ರಾಜ್ಯದ ಕೃಷಿ ಕ್ಷೇತ್ರದಲ್ಲಿ ಹೊಸ ಅನ್ವೇಷಣೆ ಮತ್ತು ಸೃಜನಾತ್ಮಕ ಕಾರ್ಯಗಳಿಂದ ಕೃಷಿ ವಲಯಕ್ಕೆ ಅನ್ವಯಿಸುವಂತೆ ಗಮನಾರ್ಹ ಸಾಧನೆ ಮಾಡಿದವರಿಗೆ, ರೈತ ಸಮುದಾಯದ ಅಭಿವೃದ್ಧಿಗೆ ಅಪಾರ ಕೊಡುಗೆ ನೀಡುತ್ತಿರುವ ರೈತರಿಗೆ ಕೃಷಿ ಪಂಡಿತ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗುವುದು.
ಇದನ್ನೂ ಓದಿರಿ: ₹23 ಲಕ್ಷಕ್ಕೆ ಬೇಡಿಕೆ ಗಿಟ್ಟಿಸಿಕೊಂಡ ಅಪರೂಪದ ಮೇಕೆ! ಏನಿದರ ವಿಶೇಷತೆ ಗೊತ್ತೆ?
35 ಕೋಟಿ ಲಂಚ ಪ್ರಕರಣ: ಆರೋಪ ಮುಕ್ತರಾಗುವವರೆಗೆ ಹಸಿರು ಶಾಲು ಹಾಕದಂತೆ ಕೋಡಿಹಳ್ಳಿ ಚಂದ್ರಶೇಖರಗೆ ರೈತ ಸಂಘದ ಎಚ್ಚರಿಕೆ!
ಕೃಷಿ ಪಂಡಿತ ಪುಶಸ್ತಿ ಮಾನದಂಡಗಳು:
- ಕೃಷಿ ಪಂಡಿತ ಪ್ರಶಸ್ತಿಯಲ್ಲಿ ಭಾಗವಹಿಸಲು ಇಚ್ಛಿಸುವವರು ರಾಜ್ಯ ಕೃಷಿ ಕ್ಷೇತ್ರದಲ್ಲಿ ವಿನೂತನ/ಹೊಸ ಅನ್ವೇಷಣೆ ಮತ್ತು ಸೃಜನಾತ್ಮಕ ಕಾರ್ಯಗಳಿಂದ ಗಮನಾರ್ಹ ಸಾಧನೆ ಮಾಡಿರಬೇಕು.
- ಕೃಷಿ ವಲಯಕ್ಕೆ ಅನ್ವಯಿಸುವಂತೆ ಗಮನಾರ್ಹ/ಗಣನೀಯವಾದ/ ವಿಭಿನ್ನವಾದ ಮೂಲ ರೂಪದ ಸಾಧನೆ (Innovation) ಮಾಡಿದವರಬೇಕು.
- ನಿಗದಿಪಡಿಸಿರುವ ನಮೂನೆಯಲ್ಲಿ ಇಲಾಖೆಯು ಸೂಚಿಸುವ ಅಂತಿಮ ದಿನಾಂಕ ದೊಳಗೆ ಅರ್ಜಿಯನ್ನು ತಾಲ್ಲೂಕು ಮಟ್ಟದ ಸಹಾಯಕ ಕೃಷಿ ನಿರ್ದೇಶಕರ ಕಛೇರಿಗೆ ಸಲ್ಲಿಸುವುದು.
- ಈ ಹಿಂದೆ ಕೃಷಿ ಪಂಡಿತ ಪ್ರಶಸ್ತಿ (ಪ್ರಥಮ, ದ್ವಿತೀಯ, ತೃತೀಯ ಹಾಗೂ ಉದಯೋನ್ಮುಖ) ಪಡೆದವರು ಮತ್ತೆ ಸ್ಪರ್ಧಿಸುವಂತಿಲ್ಲ.
- ಕೇಂದ್ರ ಅಥವಾ ರಾಜ್ಯ ಸರ್ಕಾರಿ ಸೇವೆಯಲ್ಲಿರುವ ಯಾವುದೇ ಇಲಾಖೆ/ ವಿಶ್ವವಿದ್ಯಾಲಯ/ಸರ್ಕಾರಿ ಸ್ವಾಮ್ಯದ ಸಂಸ್ಥೆಗಳ ನೌಕರರು ಮತ್ತು ಅವರ ಕುಟುಂಬದ ಸದಸ್ಯರು ಸ್ಪರ್ಧೆ ಭಾಗವಹಿಸುವಂತಿಲ್ಲ.
ರಾಜ್ಯ ಸರ್ಕಾರಿ ನೌಕರರಿಗೆ Good News: ವರ್ಷಾಂತ್ಯಕ್ಕೆ ದೊರೆಯಲಿದೆ ಕೇಂದ್ರ ಮಾದರಿ ವೇತನ!
ಗ್ರಾಹಕರಿಗೆ ಒತ್ತಾಯವಾಗಿ "ಸೇವಾ ಶುಲ್ಕ" ವಿಧಿಸುವ ರೆಸ್ಟೋರೆಂಟ್ಗಳಿಗೆ ಎಚ್ಚರಿಕೆ ನೀಡಲು DOCA ಜೂನ್ 2ರಂದು ಸಭೆ!
ಬೆಳೆ ಸ್ಪರ್ಧೆಗೆ ಸ್ಪರ್ಧಿಸಲು ಅರ್ಹತೆ:
- ಅರ್ಜಿದಾರರು ಸ್ವತಃ ಬೇಸಾಯದಲ್ಲಿ ತೊಡಗಿರುವ ಕ್ರಿಯಾಶೀಲ ಕೃಷಿಕನಾಗಿರಬೇಕು.
