ದಾಳಿಂಬೆಯ ಎಲೆಯ ಮೇಲೆ ನೀರಿನಿಂದ ಕೂಡಿದ ಚುಕ್ಕೆಗಳು ಕಾಣಿಸುತ್ತವೆ. ನಂತರ ಈ ಚುಕ್ಕೆಗಳು ಕಪ್ಪು ಮಿಶ್ರಿತ ಕಂದು ಬಣ್ಣಕ್ಕೆ ತಿರುಗುತ್ತವೆ. ರೋಗ ಉಲ್ಬಣಗೊಂಡಾಗ, ರೋಗಪೀಡಿತ ಎಲೆಗಳು ನೆಲಕ್ಕೆ ಉದುರುತ್ತವೆ.
ಕಾಯಿ (ಹಣ್ಣು) ಗಳ ಮೇಲೆ ಚುಕ್ಕೆಗಳು ಎಣ್ಣೆಯಂತಿದ್ದು ಉಬ್ಬಿಕೊಂಡಿರುತ್ತವೆ. ನಂತರ ಆ ಜಾಗದಲ್ಲಿ ಕಾಯಿಗಳು ಸೀಳಲು ಪ್ರಾರಂಭವಾಗುವವು,
ಇಬ್ಬನಿ/ಸಿಂಪರಣೆ/ಮಳೆಯಿಂದ ದುಂಡಾಣುವಿನಬಿಳಿ ದ್ರವ ಹೊರಗೆ ಬರುವುದರಿಂದ ಕೈಗಳಿಗೆ ಅಂಟಿಸುವಂತೆ ಭಾವಿಸುತ್ತದೆ ಮತ್ತು ಒಣಗಿದ ನಂತರ ಅಂಗಮಾರಿ ರೋಗದ ಮಚ್ಚೆಗಳ ಮೇಲ್ಮೈಯಲ್ಲಿ ಬಿಳಿ ಹೊಳಪಿನ ಎನ್ಕçಸ್ಡೇಶನ್ ಅನ್ನು ನೋಡಬಹುದು.
ಈ ರೋಗವು ಕಾಂಡದ ಮೇಲೆ ಬಂದಾಗ ಕುಡಿಗಳು ಮೇಲಿನಿಂದ ಒಣಗಿ ಕಪ್ಪು ಮಚ್ಚೆಗಳು ಕಾಣುತ್ತವೆ. ರೋಗದ ತೀವ್ರತೆ ಹೆಚ್ಚಾದಂತೆ ಕಾಂಡದ ಭಾಗವು ಸೀಳುವುದಲ್ಲದೆ ಇದರಿಂದ ರೋಗಪೀಡಿತ ಕಾಂಡ ಮುರಿದು ಬೀಳುತ್ತದೆ.
ಹತೋಟಿ ಕ್ರಮಗಳು:
ದುಂಡಾಣು ಅಂಗಮಾರಿ ರೋಗದ ತೀವ್ರತೆಯು ಹೆಚ್ಚಿದ ತೋಟಗಳಲ್ಲಿ ಅಥವಾ ರೋಗಪೀಡಿತ ಪ್ರದೇಶಗಳಲ್ಲಿರುವ ತೋಟಗಳಲ್ಲಿಕಡ್ಡಾಯವಾಗಿ ವೇಳಾಪಟ್ಟಿಯನ್ನು ಪಾಲಿಸಬೇಕು.
ದಾಳಿಂಬೆ ಬೆಳೆಯನ್ನು ಮಿರಿಗ್ ಬಹಾರ್ ನಲ್ಲಿ (ಮಳೆಗಾಲದಲ್ಲಿ) ತೆಗೆದುಕೊಳ್ಳುವುದನ್ನು ತಪ್ಪಿಸಬೇಕು. ರೋಗದ ತೀವ್ರತೆ ಅಧಿಕವಾಗಿದ್ದಲ್ಲಿ ದಾಳಿಂಬೆ ಬೆಳೆಯನ್ನು 3 ರಿಂದ 4 ವರ್ಷಗಳ ಕಾಲ ಹಸ್ತಬಹಾರ್ ನಲ್ಲಿ ತೆಗೆದುಕೊಳ್ಳುವುದು ಅವಶ್ಯ.
