ಕೊಬ್ಬರಿ ಬೆಳೆಗಾರರಿಗೆ ಬಂಪರ್ ಗುಡ್ ನ್ಯೂಸ್. ತೆಂಗಿನ ಎಣ್ಣೆ ಉತ್ಪಾದನೆಗೆ ಬಳಸುವ ಕೊಬ್ಬರಿಯ (ಮಿಲ್ಲಿಂಗ್ ಕೊಪ್ರಾ) ಮತ್ತು ತಿನ್ನುವ ಕೊಬ್ಬರಿಯ (ಬಾಲ್ ಕೊಪ್ರಾ) ಕನಿಷ್ಠ ಬೆಂಬಲ ಬೆಲೆಯನ್ನು (ಎಂಎಸ್ಪಿ) ಕೇಂದ್ರ ಸರ್ಕಾರವು ಕ್ರಮವಾಗಿ ಕ್ವಿಂಟಲ್ಗೆ 375ರೂಪಾಯಿ ಮತ್ತು 300ರೂಪಾಯಿಯಷ್ಟು ಹೆಚ್ಚಿಸಿದೆ.
ಹೌದು, ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಆರ್ಥಿಕ ವ್ಯವಹಾರಗಳ ಸಂಸತ್ ಸಮಿತಿಯು 2021ರ ಅವಧಿಗೆ ಈ ಎಂಎಸ್ಪಿಗೆ ಒಪ್ಪಿಗೆ ನೀಡಿದೆ. ಸಾಮಾನ್ಯ ಗುಣಮಟ್ಟದ (ಎಫ್ಎಕ್ಯು) ಮಿಲ್ಲಿಂಗ್ ಕೊಪ್ರಾದ ಎಂಎಸ್ಪಿಯನ್ನು ಕ್ವಿಂಟಾಲ್ಗೆ ರೂ.9,960ರಿಂದ 10,335 ರೂ.ಗೆ ಹೆಚ್ಚಿಸಲಾಗಿದೆ. ಬಾಲ್ ಕೊಪ್ರಾ ಬೆಲೆ ಕ್ವಿಂಟಾಲ್ಗೆ ರೂ. 10,300ರಿಂದ ರೂ. 10,600ಕ್ಕೆ ಏರಿಕೆಯಾಗಿದೆ.
ಮಿಲ್ಲಿಂಗ್ ಕೊಪ್ರಾದ ಉತ್ಪಾದನಾ ವೆಚ್ಚಕ್ಕಿಂತಲೂ ಶೇ.52ರಷ್ಟು ಹಾಗೂ ಬಾಲ್ ಕೊಪ್ರಾ ಎಂಎಸ್ಪಿ ಶೇ.55ರಷ್ಟು ಎಂಎಸ್ಪಿ ಹೆಚ್ಚಳ ಮಾಡಲಾಗಿದೆ ಎಂದು ಸಚಿವ ಪ್ರಕಾಶ್ ಜಾವಡೇಕರ್ ತಿಳಿಸಿದ್ದಾರೆ
Share your comments