ನಿರೀಕ್ಷೆಯಂತೆಯೇ ಈ ಬಾರಿಯ ಕೇಂದ್ರ ಸರ್ಕಾರದ ಬಜೆಟ್‌ನಲ್ಲಿ ಚಿನ್ನ ಬೆಳ್ಳಿ ಸೇರಿದಂತೆ ಕೆಲವು ನಿರ್ದಿಷ್ಟ ವಸ್ತುಗಳ ಬೆಲೆ ಏರಿಕೆ ಆಗಿದೆ.
ಮಧ್ಯಮ ವರ್ಗದವರಿಗೆ ಕೇಂದ್ರ ಸರ್ಕಾರದಿಂದ ಸಿಹಿಸುದ್ದಿ: 7ಲಕ್ಷದ ವರೆಗೆ ಆದಾಯ ತೆರಿಗೆ ವಿನಾಯಿತಿ!
ಸಾಮಾನ್ಯವಾಗಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಬಜೆಟ್ ಮಂಡನೆ ಮಾಡುವ ಸಂದರ್ಭಗಳಲ್ಲಿ ಚಿನ್ನ ಬೆಳ್ಳಿ ಸೇರಿದಂತೆ ಐಷಾರಾಮಿ ವಸ್ತುಗಳ ಬೆಲೆಯಲ್ಲಿ ಏರಿಕೆ ಕಂಡುಬರುತ್ತದೆ.
ಈ ಬಾರಿಯೂ ದೇಶದ ಚಿನ್ನಪ್ರಿಯರಿಗೆ ಬಜೆಟ್‌ನಲ್ಲಿ ಶಾಕ್ ನೀಡಲಾಗಿದೆ. ಚಿನ್ನ, ಬೆಳ್ಳಿ, ವಜ್ರದ ಮೇಲಿನ ಬೆಲೆ ಏರಿಕೆಯಾಗಲಿದೆ.
ಲಿಥೀಯಂ ಬ್ಯಾಟರಿ ಮೇಲಿನ ಸುಂಕ ಕಡಿತ ಮಾಡಲಾಗಿದೆ, ಆದರೆ, ಬಂಗಾರ, ಬೆಳ್ಳಿ, ವಜ್ರ ದುಬಾರಿಯಾಗಲಿದ್ದು. ಸಿಗರೇಟ್, ಪ್ಯಾಟಿನಂ, ರೆಡಿಮೆಡ್ ಬಟ್ಟೆಗಳು ಮತ್ತಷ್ಟು ದುಬಾರಿ ಆಗಲಿದೆ.
ಪೊಲೂಷನ್ ಎನ್ನುವುದಕ್ಕೆ ಪೊಲಿಟಿಕಲ್ ಎಂದ ನಿರ್ಮಲಾ ಸೀತರಾಮನ್ ನಗೆಗಡಲಲ್ಲಿ ತೇಲಿದ ಸಂಸತ್!
ಬ್ಲೆಂಡೆಡ್ ಸಿಎನ್‌ಜಿಗೆ ಕಸ್ಟಮ್ಸ್ ಸುಂಕ ರದ್ದು. ರೆಡಿಮೇಟ್ ಬಟ್ಟೆ ಬೆಲೆ ಏರಿಕೆ, ಅಡುಗೆ ಮನೆಯ ಎಲೆಕ್ಟ್ರಿಕ್ ಚಿಮಣಿಗಳ ಬೆಲೆ ಇಳಿಕೆ. ವಿದೇಶಿ ವಾಹನಗಳ ಆಮದು ಇನ್ಮುಂದೆ ದುಬಾರಿಯಾಗಲಿದೆ.
ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಇಂದು ಸಂಸತ್ತಿನಲ್ಲಿ ಬಜೆಟ್ ಮಂಡಿಸಿದ್ದು, ಭಾರತದ ಆರ್ಥಿಕತೆ ಉತ್ತಮ ರೀತಿಯಲ್ಲಿ ಬೆಳೆಯುತ್ತಿದೆ ಎಂದಿದ್ದಾರೆ.
ಬಜೆಟ್ 2023ರಲ್ಲಿ, ಚಿನ್ನ, ಬೆಳ್ಳಿ ಮತ್ತು ಪ್ಲಾಟಿನಂನಿಂದ ಮಾಡಿದ ಆಮದು ಮಾಡಿದ ಆಭರಣಗಳು ದುಬಾರಿ ಎಂದು ಘೋಷಣೆ ಮಾಡಲಾಗಿದೆಯಾದರೂ, ಭಾರತೀಯ ಮಾರುಕಟ್ಟೆಯಲ್ಲೂ ಚಿನ್ನ ಮತ್ತು ಬೆಳ್ಳಿಯ ಬೆಲೆಯಲ್ಲಿ ಏರಿಕೆಯಾಗಿದೆ.