ದಾಳಿಂಬೆ ತೋಟವನ್ನು ಸ್ವಚ್ಚವಾಗಿಡುವುದು,
ರೋಗ ಪೀಡಿತ ಎಲೆ, ಕಾಂಡ ಮತ್ತು ಕಾಯಿಗಳನ್ನು ಕಿತ್ತು ಸುಡಬೇಕು.
ಭೂಮಿಯ ಮೇಲೆ ಬ್ಲೀಚಿಂಗ್ ಪೌಡರ್ (ಚಿ.i 33% ಸಿ. ಎಲ್.) ಅನ್ನು 3 ರಿಂದ 4 (ಪ್ರತಿ ಹೆಕ್ಟೇರಿಗೆ 25 ಕಿ.ಗ್ರಾಂ ಪ್ರತಿ 1000 ಲೀಟರ್ ನೀರಿನಲ್ಲಿ ಬೆರೆಸಿ) ತಿಂಗಳಿಗೊಮ್ಮೆ ತೊಯ್ಯಿಸಬೇಕು.
ಚಾಟನಿ ಮಾಡುವಾಗ ಚಾಟನಿಯ ಕತ್ತರಿಯನ್ನು (2.5%) ಸೋಡಿಯಂ ಹೈಪೋಕ್ಲೋರೈಡ್ ದ್ರಾವಣದಲ್ಲಿ ಅದ್ದಿ ಚಾಟನಿ ಮಾಡುವುದರಿಂದ ರೋಗ ಹರಡುವಿಕೆಯನ್ನು ತಡೆಗಟ್ಟಬಹುದು ಮತ್ತ ತೋಟಗಳನ್ನು ಕಳೆಗಳಿಂದ ಮುಕ್ತವಾಗಿಡಬೇಕು.
ಎಲೆಯ ಮೇಲೆ ದುಂಡಾಣು ಅಂಗಮಾರಿ ರೋಗದ ಲಕ್ಷಣಗಳು
ಹಣ್ಣುಗಳ (ಕಾಯಿ) ಮೇಲೆ ದುಂಡಾಣು ಅಂಗಮಾರಿ ರೋಗದ ಲಕ್ಷಣಗಳು
ಕಾಂಡದ ಮೇಲೆ ದುಂಡಾಣು ಅಂಗಮಾರಿ ರೋಗದ ಲಕ್ಷಣಗಳುಬೇರುಗಳ ಮೇಲೆ ರೋಗದ ಲಕ್ಷಣಗಳು
ಸರಿಯಾದ ಚಾಟನಿ ಪದ್ಧತಿಯನ್ನು ಅನುಸರಿಸುವುದು
ರೋಗ ತಗುಲಿದ ಕಾಂಡವನ್ನು ಕಿತ್ತು ಹಾಕಬೇಕು. ಕಾಂಡ ಭಾಗದಲ್ಲಿ ರೋಗದ ಸೊಂಕು ಹೆಚ್ಚಾದಾಗಲ್ಲಿ ಕಟಾವು ಮಾಡಿದ ತಕ್ಷಣ ಭಾರಿ ಚಾಟನಿ ಪದ್ಧತಿಯನ್ನು ಅನುಸರಿಸಬೇಕು.
ಸೊಂಕಿನ ಸ್ಥಳದಿಂದ 2 ರಿಂದ 3 ಇಂಚು ಕೆಳಗಿನಿಂದ ಚಾಟನಿಯನ್ನು ಮಾಡಬೇಕು.
