ಸಾರಿಗೆ ಸಂಸ್ಥೆಗಳಲ್ಲಿ ಕಳೆದ 8 ವರುಷಗಳಿಂದ ಅಂದರೆ 2016 ರಲ್ಲಿನ ನೇಮಕಾತಿ ನಂತರ ಯಾವುದೇ ನೇಮಕಾತಿ ಆಗಿರಲಿಲ್ಲ. ಈ ಸಂಬಂಧ 4 ಸಾರಿಗೆ ಸಂಸ್ಥೆಗಳಲ್ಲಿ 2016 ರಿಂದ ಇಲಿಯವರೆಗೆ ಸಿಬ್ಬಂದಿಗಳ ನಿವೃತ್ತಿ ಹಾಗೂ ಇತರೆ ಕಾರಣಗಳಿಂದ 13669 ಖಾಲಿ ಹುದ್ದೆಗಳಿದ್ದವು.
ಈ ಬಗ್ಗೆ 13000 ಚಾಲನಾ ಮತ್ತು ತಾಂತ್ರಿಕ ಸಿಬ್ಬಂದಿಗಳ ನೇಮಕಾತಿಗೆ ಸಾರಿಗೆ ಸಂಸ್ಥೆಗಳಿಗೆ ಅನುಮತಿ ನೀಡುವಂತೆ ಸರ್ಕಾರವನ್ನು ಕೋರಲಾಗಿತ್ತು, ಅದರಂತೆ ಮೊದಲನೇ ಹಂತದಲ್ಲಿ, 6500 ಚಾಲನಾ ಸಿಬ್ಬಂದಿಗಳಿಗೆ ಹಾಗೂ 300 ತಾಂತ್ರಿಕ ಸಿಬ್ಬಂದಿಗಳ ನೇಮಕಾತಿಗೆ ಸರ್ಕಾರದಿಂದ ಅನುಮತಿ ದೊರಕಿದೆ.
ಸಂಖ್ಯೆವಾರು ನೇಮಕಾತಿ ವಿವರ ಈ ಕೆಳಕಂಡಂತಿದೆ.
KSRTC: ಡ್ರೈವರ್ ಕಮ್ ಕಂಡಕ್ಟರ್ : 2000
ತಾಂತ್ರಿಕ ಸಿಬ್ಬಂದಿ : 300
NWKRTC : ಡ್ರೈವರ್ ಕಮ್ ಕಂಡಕ್ಟರ್ 2000
BMTC : ಕಂಡಕ್ಟರ್ 2500
KKRTC ಅಲ್ಲಿ ಈಗಾಗಲೇ 1619 ಚಾಲನಾ ಸಿಬ್ಬಂದಿಗಳ ನೇಮಕಾತಿ ಪ್ರಕ್ರಿಯೆ ಪ್ರಾರಂಭವಾಗಿದ್ದು, 3 ಚಾಲನಾ ಪರೀಕ್ಷೆ ನಡೆಯುತ್ತಿದ್ದು, ಜನವರಿ 2024 ರ ಕೊನೆಯಲ್ಲಿ ಅಂತಿಮ ಆಯ್ಕೆಪಟ್ಟಿ ಬಿಡುಗಡೆಗೊಳಿಸಲಾಗುವುದು.
KKRTC ಯಲ್ಲಿ 300 ಕಂಡಕ್ಟರ್ ಗಳ ನೇಮಕಾತಿಗೆ ಅನುಮತಿ ದೊರಕಿದ್ದು, ಅಧಿಸೂಚನೆ ಹೊರಡಿಸುವ ಹಂತದಲ್ಲಿದೆ.
ಒಟ್ಟಾರೆ 8719 ಚಾಲನಾ ಮತ್ತು ತಾಂತ್ರಿಕ ಸಿಬ್ಬಂದಿಗಳ ನೇಮಕಾತಿಗೆ ಚಾಲನೆ ದೊರಕಿದೆ
Share your comments