1. ಸುದ್ದಿಗಳು

ಪಾಕಿಸ್ತಾನದ ಪಂಜಾಬ್‌ ಪ್ರಾಂತ್ಯದಲ್ಲಿ ಭೀಕರ ದುರಂತ: ಬಸ್‌ಗೆ ರೈಲು ಡಿಕ್ಕಿ, 19 ಸಿಖ್‌ ಯಾತ್ರಿಕರ ಸಾವು

ಸಿಖ್ ಯಾತ್ರಾರ್ಥಿಗಳನ್ನು ಕರೆದೊಯ್ಯುತ್ತಿದ್ದ ವ್ಯಾನ್ ಮಾನವರಹಿತ ರೈಲ್ವೆ ಕ್ರಾಸಿಂಗ್ ನಲ್ಲಿ ರೈಲಿಗೆ ಡಿಕ್ಕಿ ಹೊಡೆದ ಪರಿಣಾಮ 19 ಜನ ಸ್ಥಳದಲ್ಲಿಯೇ  ದಾರುಣವಾಗಿ ಮೃತಪಟ್ಟ ಘಟನೆ ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದ ಶೇಕುಪುರ್ ಸಮೀಪದ ಶುಕ್ರವಾರ ಮಧ್ಯಾಹ್ನ  ನಡೆದಿದೆ . ಈ ಘಟನೆಯಲ್ಲಿ 8 ಜನ ಗಂಭೀರ ಗಾಯಗೊಂಡಿದ್ದು, ಗಾಯಾಳುಗಳನ್ನು ಹತ್ತಿರದ ಆಸ್ಪತ್ರೆಗೆ ದಾಖಲಿಸಲಾಗಿದೆ.

ರೈಲು ಕರಾಚಿಯಿಂದ ಲಾಹೋರ್‌ನತ್ತ ತೆರಳುತ್ತಿದ್ದಾಗ ಬಸ್ ಅಲ್ಲಿ ನುಗ್ಗಿತು. ಯಾವುದೇ ಬ್ಯಾರಿಯರ್​​​ ಗಳಿಲ್ಲದ ರೈಲ್ವೆ ಕ್ರಾಸಿಂಗ್‌ನಲ್ಲಿ ಈ ಅಪಘಾತ ಸಂಭವಿಸಿದೆ. ಗಾಯಾಳುಗಳನ್ನು ಹತ್ತಿರದ ಆಸ್ಪತ್ರೆಗೆ ದಾಖಲಿಸಲಾಗಿದೆ.
ಸಿಖ್ ಯಾತ್ರಾರ್ಥಿಗಳು ನಮ್​​ಕನಾ ಸಾಹಿಬ್‌ ಧಾರ್ಮಿಕ ಸ್ಥಳದಿಂದ ಹಿಂದಿರುಗುತ್ತಿದ್ದರು. ವರದಿಯ ಪ್ರಕಾರ, ವ್ಯಾನ್ ನಲ್ಲಿ 27 ಮಂದಿ ಯಾತ್ರಾರ್ಥಗಳು ಪ್ರಯಾಣಿಸುತ್ತಿದ್ದರು. ಸಾವಿನ ಸಂಖ್ಯೆ ಹೆಚ್ಚಳವಾಗುವ ಸಾಧ್ಯತೆಯಿದೆ.

Published On: 04 July 2020, 11:38 AM English Summary: At least 19 Sikh pilgrims killed as passenger vehicle rams into Shah Hussain Express train in Pakistan

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.