ಧಾರವಾಡ : ಕರ್ನಾಟಕ ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮದಿಂದ ಕರ್ನಾಟಕ ಸಹಕಾರ ಕುರಿ ಮತ್ತು ಮೇಕೆಗಳ ಸಾಕಾಣಿಕೆದಾರರ ಸಂಘಗಳ ಮಹಾಮಂಡಳಗಳೊಂದಿಗೆ ಸಂಯೋಜನೆಗೊಂಡಿರುವ ಒಟ್ಟು ಏಳು ಸಂಘಗಳ ಸದಸ್ಯರುಗಳಲ್ಲಿ ಅಮೃತ ಸ್ವಾಭಿಮಾನಿ ಕುರಿಗಾಹಿ ಯೋಜನೆಯಡಿಯಲ್ಲಿ (20+1) ಕುರಿ, ಮೇಕೆ ಸಾಕಾಣಿಕೆಗಾಗಿ ಸಾಲ ಮತ್ತು ಸಹಾಯಧನ ನೀಡಲು ಅರ್ಜಿ ಆಹ್ವಾನಿಸಲಾಗಿದೆ.
ಅರ್ಜಿ ಸಲ್ಲಿಸಲು ಆಸಕ್ತ ಕುರಿಗಾಹಿಗಳು ಜುಲೈ 24 ರೊಳಗಾಗಿ ಸಂಘದ ಅಧ್ಯಕ್ಷರು, ಕಾರ್ಯದರ್ಶಿಗಳ ಮೂಲಕ ನಿಗದಿತ ನಮೂನೆಯಲ್ಲಿ ಅರ್ಜಿಯನ್ನು ದಾಖಲಾತಿಗಳೊಂದಿಗೆ ನಿಗಮದ ಕಛೇರಿಗೆ ಸಲ್ಲಿಸಬಹುದು ಎಂದು ಕರ್ನಾಟಕ ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮದ ಸಹಾಯಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಅಮೃತ ಕುರಿಗಾಹಿ ಯೋಜನೆ
ಕುರಿ ಮತ್ತು ಉಣ್ಣೆ ಉತ್ಪಾದಕರ ಸಹಕಾರ ಸಂಘದ ಕುರಿಗಾರರಿಗೆ ಸರ್ಕಾರ ಅಮೃತ ಸ್ವಾಭಿಮಾನಿ ಕುರಿಗಾಹಿ ಯೋಜನೆಯಡಿ 20 ಕುರಿ ಒಂದು ಮೇಕೆಯನ್ನು ಗಿಫ್ಟ್ ನೀಡಲಿದೆ. ಇದಕ್ಕಾಗಿ 324 ಕೋಟಿ ರೂ ವೆಚ್ಚದಲ್ಲಿ ಯೋಜನೆ ಜಾರಿಗೆ ತರುತ್ತಿದೆ.
ಕುರಿ ಮತ್ತು ಮೇಕೆ ಸಾಕಣೆದಾರರನ್ನು ಪ್ರೋತ್ಸಾಹಿಸಲು 'ಅಮೃತ ಸ್ವಾಭಿಮಾನಿ ಕುರಿಗಾಹಿ ಯೋಜನೆ'ಯಡಿ ರಾಜ್ಯ ಸರಕಾರ ಈ ಯೋಜನೆ ಜಾರಿಗೆ ತರುತ್ತಿದ್ದು, ಕಳೆದ ವರ್ಷ ನವೆಂಬರ್ನಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಘೋಷಿಸಿದ್ದರು.
ಏನಿದು ಯೋಜನೆ? ಯಾರೆಲ್ಲ ಅರ್ಹರು?
ರಾಜ್ಯದ 20 ಸಾವಿರ ಕುರಿಗಾಹಿಗಳಿಗೆ ತಲಾ 1.75 ಲಕ್ಷ ರೂ. ಘಟಕ ವೆಚ್ಚದಲ್ಲಿಅನುಷ್ಠಾನಗೊಳಿಸಲು ಸರಕಾರ ಆಡಳಿತಾತ್ಮಕ ಅನುಮೋದನೆ ನೀಡಿದೆ.
ಇದಕ್ಕಾಗಿ ಒಟ್ಟಾರೆ 324 ಕೋಟಿ ರೂ. ವೆಚ್ಚದಲ್ಲಿಅಗತ್ಯ ಮಾರ್ಗಸೂಚಿಯೊಂದಿಗೆ ಯೋಜನೆಯನ್ನು ಅನುಷ್ಠಾನಗೊಳಿಸಲು ಆದೇಶಿಸಲಾಗಿದೆ.
ಯೋಜನೆಯ ಫಲಾನುಭವಿಯಾಗಲು ಕುರಿ ಮತ್ತು ಉಣ್ಣೆ ಉತ್ಪಾದಕರ ಸಹಕಾರ ಸಂಘಗಳಲ್ಲಿ ಸದಸ್ಯರಾಗಿರಬೇಕು.
ಹೋಬಳಿ ಮಟ್ಟದಲ್ಲಿ ಪ್ರತಿ 15 ಸಾವಿರ ಕುರಿ-ಮೇಕೆಗಳಿಗೆ ಒಂದು ಸಹಕಾರ ಸಂಘದಂತೆ ಇದ್ದು, ಸದಸ್ಯರಾದ ಕುರಿಗಾರರು ಮಾತ್ರ ಕುರಿ-ಮೇಕೆ ಪಡೆಯಲು ಅರ್ಹರು.
Share your comments