ತಮಿಳುನಾಡಿನಲ್ಲಿನ ಮೀನುಗಾರರು ಭಿನ್ನವಾದ ಪ್ರತಿಭಟನೆ ಮಾಡಲು ಮುಂದಾಗಿದ್ದಾರೆ. ಇದೀಗ ಮೀನುಗಾರರ ಈ ವಿಷಯವು ಹೆಚ್ಚು ಚರ್ಚೆ ಆಗುತ್ತಿದೆ. ಆಗಿದ್ದರೆ, ಮೀನುಗಾರರು ಯಾವ ಕಾರಣಕ್ಕಾಗಿ ಪ್ರತಿಭಟನೆ ಮಾಡುತ್ತಿದ್ದಾರೆ.
ಹವಾಯಿ ಚಪ್ಪಲಿ ಧರಿಸಿದ ಸಾಮಾನ್ಯರು ವಿಮಾನದಲ್ಲಿ ಪ್ರಯಾಣಿಸಲು ಶ್ರಮ: ಮೋದಿ!
ಅದರಲ್ಲೂ ಭಿಕ್ಷಾಟನೆ ಮಾಡಿ ಸರ್ಕಾರದ ವಿರುದ್ಧ ಅಸಮಾಧಾನ ತೋರಿಸುತ್ತಿರುವುದೇಕೆ ಎನ್ನುವ ವಿವರಣೆ ಇಲ್ಲಿದೆ.
ತಮಿಳುನಾಡಿನಲ್ಲಿ ಮೀನುಗಾರಿಕೆಯಲ್ಲಿನ ಅತಿಕ್ರಮಣಗಳ ಬಗ್ಗೆ ಮೀನುಗಾರಿಕೆ ಇಲಾಖೆ ಕ್ರಮಕೈಗೊಳ್ಳದ ಹಿನ್ನೆಲೆಯಲ್ಲಿ ಅಲ್ಲಿನ ಮೀನುಗಾಗರರು ಅಸಮಾಧಾನಗೊಂಡಿದ್ದಾರೆ.
ಹೀಗಾಗಿ, ದೋಣಿಗಳ ಖರೀದಿಗೆ ಹಣ ಸಂಗ್ರಹಿಸಲು ಭಿಕ್ಷಾಟನೆ ಅಭಿಯಾನದಲ್ಲಿ ತೊಡಗುವುದಾಗಿ ರಾಮೇಶ್ವರಂ ಮೀನುಗಾರರ ಸಂಘದ ಪ್ರಕಟಣೆ ತಿಳಿಸಿದೆ.
PF ಭವಿಷ್ಯ ನಿಧಿ ಪಿಂಚಣಿಯಲ್ಲಿ ಮಹತ್ವದ ಬದಲಾವಣೆ!
ಸಂಘದ ಪ್ರಕಾರ, ಚರ್ಚ್‌ಗಳು, ದೇವಸ್ಥಾನಗಳು ಮತ್ತು ಮಸೀದಿಗಳ ಮುಂದೆ ಈ ಧಾರ್ಮಿಕ ಪ್ರತಿಭಟನೆಯಲ್ಲಿ ಭಾಗವಹಿಸುವ ಮೀನುಗಾರರು ಸಂಗ್ರಹಿಸಿದ
ಹಣವನ್ನು ರಾಮನಾಥಪುರಂ ಜಿಲ್ಲಾಧಿಕಾರಿಗಳಿಗೆ ದೋಣಿಗಳನ್ನು ಖರೀದಿಸಲು ಹಸ್ತಾಂತರಿಸಲಾಗುವುದು ಎಂದಿದ್ದಾರೆ.
ಸಂಘದ ಜಿಲ್ಲಾ ಕಾರ್ಯದರ್ಶಿ ಎಂ.ಕರುಣಾಮೂರ್ತಿ ಮಾತನಾಡಿ, ತಮಿಳುನಾಡು ಕಡಲ ಮೀನುಗಾರಿಕಾ ಕಾಯ್ದೆಯ ಬಹುತೇಕ ನಿಯಮಗಳನ್ನು ನಾಡದೋಣಿ ಮಾಲೀಕರು,
ಕಾರ್ಮಿಕರು ಉಲ್ಲಂಘಿಸುತ್ತಿದ್ದಾರೆ ಎಂದು ಸಿಐಟಿಯು ಸಂಘ ದೂರು ನೀಡಿದರೂ ಮೀನುಗಾರಿಕೆ ಇಲಾಖೆ ಅಧಿಕಾರಿಗಳು ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ.