ಚಾಟನಿಯ ಪೂರ್ವದಲ್ಲಿ ರೋಗ ತಗುಲಿದ ಎಲೆಗಳ ಸೋಂಕನ್ನು ಕಡಿಮೆ ಮಾಡಲು, ಶೇ 10 ರ ಬೋರ್ಡೊ ಪೇಸ್ಟ್ ಅನ್ನು ಹಚ್ಚಬೇಕು. ಮಳೆಗಾಲದಲ್ಲಿ ಎಣ್ಣೆ ಆಧಾರಿತ ಪೇಸ್ಟ್ ಅನ್ನು ಬಳಸಬೇಕು (500 ಗ್ರಾಂ ತಾಮ್ರದ ಆಕ್ಸಿಕ್ಲೋರೈಡ್ ಮತ್ತು 1 ಲೀ. ಅಗಸೆ ಎಣ್ಣೆ ಇಂದ ಸಿ.ಒ.ಸಿ ಪೇನ್ಟ್ ಮಾಡಲಾಗುವುದು ಅಥವಾ 1 ಕಿ.ಗ್ರಾಂ ಕೆಂಪು ಸೀಸ +1 ಕಿ.ಗ್ರಾಂ ತಾಮ್ರದ ಕರ‍್ಬೋನೇಟ್+ 1.25 ಲೀ. ಅಗಸೆ ಎಣ್ಣೆ ಇಂದ ಚೌಬತ್ತಿಯ ಪೇಸ್ಟ್ ಅನ್ನು ಮಾಡಲಾಗುವುದು).
ರೋಗದ ತೀವ್ರತೆ ಅಧಿಕವಾಗಿದ್ದಲ್ಲಿ ರೋಗ ತಗಲಿದ ಗಿಡಗಳನ್ನು ಕಿತ್ತು ಸುಡಬೇಕು ಮತ್ತು ರೋಗರಹಿತ ಸಸಿಗಳನ್ನು ನಾಟಿಗೆ ಉಪಯೋಗಿಸಬೇಕು ಅಥವಾ ನೆಲಮಟ್ಟದಿಂದ 2-3 ಇಂಚು ಗಳವರೆಗೆ ಗಿಡವನ್ನು ಕತ್ತರಿಸಬೇಕು.
ಬೆಳೆಯ ಅವಧಿಯಲ್ಲಿ ಶೇ 0.5 ರ ಬೋರ್ಡೊ ದ್ರಾವಣವನ್ನು ಸಿಂಪಡಿಸುವುದು (ಶೇ 1 ಚಾಟನಿ ಆದ ನಂತರ). ನಂತರ ಬದಲಾಗಿ ಸ್ಟೆಪ್ಟೋಸೈಕ್ಲೀನ್ (5 ಗ್ರಾಂ ಪ್ರತಿ 10 ಲೀ. ನೀರಿಗೆ) ಅಥವಾ ಬ್ರೋಮೋಪಾಲ್ 5 ಗ್ರಾಂ ಪ್ರತಿ 10 ಲೀ. ನೀರಿಗೆ) ಜೊತೆಗೆ ತಾಮ್ರದ ಆಕ್ಸಿಕ್ಲೋರೈಡ್ ಅಥವಾ ತಾಮ್ರದ ಹೈಡ್ರಾಕ್ಸೈಡ್ (20-25 ಗ್ರಾಂ ಪ್ರತಿ 10 ಲೀ. ನೀರಿಗೆ) ಬೆರೆಸಿ ಸಿಂಪಡಿಸಬೇಕು. ಶಿಲೀಂದ್ರ ರೋಗಗಳ ಆಧಾರದ ಮೇಲೆ ತಾಮ್ರದ ರೋಗಕಾರಕ ಬದಲು ಸೂಕ್ತವಾದ ಶಿಲೀಂದ್ರನಾಶಕಗಳ ಬಳಕೆಯನ್ನು ಮಾಡಬಹುದು. ಉದಾಹರಣೆಗೆ: ಕಾರ್ಬನ್‌ಡೈಜಿಮ್ 50 ಡಬ್ಲೂ.ಪಿ (1 ಗ್ರಾಂ ಪ್ರತಿ ಲೀ. ನೀರಿಗೆ), ಥಯೋಪನೇಟ್ ಮಿಥೈಲ್ 70 ಡಬ್ಲೂ.ಪಿ (1 ಗ್ರಾಂ/ಲೀ.), ಕ್ಯಾಪ್ಟಾನ್ 50 ಡಬ್ಲೂ.ಪಿ (2.5 ಗ್ರಾಂ/ಲೀ.), ಝೈರಾಮ್ 80 ಡಬ್ಲೂ.ಪಿ (2 ಗ್ರಾಂ/ಲೀ.), ಕ್ಲೋರೋಥಲೋನಿಲ್ 75 ಡಬ್ಲೂ.ಪಿ (2.5 ಗ್ರಾಂ/ಲೀ.), ಹೆಕ್ಸಾಕೋನಾಜೋಲ್ 5 ಇ. ಸಿ, ಡೈಪಿನಾಕೋನಾಜೋಲ್ 25 ಇ. ಸಿ (1 ಮಿ.ಲೀ/ಲೀ), ಪ್ರೊಪಿನೆಬ್ 70% ಡಬ್ಲೂ.ಪಿ (3 ಗ್ರಾಂ/ಲೀ.) ಇತ್ಯಾದಿ.
