ಮುಟ್ಟಿದರೆ ಮುನಿ ಎಂದರೆ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ. ಪ್ರತಿಯೊಬ್ಬರ ಬಾವ್ಯವೂ ಮುಟ್ಟಿದರೆ ಮುನಿಯೊಂದಿಗೆ ಬಹುಪಾಲು ನಂಟನ್ನು ಹೊಂದಿದೆ. ಚಿಕ್ಕ ಮಕ್ಕಳಂತೂ ಈ ಸಸಿಯನ್ನು ಕಂಡರೆ ಯಾವಾಗ ಮುಟ್ಟಿ ತೀರಬೇಕೊ ಎಂದು ಕಾಯುತ್ತಾರೆ. ಅದನ್ನು ಮುಟ್ಟಿ ಅದು ನಾಚಿಕೊಂಡಾಗ ಎಂಥವರ ಮುಖದಳ್ಳು ಅರೆಕ್ಷಣ ಖುಷಿ ಮೂಡದೆ ಇರದು.
ಇಂತಹ ಮುಟ್ಟಿದರೆ ಮುನಿಯಲ್ಲಿ ಸಾಕಷ್ಟು ಔಷಧಿಯ ಗುಣಗಳು ಇವೆಯೆಂದರೆ ನಂಬುತ್ತೀರಾ? ಹೌದು, ನೀವು ನಂಬಲೇಬೇಕು. ಮುಟ್ಟಿದರೆ ಮುನಿ ಸಸಿಯೂ ನಮ್ಮ ಪುರಾತನ ಕಾಲದಿಂದಲೂ ಔಷಧಿಯ ಚಟುವಟಿಕೆಗಳಿಗಾಗಿ ಬಳಸಲಾಗುತ್ತದೆ.
ಮುಟ್ಟಿದರೆ ಮುನಿ
ಲಜ್ಜಾವತಿ ಎಂಬುದು ಸುಮಾರು 400 ಜಾತಿಯ ಪೊದೆಗಳು ಮತ್ತು ಬಳ್ಳಿಗಳ ಜಾತಿಯ ಹೆಸರು, ಇದು ಲೀಜಿಯಂ ಕುಲದ ಫ್ಯಾಬೇಸಿಯ ಜಾತಿಗೆ ಸೇರಿದ ಮೈಮೋಸೋಯಿಡೀ ಮತ್ತು ಮಿಮೋಸೇಸಿಯ ಜಾತಿಗೆ ಸೇರಿದೆ . ಈ ಗುಂಪಿನ ಹೆಸರು ಗ್ರೀಕ್ ಭಾಷೆಯಿಂದ ಬಂದಿದೆ. ಈ ಮರದ ಒಂದು ವೈಶಿಷ್ಟ್ಯವೆಂದರೆ ಅದು ತನ್ನ ಎಲೆಗಳನ್ನು ಮುಟ್ಟಿದ ತಕ್ಷಣ ತನ್ನ ಎಲೆಗಳನ್ನು ಕಳೆದುಕೊಳ್ಳುತ್ತದೆ. ಆದಾಗ್ಯೂ, ಈ ಮರವು ಕೆಲವು ವಿಶೇಷ ಪ್ರಯೋಜನಗಳನ್ನು ಹೊಂದಿದೆ. ಇದನ್ನು ಔಷಧೀಯ ಸಸ್ಯ ಎಂದೂ ಕರೆಯುತ್ತಾರೆ.
ಇದನ್ನೂ ಓದಿರಿ:
ಈ ಔಷದೀಯ ಸಸ್ಯಗಳನ್ನು ಬೆಳೆಯಿರಿ ದುಪ್ಪಟ್ಟು ಆದಾಯ ಪಡೆಯಿರಿ
ಸುಸ್ಥಿರ ಕೃಷಿಯಲ್ಲಿ ಸಲ್ಫರ್, ಮೆಗ್ನೀಸಿಯಮ್ ಮತ್ತು ಕ್ಯಾಲ್ಸಿಯಂ ಏಕೆ ಬೇಕು?
ಮುಟ್ಟಿದರೆ ಮುನಿಯ ಔಷಧಿಯ ಗುಣಗಳು
ಮುಟ್ಟಿದರೆ ಮುನಿಯಲ್ಲಿ ಆರೋಗ್ಯಕ್ಕೆ ಸಂಬಂಧಿಸಿದ ಸಾಕಷ್ಟು ಪ್ರಯೋಜನಗಳು ಇವೆ.
