1. ಸುದ್ದಿಗಳು

BJP – Congress ಬಿಜೆಪಿ – ಕಾಂಗ್ರೆಸ್‌ ಹೊಂದಾಣಿಕೆ ಆರೋಪ; ಸಿದ್ದರಾಮಯ್ಯ ತರಾಟೆ, ಬೊಮ್ಮಾಯಿ ಸ್ಪಷ್ಟನೆ!

Hitesh
Hitesh
BJP – Congress Allegation of Compromise; BJP Vs BJP, Siddaramaiah Outrage, Bommai Clarify!

ರಾಜ್ಯದಲ್ಲಿ ಹೊಂದಾಣಿಕೆ ರಾಜಕೀಯದ ಬಗ್ಗೆ ಇದೀಗ ಬಿಜೆಪಿ Vs ಬಿಜೆಪಿ ಹಾಗೂ ಕಾಂಗ್ರೆಸ್Vs ಬಿಜೆಪಿ ನಡುವೆ ವಾಕ್ಸಮರ್‌ ಪ್ರಾರಂಭವಾಗಿದೆ.

ಬಿಜೆಪಿ ಸಂಸದ ಪ್ರತಾಪಸಿಂಹ ಹಾಗೂ ಮಾಜಿ ಶಾಸಕ ಸಿ.ಟಿ ರವಿ ಅವರು ಚುನಾವಣಾ ಸಂದರ್ಭದಲ್ಲಿ ಬಿಜೆಪಿಯ ಕೆಲವು ನಾಯಕರು

ಕಾಂಗ್ರೆಸ್‌ನೊಂದಿಗೆ ಒಳಒಪ್ಪಂದ ಮಾಡಿಕೊಂಡಿದ್ದರು ಎಂದು ಹೇಳಿರುವುದು ಇದೀಗ ರಾಜ್ಯ ರಾಜಕೀಯದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದೆ.

ಈ ಸಂಬಂಧ ಕಿಡಿಕಾರಿರುವ ಸಂಸದ ಪ್ರತಾಪ ಸಿಂಹ, ಬಿಜೆಪಿಯ ಕೆಲವು ನಾಯಕರು ಕಾಂಗ್ರೆಸ್‌ನೊಂದಿಗೆ ಒಳಒಪ್ಪಂದ ಮಾಡಿಕೊಂಡಿದ್ದರು.

ಇದೇ ಕಾರಣಕ್ಕೆ ಕೆಂಪಣ್ಣನ ವರದಿ ಹಾಗೂ ಅರ್ಕಾವತಿ ಸೇರಿದಂತೆ ವಿವಿಧ ವಿಷಯಗಳ ಚರ್ಚೆಯೇ ನಡೆಯಲಿಲ್ಲ.

ಚುನಾವಣಾ ಪೂರ್ವದಲ್ಲಿ ತನಿಖೆ ನಡೆಸುತ್ತೇವೆ ನಮ್ಮ ಬುಟ್ಟಿಯಲ್ಲಿ ದೊಡ್ಡ ಹಾವುಗಳಿವೆ ಎಂದಿದ್ದ ಬಿಜೆಪಿಯ ನಾಯಕರೇ ಅಧಿಕಾರಕ್ಕೆ

ಬಂದ ಮೇಲೆ ಯಾವುದೇ ವಿಷಯವನ್ನೂ ತಾರ್ಕಿಕ ಅಂತ್ಯ ಕಾಣಿಸಲಿಲ್ಲ. ಬಿಜೆಪಿ ನಾಯಕರು ಸಮರ್ಥವಾಗಿದಿದ್ದರೆ,

ಕಾಂಗ್ರೆಸ್‌ ನಾಯಕರನ್ನು ಬೀದಿಯಲ್ಲಿ ನಿಲ್ಲಿಸಲು ನಮಗೆ ಅವಕಾಶವಿತ್ತು.

ಬಿಜೆಪಿ ನಾಯಕರು ಬೇಕಾದರೆ, ಕಾಂಗ್ರೆಸ್‌ನ ನಾಯಕರೊಂದಿಗೆ ರಾಜಿ ಮಾಡಿಕೊಳ್ಳಬಹುದು. ಆದರೆ, ಬಿಜೆಪಿಯ ನಿಷ್ಠಾವಂತ ಕಾರ್ಯಕರ್ತ ಎಂದಿಗೂ ರಾಜಿ ಮಾಡಿಕೊಳ್ಳುವುದಿಲ್ಲ ಎಂದಿದ್ದಾರೆ.

ಇದಷ್ಟೇ ಅಲ್ಲದೇ, ಚುನಾವಣಾ ಪೂರ್ವದಲ್ಲಿ ಪಿಎಸ್‌ಐ ಹಗರಣ, 40% ಕಮಿಷನ್‌ನ ಬಗ್ಗೆ ದೀರ್ಘವಾಗಿ ಮಾತನಾಡುತ್ತಿದ್ದ

ಕಾಂಗ್ರೆಸ್‌ನ ನಾಯಕರು ಅಧಿಕಾರಕ್ಕೆ ಬಂದು ಒಂದು ತಿಂಗಳಾದರೂ, ಯಾವುದರ ಬಗ್ಗೆಯೂ ತನಿಖೆ ಮಾಡಲು ಮುಂದಾಗುತ್ತಿಲ್ಲ.