- ಸ್ವಂತ ಜಮೀನು ಹೊಂದಿರದಿದ್ದರೂ ಸಹ ಬೇಸಾಯದಲ್ಲಿ ತೊಡಗಿರುವ ಕೃಷಿಕನು ಜಮೀನು ಮಾಲೀಕರಿಂದ ಸಾಮಾನ್ಯ ವ್ಯವಹಾರಿಕ ಅಧಿಕಾರ (GPA) ಹೊಂದಿದ್ದ ಪಕ್ಷದಲ್ಲಿ (ಭೂ ಸುಧಾರಣೆಯ ಕಾಯ್ದೆಯ ನಿಯಮಗಳಿಗೆ ಒಳಪಟ್ಟು) ಸ್ಪರ್ಧೆಯಲ್ಲಿ ಭಾಗವಹಿಸಬಹುದಾಗಿರುತ್ತದೆ.
7ನೇ ವೇತನ ಆಯೋಗದಿಂದ ಗುಡ್ನ್ಯೂಸ್; ಸರ್ಕಾರಿ ನೌಕರರ ವೇತನ ಖಾತೆಗೆ ಬರಲಿದೆ 2 ಲಕ್ಷ ರೂಪಾಯಿ..! ಏನಿದು ತಿಳಿಯಿರಿ
7th Pay Commission: ಕೇಂದ್ರ ಸರ್ಕಾರಿ ನೌಕರರಿಗೆ ಗುಡ್ನ್ಯೂಸ್; ಶೇ.14% ರಷ್ಟು ತುಟ್ಟಿಭತ್ಯೆ ಹೆಚ್ಚಳ..!
ಬೆಳೆ ಸ್ಪರ್ಧೆಗೆ ಸ್ಪರ್ಧಿಸಲು ಅನರ್ಹತೆ:
- ಯಾವುದೇ ಹಂತದಲ್ಲಿ ಒಮ್ಮೆ ಬಹುಮಾನ ಪಡೆದ ರೈತ/ರೈತ ಮುಂದಿನ ಐದು ವರ್ಷಗಳ ಅವಧಿಗೆ ಆ ಹಂತದ ಬೆಳೆ ಸ್ಪರ್ಧೆಯ ಬಹುಮಾನಕ್ಕೆ ಅರ್ಹನಾಗಿರುವುದಿಲ್ಲ. ಆದರೆ ಆ ಬೆಳೆಯ ಮೇಲಿನ ಹಂತದ ಸ್ಪರ್ದೆಯಲ್ಲಿ ಭಾಗವಹಿಸಬಹುದಾಗಿರುತ್ತದೆ.
- ರಾಜ್ಯ ಮತ್ತು ಜಿಲ್ಲಾ ಮಟ್ಟಗಳಲ್ಲಿ ರಚಿಸಲಾಗಿರುವ ವಿವಿಧ ಸಮಿತಿ ತಂಡಗಳಲ್ಲಿ/ ಕಾರ್ಯನಿರ್ವಹಿಸುತ್ತಿರುವ ಸದಸ್ಯರುಗಳು ಮತ್ತು ಅವರ ಕುಟುಂಬದ ಸದಸ್ಯರು ಸ್ಪರ್ಧೆಯಲ್ಲಿ ಭಾಗವಹಿಸುವಂತಿಲ್ಲ.
- ಕನಿಷ್ಠ ವಿಸ್ತೀರ್ಣ ಒಂದು ಎಕರೆ ಇರಬೇಕು.
- ಒಬ್ಬ ಅರ್ಜಿದಾರನು ಒಂದೇ ವರ್ಷದಲ್ಲಿ ಒಂದಕ್ಕಿಂತ ಹೆಚ್ಚಿನ ಬೆಳೆಗಳಿಗೆ ಸ್ಪರ್ಧಿಸಬಹುದಾಗಿದ್ದು ಇದರಲ್ಲಿ ಯಾವುದಾದರೂ ಒಂದು ಬೆಳೆಯ ಹೆಚ್ಚಿನ ಮೌಲ್ಯದ ಪ್ರಶಸ್ತಿ ಪಡೆಯಲು ಮಾತ್ರ ಅರ್ಹರಾಗಿರುತ್ತಾರೆ.
ಕೃಷಿ ಪಂಡಿತ ಪ್ರಶಸ್ತಿ ಬಹುಮಾನದ ಮೊತ್ತ:
- ಕೃಷಿ ಪಂಡಿತ -ಪ್ರಥಮ - 1,25,000
- ಕೃಷಿ ಪಂಡಿತ-ದ್ವೀತಿಯ - 1,00,000
- ಕೃಷಿ ಪಂಡಿತ-ತೃತೀಯ - 75,000
- ಕೃಷಿ ಪಂಡಿತ ಉದಯೋನ್ಮುಖ - ತಲಾ 50,000.
EPFO ಖಾತೆದಾರರಿಗೆ ಗುಡ್ನ್ಯೂಸ್: ಇನ್ಮುಂದೆ SMS ಮತ್ತು Missed Call ಮೂಲಕ ನಿಮ್ಮ ಬ್ಯಾಲೆನ್ಸ್ ಚೆಕ್ ಮಾಡಬಹುದು!
Atal Pension Yojana: 4 ಕೋಟಿಗೂ ಹೆಚ್ಚು ಜನರಿಗೆ ಲಾಭವಾದ ಈ ಯೋಜನೆಯ ಲಾಭ ನೀವು ಪಡೆದಿದ್ದೀರಾ?
Share your comments