- ಕಫ ಮತ್ತು ಶೀತಕ್ಕೆ ಮದ್ದು: ಇದು ಕಹಿ ಮತ್ತು ಶೀತ ಗುಣಗಳನ್ನು ಹೊಂದಿರುವುದರಿಂದ, ಇದು ಕಫ ಮತ್ತು ಪಿತ್ತರಸವನ್ನು ಗುಣಪಡಿಸಲು ಉಪಯುಕ್ತವಾಗಿದೆ.
- ಮೂಲವ್ಯಾಧಿಗೆ ಮದ್ದು : ಈ ಸಸ್ಯವೂ ಮೂಲವ್ಯಾಧಿಯಂತಹ ರೋಗಗಳ ವಿರುದ್ಧ ಬಹಳ ಪರಿಣಾಮಕಾರಿಯಾಗಿದೆ. ಅಷ್ಟೇ ಅಲ್ಲದೇ ಮೂಲವ್ಯಾಧಿಯ ಸಂದರ್ಭದಲ್ಲಿ ಈ ಎಲೆಯ ಪುಡಿಯನ್ನು ಹಾಲಿನೊಂದಿಗೆ ಸೇವಿಸಬೇಕು.
- ಕಿಡ್ನಿ ಕಲ್ಲುಗಳಿಗೆ ರಾಮಬಾಣ: ಕಿಡ್ನಿಯಲ್ಲಿ ಕಲ್ಲು ಮತ್ತು ಮೂತ್ರದ ಸಮಸ್ಯೆಗಳಿದ್ದರೆ ಇದರ ಬೇರನ್ನು ಕುಡಿದರೆ ಪರಿಹಾರ ಪಡೆಯಬಹುದು.
- ಕೆಮ್ಮು ನಿವಾರಣೆಯಲ್ಲಿ ಮುಂದು : ಈ ಮುಟ್ಟಿದರೆ ಮುನಿಯ ಸಸಿಯ ಎಲೆಗಳು ಅಥವಾ ಅದರ ಬೇರುಗಳೊಂದಿಗೆ ಆಟವಾಡುವುದರಿಂದ ಕೂಡ ಕೆಮ್ಮು ನಿವಾರಣೆಯಾಗುತ್ತದೆ ಎಂದು ನಾಟಿ ವೈದ್ಯರ ಅಭಿಪ್ರಾಯ.
- ಗಾಯಕ್ಕೆ ಮದ್ದು ಮುಟ್ಟಿದರೆ ಮುನಿ: ಒಂದು ವೇಳೆ ಗಾಯವಾದರೆ ಈ ಸಸಿಯ ಎಲೆಗಳನ್ನು ಅರೆದು ಪೇಸ್ಟ್ ಮಾಡಿ ಗಾಯದ ಮೇಲೆ ಲೇಪಿಸಿದರೆ ಅಲ್ಲಿಂದ ರಕ್ತಸ್ರಾವ ಆಗುವುದು ನಿಲ್ಲುತ್ತದೆ.
Pomegranate Farming:ಈ ತಂತ್ರಗಳನ್ನು ಅನುಸರಿಸಿ ಲಾಭದಾಯಕ ದಾಳಿಂಬೆ ಬೆಳೆಯಿರಿ
PM ಕಿಸಾನ್ ರೈತರಿಗೆ ಬಿಗ್ ನ್ಯೂಸ್: OTP ಮೂಲಕ ಆಧಾರ್ ಕಾರ್ಡ್ e-KYC ರದ್ದು..
- ಬಾವುಗಳ ನಿವಾರಣೆಯಲ್ಲಿಯೂ ಮುಂದು : ಬಾವುಗಳ ನಿವಾರಣೆಗೆ ಕೂಡ ಸಹಕಾರಿ ಆಗಿದೆ. ಮುಟ್ಟಿದರೆ ಮುನಿ ಸಸಿಯ ಕಾಂಡ, ಬೇರು, ಎಲೆ, ಹೂವು ಎಲ್ಲವೂ ಕೂಡ ಆರೋಗ್ಯದ ದೃಷ್ಟಿಯಿಂದ ಪ್ರಯೋಜನಕಾರಿಯಾಗಿ ಇವೆ. ಯಾವುದಾದರೂ ಜಾಗದಲ್ಲಿ ಬಾವುಗಳಾಗಿದ್ದಲ್ಲಿ ಈ ಗಿಡವನ್ನು ಅರೆದು ಅದನ್ನು ಬಾವಿರುವ ಜಾಗದಲ್ಲಿ ಕಾಟನ್ ಬಟ್ಟೆಯಿಂದ ಸುತ್ತಿ ಕಟ್ಟಿದರೆ ಆ ಬಾವು ಬಹುಬೇಗನೆ ನಿವಾರಣೆಯಾಗುತ್ತೆ.
