ನಮೀಬಿಯಾದಿಂದ ಮಧ್ಯಪ್ರದೇಶದ ಕುನೊ ರಾಷ್ಟ್ರೀಯ ಉದ್ಯಾನವನಕ್ಕೆ ಕರೆತರಲಾದ ಚಿರತೆಗೆ ಜನಿಸಿದ ನಾಲ್ಕು ಚಿರತೆ ಮರಿಗಳಿಗೆ ಹೆಸರಿಸಲು ಸರ್ಕಾರವು ಸ್ಪರ್ಧೆಯನ್ನು ಪ್ರಾರಂಭಿಸಿದೆ.
ನಮೀಬಿಯಾದಿಂದ ಎಂಟು ಮತ್ತು ದಕ್ಷಿಣ ಆಫ್ರಿಕಾದಿಂದ 12 ಒಟ್ಟು ಸೇರಿದಂತೆ ಒಟ್ಟು ಚೀತಾಗಳನ್ನು ಕಳೆದ ಸೆಪ್ಟೆಂಬರ್‌ನಲ್ಲಿ ಚೀತಾಗಳನ್ನು ಕುನೊ ರಾಷ್ಟ್ರೀಯ ಉದ್ಯಾನವನಕ್ಕೆ ತರಲಾಗಿತ್ತು.
ಚಿರತೆಗಳಲ್ಲಿ ಒಂದಾದ ಸಾಶಾ ಹೆಸರಿನ ಚಿರತೆಯು 4 ಮರಿಗಳಿಗೆ ಜನ್ಮ ನೀಡಿದೆ. ಮರಿಗಳ ಜನನದ ಸುದ್ದಿಯನ್ನು ಕೇಂದ್ರ ಪರಿಸರ ಸಚಿವ ಭೂಪೇಂದರ್ ಯಾದವ್ ತಮ್ಮ ಟ್ವೀಟರ್ ನಲ್ಲಿ ಹಂಚಿಕೊಂಡಿದ್ದು.
'ಅಮೃತ್ ಕಾಲ ಸಮಯದಲ್ಲಿ ನಾಲ್ಕು ಮರಿಗಳ ಜನನವನ್ನು ಭಾರತದ ವನ್ಯಜೀವಿ ಸಂರಕ್ಷಣಾ ಇತಿಹಾಸದಲ್ಲಿ ಒಂದು ಮಹತ್ವದ ಘಟನೆ ಎಂದು ವಿವರಿಸಿದ್ದಾರೆ. ಇದೀಗ ಅವುಗಳಿಗೆ ಸಾರ್ವಜನಿಕರು ತಮಗಿಷ್ಟವಾದ ಹೆಸರನ್ನು Mygovt ನಲ್ಲಿ ನೋಂದಣಿ ಮಾಡಿಕೊಂಡು ಸೂಚಿಸಬಹುದು.
ಈ ಮೂಲಕ ಪ್ರಾಣಿಗಳಿಗೂ ಕೂಡ ನಮ್ಮ ಪ್ರೀತಿಯನ್ನು ತೋರೋಣ. ಹೆಸರನ್ನು ಸೂಚಿಸಕು ಕೊನೆಯ ದಿನಾಂಕ ಏಪ್ರಿಲ್ 30 ಆಗಿರುತ್ತದೆ ಎಂದು ಅವರು ಟ್ವೀಟರ್ ನಲ್ಲಿ ತಿಳಿಸಿದ್ದಾರೆ.
ದಿನದಿಂದ ದಿನಕ್ಕೆ ಅಧಿಕವಾಗುತ್ತಿರುವ ತಾಪಮಾನವನ್ನು ಕಡಿಮೆಗೊಳಿಸಲು ನಗರ ಪ್ರದೇಶಗಳಲ್ಲಿ ಕೂಲ್ ರೂಫ್ ನೀತಿಯನ್ನು ತೆಲಂಗಾಣ ಸರಕಾರ ಜಾರಿ ಮಾಡಿದೆ.
ಈ ವಿಶೇಷ ನೀತಿಯನ್ನು ಯಶಸ್ವಿಯಾಗಿ ಅಳವಡಿಸಿಕೊಂಡ ದೇಶದ ಮೊದಲ ರಾಜ್ಯ ಎಂಬ ಹೆಗ್ಗಳಿಕೆಗೆ ತೆಲಂಗಾಣ ರಾಜ್ಯ ಪಾತ್ರವಾಗಿದೆ.
