1. ಸುದ್ದಿಗಳು

ಪದವೀಧರರಿಗೆ ಉದ್ಯೋಗಾವಕಾಶ: 8500 ಹುದ್ದೆಗಳಿಗೆ ಅರ್ಜಿ ಆಹ್ವಾನ

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್‌ಬಿಐ) ದೇಶದಾದ್ಯಂತ ತನ್ನ ವಿವಿಧ ಶಾಖೆಗಳಲ್ಲಿ ಖಾಲಿಯಿರುವ 8500 ಕ್ಲರ್ಕ್ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಿದೆ. ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಈ ಕೆಳಗಿನ ವಿವರಗಳನ್ನು ತಿಳಿದು ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಿ. ಅರ್ಜಿ ಸಲ್ಲಿಕೆಗೆ ಕೊನೆ ದಿನ: 10-12-2020 ಆಗಿರುತ್ತದೆ.

ಶೈಕ್ಷಣಿಕ ವಿದ್ಯಾರ್ಹತೆ:

ಯಾವುದೇ ಪದವಿಯನ್ನು ಮಾನ್ಯತೆ ಪಡೆದ ಬೋರ್ಡ್‌/ಸಂಸ್ಥೆ/ ವಿಶ್ವವಿದ್ಯಾಲಯದಿಂದ ಹೊಂದಿರುವ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು. ಪದವಿ ಮುಗಿಸಿರುವ ಬಗ್ಗೆ ಪ್ರಮಾಣ ಪತ್ರ ಇರಬೇಕು.

ವಯೋಮಿತಿ:

ಜನವರಿ 20ರ 2020ರ ಅನ್ವಯ ಕನಿಷ್ಟ 20 ರಿಂದ ಗರಿಷ್ಟ 28 ವರ್ಷ ವಯೋಮಿತಿಯೊಳಗಿನ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. 2ಎ,2ಬಿ,3ಎ ಮತ್ತು 3ಬಿ ಅಭ್ಯರ್ಥಿಗಳಿಗೆ 3 ವರ್ಷ, ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡದ ಅಭ್ಯರ್ಥಿಗಳಿಗೆ 5 ವರ್ಷ ಮತ್ತು ಅಂಗವಿಕಲ ಅಭ್ಯರ್ಥಿಗಳಿಗೆ 10 ವರ್ಷಗಳ ವಯೋಮಿತಿ ಸಡಿಲಿಕೆಯನ್ನು ನೀಡಲಾಗಿರುತ್ತದೆ.

ಅರ್ಜಿ ಶುಲ್ಕ:

2ಎ,2ಬಿ,3ಎ ಮತ್ತು 3ಬಿ ಅಭ್ಯರ್ಥಿಗಳು 750/-ರೂ ಅರ್ಜಿ ಶುಲ್ಕವನ್ನು ಆನ್‌ಲೈನ್ ಮೂಲಕ ಪಾವತಿಸಬೇಕು. ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡದ ಅಭ್ಯರ್ಥಿಗಳು ಯಾವುದೇ ಅರ್ಜಿ ಶುಲ್ಕ ಇರುವುದಿಲ್ಲ. ಎಸ್‌ಸಿ / ಎಸ್‌ಟಿ / ಪಿಡಬ್ಲ್ಯೂಡಿ ಅಭ್ಯರ್ಥಿಗಳಿಗೆ ಶುಲ್ಕ ವಿನಾಯಿತಿ ನೀಡಲಾಗಿದೆ.

ವೇತನ:

 ಎಸ್‌ಬಿಐ ಕ್ಲರ್ಕ್ ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ತಿಂಗಳಿಗೆ 11,765/- ರಿಂದ 31,450/- ರೂಪಾಯಿಯವರೆಗೆ ವೇತ ನೀಡಲಾಗುವುದು.

ನೇಮಕಾತಿ ವಿಧಾನ:

ಅಭ್ಯರ್ಥಿಗಳಿಗೆ ಆನ್‌ಲೈನ್ ಲಿಖಿತ ಪರೀಕ್ಷೆ ಮತ್ತು ಸ್ಥಳೀಯ ಭಾಷೆ ಪರೀಕ್ಷೆ ನಡೆಸಿ ಆಯ್ಕೆ ನಡೆಸಲಾಗುತ್ತದೆ. ಆನ್‌ಲೈನ್ ಲಿಖಿತ ಪರೀಕ್ಷೆ 100 ಅಂಕಗಳ 100 ಆಬ್ಜೆಕ್ಟಿವ್ ಟೈಪ್‌ ಪ್ರಶ್ನೆಗಳಿಗೆ ನಡೆಸಲಾಗುತ್ತದೆ. ಪರೀಕ್ಷೆಯನ್ನು ಜೆನೆರಲ್ / ಫೈನಾನ್ಷಿಯಲ್ ಅವಾರ್‌ನೆಸ್, ಜೆನೆರಲ್ ಇಂಗ್ಲಿಷ್, ಕ್ವಾಂಟಿಟೇಟಿವ್ ಆಪ್ಟಿಟ್ಯೂಡ್, ರೀಸನಿಂಗ್ ಎಬಿಲಿಟಿ ಮತ್ತು ಕಂಪ್ಯೂಟರ್ ಆಪ್ಟಿಟ್ಯೂಡ್  ಈ 4 ಸೆಕ್ಷನ್‌ಗಳಲ್ಲಿ ನಡೆಸಲಾಗುತ್ತದೆ. ಪ್ರತಿ ಸೆಕ್ಷನ್‌ನಲ್ಲಿ 25 ಪ್ರಶ್ನೆಗಳು ಮತ್ತು 25 ಅಂಕಗಳು ಇರುತ್ತವೆ.

