1. ಸುದ್ದಿಗಳು

ಮಿನಿ ಟ್ರ್ಯಾಕ್ಟರ್, ಟಿಲ್ಲರ್ ಖರೀದಿಗೆ ಸಿಗಲಿದೆ ಬರೋಬ್ಬರಿ ಶೇ. 90 ರಷ್ಟು ಸಬ್ಸಿಡಿ..!

Maltesh
Maltesh
ಸಾಂದರ್ಭಿಕ ಚಿತ್ರ

ಉತ್ಪಾದನಾ ವೆಚ್ಚ ಕಡಿಮೆ ಮಾಡುವುದು, ಸಕಾಲದಲ್ಲಿ ಕೃಷಿ ಚಟುವಟಿಕೆಗಳನ್ನು ಕೈಗೊಳ್ಳಲು ಅನುವು ಮಾಡುವುದು, ಉತ್ಪಾದಕತೆ ಹೆಚ್ಚಿಸುವುದು ಮತ್ತು ಕೃಷಿ ಕಾರ್ಮಿಕರ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡುವುದು ಕೃಷಿ ಯಾಂತ್ರೀಕರಣ ಯೋಜನೆಯ ಮುಖ್ಯ ಉದ್ಧೇಶಗಳು. ಕೃಷಿ ಇಲಾಖೆಯಲ್ಲಿ ಭೂಮಿ ಸಿದ್ಧತೆಯಿಂದ ಕೊಯ್ಲಿನವರೆಗೂ ವಿವಿಧ ಕೃಷಿ ಯಂತ್ರೋಪಕರಣಗಳನ್ನು ಸಹಾಯಧನದಡಿ ಒದಗಿಸಲಾಗುತ್ತಿದೆ. ಹೀಗಾಗಿ ರೈತರು ಕೃಷಿ ಯಂತ್ರೋಪಕರಣ ಕೊಳ್ಳಲು ಸರ್ಕಾರವೇ ಸಹಾಯಧನ ನೀಡುತ್ತಿದೆ. ಇದಕ್ಕಾಗಿ ಕೃಷಿ ಯಾಂತ್ರೀಕರಣ ಯೋಜನೆಯನ್ನು ಜಾರಿ ಮಾಡಿದೆ.

ಭರ್ಜರಿ ಸುದ್ದಿ: ಈ ಯೋಜನೆಯಲ್ಲಿ ಟ್ರ್ಯಾಕ್ಟರ್‌ ಕೊಳ್ಳಲು ಸರ್ಕಾರವೇ ದುಡ್ಡು ನೀಡುತ್ತೆ

ಶೇ.90ರಷ್ಟು ಸಹಾಯಧನ

ಕೃಷಿ ಯಾಂತ್ರೀಕರಣ ಯೋಜನೆಯಡಿ ರೈತರಿಗೆ ಶೇ.90ರಷ್ಟು ಸಹಾಯಧನ ಸಿಗುತ್ತದೆ. ಕೃಷಿ ಇಲಾಖೆ ಹಾಗೂ ತೋಟಗಾರಿಕೆ ಇಲಾಖೆಯಿಂದ ಲಭ್ಯತೆ ಆಧಾರದ ಮೇಲೆ ಕೃಷಿ. ಯಂತ್ರೋಪಕರಣಗಳನ್ನು ರೈತರಿಗೆ ನೀಡಲಾಗುವುದು. ಮಿನಿ ಟ್ರ್ಯಾಕ್ಟರ್, ಪವರ್ ಟಿಲ್ಲರ್ , ಟ್ರ್ಯಾಕ್ಟರ್ ಚಾಲಿತ ಎಂ.ಬಿ.ಪ್ಲೋ, ರೋಟೋವೇಟರ್,ರೋಟೋವೇಟರ್,ಡಿಸ್ಕ್ ಫ್ಲೋ, ಡಿಸ್ಕ್ ಹ್ಯಾರೋ ಸೇರಿದಂತೆ ಇನ್ನಿತರ ಕೃಷಿ ಯಂತ್ರೋಪಕರಣಗಳಿಗೆ ಸಹಾಯಧನ ಸಿಗಲಿದೆ.

ಸಹಾಯಧನ ಪಡೆಯಲು ಅಗತ್ಯ ದಾಖಲೆಗಳು?

ರೈತರ ಕೃಷಿ ಚಟುವಟಿಕೆಗಳಿಗೆ ಅನುಕೂಲವಾಗಲೆಂದು ಕೃಷಿ ಯಂತ್ರೋಪಕರಣಗಳನ್ನು ಸಹಾಯಧನದಲ್ಲಿ ನೀಡಲು ರಾಜ್ಯ ಸರ್ಕಾರವು ರೈತರಿಗಾಗಿ ಕೃಷಿ ಯಾಂತ್ರಿಕರಣ ಯೋಜನೆಯನ್ನು ಆರಂಭಿಸಲಾಗಿದೆ.

