1. ಸುದ್ದಿಗಳು

Aero india 2023 ಬೆಂಗಳೂರು ಏರೋ ಇಂಡಿಯಾ ಶೋ: ಹೊಸ ದಾಖಲೆ ಸೃಷ್ಟಿ, ನೂರು ರಾಷ್ಟ್ರಗಳು, 700ಕ್ಕೂ ಹೆಚ್ಚು ಪ್ರದರ್ಶನ!

Hitesh
Hitesh
Aero India 2023 Bangalore Aero India Show: New Record Creation, One Hundred Nations, More than 700 Exhibits!

ಬೆಂಗಳೂರು ಹೊರವಲಯದ ಯಲಹಂಕ ವಾಯುನೆಲೆಯಲ್ಲಿ ಏರೋ ಇಂಡಿಯಾ ವೈಮಾನಿಕ ಪ್ರದರ್ಶನದ 14ನೇ ಆವೃತ್ತಿಗೆ ಚಾಲನೆ ನೀಡಲಾಗಿದ್ದು, ಏರೋ ಶೋ ಕಳೆಗಟ್ಟಿದೆ.

ಸಂಸದೆ ಜಯಾಬಚ್ಚನ್‌ ಅವರಿಂದ ರಾಜ್ಯಸಭಾಪತಿ ಜಗದೀಪ್‌ ಧನಕರ್‌ ಅವರಿಗೆ ಅಗೌರವ! ಅಷ್ಟಕ್ಕೂ ಅಲ್ಲಿ ನಡೆದ್ದೇನು ?

ಏರೋ ಇಂಡಿಯಾ ವೈಮಾನಿಕ ಪ್ರದರ್ಶನದ 14ನೇ ಆವೃತ್ತಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಸೋಮವಾರ ಚಾಲನೆ ನೀಡಿದರು.

ಏರೋ ಶೋಗೆ ಚಾಲನೆ ನೀಡಿದ ನಂತರ ಮಾತನಾಡಿದ ಅವರು, ಏರೋ ಇಂಡಿಯಾ ಶೋ ನವ ಭಾರತದ ಶಕ್ತಿಯನ್ನು ಪ್ರದರ್ಶಿಸುತ್ತದೆ.

ನಮ್ಮೆಲ್ಲರ ಆತ್ಮವಿಶ್ವಾಸವನ್ನು ಹೆಚ್ಚಿಸುತ್ತದೆ ಎಂದಿದ್ದಾರೆ.  

ಏರೋ ಇಂಡಿಯಾ ಭಾರತದ ಸಾಮರ್ಥ್ಯ ವಿಸ್ತರಿಸಲು ಉದಾಹರಣೆ. 100 ರಾಷ್ಟ್ರಗಳ ಉಪಸ್ಥಿತಿಯು ಭಾರತದ ಮೇಲಿನ ವಿಶ್ವ ನಂಬಿಕೆಯನ್ನು ಹೆಚ್ಚಿಸಿದೆ.

ಭಾರತ ಮತ್ತು ವಿಶ್ವದ 700 ಕ್ಕೂ ಹೆಚ್ಚು ಪ್ರದರ್ಶಕರು ಭಾಗವಹಿಸುತ್ತಿದ್ದಾರೆ.

ಈ ಬಾರಿಯ ಏರೋ ಇಂಡಿಯಾ ಶೋ ಹಿಂದಿನ ಎಲ್ಲಾ ದಾಖಲೆಗಳನ್ನು ಮುರಿದಿದೆ ಎಂದರು.

Gold Price ವಾರಾಂತ್ಯದಲ್ಲಿ ಕುಸಿತ ಕಂಡ ಚಿನ್ನದ ದರ, ಎಷ್ಟಿದೆ ಚಿನ್ನದ ದರ ? ಗೂಗಲ್‌ ಪೇ ಮೂಲಕ ಚಿನ್ನ ಖರೀದಿ ಇದೀಗ ಸುಲಭ! 