ಅರ್ಜಿ ಸಲ್ಲಿಸುವುದು ಹೇಗೆ?:

ಎಸ್‌ಬಿಐ ನ ಅಧಿಕೃತ ವೆಬ್‌ಸೈಟ್‌ https://nsdcindia.org/apprenticeship or https://apprenticeshipindia.org or http://bfsissc.com or https://bank.sbi/careers or https://www.sbi.co.in/ careers ಗೆ ಭೇಟಿ ನೀಡಬೇಕು. ಬೇಸಿಕ್ ಮಾಹಿತಿಗಳಾದ ಹೆಸರು, ಮೊಬೈಲ್‌ ನಂಬರ್, ಇ-ಮೇಲ್ ವಿಳಾಸ ನೀಡಿ ರಿಜಿಸ್ಟರ್ ಆಗಬೇಕು.  ನಂತರ ಅರ್ಜಿ ಸಲ್ಲಿಸಲು ವಿದ್ಯಾರ್ಹತೆ ಮಾಹಿತಿಗಳನ್ನು ನೀಡಬೇಕು. ಮೂರನೇ ಹಂತದಲ್ಲಿ ಅಗತ್ಯ ಸ್ಕ್ಯಾನ್ ಕಾಪಿಗಳಾದ ಭಾವಚಿತ್ರ, ಸಹಿ ಅಪ್‌ಲೋಡ್‌ ಮಾಡಬೇಕಾಗುತ್ತದೆ. ನಂತರ ಅರ್ಜಿ ಶುಲ್ಕವನ್ನು ಆನ್‌ಲೈನ್ ಮೂಲಕ ಪಾವತಿಸಿ ಅಂತಿಮವಾಗಿ ಅರ್ಜಿ ಸಲ್ಲಿಕೆ ಪೂರ್ಣಗೊಳಿಸಬಹುದು.

ಅರ್ಜಿ ಶುಲ್ಕವನ್ನು ನಿಗದಿತ ದಿನಾಂಕದೊಳಗೆ ಕ್ರೆಡಿಟ್ ಕಾರ್ಡ್, ನೆಟ್‌ಬ್ಯಾಂಕಿಂಗ್, ಡೆಬಿಡ್ ಕಾರ್ಡ್‌ ಅಥವಾ ಎಸ್‌ಬಿಐ ಚಲನ್ ಜೆನೆರೇಟ್ ಮಾಡಿ ಪಾವತಿಸಬೇಕು.
ಸ್ಟೈಫಂಡ್: ಅಪ್ರೆಂಟಿಸ್ ಹುದ್ದೆಗೆ ಆಯ್ಕೆ ಆಗುವ ಅಭ್ಯರ್ಥಿಗಳಿಗೆ ಮೊದಲ ವರ್ಷ ಮಾಸಿಕ ರೂ.15000, ಎರಡನೇ ವರ್ಷ ಮಾಸಿಕ .16500, ಮೂರನೇ ವರ್ಷ ಮಾಸಿಕ ರೂ.19000 ನೀಡಲಾಗುತ್ತದೆ. ಅಪ್ರೆಂಟಿಸ್ ಹುದ್ದೆಯ ಅವಧಿ : 3 ವರ್ಷ ಇರುತ್ತದೆ.

ಹೆಚ್ಚಿನ ಮಾಹಿತಿಗಾಗಿ ಎಸ್.ಬಿಐ ಬ್ಯಾಂಕ್ ಅಧಿಕೃತ ವೆಬ್ ಸೈಟ್ https://cgrs.ibps.in/ ಗೆ ಭೇಟಿ ನೀಡಿ ಅಥವಾ. 022-22820427 (11:00 AM to 06:00 PM ಅವಧಿಯಲ್ಲಿ ಕೆಲಸದ ದಿನಗಳಲ್ಲಿ ಕರೆ ಮಾಡಬಹುದು.

Published On: 21 November 2020, 09:24 AM English Summary: 8500 SBI Apprentices posts

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.