1. ಸುದ್ದಿಗಳು

ಮದ್ಯವ್ಯಸನಿ ಅಧಿಕಾರಿಗಿಂತ ರಿಕ್ಷಾ ಚಾಲಕ ಉತ್ತಮ ವರ: ಕೇಂದ್ರ ಸಚಿವ ಹೀಗಂದಿದ್ದೇಕೆ ಗೊತ್ತೆ?

Hitesh
Hitesh
A rickshaw puller is a better groom than an alcoholic officer: Do you know why the Union Minister said this?

ಕೇಂದ್ರ ಸಚಿವರೊಬ್ಬರು ಕುಡುಕ ಮಗನನ್ನು ಕಳೆದುಕೊಂಡ ದುಃಖದಲ್ಲಿ ಹೇಳಿದ ಮಾತು. ಹಲವು ಮದ್ಯವ್ಯಸನಿಗಳ ಮನಪರಿವರ್ತನೆಗೆ ನಾಂದಿಯಾಗಿದೆ. ಕೇಂದ್ರ ಸಚಿವರು ಅವರ ಮಗ ಮದ್ಯವ್ಯಸನದಿಂದ ಸಾವನ್ನಪ್ಪಿದರ ಕುರಿತು ತಿಳಿಸಿದ್ದಾರೆ. 

ರಾಜ್ಯದಲ್ಲಿ ಮೈಕೊರೆವ ಚಳಿ, ಬೆಂಗಳೂರು ಸೇರಿ ವಿವಿಧೆಡೆ ಮಳೆ!  

ಮದ್ಯವ್ಯಸನಿ ಅಧಿಕಾರಿಗಿಂತ ರಿಕ್ಷಾ ಚಾಲಕ ಅಥವಾ ಕಾರ್ಮಿಕರು ಉತ್ತಮ ವರ. ಹೀಗಾಗಿ ಜನ ತಮ್ಮ ಹೆಣ್ಣುಮಕ್ಕಳು ಮತ್ತು ಸಹೋದರಿಯರನ್ನು ಮದ್ಯವ್ಯಸನಿಗಳಿಗೆ ಮದುವೆ ಮಾಡಬೇಡಿ. ಅವರ ಜೀವಿತಾವಧಿ ಅತ್ಯಲ್ಪ ಎಂದು ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ರಾಜ್ಯ ಸಚಿವ ಕೌಶಲ್ ಕಿಶೋರ್ ಮನವಿ ಮಾಡಿದ್ದಾರೆ. ಅಷ್ಟೇ ಅಲ್ಲ ಮದ್ಯ ವ್ಯಸನದಿಂದ ಮಗನನ್ನು ಕಳೆದುಕೊಂಡ ನೋವಿನ ಬಗ್ಗೆಯೂ ಮಾತನಾಡಿದ್ದಾರೆ.   

ಉತ್ತರ ಭಾರತದಲ್ಲಿ ತೀವ್ರ ಚಳಿ; ದೆಹಲಿಯಲ್ಲಿ ಮೈಕೊರೆವ ಥಂಡಿ!  

ಈಚೆಗೆ ಮದ್ಯವಿಸರ್ಜನೆ ಶಿಬಿರವೊಂದರಲ್ಲಿ ಭಾಗವಹಿಸಿ ಮಾತನಾಡಿದ ಅವರು,  ಮದ್ಯವ್ಯಸನಿಗಳ ಜೀವಿತಾವಧಿ ತುಂಬಾ ಕಡಿಮೆ. ಇದಕ್ಕೆ ನನ್ನ ಮಗನೂ ಸಾಕ್ಷಿ  ಎಂದರು.

ಸ್ವಾತಂತ್ರ್ಯ ಚಳವಳಿಯ 90 ವರ್ಷಗಳ ಅವಧಿಯಲ್ಲಿ 6.32 ಲಕ್ಷ ಜನರು ಬ್ರಿಟಿಷರ ವಿರುದ್ಧ ಹೋರಾಡಿ ತಮ್ಮ ಪ್ರಾಣವನ್ನು ತ್ಯಾಗ ಮಾಡಿದ್ದರು. ಆದರೆ, ವ್ಯಸನದಿಂದಾಗಿ ಪ್ರತಿ ವರ್ಷ ಸುಮಾರು 20 ಲಕ್ಷ ಜನರು ಸಾಯುತ್ತಾರೆ. ಶೇ 80ರಷ್ಟು ಸಾವುಗಳು ತಂಬಾಕು, ಸಿಗರೇಟ್ ಮತ್ತು ಬೀಡಿ ವ್ಯಸನದಿಂದಾಗಿ ಬರುವ ಕ್ಯಾನ್ಸರ್‌ನಿಂದಾದ ಸಾವುಗಳಾಗಿವೆ ಎಂದರು.

