ಕರ್ನಾಟಕ ರಾಜ್ಯದ ರೈತರಿಗೆ ಕೇಂದ್ರ ಸರ್ಕಾರ ಸಂತಸದ ಸುದ್ದಿ ನೀಡಿದೆ. ಹೌದು, ರಾಜ್ಯದಲ್ಲಿ ಬೆಂಬಲ ಬೆಲೆ ಆಧಾರದ ಮೇಲೆ 30 ಸಾವಿರ ಟನ್ ಹೆಸರು ಹಾಗೂ 10 ಸಾವಿರ ಟನ್ ಉದ್ದು ಖರೀದಿಗೆ ಕೇಂದ್ರ ಸರ್ಕಾರ ಅನುಮತಿ ನೀಡಿದೆ.
ರಾಜ್ಯದಲ್ಲಿ ಖರೀದಿ ಕೇಂದ್ರಗಳನ್ನು ಸ್ಥಾಪಿಸಿ 90 ದಿನಗಳ ಕಾಲ ರೈತರಿಂದ ಬೆಂಬಲ ಬೆಲೆ ಆಧಾರದ ಮೇಲೆ ಖರೀದಿ ಮಾಡಲು ರಾಜ್ಯ ಸರ್ಕಾರ ಆದೇಶ ಹೊರಡಿಸಿದ್ದು, ಗದಗ, ಹಾವೇರಿ, ಧಾರವಾಡ, ಬಳಗಾವಿ, ವಿಜಯಪುರ, ಬಾಗಲಕೋಟೆ, ಕಲಬುರಗಿ, ಯಾದಗಿರಿ, ಕೊಪ್ಪಳ, ಬೀದರ್, ಚಿತ್ರದುರ್ಗ, ತುಮಕೂರು, ಹಾಸನ ಮತ್ತು ಮೈಸೂರು ಜಿಲ್ಲೆಗಳಲ್ಲಿ ಪ್ರತಿ ಕ್ವಿಂಟಾಲ್ ಗೆ 7,275 ರೂಪಾಯಿಗಳಂತೆ ಹೆಸರು ಕಾಳು ಖರೀದಿಗೆ ಸಹಕಾರ ಇಲಾಖೆ ಆದೇಶ ಹೊರಡಿಸಿದೆ.
ಪ್ರತಿ ಎಕೆರೆಗೆ 4 ಕ್ವಿಂಟಾಲ್ ಗರಿಷ್ಟ, ಪ್ರತಿ ರೈತರಿಂದ 6 ಕ್ವಿಂಟಾಲ್ ಹೆಸರು ಕಾಳು ಖರೀದಿ ಮಾಡಬೇಕು. ಉದ್ದಿನ ಕಾಳು ಪ್ರತಿ ಎಕೆರೆಗೆ 3 ಕ್ವಿಂಟಾಲ್ ಹಾಗೂ ಪ್ರತಿ ರೈತರಿಂದ 6 ಕ್ವಿಂಟಾಲ್ ಖರೀದಿಸಲು ಸೂಚನೆ ನೀಡಿದೆ.
ಜುಲೈ ತಿಂಗಳಲ್ಲಿ ಸುರಿದ ನಿರಂತರ ಮಳೆಗೆ ಹೆಸರು, ಉಧ್ದು ಬೆಳೆ ಸಾಕಷ್ಟು ಹಾನಿಯಾಗಿತ್ತು. ರೈತರ ಬೆಳೆ ಕೆಲವು ಕಡೆ ಮಳೆಯಿಂದಾಗಿ ಕೊಳೆತುಹೋಗಿದ್ದರೆ ಇನ್ನೂ ಕೆಲವು ಕಡೆ ಕೊಚ್ಚಿಕೊಂಡು ಹೋಗಿತ್ತು. ನಂತರ ವಾತಾವರಣದ ವೈಪರೀತ್ಯದಿಂದಾಗಿ ಹೆಸರು, ಉದ್ದು ಬೆಳೆ ರೋಗಗಳಿಂದ ತುತ್ತಾಗಿತ್ತು. ಇದರಿಂದಾಗಿ ಇಳುವರಿ ಕಡಿಮೆಯಾಗಿ ರೈತರಿಗೆ ಹಾನಿಯಾಗಿತ್ತು. ಈಗ ಇದ್ದ ಬೆಳೆಯನ್ನು ಮಾರಾಟ ಮಾಡಲಿಚ್ಚಿಸುವ ರೈತರು ಬೆಂಬಲ ಬೆಲೆಯಡಿಯಲ್ಲಿ ಮಾರಾಟ ಮಾಡಬಹುದೆಂದು ಸರ್ಕಾರ ಖರೀದಿಗೆ ಆದೇಶ ಹೊರಡಿಸಿದೆ.