ಪಿಎಂ ಕಿಸಾನ್: 11ನೇ ಕಂತು ಶೀಘ್ರದಲ್ಲೆ ಬಿಡುಗಡೆ! ಫಲಾನುಭವಿಗಳ ಪಟ್ಟಿಯಲ್ಲಿ ಈಗಲೇ ನಿಮ್ಮ ಹೆಸರು ಪರಿಶೀಲಿಸಿ

7th Pay Commision: ಈ ತಿಂಗಳ ಅಂತ್ಯದೊಳಗೆ ಹೆಚ್ಚುತ್ತಾ ಕೇಂದ್ರ ಸರ್ಕಾರಿ ನೌಕರರ HRA..?

ರೈತರು ಯಾವ ಕೃಷಿ ಯಂತ್ರೋಪಕರಣಕ್ಕೆ ಅರ್ಜಿ ಸಲ್ಲಿಸಬಯಸುತ್ತೀರೋ ಎಂಬುದರ ಕುರಿತು ಅರ್ಜಿ ಸಲ್ಲಿಸಬೇಕು.  ಕೆ-ಕಿಸಾನ್ ನಲ್ಲಿ ಆನ್ ಲೈನ್ ನಲ್ಲಿ ನೋಂದಣಿ ಪ್ರತಿ (ಎಫ್ ಐಡಿ  ಸಂಖ್ಯೆಯೊಂದಿಗೆ) ರೈತರು ಆಧಾರ್ ಕಾರ್ಡ್ ಹೊಂದಿರಬೇಕು. ಜಮೀನಿ ಪಹಣಿ ಸೇರಿದಂತೆ ಜಮೀನಿನ ಜಮಾಬಂಧಿ, ಬ್ಯಾಂಕ್ ಖಾತೆ ವಿವರ, ಪಾಸ್ ಪೋರ್ಟ್ ಅಳತೆಯ ಫೋಟೋ ಇರಬೇಕು. ರೈತರ ಬ್ಯಾಂಕ್ ಪಾಸ್ ಬುಕ್ ನಲ್ಲಿ ರೈತರ ವಂತಿಕೆ ಸರಬರಾಜು ಸಂಸ್ಥೆಗೆ  ಆರ್.ಟಿ.ಜಿ.ಎಸ್  ಜಮವಾಣೆಯಾದ ಝಾರಾಕ್ಸ್ ಪ್ರತಿ,  ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಾಗಿದ್ದರೆ ಜಾತಿ ಮತ್ತು ಆದಾಯ ಪ್ರಮಾಣ ಪತ್ರ, ಸೇರಿದಂತೆ ಅಗತ್ಯ ದಾಖಲೆಗಳನ್ನು ರೈತ ಸಂಪರ್ಕ ಕೇಂದ್ರ ಕಚೇರಿಯಲ್ಲಿ ವಿಚಾರಿಸಿ ನೀಡಬೇಕು.

ಯಾವ ಯಾವ ಉಪಕರಣಗಳು ಸಿಗುತ್ತವೆ?

ಕೃಷಿ ಯಾಂತ್ರೀಕರಣ ಯೋಜನೆಯಡಿಯಲ್ಲಿ ಸಣ್ಣ ಟ್ರ್ಯಾಕ್ಟರ್, ಟಿಲ್ಲರ್, ಟ್ರ್ಯಾಕ್ಟರ್ ಟ್ರ್ಯಾಲಿ, ಕ್ರಾಪ್ ರೀಪರ್, ಪೋಸ್ಟ ಹೋಲ್ ಡಿಗ್ಗರ್, ಪಾವರ್ ವೀಡರ್, ರೈಸ್ ಟ್ರಾನ್ಸ್ ಪ್ಲೆಟರ್,  ಕೊಯ್ಲು ಒಕ್ಕಣೆಗಳು, ಅಂತರ ಬೇಸಾಯ ಉಪಕರಣಗಳು ಸೇರಿದಂತೆ ಇನ್ನಿತರ ಉಪಕರಣಗಳು ಸಿಗುತ್ತವೆ.

