ಕೊರೊನಾದಿಂದಾಗಿ ಕಳೆದ ಎರಡು ವರ್ಷಗಳಿಂದ ಸ್ಥಗಿತಗೊಂಡಿದ್ದವ ಬೆಂಗಳೂರಿನ ಲಾಲ್‌ಬಾಗ್ ಫಲಪುಷ್ಪ ಪ್ರದರ್ಶನ ಮತ್ತೆ ಆರಂಭಗೊಳ್ಳಲಿದೆ. ಹೌದು ಕೋವಿಡ್ ಸಾಂಕ್ರಾಮಿಕದಿಂದ ಸ್ಥಗಿತಗೊಂಡಿದ್ದ ಈ ಫ್ಲವರ್ ಶೋವನ್ನು ಇದೇ ಆಗಸ್ಟ್ 5ರಿಂದ ಆರಂಭಿಸಲಾಗುವುದು ಹಾಗೂ ಕೋವಿಡ್ ನಿಯಮಾವಳಿಗಳು ಸಡಿಲವಾಗಿರುವ ಕಾರಣದಿಂದ ಪ್ರತಿ ವರ್ಷಕ್ಕಿಂತಲೂ ಈ ಸಲ ಅದ್ದೂರಿಯಾಗಿ ನಡೆಸಲು ತೋಟಗಾರಿಕಾ ಇಲಾಖೆ ನಿರ್ಧರಿಸಿದೆ.
ನಗರದ ಲಾಲ್‌ಬಾಗ್ ಉದ್ಯಾನದಲ್ಲಿ ಈ ವರ್ಷದ ಸ್ವಾತಂತ್ರೋತ್ಸವದ ಅಂಗವಾಗಿ ಆಯೋಜಿಸುವ ಫ್ಲವರ್ ಶೋ ಅನ್ನು ಸ್ಯಾಂಡಲ್‌ವುಡ್‌ನ ದಿವಗಂತ ನಟ ಪುನೀತ್ ರಾಜಕುಮಾರ್ ಹೆಸರಿನಲ್ಲಿ ಆಯೋಜಿಸಲಾಗುತ್ತಿದೆ. ಈ ಪ್ರದರ್ಶನವನ್ನು ಸಿಎಂ ಬಸವರಾಜ ಬೊಮ್ಮಾಯಿ ಅವರು ಇದೇ ಆಗಸ್ಟ್ 5 ಕ್ಕೆ ಉದ್ಘಾಟಿಸಲಿದ್ದು, ಆಗಸ್ಟ್ 15ರವರೆಗೆ ಲಾಲ್‌ಬಾಗ್ ಉದ್ಯಾನದಲ್ಲಿ ಈ ಶೋ ನಡೆಯಲಿದೆ.
ಕಳೆದ 2 ವರ್ಷಗಳಿಂದ ಕೋವಿಡ್ ಕಾರಣದಿಂದಾಗಿ ಪುಷ್ಪ ಪ್ರದರ್ಶನವನ್ನು ನಿಷೇಧಿಸಲಾಗಿತ್ತು. ಗಣರಾಜ್ಯೋತ್ಸವ ಮತ್ತು ಸ್ವಾತಂತ್ರ್ಯ ದಿನಾಚರಣೆಯಂದು ತೋಟಗಾರಿಕೆ ಇಲಾಖೆಯು ಮೈಸೂರು ತೋಟಗಾರಿಕಾ ಸೊಸೈಟಿಯೊಂದಿಗೆ ಎರಡು ಬಾರಿ ಪುಷ್ಪ ಪ್ರದರ್ಶನವನ್ನು ಆಯೋಜಿಸುತ್ತದೆ.
ಈ ಬಾರಿಯ ಫ್ಲವರ್ ಶೋ ವಿಶೇಷತೆ ಏನು..?
ಈ ಬಾರಿ ಫಲಪುಷ್ಪ ಪ್ರದರ್ಶನದಲ್ಲಿ ದಿವಂಗತ ನಟ ಪುನೀತ್ ರಾಜ್ ಕುಮಾರ್ ಹಾಗೂ ಅವರ ಗಾಜನೂರಿನ ಮನೆ ವಿಶೇಷವಾಗಿದೆ ಎಂದು ಮಾಹಿತಿ ದೊರೆತಿದೆ..
