ಅಂತಾರಾಷ್ಟ್ರೀಯ ಗುಣಮಟ್ಟದ ಬ್ಯಾಡಗಿ ಮೆಣಸಿನ ಕಾಯಿಗ ದಿನೇ ದಿನೇ ಬೇಡಿಕೆ ಹೆಚ್ಚುತ್ತಲೇ ಇದೆ. ಒಂದು ಕ್ವಿಟಂಲ್ ಮೆಣಸಿನಕಾಯಿಗೆ ಬೆಲೆ 76 ಸಾವಿರ ರೂಪಾಯಿ ಅಂದರೆ ನಂಬಲಕ್ಕಾಗುವುದಿಲ್ಲ. ಆದರೂ ಇದು ಸತ್ಯ. ಬ್ಯಾಡಗಿ ಮೆಣಸಿನ ಕಾಯಿಗೆ ಗುರುವಾರದ ಮಾರುಕಟ್ಟೆಯಲ್ಲಿ ಚಿನ್ನದ ದರವನ್ನು ಮೀರಿಸಿ ಕ್ವಿಂಟಾಲ್ಗೆ 76,109 ರೂಪಾಯಿಗೆ ಮಾರಾಟವಾಗಿ ಸಾರ್ವಕಾಲಿಕ ದಾಖಲೆ ನಿರ್ಮಿಸಿದೆ.
ಎಪಿಎಂಸಿ ಯಾರ್ಡ್ನಲ್ಲಿರುವ ಎ.ಸಿ.ಕಟ್ಟೆಪ್ಪನವರ ಅಂಗಡಿಯಲ್ಲಿ ಗುರುವಾರ ಮಾರಾಟಕ್ಕಿಟ್ಟಿದ್ದ (ಟೆಂಡರ್) ಮಲ್ಲಿಕಾರ್ಜುನ ಕರಿಮಿಷ್ಠಿ ಬೆಳೆದ ಒಟ್ಟು 2 ಚೀಲ ಮೆಣಸಿನಕಾಯಿಗೆ ಪ್ರತಿ ಕ್ವಿಂಟಾಲ್ಗೆ 76.109 ರೂ. ಹಾಗೂ ಅದೇ ತಳಿಯ ಇನ್ನೊಂದು ಲಾಟ್ನ 2 ಚೀಲಕ್ಕೆ 60,209 ರೂ. ದರ ನೀಡಿ ಶ್ರೀನಿವಾಸ್ ಟ್ರೇಡರ್ಸ್ ಖರೀದಿ ಮಾಡಿದೆ.
ಬ್ಯಾಡಗಿ ಮಾರುಕಟ್ಟೆಯಲ್ಲಿ ಇತೀಹಾಸದಲ್ಲೇ ಇದು 2ನೇ ಅತ್ಯದಿಕ ಬೆಲೆಯಾಗಿದೆ. ಮೆಣಸಿನಕಾಯಿ ಗುಣಮಟ್ಟ ಆಧರಿಸಿ ಮಾರುಕಟ್ಟೆಯಲ್ಲಿ ದರ ನಿಗದಿ ಮಾಡಲಾಗುತ್ತದೆ. ಲಕ್ಷಾಂತರ ಮೆಣಸಿನಕಾಯಿ ಚೀಲಗಳಲ್ಲಿ ಒಂದರಿಂದ ಎರಡು ಅಥವಾ ನಾಲ್ಕು ಚೀಲ ಮೆಣಸಿನಕಾಯಿಗಳಿಗೆ ಈ ರೀತಿ ದರ ದೊರೆಯುತ್ತದೆ.
ಮಲ್ಲಿಕಾರ್ಜುನ ಅವರು ಬೆಳೆದ ಮೆಣಸಿನಕಾಯಿ ಬ್ಯಾಡಗಿ ಮಾರುಕಟ್ಟೆ ಇತೀಹಾಸದಲ್ಲೇ ಮೊದಲ 3 ಅತ್ಯದಿಕ ದರವನ್ನು ಪಡೆದಿದೆ. ಕಳೆದ ಡಿ. 28 ರಂದು ಪ್ರತಿ ಕ್ವಿಟಂಲಿಗೆ 50.11 ರೂಪಾಯಿ ದೊರೆತಿತ್ತು. ಈಗ ಮತ್ತೆ 71.109 ರೂಪಾಯಿ ಅವರ ಮೆಣಸಿನಕಾಯಿ ಮಾರಾಟವಾಗಿ ಹೊಸ ಇತಿಹಾಸ ಸೃಷ್ಟಿಸಿದೆ.
Share your comments