2023-24ನೇ ಸಾಲಿಗೆ ಮೀನುಗಾರಿಕೆ ಇಲಾಖೆ ವತಿಯಿಂದ ರಾಜ್ಯವಲಯ ಯೋಜನೆಗಳಡಿ ಸೌಲಭ್ಯ ಪಡೆಯಲು ಅರ್ಹ ಮೀನುಗಾರ ಫಲಾನುಭವಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ಚಿತ್ರದುರ್ಗ: 2023-24ನೇ ಸಾಲಿಗೆ ಮೀನುಗಾರಿಕೆ - ಇಲಾಖೆ ಚಿತ್ರದುರ್ಗ ಜಿಲ್ಲಾ ಕಚೇರಿ ವತಿಯಿಂದ ರಾಜ್ಯವಲಯ ಯೋಜನೆಗಳಡಿ ಸೌಲಭ್ಯ ಪಡೆಯಲು ಅರ್ಹ ಮೀನುಗಾರ ಫಲಾನುಭವಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ಜಲಾಶಯ, ನದಿಭಾಗ ಕೆರೆಗಳ ವ್ಯಾಪ್ತಿಯವೃತ್ತಿಪರಮೀನುಗಾರರಿಗೆ ಮೀನುಹಿಡಿಯುವ ಬಲೆ ಅಥವಾ ಪೈಬರ್ ಗ್ಲಾಸ್ ಹರಿಗೋಲು ವಿತರಣೆ, ಕೆರೆ ಜಲಾಶಯಗಳ ಅಂಚಿನ ಕೊಳಗಳಲ್ಲಿ ಮೀನುಮರಿ ಪಾಲನೆಗೆ ನೆರವು, ಕೆರೆಯನ್ನು ಗುತ್ತಿಗೆಗೆ ಪಡೆದ ಮೀನುಗಾರಿಕೆ ಸಹಕಾರ ಸಂಘ, ವ್ಯಕ್ತಿಗಳಿಗೆ ಮೀನುಮರಿ ಬಿತ್ತನೆಗೆ ಸಹಾಯಧನದ ನೆರವು ನೀಡಲಾಗುವುದು.
ಅರ್ಹ ಫಲಾನುಭವಿಗಳು ಸೇವಾಸಿಂಧು ಪೋರ್ಟಲ್ ಮೂಲಕ ಆನ್‌ಲೈನ್ ಅರ್ಜಿಯನ್ನು ಸಂಬಂಧಿಸಿದ ತಾಲ್ಲೂಕು ಮೀನುಗಾರಿಕೆ ಇಲಾಖೆಯ ಕಚೇರಿಗೆ ಸಲ್ಲಿಸಬಹುದಾಗಿದೆ.
ಹೆಚ್ಚಿನ ಮಾಹಿತಿಗಾಗಿ ಸಂಬಂಧಿಸಿದ ತಾಲೂಕು ಮೀನುಗಾರಿಕೆ ಸಹಾಯಕ ನಿರ್ದೇಶಕರ ಕಚೇರಿ ಸಂಪರ್ಕಿಸಬಹುದಾಗಿದೆ. ಚಿತ್ರದುರ್ಗ ತಾಲೂಕು ಆಶಾ (7353442282), ಹೊಸದುರ್ಗ ಮತ್ತು ಹೊಳಲ್ಕೆರೆ ತಾಲೂಕು. ಎನ್. ಮಂಜುನಾಥ್ (7022933310)
ಹಿರಿಯೂರು ತಾಲೂಕು ಶ್ರೀನಿವಾಸ್ (9972010433), ಚಳ್ಳಕೆರೆ ಮತ್ತು ಮೊಳಕಾಲ್ಕುರು ತಾಲೂಕು ಜಿ. ತುಳಸಿದಾಸ್ (9342187356) ಅವರನ್ನು ಸಂಪರ್ಕಿಸುವಂತೆ ಮೀನುಗಾರಿಕೆ ಇಲಾಖೆ ಉಪನಿರ್ದೇಶಕರು ಪ್ರಕಟಣೆಯಲ್ಲಿ ಕೋರಿದ್ದಾರೆ.
Share your comments