ಜುಲೈ ತಿಂಗಳಿನಲ್ಲಿ ನಿರಂತರವಾಗಿ ಸುರಿದ ಮಳೆ ಹೆಸರು ಉದ್ದು ಬೆಳೆ ಹಾಳಾಗಿ ರೈತರಿಗೆ ಅಪಾರ ಹಾನಿಯಾಗಿತ್ತು. ಇದ್ದ ಬೆಳೆಗಾದರೂ ಸರ್ಕಾರ ಖರೀದಿ ಕೇಂದ್ರಗಳನ್ನು ಆರಂಭಿಸಿ ರೈತರ ಬೆಳೆ ಖರೀದಿ ಮಾಡಬೇಕೆಂದು ರೈತರ ಒತ್ತಾಯವಾಗಿತ್ತು. ಈಗ ಸರ್ಕಾರ ಹೆಸರು, ಉದ್ದು ಬೆಳೆ ಖರೀದಿಗೆ ಹಾಗಾಗಿ ಖರೀದಿ ಕೇಂದ್ರಗಳಲ್ಲಿ ಮಾರಾಟ ಮಾಡಲಿಚ್ಚಿಸುವರ ರೈತರು ನಿಟ್ಟುಸಿರು ಬಿಟ್ಟಂತಾಗಿದೆ.
ರೈತರು ಅಗತ್ಯ ಮಾಹಿತಿಗಳೊಂದಿಗೆ ಸಮೀಪದ ಖರೀದಿ ಕೇಂದ್ರಕ್ಕೆ ಭೇಟಿ ನೀಡಿ ಕೃಷಿ ಉತ್ಪನ್ನ ಮಾರಾಟ ಮಾಡಬಹುದು. ಇನ್ನೂ ಖರೀದಿಗಾಗಿ ನೋಂದಣಿ ಪ್ರಕ್ರಿಯೆ ಆರಂಭವಾಗಿಲ್ಲ. ಶೀಘ್ರದಲ್ಲಿ ಆಯಾ ಜಿಲ್ಲೆಯ ಜಿಲ್ಲಾಧಿಕಾರಿಗಳು ಖರೀದಿ ಕೇಂದ್ರಗಳ ಸಂಖ್ಯೆ ಹಾಗೂ ನೋಂದಣಿ ಪ್ರಕ್ರಿಯೆ ಕುರಿತು ಪ್ರಕಟಣೆ ನೀಡುತ್ತಾರೆ.
ಗರಿಷ್ಠ 30 ಸಾವಿರ ಮೆಟ್ರಿಕ್ ಟನ್ ಹೆಸರು ಹಾಗೂ ಗರಿಷ್ಠ 10 ಸಾವಿರ ಮೆಟ್ರಿಕ್ ಟನ್ ಉದ್ದು ಖರೀದಿಗೆ ಅನುಮತಿ ನೀಡಲಾಗಿದ್ದು, ಕರ್ನಾಟಕ ಸರ್ಕಾರ ನಿಗದಿ ಪಡಿಸುವ ದಿನಾಂಕದಿಂದ 90 ದಿನಗಳ ಅವಧಿಗೆ ಈ ಪ್ರಕ್ರಿಯೆ ಜಾರಿಯಲ್ಲಿರುತ್ತದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ
Share your comments