ಪಿಎಂ ಕಿಸಾನ್: 11ನೇ ಕಂತು ಶೀಘ್ರದಲ್ಲೆ ಬಿಡುಗಡೆ! ಫಲಾನುಭವಿಗಳ ಪಟ್ಟಿಯಲ್ಲಿ ಈಗಲೇ ನಿಮ್ಮ ಹೆಸರು ಪರಿಶೀಲಿಸಿ

7th Pay Commision: ಈ ತಿಂಗಳ ಅಂತ್ಯದೊಳಗೆ ಹೆಚ್ಚುತ್ತಾ ಕೇಂದ್ರ ಸರ್ಕಾರಿ ನೌಕರರ HRA..?

ಯಾವ ಕೃಷಿ ಯಂತ್ರೋಪಕರಣಕ್ಕೆ ಎಷ್ಟು ಸಹಾಯಧನ?

ಪವರ್ ಟಿಲ್ಲರ್ : ಖರೀದಿಗೆ ಸಾಮಾನ್ಯ ವರ್ಗದವರಿಗೆ ಶೇ. 50 ರಷ್ಟು ಸಹಾಯಧನ ಗರಿಷ್ಠ 72500 ರೂಪಾಯಿವರೆಗೆ ಸಹಾಯಧನ ಸಿಗಲಿದೆ. ಅದೇ ರೀತಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಿಗೆ ಶೇ. 90ರಷ್ಟು ಸಹಾಯಧನ, ಗರಿಷ್ಠ 1 ಲಕ್ಷ ರೂಪಾಯಿಯವರೆಗೆ ಸಹಾಯಧನ ಸಿಗಲಿದೆ.

ಮಿನಿ ಟ್ರ್ಯಾಕ್ಟರ್: ಮಿನಿ ಟ್ರ್ಯಾಕ್ಟರ್‌ ಖರೀದಿಗೆ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಿಗೆ ಗರಿಷ್ಠ 3 ಲಕ್ಷ ರೂಪಾಯಿಯವರೆಗೆ ಸಹಾಯಧನ ಸಿಗಲಿದೆ. ಸಾಮಾನ್ಯ ವರ್ಗದವರಿಗೆ 75 ಸಾವಿರ ರೂಪಾಯಿಯವರೆಗೆ ಸಹಾಯಧನ ಸಿಗಲಿದೆ.

ಟ್ರ್ಯಾಕ್ಟರ್ ಚಾಲಿತ ಎಂ.ಬಿ. ಫ್ಲೋ ಫಿಕ್ಸ್ಡ್‌: ಸಾಮಾನ್ಯ ವರ್ಗದವರಿಗೆ 14100 ರೂಪಾಯಿ ರಿವರ್ಸಿಬಲ್ ಎಂ.ಬಿ. ಫ್ಲೋ ಗೆ 25,800 ರೂಪಾಯಿ ಸಹಾಯಧನ ಸಿಗಲಿದೆ. ಅದೇ ರೀತಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಿಗೆ ಎಂ.ಬಿ. ಫ್ಲೋ 25830 ರೂಪಾಯಿ, ರಿವರ್ಸಿಬಲ್ ಎಂ.ಬಿ. ಫ್ಲೋ ಗೆ 51,300 ರೂಪಾಯಿ ಸಹಾಯಧನ ಸಿಗಲಿದೆ.

ಹೆಚ್ಚಿನ ಮಾಹಿತಿಗಾಗಿ ನಿಮ್ಮ ಹೋಬಳಿಯಲ್ಲಿ ಲಭ್ಯವಿರುವ ಕೃಷಿ ಯಂತ್ರೋಪಕರಣಗಳ ಬಗ್ಗೆ ಮಾಹಿತಿ ಪಡೆಯಲು ರೈತರು ಹತ್ತಿರದ ರೈತ ಸಂಪರ್ಕ ಕೇಂದ್ರಕ್ಕೆ ಭೇಟಿ ನೀಡಬಹುದು. ಲಭ್ಯವಿರುವ ಕೃಷಿ ಯಂತ್ರೋಪಕರಣಗಳನ್ನು ಪಡೆಯಬಹುದು.  

ರಷ್ಯಾದಿಂದ ಅಪಾರ ಬೇಡಿಕೆಯಿದ್ದರೂ 200 ರೂ. ಕುಸಿತ ಕಂಡ ಗೋಧಿ..ಕಾರಣವೇನು..?

Big Announce! ರೈತರ income ಹೆಚ್ಚಿಸಲು 100 ಕೋಟಿ ಮೀಸಲು CM ಬೊಮ್ಮಾಯಿ ಅವರಿಂದ Big GIft, ಬಜೆಟ್‌ನಲ್ಲಿ ಘೋಷಣೆ

Published On: 25 April 2022, 10:45 AM English Summary: 90 % subsidy for agriculture Equipments karnataka

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.