PM Kisan ಪಿ.ಎಂ ಕಿಸಾನ್ 13ನೇ ಕಂತು: 16,000 ಕೋಟಿ ರೂ. ಬಿಡುಗಡೆ ಮಾಡಿದ ಪ್ರಧಾನಿ ನರೇಂದ್ರ ಮೋದಿ
ಈ ಉಲ್ಲಂಘನೆಗಳ ಮೇಲೆ ನಿಗಾ ಇಡಲು ಗಸ್ತು ದೋಣಿ ವಿಭಾಗದಲ್ಲಿ ಸೂಕ್ತ ಬೋಟ್‌ಗಳಿಲ್ಲದಿರುವುದು ದೊಡ್ಡ ಅಡಚಣೆಯಾಗಿದೆ ಎಂದು ಅವರು ಹೇಳಿದರು.
ರಾಮೇಶ್ವರಂನಲ್ಲಿರುವ ಓಲೈಕುಡ ಚರ್ಚ್ ಮತ್ತು ಮೀನುಗಾರಿಕೆ ಇಲಾಖೆ ಕಚೇರಿ ಎದುರು ಸಂಘವು ಇದೇ ರೀತಿಯ ಪ್ರತಿಭಟನೆ ನಡೆಸುತ್ತಿರುವಾಗ ಗಸ್ತು ದೋಣಿಯನ್ನು ಒದಗಿಸಲಾಯಿತು.
ಆದರೆ, ಇದು ಪ್ರವಾಸಿ ದೋಣಿಯಂತೆ ಕಾಣುತ್ತದೆ.
ಈ ಗಸ್ತು ದೋಣಿ ಉಲ್ಲಂಘನೆಯಲ್ಲಿ ತೊಡಗಿರುವ ಹೆಚ್ಚು ಶಕ್ತಿಶಾಲಿ ಟಗ್‌ಬೋಟ್‌ಗಳಿಗೆ ಹೊಂದಿಕೆಯಾಗುವುದಿಲ್ಲ.
ಇಂತಹ ದೋಣಿಗಳು ಮೀನುಗಾರಿಕೆ ಅಧಿಕಾರಿಗಳ ಜೀವಕ್ಕೆ ಅಪಾಯ ತಂದೊಡ್ಡುತ್ತವೆ, ಎಂದು ಕರುಣಾಮೂರ್ತಿ ಹೇಳಿದರು.
PM Kisan ಇಂದು ಮಧ್ಯಾಹ್ನ ಬೆಳಗಾವಿಯಿಂದ ಪಿ.ಎಂ ಕಿಸಾನ್ ಬಿಡುಗಡೆ ಮಾಡಲಿದ್ದಾರೆ: ಪ್ರಧಾನಿ ಮೋದಿ
ಕಡಲತೀರದಲ್ಲಿ ಉಲ್ಲಂಘನೆಗಳನ್ನು ಮೇಲ್ವಿಚಾರಣೆ ಮಾಡಲು ಯಾವುದೇ ಗಸ್ತು ದೋಣಿಗಳಿಲ್ಲ ಎಂದು ಮೀನುಗಾರಿಕೆ ಅಧಿಕಾರಿಗಳು ಒಪ್ಪಿಕೊಂಡಿದ್ದಾರೆ.
ಇದಲ್ಲದೇ ಬೋಟ್ ನಿರ್ವಹಣೆ, ಇಂಧನ, ನೌಕರರಿಗೆ ವೇತನ ಪಾವತಿಯಂತಹ ಪ್ರಾಯೋಗಿಕ ಸಮಸ್ಯೆಗಳೂ ಇವೆ ಎನ್ನುತ್ತಾರೆ ಅಧಿಕಾರಿಗಳು.
ಅಲ್ಲದೆ, ಉಲ್ಲಂಘಿಸುವವರ ವಿರುದ್ಧದ ದೂರುಗಳನ್ನು ನಿರ್ಲಕ್ಷಿಸಲಾಗುತ್ತದೆ ಎಂಬ ಆರೋಪವನ್ನು ಸಂಘ ತಳ್ಳಿಹಾಕಿದೆ.
Share your comments