ನವಭಾರತದ ಸಾಮರ್ಥ್ಯಕ್ಕೆ ಬೆಂಗಳೂರಿನ ಆಗಸ ಸಾಕ್ಷಿಯಾಗುತ್ತಿದೆ. ಹೊಸ ಎತ್ತರವೇ ನವ ಭಾರತದ ಸತ್ಯ ಎಂಬುದಕ್ಕೆ ಬೆಂಗಳೂರಿನ ಆಕಾಶವೇ ಸಾಕ್ಷಿಯಾಗಿದೆ.

ಇಂದು, ರಾಷ್ಟ್ರವು ಹೊಸ ಎತ್ತರವನ್ನು ತಲುಪುತ್ತಿದೆ ಎಂದು ಶ್ಲಾಘಿಸಿದ್ದಾರೆ. 

ಏರೊ ಸ್ಪೇಸ್‌ಗೆ ಸಂಬಂಧಿಸಿದಂತೆ ಕರ್ನಾಟಕವು ಪ್ರಮುಖ ಪಾತ್ರ ವಹಿಸುತ್ತದೆ.

ಕರ್ನಾಟಕದಲ್ಲಿ 1940ರಲ್ಲಿ ಎಚ್ ಎ ಎಲ್ ಸ್ಥಾಪನೆಯಾಗಿದ್ದು, ಎನ್ ಎ ಎಲ್ , ಬಿಎಚ್ ಇ ಎಲ್, ಡಿಆರ್‌ಡಿಒ ಎಲ್ಲವೂ ಆರ್ ಮತ್ತು ಡಿ ಸಾಮರ್ಥ್ಯವನ್ನು ಹೆಚ್ಚಿಸಿವೆ.

1960ರ ದಶಕದಲ್ಲಿ ಬೆಂಗಳೂರಿನಲ್ಲಿ ಇಸ್ರೊ ಆರಂಭವಾಯಿತು. 1960ರಲ್ಲಿ ಆರ್ಯಭಟ ಉಪಗ್ರಹವನ್ನು ಬೆಂಗಳೂರಿನಿಂದ ಉಡಾವಣೆ  ಆಗಿದೆ.

ಶೇ. 67ರಷ್ಟು ಏರೋಸ್ಪೇಸ್ ಉಪಕರಣಗಳು ಕರ್ನಾಟಕದಲ್ಲಿ ಉತ್ಪಾದನೆಯಾಗುತ್ತದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

Post Office Insurance ಪೋಸ್ಟ್ ಆಫೀಸ್ ಇನ್ಶೂರೆನ್ಸ್; ಕಡಿಮೆ ಪ್ರೀಮಿಯಂನಲ್ಲಿ 10 ಲಕ್ಷದವರೆಗೆ ಲಾಭ!

ಬೆಂಗಳೂರಿನಲ್ಲಿ ಸಂಚಾರ ವ್ಯತ್ಯಾಸ ಸಮಸ್ಯೆ

ಬೆಂಗಳೂರಿನಲ್ಲಿ ಏರೋ ಇಂಡಿಯಾ-2023ರ (Aero India 2023) ಉದ್ಘಾಟನೆಗೆ ಪ್ರಧಾನಿ ನರೇಂದ್ರ ಮೋದಿ ಹಾಗೂ ಗಣ್ಯರು ಆಗಮಿಸುತ್ತಿರುವ ಹಿನ್ನೆಲೆಯಲ್ಲಿ  ಫೆ.13ರಂದು ಬೆಳಗ್ಗೆ 6ರಿಂದ ರಾತ್ರಿ 8 ಗಂಟೆವರೆಗೆ ಯಲಹಂಕ ವಾಯುನೆಲೆ ಹಾಗೂ ಕೆಐಎ (KIA-ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ) ಸಂಪರ್ಕಿಸುವ ಪ್ರಮುಖ ರಸ್ತೆಗಳಲ್ಲಿ ಸಂಚಾರ ನಿರ್ಬಂಧ ವಿಧಿಸಲಾಗಿದೆ.

ಈ ಮಾರ್ಗದಲ್ಲಿ ಭಾರೀ ವಾಹನಗಳ ಪ್ರವೇಶ ನಿಷೇಧಿಸಲಾಗಿದೆ. ವಾಹನ ಸಂಚಾರಕ್ಕೆ ಪೊಲೀಸರು ಪರ್ಯಾಯ ಮಾರ್ಗಗಳನ್ನು ಸೂಚಿಸಿದ್ದಾರೆ.

