ಮನೆ, ಕಾರ್ ಖರೀದಿ ಮಾಡುವವರಿಗೆ ಬ್ಯಾಂಕ್ ಆಫ್ ಬರೋಡಾ ವತಿಯದ ಸಾಲ ಮೇಳ ಆಯೋಜಿಸಲಾಗಿದೆ. ಹೌದು, ಸಾಲ ಸೌಲಭ್ಯಕ್ಕಾಗಿ ಈಗ ಬ್ಯಾಂಕಿಗೆ ಹೋಗಬೇಕಾಗಿಲ್ಲ. ಬ್ಯಾಂಕಿನವರೇ ಸಾಲ ಮೇಳ ಆಯೋಜಿಸಿ ಅವಶ್ಯಕತೆಯಿದ್ದವರಿಗೆ ಗೃಹ, ಕಾರ್ ಖರೀದಿಗೆ ಸಾಲ ನೀಡುವುದು.
ಬಾಗಲಕೋಟೆ ಜಿಲ್ಲೆಯ ನವನಗರದ ಬ್ಯಾಂಕ್ ಆಫ್ ಬರೋಡಾ ಶಾಖೆಯಲ್ಲಿ ಫೆ. 12ರಿಂದ 14ರವರೆಗೆ ಮೆಗಾ ಗೃಹ ಹಾಗೂ ಕಾರು ಸಾಲದ ಮೇಳ ಹಮ್ಮಿಕೊಳ್ಳಲಾಗಿದೆ.
ದಾಖಲಾತಿಗಳಿಗಾಗಿ ಈಗ ಪರದಾಡುವ ಅವಶ್ಯಕತೆಯಿಲ್ಲ. ‘ಅನಗತ್ಯವಾದ ದಾಖಲೆಗಳನ್ನು ಕೇಳುವ ಕಿರಿಕಿರಿ ಇಲ್ಲದೇ ಸುಲಭವಾಗಿ ಸಾಲ ಮಂಜೂರಾತಿಗೆ ಈ ಮೇಳ ವೇದಿಕೆ ಆಗಲಿದ್ದು, ಸಾರ್ವಜನಿಕರು ಇದರ ಲಾಭ ಪಡೆಯಬೇಕು’ ಎಂದು ಬ್ಯಾಂಕಿನ ಕಲಬುರ್ಗಿ ಪ್ರಾದೇಶಿಕ ಕೇಂದ್ರದ ಮುಖ್ಯಸ್ಥ ಸನೀಲ್‌ಕುಮಾರ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
‘ಮೇಳದಲ್ಲಿ ಸಾಲ ನೀಡಲು ಬಾಗಲಕೋಟೆಯ ಪ್ರಮುಖ ಬಿಲ್ಡರ್ಸ್ ಮತ್ತು ಡೆವಲಪರ್ಸ್ ಹಾಗೂ ಕಾರು ಡೀಲರ್‌ಗಳು ಭಾಗಿಯಾಗಲಿದ್ದಾರೆ. ಕನಿಷ್ಠ ದಾಖಲೆಗಳನ್ನು ಪಡೆದು ಸ್ಥಳದಲ್ಲಿಯೇ ಸಾಲ ಮಂಜೂರಾತಿ ಪತ್ರ ನೀಡಲಾಗುವುದು. ಸ್ಪರ್ಧಾತ್ಮಕ ಬಡ್ಡಿ ದರದಲ್ಲಿ ಸಾಲ ದೊರೆಯಲಿದೆ. ಗೃಹ ಸಾಲ ಶೇ 6.85ರಿಂದ ಹಾಗೂ ಕಾರು ಸಾಲ ಶೇ 7.15ರ ಬಡ್ಡಿ ದರದಲ್ಲಿ ದೊರೆಯಲಿದೆ. ಗ್ರಾಹಕರ ನೆರವಿಗೆ ಇರುವ ವಿವಿಧ ಯೋಜನೆಗಳ ಬಗ್ಗೆಯೂ ಮೇಳದಲ್ಲಿ ಮಾಹಿತಿ ನೀಡಲಾಗುವುದು’ ಹೇಳಿದರು.
‘ಕಲಬುರಗಿ ಪ್ರಾದೇಶಿಕ ವಲಯ ಬಾಗಲಕೋಟೆ ಸೇರಿದಂತೆ ಏಳು ಜಿಲ್ಲೆಗಳನ್ನು ಒಳಗೊಂಡಿದ್ದು, 54 ಶಾಖೆಗಳನ್ನು ಹೊಂದಿದೆ. ಈ ಪ್ರಾದೇಶಿಕ ಕೇಂದ್ರದ ವಹಿವಾಟು 3,500 ಕೋಟಿ ಇದೆ. ಕೃಷಿ ಕ್ಷೇತ್ರದ ಹಾಗೂ ರಿಟೇಲ್ ಸಾಲದ ಆದ್ಯತಾ ವಲಯವಾಗಿ ಪರಿಣಮಿಸಿದೆ. ಹೆಚ್ಚಿನ ಮಾಹಿತಿಗಾಗಿ ಮೊಬೈಲ್ ಸಂಖ್ಯೆ 99004 85024 ಸಂಪರ್ಕಿಸಬಹುದು ಎಂದು ತಿಳಿಸಿದ್ದಾರೆ.
ಇನ್ನೇಕೆ ತಡ ಕಾರ್ ಹಾಗೂ ಮನೆ ಕಟ್ಟಲು ಸಾಲಬೇಕಾದರೆ ಸಾಲಮೇಳದಲ್ಲಿ ಹೋಗಿ ಯಾವುದಕ್ಕೆ ಸಾಲ ಬೇಕೆಂಬುದನ್ನು ತಿಳಿಸಿ ಸಾಲ ಸೌಲಭ್ಯ ಪಡೆದುಕೊಳ್ಳಬಹುದು.
Share your comments