- ಮಲಬದ್ಧತೆಗೆ ಪರಿಣಾಮಕಾರಿ ಔಷಧ: ಮಲಬದ್ಧತೆ ಸಮಸ್ಯೆಗೆ ಪರಿಹಾರ ನೀವು ಮಲಬದ್ಧತೆ ಸಮಸ್ಯೆಯಿಂದ ಬಳಲ್ತಾ ಇದ್ದು, ಐದಾರು ದಿನದಿಂದ ಟಾಯ್ಲೆಟ್ ಗೆ ಹೋಗಿಲ್ಲ ಅಂದ್ರೆ ಮುಟ್ಟಿದರೆ ಮುನಿ ಗಿಡ ಎಲೆ ಮತ್ತು ಬೇರುಗಳನ್ನು ಚೆನ್ನಾಗಿ ಅರೆದು ಅದರ ರಸವನ್ನು ಕುಡಿಯುವುದರಿಂದ ಉಪಶಮನವಾಗುತ್ತೆ. ಎರಡರಿಂದ ಮೂರು ಸ್ಪೂನ್ ಕುಡಿದರೆ ಸಾಕಾಗುತ್ತೆ. ಇಲ್ಲವೇ ಒಂದು ಲೋಟ ನೀರಿಗೆ ಒಂದು ಅಥವಾ ಎರಡು ಸ್ಪೂನ್ ರಸವನ್ನು ಬೆರೆಸಿ ಕುಡಿಯಬಹುದು.
- ಬಾಣಂತಿಯರ ಹೊಟ್ಟೆ ಕರಗಿಸಲು ಸಹಕಾರಿ: ಬಾಣಂತಿಯರ ಹೊಟ್ಟೆ ಕರಗಿಸಲು ಸಹಕಾರಿ ಬಾಣಂತನದಲ್ಲಿ ಹೊಟ್ಟೆ ಕರಗಿಸೋದು, ಮತ್ತೆ ಫಿಟ್ ಆಗಿ ಮೊದಲಿನ ಸೈಜ್ ಗೆ ಬರೋದು ಪ್ರತಿ ಮಹಿಳೆಗೂ ಒಂದು ಚಾಲೆಂಜ್ ಇದ್ದಂತೆ. ಸರಿಯಾಗಿ ಬಾಣಂತನ ಆಗಿಲ್ಲ ಅಂದ್ರೆ ಪುನಃ ಫಿಟ್ ಎಂಡ್ ಫೈನ್ ಆಗೋದು ಅಷ್ಟು ಸುಲಭವಲ್ಲ.
- ಮೊಡವೆ ನಿವಾರಣೆಯಲ್ಲೂ ಎತ್ತಿದ ಕೈ: ಮೊಡವೆ ನಿವಾರಣೆ ಮುಟ್ಟಿದರೆ ಮುನಿ ಸಸ್ಯದ ರಸವನ್ನು ಮೊಡವೆ ಕಲೆಗಳಿರುವ ಜಾಗಕ್ಕೆ ಲೇಪಿಸಿಕೊಂಡ್ರೆ, ಮೊಡವೆಗಳು ನಿವಾರಣೆಯಾಗುತ್ತೆ. ಇದಲ್ಲದೆ, ಮುಟ್ಟಿದರೆ ಮುನಿ (ಲಜ್ಜಾಬಾತಿಯು) ಕಿವಿಯೋಲೆ, ಗ್ರಂಥಿ ಸಂಧಿವಾತದಂತಹ ವಿವಿಧ ರೋಗಗಳಲ್ಲಿ ಬಹಳ ಉಪಯುಕ್ತವಾಗಿದೆ. ಈ ಎಲೆಯು ವಸಡು, ಕಂಕುಳು ಇತ್ಯಾದಿಗಳಲ್ಲಿ ವಿಶೇಷವಾಗಿ ಉಪಯುಕ್ತವಾಗಿದೆ.
PNGRB ನೇಮಕಾತಿ: ಇಲ್ಲಿದೆ ಭರ್ಜರಿ ಉದ್ಯೋಗಾವಕಾಶ!
