90 ಹಳ್ಳಿಗಳಿಗೆ ತುಂಗಭದ್ರಾ ನೀರು ಪೂರೈಸುವ ಯೋಜನೆಗೆ 335 ಕೋಟಿ ರೂ. ಮಂಜೂರಾಗಿದ್ದು ಸದ್ಯದಲ್ಲಿಯೇ ಕೆಲಸ ಪ್ರಾರಂಭವಾಗುತ್ತದೆ ಎಂದು ಕೃಷಿ ಸಚಿವ ಬಿ.ಸಿ. ಪಾಟೀಲ್ ಹೇಳಿದರು.
ಇದನ್ನೂ ಓದಿರಿ: ಗುಡ್ನ್ಯೂಸ್: ನೆರೆ ಸಂತ್ರಸ್ತರಿಗೆ ರಾಜ್ಯ ಸರ್ಕಾರದಿಂದ ಭರ್ಜರಿ ಸುದ್ದಿ; 5 ಲಕ್ಷದವರೆಗೆ ಹೆಚ್ಚುವರಿ ಪರಿಹಾರ ಘೋಷಣೆ!
ಹಿರೇಕೆರೂರು ತಾಲೂಕಿನ 90 ಹಳ್ಳಿಗಳಿಗೆ ತುಂಗಭದ್ರಾ ನೀರು ಪೂರೈಸುವ ಯೋಜನೆಗೆ 335 ಕೋಟಿ ರೂ. ಮಂಜೂರಾಗಿದ್ದು ಸದ್ಯದಲ್ಲಿಯೇ ಕೆಲಸ ಪ್ರಾರಂಭವಾಗುತ್ತದೆ ಎಂದು ಕೃಷಿ ಸಚಿವ ಬಿ.ಸಿ. ಪಾಟೀಲ್ ಹೇಳಿದರು.
ಜು.20 ರಂದು ರಟ್ಟಿ ಹಳ್ಳಿ ಯಲ್ಲಿ ಕೋಲ್ಡ್ ಸ್ಟೋರೆಜ್ ನೀಡಲಾಗುವುದು. 9 ಕೋಟಿ ರೂ ವೆಚ್ಚದಲ್ಲಿ ಕೋಲ್ಡ್ ಸ್ಟೋರೇಜ್ ನಿರ್ಮಿಸಲಾಗುತ್ತಿದ್ದು, ಎರಡುವರೆ ಸಾವಿರ ಮೆಟ್ರಿಕ್ ಟನ್ ಆಹಾರ ಪದಾರ್ಥಗಳನ್ನು ಸಂಗ್ರಹಿಸಬಹುದು ಎಂದು ತಿಳಿಸಿದ್ದಾರೆ.
Corona Vaccine: ಕೊರೊನಾ ಲಸಿಕೆ ಎರಡೂ ಡೋಸ್ ಹಾಕಿಸಿಕೊಂಡವರಿಗೆ ₹5000 ನೀಡಲಿದೆಯಾ ಸರ್ಕಾರ?
ಕೋಡ ಗ್ರಾಮದಲ್ಲಿ 500 ಮೆಟ್ರಿಕ್ ಸಾಮರ್ಥದ ಕೋಲ್ಡ್ ಸ್ಟೋರೇಜ್ ಸಹ ನಿರ್ಮಾಣಕ್ಕೆ ಶಂಕುಸ್ಥಾಪನೆ ಮಾಡಿ, ಡಿಸೆಂಬರ್ -ಜನವರಿಯೊಳಗೆ ಲೋಕಾರ್ಪಣೆ ಮಾಡಲಾಗುವುದು ಎಂದರು.
ಕಾರ್ಮಿಕ ಇಲಾಖೆ ಕಟ್ಟಡಕ್ಕೆ 4 ಮಂಜೂರಾತಿ ಸಿಕ್ಕಿದ್ದು, ನಿರ್ಮಾಣಕ್ಕೆ ಸ್ಥಳ ಒದಗಿಸಲಾಗಿದೆ. ನಗರೋತ್ಥಾನದಲ್ಲಿ ರಟ್ಟಿಹಳ್ಳಿಗೆ 5 ಕೋಟಿ ಮಂಜೂರಾಗಿದ್ದು, ಇನ್ನು ಹಿರೇಕೆರೂರು -ರಟ್ಟಿಹಳ್ಳಿಗೆ ತಲಾ 3 ಕೋಟಿ ನೀಡುವಂತೆ ಪ್ರಸ್ತಾವನೆ ಸಲ್ಲಿಸಲಾಗಿದೆ. ತಾಲೂಕಾಡಳಿತ ಕಚೇರಿ ನಿರ್ಮಾಣಕ್ಕೆ 10 ಕೋಟಿಗೆ ಪ್ರಸ್ತಾವನೆ ಕೊಡಲಾಗಿದೆ.
ಪಿಎಂ ಕಿಸಾನ್ Big Update: ಈಗ ಗಂಡ-ಹೆಂಡತಿ ಇಬ್ಬರ ಖಾತೆಗೂ ಬರಲಿದೆಯಾ 12ನೇ ಕಂತಿನ ಹಣ?
ನೀರು, ರಸ್ತೆ ಕಾಮಗಾರಿ ಶೀಘ್ರ ನಿರ್ಮಾಣವಾಗುತ್ತಿದೆ. 8 ಕೋಟಿ ರೂ. ವೆಚ್ಚದಲ್ಲಿ ಖಂಡಬಾಗೂರು ಮೇದೂರು ಸೇತುವೆ ನಿರ್ಮಾಣ ಹಾಗೂ ಸರ್ವಜ್ಞ ಪ್ರಾಧಿಕಾರಕ್ಕೆ 25 ಕೋಟಿ, ಕುಡಪಲಿ ರಸ್ತೆ ಅಭಿವೃದ್ಧಿ, ಬುಳ್ಳಾಪುರ-ಹಾಡ ಕೆರೆ ಅಭಿವೃದ್ಧಿ 25 ಕೋಟಿ,
ಭಗವತಿ ಕೆರೆ ಅಭಿವೃದ್ಧಿಗೆ 20 ಕೋಟಿ, ತಾವರಗಿ -ತುಮ್ಮಿನಕಟ್ಟಿ ರಸ್ತೆ ಅಭಿವೃದ್ಧಿಗೆ 10 ಕೋಟಿ, ಹಳ್ಳೂರು-ಕೋಡಮಗ್ಗಿ ರಸ್ತೆ ಚಾಲನೆ ಅಭಿವೃದ್ಧಿಗೆ 10 ಕೋಟಿ ಎಂದರು.
Share your comments