ಇದರಿಂದ ಕೆಲವು ಭಾಗದಲ್ಲಿ ಸಂಚಾರ ವ್ಯತ್ಯಯವೂ ಆಗಿದೆ. 

ಸಂಚಾರ ನಿಯಮ ಉಲ್ಲಂಘನೆ; ದಂಡ ರಿಯಾಯಿತಿ: ಅವಧಿ ವಿಸ್ತರಿಸಲು ಸಂಚಾರ ಪೊಲೀಸರಿಂದಲೇ ಮನವಿ!  

Aero India 2023 Bangalore Aero India Show: New Record Creation, One Hundred Nations, More than 700 Exhibits!

ಏರ್‌ಶೋನಿಂದ ಕೆಲ ವಿಮಾನ ಸೇವೆ ವ್ಯತ್ಯಯ

ಏರ್‌ಶೋ ಹಿನ್ನೆಲೆಯಲ್ಲಿ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವಿಮಾನಗಳ ಸಂಚಾರದಲ್ಲಿ ವ್ಯತ್ಯಯವಾಗುತ್ತಿದೆ.

ಇದರಿಂದಾಗಿ ಪ್ರಯಾಣಿಕರು ಗಂಟೆಗಟ್ಟಲೆ ಕಾದು ನಿಲ್ಲುವ ಪರಿಸ್ಥಿತಿ ಸೃಷ್ಟಿಯಾಗಿದೆ.

ಬ್ಯಾಗೇಜ್‌ ಕೌಂಟರ್‌, ಸೆಕ್ಯುರಿಟಿ ಚೆಕ್ಕಿಂಗ್‌ ತಲುಪಲು ಪ್ರಯಾಣಿಕರು ಪ್ರಮುಖ ದೇವಸ್ಥಾನಗಳಲ್ಲಿಇರುವ ವ್ಯವಸ್ಥೆ ಮಾದರಿಯಲ್ಲಿ ಸರದಿ ಸಾಲಿನಲ್ಲಿ ಸುತ್ತಿಕೊಂಡು ಸಾಗಬೇಕಿದೆ ಎಂದು ಕೆಲವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.   

ಏನಿದು ಏರೋ ಇಂಡಿಯಾ ಶೋ

ಏರೋ ಇಂಡಿಯಾ ಎರಡು ವರ್ಷಗಳಿಗೊಮ್ಮೆ ಬೆಂಗಳೂರಿನ ಯಲಹಂಕ ವಾಯುನೆಲೆಯಲ್ಲಿ ನಡೆಯುವ ವೈಮಾನಿಕ ಪ್ರದರ್ಶನ. 

ಇದನ್ನು ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ, ಭಾರತೀಯ ವಾಯು ಸೇನೆ, ಬಾಹ್ಯಾಕಾಶ ಇಲಾಖೆ ಮತ್ತು ಕೇಂದ್ರ ನಾಗರಿಕ ವಿಮಾನಯಾನ ಸಚಿವಾಲಯ ಸಹಯೋಗದೊಂದಿಗೆ ರಕ್ಷಣಾ ವಸ್ತುಪ್ರದರ್ಶನ ಸಂಸ್ಥೆ ಮತ್ತು ರಕ್ಷಣಾ ಸಚಿವಾಲಯಗಳು ಆಯೋಜಿಸುತ್ತವೆ. 

ಇದನ್ನೂ ಓದಿರಿ: Gst ರಾಜ್ಯದಲ್ಲಿ ಜನವರಿಯಲ್ಲಿ ದಾಖಲೆಯ ತೆರಿಗೆ ಸಂಗ್ರಹ!, ಎಷ್ಟು ಇಲ್ಲಿದೆ ವಿವರ

Published On: 13 February 2023, 11:54 AM English Summary: Aero India 2023 Bangalore Aero India Show: New Record Creation, One Hundred Nations, More than 700 Exhibits!

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.