ಬೆಳೆ ಹಂತದಲ್ಲ್ಲಿ ಶಿಫಾರಸ್ಸು ಮಾಡಿದ ಸಿಂಪರಣೆಗಳನ್ನು ಹೊರತು ಪಡಿಸಿ ಮುಂಜಾಗ್ರತವಾಗಿ ಕೋಯ್ಲು ಆದನಂತರ ವಿಶ್ರಾಂತಿ ಸಮಯದಲ್ಲಿ ಮತ್ತು ಸಸಿಗಳನ್ನು ನಾಟಿ ಮಾಡುವದರಿಂದ ಕಾಯಿ ಹಂತದ ಸಮಯದಲ್ಲಿಸಿಂಪರಣೆಯನ್ನು ತೆಗೆದುಕೊಳ್ಳಬೇಕು. ರೋಗದ ತೀವ್ರತೆ ಮತ್ತು ಹವಾಗುಣಕ್ಕನುಸರಿಸಿ ಶೇ 1 ರ ಬೋರ್ಡೊ ದ್ರಾವಣ ನಂತರ ಪರ್ಯಾಯವಾಗಿ ಸ್ಟೆಪ್ಟೋಸೈಕ್ಲೀನ್ (5 ಗ್ರಾಂ ಪ್ರತಿ 10 ಲೀ. ನೀರಿಗೆ) ಜೊತೆಗೆ ತಾಮ್ರದ ಆಕ್ಸಿಕ್ಲೋರೈಡ್ ಅಥವಾ ತಾಮ್ರದ ಹೈಡ್ರಾಕ್ಸೈಡ್ (20-25 ಗ್ರಾಂ ಪ್ರತಿ 10 ಲೀ. ನೀರಿಗೆ) 15 ರಿಂದ 20 ದಿನದ ಅಂತರದಲ್ಲಿ ಬೆರೆಸಿ ಸಿಂಪಡಿಸಬೇಕು.
ಮುನ್ನೆಚ್ಚರಿಕೆಗಳು:
ರೋಗ ರಹಿತ ಸಸಿಗಳನ್ನು ನಾಟಿಗೆ ಉಪಯೋಗಿಸಬೇಕು ಮತ್ತು ಕನಿಷ್ಟ ಎರಡು ಮೂರು ವರ್ಷಗಳ ನಂತರ ಫಲವನ್ನು ತೆಗೆದುಕೊಳ್ಳಬೇಕು.
ಶಿಫಾರಸ್ಸು ಮಾಡಿದ ಪೋಷಕಾಂಶಗಳನ್ನು ಒದಗಿಸಬೇಕು. ಬೆಳೆಯನ್ನು 3 ರಿಂದ 4 ತಿಂಗಳವರೆಗೆ ವಿಶ್ರಾಂತಿಯನ್ನು ಕೊಡಬೇಕು. ಪ್ರತಿ ವರ್ಷ ಕೇವಲ ಒಂದು ಬೆಳೆ ತೆಗೆಯುವುದರಿಂದ ಸಸ್ಯಗಳ ಪ್ರತಿರೋಧವನ್ನು ಮತ್ತು ರೋಗ ನಿರೋಧಕತೆಯನ್ನು ಹೆಚ್ಚಿಸಬಹುದು.
