ಸದರಿ ಬಿದಿರನ್ನು ಸಾಂಪ್ರದಾಯಿಕವಾಗಿ ಏಣಿ, ಬುಟ್ಟಿ, ನೇಯ್ಗೆ, ಇತ್ಯಾದಿಗಳಲ್ಲಿ ಬಳಸಲಾಗುತ್ತಿದೆ. ಬರ್ಮ ಬಿದಿರು 13-30 ಸೆಂ. ಮೀ. ಸುತ್ತಳತೆ ಹೊಂದಿದ್ದು ಸುಮಾರು 20 ಮೀ. ಎತ್ತರದವರೆಗೆ ಬೆಳೆಯುತ್ತದೆ.
ಇನ್ನಷ್ಟು ಓದಿರಿ:
TOMATO FARMING AT HOME! ಮನೆಯಲ್ಲಿ ಟೊಮೇಟೊ ಬೆಳೆಯುವುದು?
Green Peas: ʻಹಸಿರು ಬಟಾಣೆʼ ಸೇವನೆಯ ಅದ್ಭುತ ಪ್ರಯೋಜನಗಳೇನು..? ಇಲ್ಲಿದೆ ಮಾಹಿತಿ
ಗಿಡಗಳ ನಾಟಿ ಮತ್ತು ನಿರ್ವಹಣೆ:
ಬರ್ಮ ಬಿದಿರನ್ನು ಹಲವು ವಿಧದ ಮಣ್ಣಿನಲ್ಲಿ ಬೆಳೆಸಬಹುದು. ಮರಳು ಮಿಶ್ರಿತ ನೀರು ಬಸಿದು ಹೋಗುವ ಭೂಮಿಯಲ್ಲಿ ಚೆನ್ನಾಗಿ ಬೆಳೆಯುತ್ತದೆ. ನೆಡುವ ಗಿಡಗಳ ಅಳತೆಯ ಆಧಾರದ ಮೇಲೆ 45 ಸೆಂ.ಮೀ X 45 ಸೆಂ.ಮೀ X 45 ಸೆಂ.ಮೀ ಗಾತ್ರದ ಗುಂಡಿಗಳನ್ನು ತೆಗೆಯಬೇಕು. ಪ್ರತಿ ಗುಂಡಿಗೆ 5 ಕಿ.ಗ್ರಾಂ ಎರೆಹುಳು ಗೊಬ್ಬರ ಹಾಕಬೇಕು. ಗೆದ್ದಲು ಬಾಧಿತ ಪ್ರದೇಶಗಳಲ್ಲಿ ಮುನ್ನೆಚ್ಚರಿಕೆಯಾಗಿ ರಾಸಾಯನಿಕಗಳನ್ನು ಹಾಕಬೇಕು. ನರ್ಸರಿಯಲ್ಲಿ 25-50 ಸೆಂ.ಮೀ ಎತ್ತರಕ್ಕೆ ಬೆಳೆದ ಗಿಡಗಳನ್ನು ಸಿದ್ಧಪಡಿಸಿದ ಗುಂಡಿಯಲ್ಲಿ ನೆಡಬೇಕು. ಮೊದಲನೆಯ ಎರಡು ವರ್ಷಗಳಲ್ಲಿ ಅಂತರ ಬೆಳೆಗಳಾಗಿ ಶುಂಠಿ, ಅರಿಶಿಣ ಅಥವಾ ಬೇರೆ ವಾರ್ಷಿಕ ಬೆಳೆಗಳನ್ನು ಬೆಳೆಯಬಹುದಾಗಿದೆ.
ಇಳುವರಿ:
ಗಿಡ ನೆಟ್ಟ ನಾಲ್ಕನೇ ವರ್ಷದ ನಂತರ ಪ್ರತಿ ಹಿಂಡಿನಿಂದ 2 ಗಳಗಳನ್ನು 40 ವರ್ಷಗಳವರೆಗೆ ಪಡೆಯಬಹುದಾಗಿದೆ. ಒಂದು ಎಕರೆಗೆ 110 ಹಿಂಡುಗಳಿದ್ದಲ್ಲಿ ಸರಾಸರಿ 880 ಗಳಗಳನ್ನು ಪ್ರತಿ ವರ್ಷ ಪಡೆಯಬಹುದು. 20 ಅಡಿ ಉದ್ದದ ಒಂದು ಗಳಿದ ಬೆಲೆ ರೂ. 80 ರಿಂದ 120 ಇರುತ್ತದೆ. ಪ್ರತಿ ಹೆಕ್ಟೇರಿಗೆ ಬಿದಿರು ನೆಟ್ಟ 4 ವರ್ಷಗಳ ನಂತರ ಹಂತ ಹಂತವಾಗಿ ಮುಂದಿನ 20 ವರ್ಷಗಳವರೆಗೆ ರೂ. 1,20,000 ದಿಂದ ರೂ. 2,25,000 ರವರೆಗೆ ಸರಾಸರಿ ಆದಾಯ ಪಡೆಯಬಹುದಾಗಿದೆ.
ಮತ್ತಷ್ಟು ಓದಿರಿ:
Share your comments