1. ಸುದ್ದಿಗಳು

DA Hike Approves ಸರ್ಕಾರಿ ನೌಕರರಿಗೆ ಬಂಪರ್‌, ಶೇ 4ರಷ್ಟು ತುಟ್ಟಿಭತ್ಯೆ ಹೆಚ್ಚಳ, ದೀಪಾವಳಿ ಬೋನಸ್‌!

Hitesh
Hitesh
Bumper for government employees, 4% increase in gratuity, Diwali bonus!

ಕೇಂದ್ರ ಸರ್ಕಾರವು ಸರ್ಕಾರಿ ನೌಕರರಿಗೆ ಬಂಪರ್‌ (Increase in DA) ಸಿಹಿಸುದ್ದಿಯೊಂದನ್ನು ನೀಡಿದೆ.

ಕೇಂದ್ರ ಸರ್ಕಾರವು ಸರ್ಕಾರಿ ನೌಕರರ ಬಹುದಿನಗಳ ಕನಸಾದ ಕೇಂದ್ರ ಸರ್ಕಾರಿ ನೌಕರರಿಗೆ ತುಟ್ಟಿಭತ್ಯೆ (ಡಿಎ) (DA Hike) ಹೆಚ್ಚಳ ಮಾಡಿದೆ.

ಅಷ್ಟೇ ಅಲ್ಲದೇ ಕೇಂದ್ರ ಸರ್ಕಾರಿ ನೌಕರರಿಗೆ ತುಟ್ಟಿಭತ್ಯೆ (ಡಿಎ) ಮತ್ತು ಪಿಂಚಣಿದಾರರಿಗೆ ತುಟ್ಟಿ ಪರಿಹಾರಗಳ

(ಡಿಆರ್) ಹೆಚ್ಚುವರಿ ಕಂತುಗಳನ್ನು ಬಿಡುಗಡೆ ಮಾಡಲು ಸಚಿವ ಸಂಪುಟ ಒಪ್ಪಿಗೆ ಕೊಟ್ಟಿದೆ.

2023ರ ಜುಲೈ 1ರಿಂದ ಅನ್ವಯವಾಗುವಂತೆ ಮೂಲ ವೇತನ/ಪಿಂಚಣಿಗೆ ಶೇ.4 ಹೆಚ್ಚಳ ಮಾಡಲು ತೀರ್ಮಾನಿಸಲಾಗಿದೆ.

ಈ ತುಟ್ಟಿ ಭತ್ಯೆ ಮತ್ತು ತುಟ್ಟಿ ಪರಿಹಾರಗಳೆರಡರ ಹೆಚ್ಚುವರಿ ಕಂತುಗಳ ವಿತರಣೆಗಾಗಿ ಸರ್ಕಾರದ ಬೊಕ್ಕಸಕ್ಕೆ

ವಾರ್ಷಿಕವಾಗಿ ರೂ. 12,857 ಕೋಟಿ ರೂ. ವೆಚ್ಚವಾಗಲಿದೆ ಎಂದು ಕೇಂದ್ರ ಸರ್ಕಾರವು ಹೇಳಿದೆ.  

ಕೇಂದ್ರದ ಸರ್ಕಾರಿ ನೌಕರರು ಹಾಗೂ ಪಿಂಚಣಿದಾರರ ತುಟ್ಟಿಭತ್ಯೆ ಮತ್ತು ಪರಿಹಾರ ಭತ್ಯೆಯ ಪ್ರಮಾಣವನ್ನು

ಶೇ4ರಷ್ಟು ಹೆಚ್ಚಳ ಮಾಡುವುದಕ್ಕೆ ಕೇಂದ್ರ ಸರ್ಕಾರವು ಬುಧವಾರ ಅನುಮೋದನೆ ನೀಡಿದೆ.  

ಬುಧವಾರ ಸಚಿವ ಸಂಪುಟ ಸಭೆ ನಡೆದಿದ್ದು, ಈ ಸಂದರ್ಭದಲ್ಲಿ ಕೇಂದ್ರ ಸರ್ಕಾರವು ಈ ನಿರ್ಧಾರವನ್ನು ಕೈಗೊಂಡಿದೆ.

ಇದೇ ಸಂದರ್ಭದಲ್ಲಿ  ರೈಲ್ವೆಯ  ಪ್ರಾತಂಕಿಯೇತರ ಸಿಬ್ಬಂದಿಗೆ 78 ದಿನಗಳ ವೇತನವನ್ನು ಬೋನಸ್

ಆಗಿ ನೀಡುವುದಕ್ಕೆ ಸಹ ಸಭೆಯಲ್ಲಿ ಅನುಮೋದನೆ ನೀಡಲಾಗಿದೆ.

Weather ಇಂದು ನಾಳೆ ಹೇಗಿರಲಿದೆ ಹವಾಮಾನ, ಎಲ್ಲೆಲ್ಲಿ ಮಳೆ ?

ಪ್ರಧಾನಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ಬುಧವಾರ ನಡೆದ ಸಂಪುಟ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದ್ದು,

ಇದರಿಂದಾಗಿ 48.67 ಲಕ್ಷ  ಕೇಂದ್ರ ಸರ್ಕಾರಿ ನೌಕರರಿಗೆ, 67.95 ಲಕ್ಷ ಪಿಂಚಣಿದಾರರಿಗೆ ಹಾಗೂ ರೈಲ್ವೆಯ 11.07 ಲಕ್ಷಕ್ಕೂ ಅಧಿಕ ಸಿಬ್ಬಂದಿಗೆ ಲಾಭವಾಗಲಿದೆ.

ಯಾವಾಗಿನಿಂದ ಅನ್ವಯ ?

ತುಟ್ಟಿಭತ್ಯೆ ಹೆಚ್ಚಳ ಪ್ರಮಾಣವು 2023ರಿಂದಲೇ ಜುಲೈ 1ರಿಂದ ಪೂರ್ವಾ ಅನ್ವಯವಾಗುತ್ತದೆ ಎಂದು

ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವ ಅನುರಾಗ್ ಠಾಕೂರ್ ಅವರು ಮಾಹಿತಿ ನೀಡಿದ್ದಾರೆ.

ಎಷ್ಟು ಪ್ರಮಾಣದಲ್ಲಿ ಹೆಚ್ಚಳ ?  

ತುಟ್ಟಿಭತ್ಯೆ ಪರಿಷ್ಕರಣೆ ನಂತರದ ಪ್ರಮಾಣವು ಇದು ಶೇ 46ಕ್ಕೆ

ಹೆಚ್ಚಳವಾದಂತಾಗಿದೆ. ಇನ್ನು ಭಾರತೀಯ ರೈಲ್ವೆ ಸಿಬ್ಬಂದಿಗೆ ನೀಡಲು ಉದ್ದೇಶಿಸಿರುವ ಬೋನಸ್‌ನಿಂದಾಗಿ ಕೇಂದ್ರ

ಸರ್ಕಾರದ ಬೊಕ್ಕಸಕ್ಕೆ ಬರೋಬ್ಬರಿ 71,968.87 ಕೋಟಿ ಪಾವತಿ ಮಾಡಬೇಕಾಗುತ್ತದೆ ಎಂದು ಅಂದಾಜಿಸಲಾಗಿದೆ.  

Published On: 19 October 2023, 01:13 PM English Summary: Bumper for government employees, 4% increase in gratuity, Diwali bonus!

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.