ಕೇವಲ ಅಗತ್ಯ ಆಧಾರಿತ ಸಿಂಪರಣೆಯನ್ನು ಮತ್ತು ಶಿಫಾರಸ್ಸು ಮಾಡಿದ ಪ್ರಮಾಣವನ್ನು ಮಾತ್ರ ಸಿಂಪಡಿಸಬೇಕು. ಹೆಚ್ಚುವಾರಿ ಸಿಂಪರಣೆಯಿಂದ ರೋಗ ಉಲ್ಬಣಗೊಳ್ಳುತ್ತದೆ.
ರೋಗ ತಗುಲಿದ ಹಣ್ಣುಗಳನ್ನು ಸಂಗ್ರಹಿಸಿ ಸುಟ್ಟು ಹಾಕಬೇಕು ನಂತರ ಸಿಂಪರಣೆಯನ್ನು ತೆಗೆದುಕೊಳ್ಳಬೇಕು.
ಸಿಂಪರಣೆಗಳ ಸಂಖ್ಯೆಯನ್ನು ಕಡಿಮೆ ಮಾಡಲು ಹೊಂದಾಣಿಕೆ ಆಧಾರಿತ ಮೇಲೆ ಕೀಟನಾಶಗಳು, ಶಿಲೀಂದ್ರನಾಶಕಗಳು ಹಾಗೂ ಪೋಶಕಾಂಶಗಳ ಸಿಂಪರಣೆಗಳನ್ನು ದುಂಡಾಣುನಾಶಕಗಳೊಂದಿಗೆ ಸಿಂಪಡಿಸಬೇಕು.
ಮಳೆಗಾಲದ ನಂತರ ಬೆಳೆಯ ಅವಧಿಯಲ್ಲಿ, ಸಸ್ಯಗಳ ಮೇಲ್ಮೆಗಳು ಒಣಗಿರುವಾಗ, ತಪ್ಪದೇ ದುಂಡಾಣುನಾಶಕಗಳನ್ನು ಸಿಂಪಡಿಸಬೇಕು.
ಬೋರ್ಡೋ ದ್ರಾವಣ ಮಿಶ್ರಣವನ್ನು ಹೊರತುಪಡೆಸಿ ಯಾವಾಗಲೂ ಉತ್ತಮ ಗುಣಮಟ್ಟದ ಅಯಾನಿಕ್ ಅಲ್ಲದ ಸ್ರೆöಪಡರ್ ಅಥವಾ ಸ್ಟಿಕ್ಕರ್ ಅನ್ನು ಬೇರೆ ಸಿಂಪರಣೆಯೊಂದಿಗೆ ಮಿಶ್ರಗೊಳಿಸಬೇಕು (ಮಳೆ ಅಥವಾ ಮಳೆ ಇಲ್ಲದ ಸಮಯದಲ್ಲಿ).
ಬೋರ್ಡೋ ದ್ರಾವಣ ಮಿಶ್ರಣವನ್ನು ಯಾವಾಗಲೂ ತಾಜವಾಗಿ ತಯಾರಿಸಿ ಅದೇ ದಿನ ಬಳಸಬೇಕು.
ದುಂಡಾಣು ಅಂಗಮಾರಿ ರೋಗ ನಿರ್ವಹಣಾ ತುರ್ತು ಕ್ರಮಗಳು
ಹಣ್ಣುಗಳ ಮೇಲೆ ದುಂಡಾಣು ಅಂಗಮಾರಿ ರೋಗದ ತೀವ್ರತೆಯನ್ನು ಕಡಿಮೆ ಮಾಡಲು, 3 ರಿಂದ 4 ಸಿಂಪರಣೆಗಳನ್ನು 5 ದಿನಗಳ ಮಧ್ಯಂತರದಲ್ಲಿ ತೆಗೆದುಕೊಳ್ಳಬೇಕು.
