1. ಸುದ್ದಿಗಳು

ಕೊರೋನಾ ಸಂಕಷ್ಟದಲ್ಲಿಯೂ ಟ್ರ್ಯಾಕ್ಟರ್ (Tractor) ಮಾರಾಟದಲ್ಲಿ ಶೇ. 10.86 ರಷ್ಟು ಏರಿಕೆ

Tractor
Tractor

ದೇಶದಲ್ಲಿ ಹರಡುತ್ತಿರುವ ಕೊರೋನಾ ನಿಯಂತ್ರಣಕ್ಕೆ ವಿಧಿಸಿದ ಲಾಕ್‌ಡೌನ್‌ನಿಂದ ಎಲ್ಲ ವಲಯಗಳ ಮೇಲೆ ಭಾರೀ ಪರಿಣಾಮ ಬೀರಿದೆ. ಇದರಿಂದಾಗಿ ಆರ್ಥಿಕ ಮಟ್ಟ ಕುಸಿದಿದೆ. ವ್ಯಾಪಾರ ವಹಿವಾಟು ಸಹ ಕ್ಷೀಣಿಸಿದೆ. ಕೊರೋನಾ ವೈರಸ್ ಪರಿಣಾಮದಿಂದಾಗಿ ಹೊಸ ವಾಹನ ಮಾರಾಟದಲ್ಲಿಯೂ ತೀವ್ರ ಇಳಿಕೆಯಾಗಿದೆ. ಲಾಕ್‌ಡೌನ್ ತೆರವುಗೊಂಡ ನಂತರವೂ ನಗರಗಳಲ್ಲಿ ವಾಹನ ಮಾರಾಟ ಪ್ರಮಾಣ  ಕುಸಿತ ಕಂಡಿದೆ.

 ಕೊರೋನಾ ಬಿಕ್ಕಟ್ಟಿನ ಕಾರಣ ಜೂನ್‌ನಲ್ಲಿ ವಾಹನಗಳ ನೋಂದಣಿ ಪ್ರಮಾಣ ಶೇಕಡ 42ರಷ್ಟು (June Retail Registration) ಕುಸಿತವಾಗಿದೆ ಎಂದು ಫೆಡರೇಷನ್ ಆಫ್ ಆಟೋಮೊಬೈಲ್ ಡೀಲರ್ಸ್ ಅಸೋಸಿಯೇಷನ್ಸ್   (FADA) ಹೇಳಿದೆ.  ಎಲ್ಲಾ ರೀತಿಯ ವಾಹನಗಳ ನೋಂದಣಿ ಕಡಿಮೆಯಾಗಿರಬಹುದು ಆದರೆ ಟ್ರ್ಯಾಕ್ಟರ್ ಗಳ ನೋಂದಣಿ ಮಾತ್ರ ಶೇ.  10.86 ರಷ್ಟು ಏರಿಕೆಯಾಗಿದೆ. ಏಕೆಂದರೆ ಲಾಕ್ಡೌನ್ ದಿಂದಾಗಿ  ಕೃಷಿ ಚಟುವಟಿಕೆಗಳ ಮೇಲೆ ಯಾವುದೇ ಪರಿಣಾಮ ಬೀರಿಲ್ಲ.  ಲಾಕ್ಡೌನ್ ಹೇರಿದ್ದರಿಂದ ನಗರ ಪ್ರದೇಶಗಳಿಗೆ ಗುಳೆ ಹೋಗಿದ್ದವರೆಲ್ಲ ತಮ್ಮ ಗ್ರಾಮಗಳಿಗೆ ಬಂದು ಕೃಷಿ ಚಟುವಟಿಕೆಯಲ್ಲಿ ತೊಡಗಿದ್ದಾರೆ. ಇದಕ್ಕೆ ಪೂರಕವೆಂಬಂತೆ ಪ್ರಸಕ್ತ ವರ್ಷ ಉತ್ತಮ ಮುಂಗಾರು (Heavy monsoon) ಆಗಿದ್ದರಿಂದ ರೈತರು ಟ್ರ್ಯಾಕ್ಟರ್ ಖರೀದಿ ಮಾಡುವಲ್ಲಿ ಹೆಚ್ಚು ಆಸಕ್ತಿವಹಿಸಿದ್ದರಿಂದ ಕೊರೋನಾ ಸಂಕಷ್ಟದಲ್ಲಿಯೂ ಟ್ರ್ಯಾಕ್ಟರ್ (Tractor) ಮಾರಾಟದಲ್ಲಿ ಶೇ. 10.86 ರಷ್ಟು ಏರಿಕೆಯಾಗಿದೆ.