ಟಿಕೆಟ್ ದರದಲ್ಲಿ ಸಿಗುತ್ತಾ ರೀಯಾಯಿತಿ..?
ಇನ್ನು ಈ ಬಾರಿಯ ಫ್ಲವರ್ ಶೋಗೆ ಟಿಕೆಟ್‌ನಲ್ಲಿ ಡಿಸ್ಕೌಂಟ್ ನೀಡುವ ಕುರಿತು ಇನ್ನೇರಡು ದಿನಗಳಲಲ್ಲಿ ಸಭೆ ಮಾಡಿ ನಿರ್ಧಾರ ತೆಗೆದುಕೊಳ್ಳುವುದಾಗಿ ತೋಟಗಾರಿಕಾ ಸಚಿವ ಮುನಿರತ್ನ ತಿಳಿಸಿದ್ದಾರೆ. ಸಾಮಾನ್ಯವಾಗಿ ಈ ಶಾಲಾ ಮಕ್ಕಳಿಗೆ ಫಲಪುಷ್ಪ ಪ್ರದರ್ಶನ ಅಂದ್ರೆ ಸ್ವಲ್ಪ ಹೆಚ್ಚು ಇಷ್ಟ ಪಡುತ್ತಾರೆ.
ಈ ಕಾರಣದಿಂದಾಗಿ ಚಿಕ್ಕ ಮಕ್ಕಳಿಗೆ ಟಿಕೆಟ್ ದರದಲ್ಲಿ ರಿಯಾಯಿತಿ ನೀಡುವ ಬಗ್ಗೆ ಕೂಡ ಚಿಂತನೆ ಮಾಡಿ ನಿರ್ಧಾರಕ್ಕೆ ಬರಲಾಗುವುದು. ಈ ವಿಷಯದ ಕುರಿತು ಕೂಡಾ ಎರಡ್ಮೂರು ದಿನಗಳಲ್ಲಿ ನಿರ್ಧಾರ ಮಾಡುವುದಾಗಿ ಮುನಿರತ್ನ ಹೇಳಿದ್ದಾರೆ. ಎಲ್ಲಕ್ಕಿಂತ ಮಿಗಿಲಾಗಿ ವಿದೇಶದಿಂದಲೂ ಹೂವುಗಳು ಬರುತ್ತಿದ್ದು ಈ ಭಾರಿ ಪ್ರಮುಖ ಆಕರ್ಷಣೆ ಆಗಲಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.
ಇನ್ನು ರಾಜ್ಯದಲ್ಲಿ ಮಹಾಮಳೆ ಉಂಟು ಮಾಡಿರುವ ಸಮಸ್ಯೆಯ ಬಗ್ಗೆ ಪ್ರತಿಕ್ರಿಯಿಸಿದ ಅವರು ರಾಜ್ಯದಲ್ಲಿ ಮಳೆಯಿಂದ ತೋಟಗಾರಿಕೆ ಬೆಳೆಯಲ್ಲಿ ಆಗಿರುವ ನಷ್ಟದ ಬಗ್ಗೆ ಅಧಿಕಾರಿಗಳು ಮಾಹಿತಿ ಕಲೆ ಹಾಕಿ ವರದಿ ತಯಾರಿಸುತ್ತಿದ್ದಾರೆ. ಆ ವರದಿ ಬಂದ ಬಳಿಕ ರೈತರಿಗೆ ಮಾಡಬೇಕಿರುವ ಸಹಾಯವನ್ನು ಸರ್ಕಾರದ ವತಿಯಿಂದ ಮಾಡುತ್ತೇವೆ. ಮತ್ತು ಪ್ರಾಮಾಣಿಕವಾಗಿ ನಾವು ರೈತರ ಜತೆಗೆ ನಿಲ್ಲುತ್ತೇವೆ ಎಂದು ಭರವಸೆ ನೀಡಿದರು.
ಇದನ್ನೂ ಓದಿರಿ: ರೈತರಿಗೆ ಬಂಪರ್ ಸುದ್ದಿ: ಕೇಂದ್ರ ಕೃಷಿ ಸಚಿವರಿಂದ 30,000 ಕೋಟಿ ಕೃಷಿ ಸಾಲ ವಿತರಣೆಗೆ ಗುರಿ! ಯಾರು ಅರ್ಹರು ಗೊತ್ತೆ?
Share your comments