ಸಿಂಪರಣೆ 1: ಕಾಪರ್ ಹೈಡ್ರಾಕ್ಸೈಡ್ (2.0 ಗ್ರಾ /ಲೀ) + ಸ್ಟ್ರೆಪ್ಟೊಸೈಕ್ಲಿನ್ (0.5 ಗ್ರಾಂ/ಲೀ) + 2-ಬ್ರೋಮೋ, 2-ನೈಟ್ರೋ ಪ್ರೊಪೇನ್ -1, 3-ಡಿಯೋಲ್ (Bronopol) @ 0.5 ಗ್ರಾಂ/ಲೀ + ಸ್ಪ್ರೆಡರ್ ಸ್ಟಿಕ್ಕರ್ (0.5 ಮಿಲಿ/ಲೀ).
ಸಿಂಪರಣೆ 2: ಕಾರ್ಬೆಂಡಾಜಿಮ್ (1 ಗ್ರಾಂ/ಲೀ) + ಸ್ಟ್ರೆಪ್ಟೊಸೈಕ್ಲಿನ್ (0.5 ಗ್ರಾಂ/ಲೀ) + 2-ಬ್ರೋಮೋ, 2-ನೈಟ್ರೋ ಪ್ರೊಪೇನ್ -1, 3-ಡಿಯೋಲ್ (Bronopol) @ 0.5 ಗ್ರಾಂ/ಲೀ + ಸ್ಪ್ರೆಡರ್ ಸ್ಟಿಕ್ಕರ್ (0.5 ಮಿಲಿ/ಲೀ).
ಸಿಂಪರಣೆ 3: ಕಾಪರ್ ಆಕ್ಸಿಕ್ಲೋರೈಡ್ (ಬ್ಲೆöಟಾಕ್ಸ್) 2.0 ಗ್ರಾಂ/ಲೀ + ಸ್ಟ್ರೆಪ್ಟೊಸೈಕ್ಲಿನ್ (0.5 ಗ್ರಾಂ/ಲೀ) + 2-ಬ್ರೋಮೋ, 2-ನೈಟ್ರೋ ಪ್ರೊಪೇನ್ -1, 3-ಡಿಯೋಲ್ @ 0.5 ಗ್ರಾಂ / ಲೀ + ಸ್ಪ್ರೆಡರ್ ಸ್ಟಿಕ್ಕರ್ (0.5 ಮಿಲಿ./ಲೀ.)
ಸಿಂಪರಣೆ 4: ಮ್ಯಾಂಕೋಜೆಬ್ (2 ಗ್ರಾಂ/ಲೀ) + ಸ್ಟ್ರೆಪ್ಟೊಸೈಕ್ಲಿನ್ (0.5 ಗ್ರಾಂ/ಲೀ) + 2-ಬ್ರೋಮೋ, 2-ನೈಟ್ರೋ ಪ್ರೊಪೇನ್ -1, 3-ಡಿಯೋಲ್ @ 0.5 ಗ್ರಾಂ/ಲೀ + ಸ್ಪ್ರೆಡರ್ ಸ್ಟಿಕ್ಕರ್ (0.5 ಮಿಲಿ/ಲೀ).
ಹೆಚ್ಚಿನ ಮಾಹಿತಿಗಾಗಿ ಹೀನಾ ಎಮ್ ಎಸ್, ವಿಜ್ಞಾನಿ (ತೋಟಗಾರಿಕೆ) ಕೃಷಿ ವಿಜ್ಞಾನ ಕೇಂದ್ರ, ಇಂಡಿ, 7019095720, ಡಾ. ಎಸ್. ಎಸ್. ಅಂಜುಮ್ ವಿಜ್ಞಾನಿ (ಸಸ್ಯ ರೋಗ ಶಾಸ್ತç) ಕೃಷಿ ವಿಜ್ಞಾನ ಕೇಂದ್ರ, ಇಂಡಿ, 9739321487
ಲೇಖನ: ಹೀನಾ ಎಮ್ ಎಸ್ ಮತ್ತು ಎಸ್. ಎಸ್. ಅಂಜುಮ್ ಕೃಷಿ ವಿಜ್ಞಾನ ಕೇಂದ್ರ, ಇಂಡಿ
Share your comments