ಇತ್ತೀಚಿಗೆ India Post Government Subsidy ಹೆಸರಲ್ಲಿ ಸುಳ್ಳು ಸುಳ್ಳೆ, ವಾಟ್ಸಪ್, ಟೆಲಿಗ್ರಾಮ್‌ಗಳಲ್ಲಿ URL, Links ಗಳು ಹರಿದಾಡುತ್ತಿವೆ. ಅದರಲ್ಲೂ ಇಂಡಿಯನ್ ಪೋಸ್ಟ್ ಗೌವರ್ನಮೆಂಟ್ ಸಬ್ಸಿಡಿ ಸ್ಕೀಮ್ ಹೆಸರಲ್ಲಿ ಈ ಲಿಂಕ್‌ಗಳು ಹರಿದಾಡುತ್ತಿವೆ. ಆದರೆ, ಇದು ಶುದ್ಧ ಸುಳ್ಳು ಸುದ್ದಿಯಾಗಿದ್ದು, ಭಾರತೀಯ ಪೋಸ್ಟಲ್ ಇಲಾಖೆ ಖುದ್ದು ಇದನ್ನು ತಳ್ಳಿಹಾಕಿದೆ. ಅಷ್ಟೇ ಅಲ್ಲದೆ ಅಂಚೆ ಇಲಾಖೆ ವತಿಯಿಂದ ಈ ತರಹದ ಯಾವುದೇ ಸಬ್ಸಿಡಿ ಸ್ಕೀಮ್‌ಗಳನ್ನು ನೀಡಲಾಗುತ್ತಿಲ್ಲ ಎಂದು ಅಧಿಸೂಚನೆ ಮೂಲಕ ಅವರು ಸ್ಪಷ್ಟಪಡಿಸಿದ್ದಾರೆ.
ಕೆಲವು ಸಮೀಕ್ಷೆಗಳು, ರಸಪ್ರಶ್ನೆಗಳ ಮೂಲಕ ಸಬ್ಸಿಡಿಗಳು, ಬಹುಮಾನಗಳನ್ನು ಒದಗಿಸುವುದಾಗಿ ಹೇಳಿಕೊಳ್ಳುವ ಮೋಸದ URL/ ವೆಬ್‌ಸೈಟ್‌ಗಳ ವಿರುದ್ಧ ಇಂಡಿಯಾ ಪೋಸ್ಟ್ ಸಾರ್ವಜನಿಕರಿಗೆ ಎಚ್ಚರಿಕೆಯನ್ನು ಕೂಡ ನೀಡಿದೆ.
ಇದನ್ನೂ ಓದಿರಿ:
ಬಿಗ್ ಶಾಕ್:ಕೇಂದ್ರ ನೌಕರರ DA ಹೆಚ್ಚಳಕ್ಕೆ ಬೀಳಲಿದೆ ಬ್ರೇಕ್..ಕಾರಣವೇನು..?
LIC BIG Scheme! Invest ₹ 29 ಪಡೆಯಿರಿ ₹4 ಲಕ್ಷ!
ಇತ್ತೀಚಿನ ದಿನಗಳಲ್ಲಿ ಇಂಡಿಯಾ ಪೋಸ್ಟ್(Indian Post)ನ ಹೆಸರಿನಲ್ಲಿ ವಿವಿಧ URL ಗಳು, ವೆಬ್‌ಸೈಟ್‌ಗಳು WhatsApp, ಟೆಲಿಗ್ರಾಮ್, Instagram ನಂತಹ ಸಾಮಾಜಿಕ ಮಾಧ್ಯಮಗಳಲ್ಲಿ ಮತ್ತು ಸಣ್ಣ URL ಗಳು, ಕಿರು URL ಗಳನ್ನು ಒಳಗೊಂಡಿರುವ ಇಮೇಲ್‌ಗಳು, SMS ಮೂಲಕ ಪ್ರಸಾರವಾಗುತ್ತಿರುವುದನ್ನು ಗಮನಿಸುತ್ತಿದೆ.
ಕೆಲವು ಸಮೀಕ್ಷೆಗಳು, ರಸಪ್ರಶ್ನೆಗಳ ಮೂಲಕ ಸರ್ಕಾರಿ ಸಬ್ಸಿಡಿಗಳನ್ನು ಒದಗಿಸುವುದಾಗಿ ಹೇಳಿಕೊಳ್ಳುವುದರಿಂದ, ಸಮೀಕ್ಷೆಗಳ ಆಧಾರದ ಮೇಲೆ ಸಬ್ಸಿಡಿಗಳು, ಬೋನಸ್ ಅಥವಾ ಬಹುಮಾನಗಳನ್ನು ಘೋಷಿಸುವಂತಹ ಯಾವುದೇ ಚಟುವಟಿಕೆಗಳಲ್ಲಿ ಭಾರತ ಪೋಸ್ಟ್ ಭಾಗಿಯಾಗಿಲ್ಲ ಎಂದು ನಾವು ದೇಶದ ನಾಗರಿಕರಿಗೆ ತಿಳಿಸಲು ಬಯಸುತ್ತೇವೆ ಎಂದು ಹೇಳಿದೆ.
7th Pay Commision: ಈ ತಿಂಗಳ ಅಂತ್ಯದೊಳಗೆ ಹೆಚ್ಚುತ್ತಾ ಕೇಂದ್ರ ಸರ್ಕಾರಿ ನೌಕರರ HRA..?
ಈ ತಪ್ಪುಗಳನ್ನ ಮಾಡಿದ್ರೆ ನಿಮ್ಮ ಬ್ಯಾಂಕ್ ಅಕೌಂಟ್ ಕ್ಲೋಸ್ ಆಗೋದು ಫಿಕ್ಸ್..!