ಕಟ್ಟಡಗಳನ್ನು ನಿರ್ಮಿಸುವವರು ಅಥವಾ ಬಿಲ್ಡರ್‌ಗಳು ಸೂರ್ಯನ ಬೆಳಕನ್ನು ಪ್ರತಿಫಲಿಸುವ ಬಣ್ಣಗಳು, ಟೈಲ್ಸ್ ಅಥವಾ ಇತರ ವಸ್ತುಗಳನ್ನು ಬಳಸಿ ಅಳವಡಿಸಬಹುದಾದ ತಂಪಾದ ಚಾವಣಿಯನ್ನು ಬಳಸಿ ರೂಪಿಸುವದನ್ನ ಈ ನೀತಿ ಸೂಚಿಸುತ್ತದೆ.
ಇದು ಸೂರ್ಯನಿಂದ ಹೊರಸೂಸುವ ವಿಕಿರಣಗಳನ್ನು ಪರಿಸರಕ್ಕೆ ಹಿಂತಿರುಗಿಸುತ್ತದೆ. ಹೀಗಾಗಿ ಕಟ್ಟಡದ ಮೇಲಿನ ಶಾಖ ಕುಗ್ಗಿ ಒಳಾಂಗಣದ ಸ್ಥಳಗಳನ್ನು ತಂಪಾಗಿ ಇಡುತ್ತದೆ.
ಇಂಧನ ಬಳಕೆಯನ್ನು ಕಡಿಮೆ ಮಾಡಲು ಮತ್ತು ಪೆಟ್ರೋಲಿಯಂ ಸಂಪತ್ತನ್ನು ಸಂರಕ್ಷಿಸಲು, ಇಂಧನದ ಪರಿಣಾಮಕಾರಿ ಬಳಕೆಗಾಗಿ ವಿವಿಧ ಇಂಧನ ಸಂರಕ್ಷಣೆ ಮತ್ತು ಇಂಧನ ದಕ್ಷತೆಯ ಚಟುವಟಿಕೆಗಳನ್ನು ನಿರಂತರವಾಗಿ ಕೈಗೊಳ್ಳಲಾಗುತ್ತಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ.
ರಾಜ್ಯಸಭೆಯಲ್ಲಿ ಲಿಖಿತ ಉತ್ತರದಲ್ಲಿ ಕೇಂದ್ರ ಸಚಿವ ರಾಮೇಶ್ವರ್ ತೇಲಿ ಈ ಮಾಹಿತಿ ನೀಡಿದ್ದಾರೆ. ಪೆಟ್ರೋಲಿಯಂ ಸಂರಕ್ಷಣೆಯ ಗುರಿಯನ್ನು ಕೇಂದ್ರ ಸರ್ಕಾರ ಹೊಂದಿದೆ.
ಕೈಗಾರಿಕಾ ಘಟಕಗಳಲ್ಲಿ ತರಬೇತಿ ಮತ್ತು ಕಾರ್ಯಾಗಾರ, ಚಾಲಕರಿಗೆ ತರಬೇತಿ, ಜಾಗೃತಿ ಅಭಿಯಾನ, ಸಾಮಾಜಿಕ ಮಾಧ್ಯಮ, ಟಿವಿ, ರೇಡಿಯೊದಲ್ಲಿ ವ್ಯಾಪಕ ಮಾಧ್ಯಮ ಪ್ರಚಾರಗಳು ಮತ್ತು ಸಂಶೋಧನೆ, ಅಭಿವೃದ್ಧಿಯನ್ನು ಉತ್ತೇಜಿಸಲಾಗುವುದು ಎಂದು ತಿಳಿಸಿದ್ದಾರೆ.
ಆಮದು ಮಾಡಿಕೊಳ್ಳುವ ಕಚ್ಚಾ ತೈಲದ ಮೇಲೆ ಭಾರತದ ಅವಲಂಬನೆ ಕಡಿಮೆ ಮಾಡಲು ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯವು ವಿವಿಧ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ ಎಂದು ಸಚಿವರು ವಿವರಿಸಿದ್ದಾರೆ.
Share your comments