1. ಸುದ್ದಿಗಳು

ತಿರುಪತಿ ಗರ್ಭಗುಡಿ ಮುಚ್ಚುವ ಕುರಿತು ಮುಖ್ಯ ಅರ್ಚಕರಿಂದ ಸ್ಪಷ್ಟನೆ

Hitesh
Hitesh
Tirupati

ಕೃಷಿಗೆ ಸಂಬಂಧಿಸಿದ ಪ್ರಮುಖ ಸುದ್ದಿಗಳನ್ನು ರೈತರಿಗೆ ತಲುಪಿಸುವ ಉದ್ದೇಶದಿಂದ ಕೃಷಿ ಜಾಗರಣ ಅಗ್ರಿ ನ್ಯೂಸ್‌ ಪರಿಚಯಿಸಿದೆ. ಇಂದಿನ ಪ್ರಮುಖ ಸುದ್ದಿಗಳು ಹೀಗಿವೆ.
1. ಪಿ.ಎಂ ಕಿಸಾನ್‌ ಸಾವಿರಾರು ರೈತರ ಕೆವೈಸಿ ಬಾಕಿ: 13ನೇ ಕಂತು ಡೌಟ್‌! 
2. ಮಂಡ್ಯದಲ್ಲಿ ಮೆಗಾ ಡೈರಿ ಉದ್ಘಾಟನೆ: ಶೀಘ್ರ ಎಥನಾಲ್ ಘಟಕ ಪ್ರಾರಂಭ   
3. ಹೊಸವರ್ಷದ ಸಂಭ್ರಮಾಚರಣೆ: ಪಾನಮತ್ತರ ಸ್ಥಳಾಂತರಕ್ಕೆ ಆಂಬುಲೆನ್ಸ್ ವ್ಯವಸ್ಥೆ!​​
4. ಮೂರು ವರ್ಷದಲ್ಲಿ ಕಾಡಾನೆ ದಾಳಿಯಿಂದ 74 ಜನ ಸಾವು!
5. ಮೊಲಾಸಸ್; ಪ್ರತಿ ಟನ್‌ಗೆ 100ರೂ ಹೆಚ್ಚಳ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ
6. 39 ದಿನದ ಧರಣಿ ಕೈಬಿಟ್ಟ ಕಬ್ಬು ಬೆಳೆಗಾರರು
7. ವರ್ಷದ ಮೊದಲ ವಾರ ಪಿ.ಎಂ ಕಿಸಾನ್‌ ಹಣ ಬಿಡುಗಡೆ ಸಾಧ್ಯತೆ
8. ಹತ್ತಿ ಖರೀದಿ ಕೇಂದ್ರ ಪ್ರಾರಂಭಿಸಲು ಆಗ್ರಹಿಸಿ ಪ್ರತಿಭಟನೆ
9. ತಿರುಪತಿ ಗರ್ಭಗುಡಿ ಮುಚ್ಚುವ ಕುರಿತು ಮುಖ್ಯ ಅರ್ಚಕರಿಂದ ಸ್ಪಷ್ಟನೆ
10. ಪಹಣಿ ಮೊತ್ತ 15 ರೂಪಾಯಿ ಹೆಚ್ಚಳ: ಇದೀಗ 25ಕ್ಕೆ ಏರಿಕೆ !