ರಾಜ್ಯದ ಜನತೆಗೆ ಮತ್ತೊಂದು ಶಾಕ್! ನಂದಿನಿ ಹಾಲಿನ ದರದಲ್ಲಿ 5 ರೂ ಹೆಚ್ಚಳ?
ಕೆಲವು ಸಸ್ಯಗಳಲ್ಲಿ ಇಂತಹ ಶಕ್ತಿ ಅಡಕವಾಗಿದೆ ಅಂದ್ರೆ ಒಮ್ಮೊಮ್ಮೆ ನಂಬೋಕೆ ಅಸಾಧ್ಯ ಅನ್ನಿಸುತ್ತೆ. ಇದೂ ಕೂಡ ಔಷಧೀಯ ಸಸಿ. ನಿಮ್ಮ ಆರೋಗ್ಯ ಲಾಭಕ್ಕಾಗಿ ಪ್ರಕೃತಿಯ ಕೊಡುಗೆ ಅಂದ್ರೆ ಆಶ್ಚರ್ಯ ಆಗಬಹುದು. ಅಂತಹ ಗಿಡಗಳಲ್ಲಿ ಮುಟ್ಟಿದರೆ ಮುನಿ ಇಂಗ್ಲೀಷಿನಲ್ಲಿ “Touch me Not” ಅಂತ ಕರೆಸಿಕೊಳ್ಳುವ ಗಿಡವೂ ಒಂದು. ಈ ಗಿಡಕ್ಕೆ ಹಲವಾರು ಹೆಸರು. ಕೆಲವು ಪ್ರದೇಶದಲ್ಲಿ ನಾಚಿಕೆ ಮುಳ್ಳು ಅಂತಲೂ ಕರೆಯುತ್ತಾರೆ. ಯಾಕೆ ಈ ಹೆಸರು ಈ ಗಿಡಕ್ಕೆ ಅನ್ನೋದನ್ನು ಈ ಗಿಡ ನೋಡಿದವ್ರಿಗೆ ಖಂಡಿತ ತಿಳಿದಿರುತ್ತೆ. ಈ ಗಿಡವನ್ನು ಮುಟ್ಟಿದ ಕೂಡಲೆ ಇದರ ಎಲೆಗಳು ಮಡಚಿಕೊಳ್ಳುತ್ತೆ. ಹಾಗಂತ ಗಿಡಕ್ಕೆ ನಾಚಿಕೆ ಆಗಿ ಈ ರೀತಿ ಆಗೋದಲ್ಲ.
ಅಷ್ಟೇ ಅಲ್ಲ, ಕಾಂಡದ ಭಾಗವನ್ನು ಕತ್ತರಿಸಿದರೆ ಬೇರುಗಳು ಜೀವಂತವಾಗಿದ್ದು ಮತ್ತೆ ಬಹುಬೇಗನೆ ಬೆಳೆದು ನಿಲ್ಲುವ ಸಸ್ಯ ಪ್ರಬೇಧ ಇದು. ಇದರ ಮುಳ್ಳುಗಳು ಚುಚ್ಚಿದ್ರೆ ಯಮಯಾತನೆ ಪಡುವಂತ ನೋವು ಗ್ಯಾರೆಂಟಿ..ಆದರೆ ಆಯುರ್ವೇದದಲ್ಲಿ ಮಾತ್ರ ಮುಟ್ಟಿದರೆ ಮುನಿ ಸಸ್ಯಕ್ಕೆ ವಿಶೇಷ ಮಹತ್ವವಿದೆ. ನಮ್ಮ ದೈಹಿಕ ಆರೋಗ್ಯದ ವೃದ್ಧಿಸುವಲ್ಲಿ ಮುಟ್ಟಿದರೆ ಮುನಿ ಸಸ್ಯ ಹಲವು ಉಪಯೋಗಗಳನ್ನು ಮಾಡಲಿದೆ.
ಕೋಳಿ ಸಾಕಣೆಗೆ ಮುನ್ನ ತೆಗೆದುಕೊಳ್ಳಬೇಕಾದ ಮುಂಜಾಗ್ರತಾ ಕ್ರಮಗಳು ಯಾವವು..?
Indoor Fish Farming: ಒಳಾಂಗಣ ಮೀನು ಸಾಕಾಣಿಕೆ ಮಾಡಿ 3 ಪಟ್ಟು ಲಾಭ ಗಳಿಸಿ
Share your comments