ನಾನು ಸಂಸದನಾಗಿ ಮತ್ತು ನನ್ನ ಪತ್ನಿ ಶಾಸಕಿಯಾಗಿ ನಮ್ಮ ಮಗನ ಜೀವ ಉಳಿಸಲು ಸಾಧ್ಯವಾಗದಿದ್ದರೆ, ಸಾಮಾನ್ಯ ಜನರು ಏನು ಮಾಡಲು ಆಗುತ್ತದೆ ಎಂದು ಕಣ್ಣೀರಾದರು.  

ಯುವಕರಿಗೆ ಪ್ರತಿ ತಿಂಗಳು 10 ಸಾವಿರ ಉದ್ಯೋಗ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ 

ಕೌಶಲ್ ಕಿಶೋರ್

ನನ್ನ ಮಗ (ಆಕಾಶ್ ಕಿಶೋರ್) ತನ್ನ ಸ್ನೇಹಿತರೊಂದಿಗೆ ಮದ್ಯ ಸೇವಿಸುವುದನ್ನು ಕಲಿತಿದ್ದ. ಮದ್ಯವಿಸರ್ಜನಾ ಶಿಬಿರಕ್ಕೂ (ಡಿ-ಅಡಿಕ್ಷನ್)ಗೂ ಸೇರಿಸಲಾಯಿತು. ಈ ವೇಳೆ ಆತ ಕುಡಿಯುವುದನ್ನು ಬಿಟ್ಟಿದ್ದಾನೆ ಎಂದು ಭಾವಿಸಿ ಆರು ತಿಂಗಳ ನಂತರ ಮದುವೆ ಮಾಡಿಸಿದೆ.

ಆದರೆ, ನನ್ನ ಲೆಕ್ಕಾಚಾರಗಳು ತಲೆಕೆಳಗಾದವು ಅವನು ಪುನಃ ಕುಡಿಯಲು ಪ್ರಾರಂಭಿಸಿದ. ಅದು ಅವನ ಸಾವಿನಲ್ಲಿ ಮುಕ್ತಾಯವಾಯಿತು. ಎರಡು ವರ್ಷಗಳ ಹಿಂದೆ, ಅಕ್ಟೋಬರ್ 19 ರಂದು, ಆಕಾಶ್ ಸಾವಿಗೀಡಾದಾಗ, ಆತನ ಮಗನಿಗೆ ಕೇವಲ ಎರಡು ವರ್ಷ ವಯಸ್ಸಾಗಿತ್ತು ಎಂದು ಸಚಿವರು ದುಃಖಿಸಿದರು.  

ನನ್ನ ಮಗನನ್ನು ಉಳಿಸಿಕೊಳ್ಳಲು ನಮ್ಮಿಂದಾಗಲಿಲ್ಲ. ಇದರಿಂದ ಅವನ ಹೆಂಡತಿ ವಿಧವೆಯಾದಳು. ಹೀಗಾಗಿಯೇ, ನಿಮ್ಮ ಹೆಣ್ಣು ಮಕ್ಕಳು ಮತ್ತು ಸಹೋದರಿಯರನ್ನು ನೀವು ರಕ್ಷಿಸಬೇಕು ಎಂದಿದ್ದಾರೆ. 

ಉತ್ತರ ಪ್ರದೇಶದ ಮೋಹನ್‌ಲಾಲ್‌ಗಂಜ್ ಲೋಕಸಭಾ ಕ್ಷೇತ್ರದ ಸಂಸದಾಗಿರುವ ಕೌಶಲ್ ಅವರು, ಜಿಲ್ಲೆಯನ್ನು ವ್ಯಸನಮುಕ್ತವಾಗಿಸಲು ಎಲ್ಲಾ ಶಾಲೆಗಳಲ್ಲಿ ವ್ಯಸನಮುಕ್ತ ಅಭಿಯಾನವನ್ನು ನಡೆಸಬೇಕು ಮತ್ತು ಬೆಳಗಿನ ಪ್ರಾರ್ಥನೆಯ ಸಮಯದಲ್ಲಿ ಮಕ್ಕಳಿಗೆ ಈ ಬಗ್ಗೆ ಸಲಹೆಗಳನ್ನು ನೀಡಬೇಕು ಎಂದು ಹೇಳಿದ್ದಾರೆ.  

Published On: 26 December 2022, 12:32 PM English Summary: A rickshaw puller is a better groom than an alcoholic officer: Do you know why the Union Minister said this?

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.