Budget 2023-2024 ಮೀನುಗಾರರಿಗೆ 6 ಸಾವಿರ ಕೋಟಿ ರೂಪಾಯಿ ಮೀಸಲು, ಕೃಷಿ ವೇಗವರ್ಧಕ ನಿಧಿ ಸ್ಥಾಪನೆ
ಬುಧವಾರ ಫೆಬ್ರವರಿ 1ರ ಬೆಳಗ್ಗೆ ಚಿನ್ನದ ದರದಲ್ಲಿ ಏರಿಕೆಯಾಗಿದೆ. ಇದೇ ವೇಳೆ ಬೆಳ್ಳಿ ದರದಲ್ಲಿ ಏರಿಕೆ ಕಂಡುಬಂದಿದೆ.
24 ಕ್ಯಾರೆಟ್ ನ 10 ಗ್ರಾಂ ಶುದ್ಧ ಚಿನ್ನ 57 ಸಾವಿರ ಮೀರಿ ತಯಾರಾಗಿದ್ದರೆ, 999 ಶುದ್ಧ ಬೆಳ್ಳಿಯ ಬೆಲೆ ಕೆಜಿಗೆ 58 ಸಾವಿರ ರೂಪಾಯಿ ಮೀರಿದೆ.
ಕೇಂದ್ರ ಬಜೆಟ್ 2023 ಈ ಬಾರಿ ಹಲವು ಸಿಹಿ ಹಾಗೂ ಕಹಿ ಸುದ್ದಿಗಳನ್ನು ನೀಡಿದೆ. ಬಹುತೇಕ ಐಷಾರಾಮಿ ವಸ್ತುಗಳ ದರ ಏರಿಕೆಯಾಗಿದೆ. ಇದೇ ವೇಳೆ ಕೆಲವು ದಿನ ಬಳಕೆ ವಸ್ತುಗಳ ಬೆಲೆ ಕಡಿಮೆ ಆಗಿರುವುದು ಸಮಾಧಾನವನ್ನೂ ತಂದಿದೆ.
ಯಾವೆಲ್ಲ ವಸ್ತುಗಳ ಬೆಲೆ ಏರಿಕೆ
- ಸಿಗರೇಟ್ ಮೇಲಿನ ತೆರಿಗೆ ಶೇ. 16ರಷ್ಟು ಏರಿಕೆ. ಪ್ರತಿ ಸಿಗರೇಟ್ ದರ ಶೇ. 1 ರಿಂದ 2 ರಷ್ಟು ಏರಿಕೆ ಆಗಲಿದೆ.
- ಪ್ಲಾಟಿನಂ, ಬಂಗಾರ, ಬೆಳ್ಳಿ, ವಜ್ರ ದುಬಾರಿ
- ಬೈಸಿಕಲ್‌ಗಳ ದರ ಏರಿಕೆ
- ಮಕ್ಕಳ ಆಟದ ಸಾಮಾನುಗಳ ದರ ಏರಿಕೆ
- ವಿದೇಶಿ ವಾಹನಗಳ ದರ ಏರಿಕೆ
ದರ ಇಳಿಕೆ ಈ ರೀತಿ ಇದೆ
- ಮೊಬೈಲ್ ಫೋನ್ ಕ್ಯಾಮರಾ ಲೆನ್ಸ್ ಆಮದು ಸುಂಕ ರದ್ದು ಮಾಡಲಾಗಿದ್ದು, ಮೊಬೈಲ್ ಫೋನ್ಗಳ ದರ ಇಳಿಕೆ
- ಲೀಥಿಯಂ ಅಯಾನ್ ಬ್ಯಾಟರಿಗಳು ಅಗ್ಗ, ಕಸ್ಟಮ್ ಡ್ಯೂಟಿ ಶೇ. 13ರಷ್ಟು ಇಳಿಕೆ
- ಮೊಬೈಲ್, ಕ್ಯಾಮರಾ ಲೆನ್ಸ್, ಟಿವಿ ಬೆಲೆ ಇಳಿಕೆ
- ಬ್ಲೆಂಡೆಡ್ ಸಿಎನ್‌ಜಿಗೆ ಸುಂಕ ಕಡಿತ ಮಾಡಲಾಗಿದೆ
- ಅಡುಗೆ ಮನೆಯ ಎಲೆಕ್ಟ್ರಿಕ್ ಚಿಮಣಿಗಳ ದರ ಇಳಿಕೆ
- ಕೇಂದ್ರ ಸರ್ಕಾರದ 2023-24ನೇ ಸಾಲಿನ ಬಜೆಟ್: ಕೃಷಿ ಕ್ಷೇತ್ರಕ್ಕೆ ಉತ್ತೇಜನದ ನಿರೀಕ್ಷೆ
Share your comments