2020ರ ಜೂನ್‌ನಲ್ಲಿ ವಾಹನ ನೋಂದಣಿ ವಿವರವನ್ನು ಎಫ್‌ಎಡಿಎ ಬಿಡುಗಡೆ ಮಾಡಿದೆ. ದ್ವಿಚಕ್ರ ವಾಹನಗಳ (two-wheeler registrations) ನೋಂದಣಿ ಶೇ. 40.92 ಕುಸಿತವಾಗಿದ್ದು, ತ್ರಿಚಕ್ರ ವಾಹನಗಳ ನೋಂದಣಿ ಶೇ. 75.43, ನಾಲ್ಕು ಚಕ್ರದ ಸಿವಿ ಶೇ.83.83 ಹಾಗೂ ಪಿವಿ ಶೇ.38.34ರಷ್ಟು ನೋಂದಣಿಯಲ್ಲಿ ಕುಸಿತ ದಾಖಲಿಸಿವೆ. ಆದರೆ ಟ್ರ್ಯಾ ಕ್ಟರ್‌ಗಳ ನೋಂದಣಿಯಲ್ಲಿ ಏರಿಕೆ ಕಂಡು ಬಂದಿದ್ದು, ಶೇ.10.86 ಪ್ರಗತಿ ದಾಖಲಿಸಿದೆ. ಮೇ ತಿಂಗಳಿಗೆ ಹೋಲಿಸಿದರೆ  ಲಾಕ್‌ಡೌನ್‌ ಅನ್‌ಲಾಕ್ -1 ಪ್ರಕ್ರಿಯೆಯಿಂದಾಗಿ ಜೂನ್ ನಲ್ಲಿ ವಾಹನಗಳ ನೋಂದಣಿ ಪ್ರಮಾಣ ಸ್ವಲ್ಪ ಹೆಚ್ಚಿದೆ ಎಂದು ಎಫ್‌ಎಡಿಎ ತಿಳಿಸಿದೆ.

ವಾಹನಗಳ ನೋಂದಣಿ (Vehicle registration):

2020ರ ಜೂನ್ ಅವಧಿಯಲ್ಲಿ ಒಟ್ಟು 1,26,417 ಪ್ರಯಾಣಿಕರ ವಾಹನಗಳು ಮಾರಾಟಗೊಂಡಿದ್ದು, ವಾಣಿಜ್ಯ ಬಳಕೆಯ ವಾಹನ (commercial vehicles) ಮಾರಾಟವು ಸಹ ಗಣನೀಯವಾಗಿ ಕುಸಿತ ಕಂಡಿದೆ. 2019ರ ಜೂನ್ ಅವಧಿಯಲ್ಲಿ 64,976 ಯುನಿಟ್ ಮಾರಾಟವಾಗಿದ್ದ ವಾಣಿಜ್ಯ ವಾಹನಗಳು 2020ರ ಜೂನ್ ಅವಧಿಯಲ್ಲಿ ಕೇವಲ 10 ಸಾವಿರ ಯುನಿಟ್ ಮಾತ್ರವೇ ಮಾರಾಟಗೊಂಡಿವೆ.  ಕಾರು ಮತ್ತು ದ್ವಿಚಕ್ರ ವಾಹನ ಮಾರಾಟವು ಸಹ ಭಾರೀ ಪ್ರಮಾಣದಲ್ಲಿ ಕುಸಿತ ಕಂಡಿದೆ.

2019ರ ಮೇ ಮತ್ತು ಜೂನ್ ಅವಧಿಯ ಟ್ರ್ಯಾಕ್ಟರ್ ಮಾರಾಟಗಿಂತಲೂ 2020ರ ಮೇ ಮತ್ತು ಜೂನ್ ಅವಧಿಯ ಟ್ರ್ಯಾಕ್ಟರ್ ಮಾರಾಟವು ಅಧಿಕ ಬೇಡಿಕೆಯೊಂದಿಗೆ ಮುಂಚೂಣಿಯಲ್ಲಿದ್ದು, 2020ರ ಜೂನ್ ಅವಧಿಯಲ್ಲಿ ಒಟ್ಟು 45,358 ಯುನಿಟ್ ಮಾರಾಟದೊಂದಿಗೆ ಶೇ.10.86ರಷ್ಟು ಕಳೆದ ವರ್ಷಕ್ಕಿಂತಲೂ ಹೆಚ್ಚು ಮಾರಾಟಗೊಂಡಿವೆ.

ಹಳ್ಳಿಗಳಿಗೆ ವಾಪಸ್ ಕೃಷಿಯಲ್ಲಿ ಬದಲಾವಣೆ (Return to village):

ನಗರಗಳಲ್ಲಿ ನೆಲೆಸಿದ್ದ ಗ್ರಾಮೀಣ ಪ್ರದೇಶಗಳ ಬಹಳಷ್ಟು ಜನರು ಕೊರೊನಾದಿಂದಾಗಿ ಉಂಟಾದ ಭಿನ್ನ ಪರಿಣಾಮಗಳ ಹಿನ್ನೆಲೆಯಲ್ಲಿ ಹಳ್ಳಿಗಳಿಗೆ ವಾಪಸಾಗಿದ್ದಾರೆ. ಹೀಗೆ ವಾಪಸಾಗಿರುವವರು ತಮ್ಮ ಹೊಲಗಳಲ್ಲಿ ಕೃಷಿ ಆರಂಭಿಸಲು ಮನಸ್ಸು ಮಾಡುತ್ತಿದ್ದರಿಂದ ಟ್ರ್ಯಾಕ್ಟರ್ ಬೇಡಿಕೆ ಹೆಚ್ಚಾಗಿದೆ.

Published On: 23 July 2020, 09:50 AM English Summary: Auto retail sales decline 42% tractor sales only silver lining

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.