2020-21ನೇ ಸಾಲಿನಲ್ಲಿ ಮೆಟ್ರಿಕ್ ನಂತರ ವಿದ್ಯಾರ್ಥಿ ನಿಲಯಗಳಿಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ. ಹೊಸ ವಿದ್ಯಾರ್ಥಿಗಳು ವಿದ್ಯಾರ್ಥಿ ನಿಲಯದ ಪ್ರವೇಶಕ್ಕೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 10-02-2021.
ವಿದ್ಯಾರ್ಥಿ ಸಲ್ಲಿಸುವ ಅರ್ಜಿಯನ್ನು ವಿದ್ಯಾರ್ಥಿಯು ವ್ಯಾಸಂಗ ಮಾಡುತ್ತಿರುವ ಕಾಲೇಜಿನ ಪ್ರಾಂಶುಪಾಲರಿಂದ ದೃಡೀಕರಿಸಿ,ದಾಖಲೆಗಳೊಂದಿಗೆ ಸಂಬಂಧಪಟ್ಟ ತಾಲ್ಲೂಕು ಹಿಂದುಳಿದ ವರ್ಗಗಳ ಕಛೇರಿಗೆ ಸಲ್ಲಿಸಲು ಕೊನೆಯ ದಿನಾಂಕ : 12-02-2021
ಆಯ್ಕೆಯಾದ ವಿದ್ಯಾರ್ಥಿಗಳು, ವಿದ್ಯಾರ್ಥಿ ನಿಲಯಕ್ಕೆ ದಿನಾಂಕ:18-02-2021 ರಿಂದ 25-02-2021 ರೊಳಗೆ ಪ್ರವೇಶ ಪಡೆಯಬೇಕು.
ಅರ್ಹತೆಗಳು: SC / ST / C - 1 / 2A / 2B / 3A / 3B ಕೆಟಗೇರಿಗೆ ಸೇರಿದ ಅಭ್ಯರ್ಥಿಗಳು ಅರ್ಜಿ ಹಾಕಬಹುದು. ವಾರ್ಷಿಕ ಆದಾಯ 2.5 ಲಕ್ಷದ ಒಳಗಡೆ ಇರಬೇಕು. ಈದು SC/ST/C-1 ಕೆಟಗೇರಿಯವರು 1ಲಕ್ಷದ ಒಳಗಿರಬೇಕು.
ವಿದ್ಯಾರ್ಥಿಯು ಕನಿಷ್ಠ ಹತ್ತನೇ ತರಗತಿ ಪೂರ್ಣಗೊಂಡಿರ ಬೇಕು. ಅರ್ಜಿ ಹಾಕಲು ಬಯಸುವವರು ತಮ್ಮ ಆಧಾರ್ ಕಾರ್ಡ್,ಬ್ಯಾಂಕ್ ಪಾಸ್ ಬುಕ್,ಜಾತಿ ಮತ್ತು ಆದಾಯ ಪ್ರಮಾಣ ಪತ್ರ, ಬ್ಯಾಂಕ್ ಪಾಸ್ ಬುಕ್ ಆಧಾರ್ ಕಾರ್ಡ್ ನೊಂದಿಗೆ ಲಿಂಕ್ ಆಗಿರಲೇಬೇಕು.ಮತ್ತು ಹತ್ತನೇ ತರಗತಿಯ ಅಂಕಪಟ್ಟಿ. ಮತ್ತು ವಿದ್ಯಾರ್ಥಿಯ ಹಿಂದಿನ ವರ್ಷದ ಅಂಕಪಟ್ಟಿ ಮತ್ತು ವಿದ್ಯಾರ್ಥಿಯ ಫೋಟೋ,ಟ್ರಾನ್ಸ್ಫರ್ ಸರ್ಟಿಫಿಕೇಟ್, ಈ ಎಲ್ಲ ದಾಖಲೆಗಳೊಂದಿಗೆ ತಾವು ಈ ಕ ವೆಬ್ಸೈಟ್ ಲಿಂಕ್ https://karepass.cgg.gov.in/ ವೆಬ್ಸೈಟ್ನಲ್ಲಿ ಅರ್ಜಿಯನ್ನು ಸಲ್ಲಿಸಿ ಬಂದಿರುವ ಫಾರ್ಮನ್ನು ತೆಗೆದುಕೊಂಡು ತಮ್ಮ ಹತ್ತಿರದ ವಿದ್ಯಾರ್ಥಿ ನಿಲಯಕ್ಕೆ ಹೋಗಿ ಆ ಫಾರ್ಮನ್ನು ಕೊಡಬೇಕು.
Share your comments