ಸಾರ್ವಜನಿಕರು ಅಂತಹ ಅಧಿಸೂಚನೆಗಳು, ಸಂದೇಶಗಳು, ಇಮೇಲ್‌ಗಳನ್ನು ಸ್ವೀಕರಿಸುತ್ತಾರೆ. ಆದರೆ ಯಾವುದೇ ಕಾರಣಕ್ಕೆ ಅಂತಹ ನಕಲಿ ಸಂದೇಶಗಳನ್ನು ನಂಬಬೇಡಿ ಅಥವಾ ಪ್ರತಿಕ್ರಿಯಿಸಬೇಡಿ ಅಥವಾ ಯಾವುದೇ ವೈಯಕ್ತಿಕ ವಿವರಗಳನ್ನು ಹಂಚಿಕೊಳ್ಳಬೇಡಿ ಎಂದು ವಿನಂತಿಸಲಾಗಿದೆ,. ಜನ್ಮ ದಿನಾಂಕ, ಖಾತೆ ಸಂಖ್ಯೆಗಳು, ಮೊಬೈಲ್ ಸಂಖ್ಯೆಗಳು, ಜನ್ಮ ಸ್ಥಳ ಮತ್ತು OTP ಇತ್ಯಾದಿಗಳಂತಹ ಯಾವುದೇ ವೈಯಕ್ತಿಕವಾಗಿ ಗುರುತಿಸಬಹುದಾದ ಮಾಹಿತಿಯನ್ನು ಹಂಚಿಕೊಳ್ಳದಂತೆ ವಿನಂತಿಸಲಾಗಿದೆ.
ಈ URL, Links, Websites ಗಳನ್ನು ತೆಗೆದುಕೊಳ್ಳುವುದನ್ನು ತಡೆಯಲು ಇಂಡಿಯಾ ಪೋಸ್ಟ್ ಅಗತ್ಯ ಕ್ರಮವನ್ನು ತೆಗೆದುಕೊಳ್ಳುತ್ತಿದೆ ಎಂದು ತಿಳಿಸಿದ್ದಾರೆ.
ಪಿಎಂ ಕಿಸಾನ್: 11ನೇ ಕಂತು ಶೀಘ್ರದಲ್ಲೆ ಬಿಡುಗಡೆ! ಫಲಾನುಭವಿಗಳ ಪಟ್ಟಿಯಲ್ಲಿ ಈಗಲೇ ನಿಮ್ಮ ಹೆಸರು ಪರಿಶೀಲಿಸಿ
ಈ ಕಂಪನಿಯಲ್ಲಿ ತೂಕ ಇಳಿಸಿಕೊಂಡ್ರೆ ಅರ್ಧ ತಿಂಗಳ ಸಂಬಳ ಬೋನಸ್..!
ಸಾರ್ವಜನಿಕರು ಏನು ಮಾಡಬೇಕು?
ಯಾವಾಗಲೇ ಆಗಲಿ ಈ ತರದ ಲಿಂಕ್‌ಗಳ ಮೂಲಕ ಯಾವುದೇ ಸರ್ಕಾರಿ ಯೋಜನೆಗಳು ಬರುವುದಿಲ್ಲ. ಆದ್ದರಿಂದ ಯಾವುದ್ಯಾವುದೋ ಆಮೀಷಗಳಿಗೆ ಒಳಗಾಗಿ ಇಂತಹ ಲಿಂಕ್‌ಗಳನ್ನು ಕ್ಲಿಕ್ ಮಾಡಿದರೆ ಇದರಿಂದ ಸ್ವತಃ ನೀವೆ ಸಮಸ್ಯೆ ಅನುಭವಿಸುವಂತಾಗುತ್ತದೆ. ನಿಮ್ಮ ವ್ಯಯಕ್ತಿಕ ಮಾಹಿತಿಗಳು ಸೋರಿಕೆಯಾಗುವ ಸಾಧ್ಯತೆಗಳು ಇರುತ್ತವೆ.
ನಿಮ್ಮ ಒಂದು ಕ್ಲಿಕ್ ಮೂಲಕ ಅವರು ನಿಮ್ಮ ಖಾತೆಯಲ್ಲಿನ ಹಣವನ್ನು ಅವರ ಖಾತೆಗೆ ವರ್ಗಾಯಿಸಿಕೊಳ್ಳಬಹುದು. ಆದ್ದರಿಂದ ಯಾವುದ್ಯಾವುದೋ ಲಿಂಕ್‌ಗಳನ್ನು ಒತ್ತುವ ಮುನ್ನ ಎಚ್ಚರಿಕೆ ಇರಬೇಕು. ಮತ್ತು ಯಾವುದೇ ನಕಲಿ ಸಂದೇಶಗಳು, ಸಂವಹನಗಳು, ಲಿಂಕ್‌ಗಳನ್ನು ನಂಬಿ ಅದಕ್ಕೆ ಪ್ರತಿಕ್ರಿಯೆ ನೀಡಬೇಡಿ.
ಕೇಂದ್ರದಿಂದ ಪ್ರತಿ ತಿಂಗಳು ರೈತರಿಗೆ 3000 ರೂ. ಪಿಂಚಣಿ! ಪಿಎಂ ಕಿಸಾನ್ ಮನ್‌ಧನ್ ಯೋಜನೆಯಲ್ಲಿದೆ ರೈತರಿಗೆ ಸಹಾಯ
ಮೀನುಗಾರರ ಆದಾಯ ಹೆಚ್ಚಿಸಲು Pm ಮತ್ಸ್ಯ ಸಂಪದ ಯೋಜನೆ! ಅರ್ಜಿ ಸಲ್ಲಿಸಿ ಇದರ ಲಾಭ ಪಡೆಯಿರಿ!
Share your comments