Amul Milk Price Hike: ಇತ್ತೀಚಿಗಷ್ಟೇ ಹಲವು ಹಾಲಿನ ಕಂಪನಿಗಳು ತಮ್ಮ ಹಾಲಿನ ದರಗಳನ್ನ ಏರಿಕೆ ಮಾಡಿದ್ಯಾದವು. ಅದರ ಬೆನ್ನಲ್ಲೇ ಇದೀಗ ಮತ್ತೆ ಅಮೂಲ್ ತನ್ನ ಹಾಲಿನ ದರವನ್ನು ಹೆಚ್ಚಿಸಿದೆ. ಇಲ್ಲಿದೆ ಇತ್ತೀಚಿನ ದರಗಳ ವಿವರ..
ಪಿಂಚಣಿದಾರರೇ ಗಮನಿಸಿ : ಫೆಬ್ರವರಿ 20ರೊಳಗೆ ಈ ಕೆಲಸ ಮಾಡುವಂತೆ ಸರ್ಕಾರದ ಸೂಚನೆ!
Amul Milk Price Hike: ಅಮೂಲ್ ಪ್ರತಿ ಲೀಟರ್ ಹಾಲಿನ ಬೆಲೆ 3 ರೂಪಾಯಿಯಷ್ಟು ಹೆಚ್ಚಳ ಮಾಡಿದೆ. ಅಮೂಲ್ ಹಾಲಿನ ದರವನ್ನು ಒಂದು ಲೀಟರ್ಗೆ 3 ರೂಪಾಯಿವರೆಗೆ ಹೆಚ್ಚಿಸಲಾಗಿದೆ.
ಈ ಹೆಚ್ಚಳದ ನಂತರ ಒಂದು ಲೀಟರ್ ಅಮುಲ್ ಗೋಲ್ಡ್ (Amul Gold) ಬೆಲೆ 63 ರೂಪಾಯಿಯಿಂದ 66 ರೂಪಾಯಿಗೆ ಏರಿಕೆಯಾಗಲಿದೆ.
14 ಲಕ್ಷ ರೈತರಿಗೆ 1900 ಕೋಟಿ ಬೆಳೆಹಾನಿ ಪರಿಹಾರ: ಸಿಎಂ ಬೊಮ್ಮಾಯಿ
1 ಲೀಟರ್ ಅಮುಲ್ ತಾಜಾ ಹಾಲಿನ ಬೆಲೆ ₹54 ರೂಪಾಯಿ ಆಗಿತ್ತು. ಇನ್ಮುಂದೆ ಅಮುಲ್ ಹಸುವಿನ ಹಾಲಿಗೆ 56 ರೂಪಾಯಿಗಳನ್ನು ಪಾವತಿಸಬೇಕಾಗುತ್ತದೆ ಎಂದು ತಿಳಿಸಲಾಗಿದೆ.
ಅಂತೆಯೇ ಅಮುಲ್ ಎ2 ಎಮ್ಮೆಯ ಹಾಲಿನ ದರ ಲೀಟರ್ಗೆ 70 ರೂಪಾಯಿಗೆ ಏರಿಕೆಯಾಗಿದೆ ಎಂದು ಕಂಪನಿ ಹೇಳಿದೆ. ಈ ವರ್ಷ ಮೊದಲ ಬಾರಿಗೆ ಅಮುಲ್ ಹಾಲಿನ ದರವನ್ನು ಹೆಚ್ಚಿಸಲಾಗಿದೆ.
ಪಡಿತರದಾರರಿಗೆ ಬಜೆಟ್ನಲ್ಲಿ ಸಿಹಿ ಸುದ್ದಿ ನೀಡಿದ ಸಚಿವೆ ನಿರ್ಮಲಾ ಸೀತಾರಾಮನ್! ಏನದು ಗೊತ್ತೆ?
ಹಿಂದೆ ಅಮುಲ್ 2022ರಲ್ಲಿ ಹಾಲಿನ ದರವನ್ನು 3 ಬಾರಿ ಹೆಚ್ಚಳ ಮಾಡಿತ್ತು. ಮಾರ್ಚ್, ಆಗಸ್ಟ್ ಮತ್ತು ಅಕ್ಟೋಬರ್ನಲ್ಲಿ ದರ ಹೆಚ್ಚಳ ಮಾಡಿತ್ತು.
ಈ ಹಿಂದೆ ಸಾಮಾನ್ಯವಾಗಿ ಪ್ರತಿ ಲೀಟರ್ಗೆ 2 ರೂಪಾಯಿ ಏರಿಕೆಯಾಗುತ್ತಿತ್ತು, ಆದರೆ ಈ ಬಾರಿ ಲೀಟರ್ಗೆ 3 ರೂಪಾಯಿ ಹೆಚ್ಚಳ ಮಾಡಲಾಗಿದೆ.
Share your comments