ಕರ್ನಾಟಕ ರಾಜ್ಯದ ಒಟ್ಟು 50.36 ಲಕ್ಷ ರೈತರು ಒಟ್ಟು 1007.26 ಕೋಟಿ ಸಹಾಯಧನವನ್ನು ನೇರ ನಗದು ಪಾವತಿ ಮೂಲಕ ಪಡೆದುಕೊಳ್ಳಲಿದ್ದಾರೆ ಎಂದು ಕೃಷಿ ಸಚಿವ ಬಿ.ಸಿ. ಪಾಟೀಲ್ ಹೇಳಿದ್ದಾರೆ.
PM Kisan Samman Sammelan 2022: ರೈತರ ಖಾತೆಗೆ ಬರಲಿದೆ ನೇರವಾಗಿ 16,000 ಕೋಟಿ!
ರೈತರಿಗೆ ವಾರ್ಷಿಕವಾಗಿ 6000 ರೂಪಾಯಿ ಸಹಾಯಧನವನ್ನು ಮೂರು ಕಂತುಗಳಲ್ಲಿ ನೀಡುವ ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯಡಿ 12ನೇ ಕಂತಿನ ಮೊತ್ತವನ್ನು ಪ್ರಧಾನಮಂತ್ರಿಯವರು ಬಿಡುಗಡೆ ಮಾಡಿದ್ದಾರೆ.
ಇದರಲ್ಲಿ ನಮ್ಮ ಕರ್ನಾಟಕ ರಾಜ್ಯದಲ್ಲಿ ಒಟ್ಟು 50.36 ಲಕ್ಷ ರೈತರು ಒಟ್ಟು 1007.26 ಕೋಟಿ ಸಹಾಯಧನವನ್ನು ನೇರ ನಗದು ಪಾವತಿ ಮೂಲಕ ಪಡೆದುಕೊಳ್ಳಲಿದ್ದಾರೆ ಎಂದು ಸಚಿವ ಪಾಟೀಲ್ ತಿಳಿಸಿದ್ದಾರೆ.
PM Kisan Sammana Nidhi: ಪಿಎಂ ಕಿಸಾನ್ ಯೋಜನೆಯಡಿ ದೇಶದ ಸುಮಾರು 11 ಕೋಟಿ ರೈತರು ಕಾಯುತ್ತಿದ್ದ ಪಿಎಂ ಕಿಸಾನ್ 12ನೇ ಕಂತಿಗೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಚಾಲನೆ ನೀಡಿದ್ದಾರೆ.
ನವದೆಹಲಿಯಲ್ಲಿ ನಡೆದ ಪಿಎಂ ಕಿಸಾನ್ ಸಮ್ಮಾನ್ ಸಮ್ಮೇಳನದಲ್ಲಿ ಅಧಿಕೃತವಾಗಿ ಪಿಎಂ ಮೋದಿ ಅವರು 12ನೇ ಕಂತಿನ ಹಣವನ್ನು ಬಿಡುಗಡೆಗೊಳಿಸಿದ್ದಾರೆ.
ಅದು ಇಂದಿನಿಂದಲೇ ಅಸಂಖ್ಯಾತ ಫಲಾನುಭವಿಗಳ ಖಾತೆಗೆ ಇಂದಿನಿಂದ ಹಣ ಜಮಾವಣೆ ಪ್ರಕ್ರಿಯೆ ಆರಂಭಗೊಳ್ಳಲಿದೆ.
ಸಿಹಿಸುದ್ದಿ: ಮೀನುಗಾರರ ಮಕ್ಕಳಿಗೂ ರೈತ ವಿದ್ಯಾನಿಧಿ ಯೋಜನೆ, ₹50 ಕೋಟಿ ಅನುದಾನ ಮೀಸಲು!
ಪಿಎಂ ಕಿಸಾನ್ ಯೋಜನೆಯ 12 ನೇ ಕಂತನ್ನು ಪರಿಶೀಲಿಸುವುದು ಹೇಗೆ?
ಯೋಜನೆಯ 11 ಕಂತುಗಳು ಬಿಡುಗಡೆಯಾಗಿದ್ದು, ಈಗ ಇದು 12 ನೇ ಕಂತು ಬಿಡುಗಡೆಯಾಗಿದೆ. ಈಗ ನಿಮ್ಮ ಖಾತೆಗೆ ಹಣ ಬಂದಿದೆಯೇ ಅಥವಾ ಇಲ್ಲವೇ ಎಂಬುದನ್ನು ನೀವು ಹೇಗೆ ಪರಿಶೀಲಿಸಬಹುದು ಎಂಬುದನ್ನು ಇಲ್ಲಿ ವಿವರಿಸಲಾಗಿದೆ.
ATM ಮೂಲಕ ಚೆಕ್ ಮಾಡಿ
ಕೆಲವು ಕಾರಣಗಳಿಂದ ನಿಮಗೆ ಸಂದೇಶ ಬರದಿದ್ದರೆ, ನಿಮ್ಮ ಖಾತೆಗೆ 12 ನೇ ಕಂತಿನ ಹಣ ಬಂದಿದೆಯೇ ಅಥವಾ ಇಲ್ಲವೇ ಎಂಬುದನ್ನು ಪರಿಶೀಲಿಸಲು ನೀವು ನಿಮ್ಮ ಹತ್ತಿರದ ಎಟಿಎಂಗೆ ಹೋಗಬಹುದು.
ಡ್ರೋನ್ ಖರೀದಿಸಲು ಯೋಜಿಸುತ್ತಿರುವ ರೈತರಿಗೆ ಸುವರ್ಣಾವಕಾಶ, ಸರ್ಕಾರ 50% ಸಬ್ಸಿಡಿ
Passbook ಸಹಾಯದಿಂದ ಚೆಕ್ ಮಾಡಲು
ನೀವು ಇನ್ನೂ ನಿಮ್ಮ ATM ಕಾರ್ಡ್ ಅನ್ನುಹೊಂದಿರದಿದ್ದರೆ , ಅಂತಹ ಪರಿಸ್ಥಿತಿಯಲ್ಲಿ ನೀವು ನಿಮ್ಮ ಬ್ಯಾಂಕ್ ಶಾಖೆಗೆ ಹೋಗಿ ಅದನ್ನು ನಿಮ್ಮ ಪಾಸ್ಬುಕ್ನಲ್ಲಿ ನಮೂದಿಸಬಹುದು.
ಇದರಿಂದ ನಿಮ್ಮ ಖಾತೆಗೆ ಹಣ ಬಂದಿದೆಯೇ ಅಥವಾ ಇಲ್ಲವೇ ಎಂಬುದನ್ನು ಸಹ ತಿಳಿಯಬಹುದಾಗಿದೆ.
PM Kisan ಹಣ ಬಾರದಿದ್ದಾಗ ಏನು ಮಾಡಬೇಕು
PM Kisan 12ನೇ ಕಂತಿನ ಹಣ ನಿಮ್ಮ ಖಾತೆಗೆ ಬರದೇ ಇದ್ದಲ್ಲಿ ಸಹಾಯವಾಣಿ ಸಂಖ್ಯೆ 011-24300606ಗೆ ಕರೆ ಮಾಡಿ ಕಾರಣ ತಿಳಿಯಬಹುದು.
Share your comments