ಈಗ್ಯಾಕೆ ಆ ವಿಷಯಗಳನ್ನು ತನಿಖೆ ಮಾಡುವುದರ ಬಗ್ಗೆ ಮಾತನಾಡುತ್ತಿಲ್ಲ ಎಂದು ಕೇಳಿದ್ದಾರೆ. 

ಮುಖ್ಯಮಂತ್ರಿ ಸಿದ್ದರಾಮಯ್ಯ ಆಕ್ರೋಶ

ನಾನು ಯಾವುದೇ ವಿರೋಧ ಪಕ್ಷದ ನಾಯಕರೊಂದಿಗೆ ರಾಜಿ ಅಥವಾ ಹೊಂದಾಣಿಕೆ ಮಾಡಿಕೊಂಡಿಲ್ಲ.

ಹೊಂದಾಣಿಕೆ ಮಾಡಿಕೊಂಡಿದ್ದರೆ ಎನ್ನಲಾದ ಬಿಜೆಪಿ ನಾಯಕರ ಹೆಸರನ್ನು ಸಂಸದ ಪ್ರತಾಪ ಸಿಂಹ ಬಹಿರಂಗಪಡಿಸಲಿ

ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸವಾಲು ಹಾಕಿದ್ದಾರೆ.

ಪ್ರತಾಪ ಸಿಂಹ ಎಳಸು, ಬಾಯಿಗೆ ಬಂದಂತೆ ಮಾತನಾಡುತ್ತಾನೆ ಎಂದು ಏಕ ವಚನದಲ್ಲಿ ವಾಗ್ದಾಳಿ ನಡೆಸಿದ್ದಾರೆ.

ದಶಪಥ ರಸ್ತೆ ನಾನೇ ಮಾಡಿದ್ದು ಎನ್ನುತ್ತಾನೆ. ಅವನೇನು ಅಲ್ಲಿ ಸಂಸದನ, ಅವನು ಹೇಳಿದರೆ ತನಿಖೆ ನಡೆಸಲು ಆಗುತ್ತಾ ಎಂದು ಪ್ರಶ್ನಿಸಿದ್ದಾರೆ. 

ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸ್ಪಷ್ಟನೆ

ಬಿಜೆಪಿ ನಾಯಕರು ಕಾಂಗ್ರೆಸ್‌ನೊಂದಿಗೆ ಹೊಂದಾಣಿಕೆ ಮಾಡಿಕೊಂಡಿದ್ದಾರೆ ಎಂದು ಹೇಳಿದ ಬೆನ್ನಲ್ಲೇ ಮಾಜಿ ಮುಖ್ಯಮಂತ್ರಿ

ಬಸವರಾಜ ಬೊಮ್ಮಾಯಿ ಅವರು ಸ್ಪಷ್ಟನೆ ನೀಡಿದ್ದಾರೆ.

ಶಾಮನೂರು ಶಿವಶಂಕರಪ್ಪ ಅವರು ನಮ್ಮ ಹಿರಿಯರು ಮತ್ತು ದೂರದ ಸಂಬಂಧಿಯೂ ಹೌದು ಹಲವಾರು ಬಾರಿ

ನಾವು ಅವರು ನಮ್ಮ ಮನೆಯಲ್ಲಿ ಭೇಟಿ ಆಗಿದ್ದೇವೆ. ಇದರಲ್ಲಿ ರಾಜಕಾರಣ ಬೆರೆಸುವುದು ಸೂಕ್ತವಲ್ಲ.

ನಾನು ಶಿಗ್ಗಾಂವಿಯಿಂದ ಬೆಂಗಳೂರಿಗೆ ಬರುವಾಗ ರಾತ್ರಿ‌ ಊಟ ಮಾಡಲು ಹೊಟೆಲ್ ಗೆ ಹೋದಾಗ ಅವರು ತಮ್ಮ ಮೊಮ್ಮಕ್ಕಳ ಬಗ್ಗೆ 

ಹೊಸ ಸಂಬಂಧದ ಕುರಿತು ಚರ್ಚೆ ಮಾಡಲು ಸೇರಿದ್ದರು.

ಆ ಸಂದರ್ಭದಲ್ಲಿ ಅವರ ಜೊತೆಗೆ ಹತ್ತು ನಿಮಿಷ ಉಭಯ ಕುಶಲೊಪರಿ ಮಾತನಾಡಿದ್ದು ಯಾವುದೇ  ರಾಜಕೀಯ ವಿಷಯ ಪ್ರಸ್ತಾಪ ಆಗಿಲ್ಲ.

ಸ್ನೇಹ ಸಂಬಂಧಗಳೇ ಬೇರೆ ರಾಜಕೀಯ ಸಂಬಂಧವೇ ಬೇರೆ ನಾನು ನನ್ನ ರಾಜಕೀಯ ನಿಲುವಿನಲ್ಲಿ

ಯಾವುದೇ ರಾಜೀ ಮಾಡಿಕೊಳ್ಳುವ ಪ್ರಶ್ನೇಯೇ ಇಲ್ಲ ಎಂದು ಹೇಳಿದ್ದಾರೆ. 

Published On: 14 June 2023, 01:58 PM English Summary: BJP – Congress Allegation of Compromise; Siddaramaiah Outrage, Bommai Clarify!

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.