1. ಸುದ್ದಿಗಳು

ಉದ್ದು, ಹೆಸರು ತೊಗರಿ ಸೇರಿದಂತೆ ಒಟ್ಟು 14 ಮುಂಗಾರು ಬೆಳೆಗಳ ಬೆಂಬಲ ಬೆಲೆ ಹೆಚ್ಚಳ

Paddy

ಮುಂಗಾರು ಹಂಗಾಮು ಆರಂಭವಾಗುತ್ತಿದ್ದಂತೆ ಕೇಂದ್ರ ಸರ್ಕಾರವು ರೈತರಿಗೆ ಸಂತಸದ ಸುದ್ದಿ ನೀಡಿದೆ. ಜೋಳ, ಹತ್ತಿ, ಭತ್ತ, ರಾಗಿ ಸೇರಿದಂತೆ ಒಟ್ಟು 14 ಮುಂಗಾರು ಬೆಳೆಗಳ ಕನಿಷ್ಟ ಬೆಂಬಲ ಬೆಲೆ ಹೆಚ್ಚಿಸಲು ಕೇಂದ್ರ ಸಚಿವ ಸಂಪುಟ ನಿರ್ಧರಿಸಿದೆ.

2021ನೇ ಸಾಲಿಗೆ ಭತ್ತಕ್ಕೆ ನೀಡಲಾಗುವ ಬೆಂಬಲ ಬೆಲೆಯನ್ನು ಕ್ವಿಂಟಲ್ ಗೆ 72 ರೂಪಾಯಿಯಷ್ಟು, ತೊಗರಿ ಮತ್ತು ಉದ್ದು ಬೆಳೆಯ ಬೆಲೆಯನ್ನು 300 ರೂಪಾಯಿಯಷ್ಟು ಜೋಳ ಮತ್ತು ರಾಗಿಯ ಬೆಂಬಲ ಬೆಲೆಯನ್ನು ಕ್ವಿಂಟಾಲಿಗೆ 118 ಹಾಗೂ 80 ರಷ್ಟು ಹೆಚ್ಚಿಸಲಾಗಿದೆ.

ಹೊಸ ಬೆಲೆಯ ಪ್ರಕಾರ 2021-22ನೇ ಸಾಲಿನಲ್ಲಿ ಭತ್ತಕ್ಕೆ (ಸಾಮಾನ್ಯ ತಳಿ) ಕ್ವಿಂಟಾಲಿಗೆ 72 ರೂಪಾಯಿ ಹೆಚ್ಚಿಸಲಾಗಿದೆ. ಈಗ 1940 ರೂಪಾಯಿ ಇದ್ದು, ಕಳೆದ ವರ್ಷ 1868 ಇತ್ತು. ಹತ್ತಿಯ ಬೆಲೆ 211 ರೂಪಾಯಿ ಹೆಚ್ಚಿಸಲಾಗಿದ್ದು ಈ ಮೂಲಕ ಕ್ವಿಂಟಾಲ್ ಹತ್ತಿಗೆ 5726 ರೂಪಾಯಿಗಳಾಗಿವೆ.

ಜೋಳ (ಹೈಬ್ರಿಡ್) 118 ರೂಪಾಯಿ ಹೆಚ್ಚಿಸಲಾಗಿದೆ. ಹಾಗಾಗಿ ಈ ವರ್ಷ 2738 ರೂಪಾಯಿ ಆಗಿದೆ. ಕಳೆದ ವರ್ಷ 2620 ಇತ್ತು. ತೊಗರಿಗೆ 300 ರೂಪಾಯಿ ಹೆಚ್ಚಿಸಲಾಗಿದೆ. ಈ ವರ್ಷ 6300 ರೂಪಾಯಿ ಆಗಿದೆ. ಕಳೆದ ವರ್ಷ 6000 ಇತ್ತು. ಉದ್ದುವಿಗೆ 300 ರೂಪಾಯಿ ಹೆಚ್ಚಿಸಲಾಗಿದೆ. ಈ ವರ್ಷ  6300 ರೂಪಾಯಿ ಆಗಿದೆ. ಕಳೆದ ವರ್ಷ 6000 ರೂಪಾಯಿ ಇತ್ತು. ಶೇಂಗಾ 275 ರೂಪಾಯಿ ಹೆಚ್ಚಿಸಲಾಗಿದೆ. ಈ ವರ್ಷ 5550 ರೂಪಾಯಿ ಆಗಿದೆ. ಎಳ್ಳು 452 ರೂಪಾಯಿ ಹೆಚ್ಚಿಸಲಾಗಿದೆ. ಇದರ ಬೆಲೆ ಈ ವರ್ಷ 7307 ರುಪಾಯಿ ಆಗಿದೆ. ಸಜ್ಜೆ 100 ರೂಪಾಯಿ ಹೆಚ್ಚಸಿದ್ದರಿಂದ 2250 ರೂಪಾಯಿ ಆಗಿದೆ. ರಾಗಿಯ ಬೆಂಬಲ ಬೆಲೆಯನ್ನು 82 ರೂಪಾಯಿ ಹೆಚ್ಚಿಸಿದ್ದರಿಂದ ಈಗ ಅದರ ಬೆಂಬಲ ಬೆಲೆ 3377 ಆಗಿದೆ.ನವಣೆಯ ಬೆಂಬಲ ಬೆಲೆ 100 ರೂಪಾಯಿ ಹೆಚ್ಚಿಸಲಾಗಿದೆ. ಇದರ ಬೆಲೆ 2250 ರೂಪಾಯಿ ಆಗಿದೆ.ಸೂರ್ಯಕಾಂತಿ ಬೆಂಬಲ ಬೆಲೆ 130 ರೂಪಾಯಿ ಹೆಚ್ಚಿಸಲಾಗಿದೆ. ಇದರ ಬೆಲೆ ಈ ವರ್ಷ 6015 ರೂಪಾಯಿ ಆಗಿರಲಿದೆ.

ಬೆಂಬಲ ಬೆಲೆ (ಪ್ರತಿ ಕ್ವಿಂಟಾಲಿಗೆ) ಹೆಚ್ಚಳ ಯಾವ ಬೆಲೆಗೆ ಎಷ್ಟು ಇಲ್ಲಿದೆ ಸಂಪೂರ್ಣ ಮಾಹಿತಿ

ಬೆಳೆ

ಏರಿಕೆ

ಹೊಸದರ

ಹಳೆದರ

ತೊಗರಿ

300

6300

6000

ಉದ್ದು

300

6300

6000

ಹೆಸರು

79

7275

7196

ಶೇಂಗಾ

275

5550

5275

ಭತ್ತ (ಸಾಮಾನ್ಯ)

72

1940

1868

ಭತ್ತ (ಎ ಗ್ರೇಡ್)

72

1960

1888

ರಾಗಿ,

82

3377

3295

ಬಾಜ್ರಾ

100

2250

2150

ಮೆಕ್ಕೆಜೋಳ

20

1870

1850

ಸೂರ್ಯಕಾಂತಿ

130

6015

5885

ಹತ್ತಿ (ಮಧ್ಯಮ)

211

5726

5515

ಹತ್ತಿ (ಉದ್ದ)

200

6025

5825

ಸೋಯಾಬಿನ್

70

3950

3880

ನೈಗರ್ ಸೀಡ್

235

6930

6695

Published On: 10 June 2021, 09:38 AM English Summary: centre announces new msp

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.