1. ಕೇಂದ್ರ ಸರ್ಕಾರವು ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿ ನೀಡುವ ಕಂತಿನ ಹಣವನ್ನು ಪಡೆಯಲು ಕಡ್ಡಾಯವಾಗಿ ಕೆವೈಸಿ ಮಾಡಿಕೊಳ್ಳುವಂತೆ ಈಗಾಗಲೇ ಸೂಚನೆ ನೀಡಲಾಗಿದ್ದು, ಹಲವು ರೈತರು ಕೆವೈಸಿ ಮಾಡಿಲ್ಲ. ಹೀಗಾಗಿ,  ಕೆವೈಸಿ ಬಾಕಿ ಉಳಿಸಿಕೊಂಡಿರುವ ರೈತರಿಗೆ 13ನೇ ಕಂತಿನ ಹಣ ಕಡಿತವಾಗುವ ಸಾಧ್ಯತೆ ಇದೆ. ಅಂದಾಜಿನ ಪ್ರಕಾರ ಕರ್ನಾಟಕದ 16 ಲಕ್ಷ ರೈತರಿಗೆ 13ನೇ ಕಂತಿನ ಹಣ ಸಂದಾಯವಾಗುವುದು ಅನುಮಾನ ಎನ್ನಲಾಗಿದೆ. ಕರ್ನಾಟಕದ ಫಲಾನುಫವಿಗಳ ಪೈಕಿ ಒಟ್ಟು ಸುಮಾರು 37ಲಕ್ಷ ರೈತರು ಮಾತ್ರ ಕೆವೈಸಿ ಮಾಡಿಸಿದ್ದಾರೆ ಎನ್ನಲಾಗಿದೆ. ತುಮಕೂರು ಜಿಲ್ಲೆಯಲ್ಲಿ 97 ಸಾವಿರ ರೈತರು, ಕಲಬುರ ಗಿ ವ್ಯಾಪ್ತಿಯಲ್ಲಿ 97ಸಾವಿರ ಹಾಗೂ ಹಾಸನದಲ್ಲಿ 92 ಸಾವಿರ ರೈತರು ಸೇರಿದಂತೆ ಹಲವರು ಕೆವೈಸಿ ಮಾಡಿಸಿಲ್ಲ. ಈ ರೀತಿ ಕೆವೈಸಿ ಮಾಡಿಸಲು ಆಸಕ್ತಿ ತೋರದ ರೈತರಿಗೆ ಈ ಬಾರಿ ಕಂತು ಜಮೆ ಆಗುವ ಸಾಧ್ಯತೆ ಇಲ್ಲ. ಪಿಎಂ ಕಿಸಾನ್‌ನಲ್ಲಿ ಆಗುತ್ತಿರುವ ಅವ್ಯವಹಾರವನ್ನು ತಪ್ಪಿಸುವ ಉದ್ದೇಶದಿಂದ ಕೇಂದ್ರ ಸರ್ಕಾರವು ಕೆವೈಸಿಯನ್ನು ಕಡ್ಡಾಯ ಮಾಡಿದೆ.  
------------

------------
2. ಮೈಶುಗರ್‌ನಲ್ಲಿ ಮುಂದಿನ ವರ್ಷ ಎಥನಾಲ್ ಘಟಕ ಸ್ಥಾಪನೆ ಮಾಡುವ ಮೂಲಕ  ರೈತರಿಗೆ ಪ್ರೋತ್ಸಾಹ ನೀಡಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು. ಶುಕ್ರವಾರ ಮಂಡ್ಯ ಜಿಲ್ಲೆ ಹಾಲು ಉತ್ಪಾದಕರ ಸಂಘಗಳ ಒಕ್ಕೂಟದ ವತಿಯಿಂದ ಮಂಡ್ಯ ಮದ್ದೂರಿನ ಗೆಜ್ಜಲಗೆರೆ ಆವರಣದಲ್ಲಿ ಆಯೋಜಿಸಿದ್ದ  ಮೆಗಾ ಡೈರಿ ಉದ್ಘಾಟನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಕರ್ನಾಟಕ ಹಾಲು ಉತ್ಪಾದನೆ ಡೈರಿ ಅಭಿವೃದ್ಧಿ ಮೂಲಕ  ಹಸಿರು ಕ್ರಾಂತಿಯ ನಂತರ ಕ್ಷೀರ  ಕ್ರಾಂತಿಯಾಗುತ್ತಿದೆ. ಕರ್ನಾಟಕ  ಕ್ಷೀರ ಕ್ರಾಂತಿಯಲ್ಲಿ ತನ್ನದೇ ಕೊಡುಗೆ ನೀಡಿದೆ ಎಂದರು.
------------

3. ರಾಜ್ಯದಲ್ಲಿ ಹೊಸ ವರ್ಷಾಚರಣೆಗೆ ಸಿದ್ಧತೆಗಳು ಪ್ರಾರಂಭವಾಗಿದೆ. ಅತಿ ಹೆಚ್ಚು ಜನ ಸೇರುವ ಬೆಂಗಳೂರಿನಲ್ಲಿ ಅಹಿತಕರ ಘಟನೆಗಳು ನಡೆಯದಂತೆ ಭದ್ರತೆ ಕೈಗೊಳ್ಳಲು ಬೆಂಗಳೂರು ಕಮಿಷನರೇಟ್ ಪೊಲೀಸರು ಸಿದ್ಧತೆ ಮಾಡಿಕೊಂಡಿದ್ದಾರೆ. ಪೊಲೀಸ್ ಇಲಾಖೆ ಹಾಗೂ ಖಾಸಗಿಯವರ 1.70 ಲಕ್ಷ ಸಿ.ಸಿ.ಟಿ.ವಿ ಕ್ಯಾಮೆರಾಗಳನ್ನು ಭದ್ರತೆಗಾಗಿ ಬಳಸಿಕೊಳ್ಳಲಾಗುತ್ತಿದೆ. 20 ಡ್ರೋನ್ ಕ್ಯಾಮೆರಾಗಳು ಹಾರಾಡಲಿವೆ.   ಇನ್ನು ಪಾನಮತ್ತರಾಗಿ ಕಾನೂನು ಸುವ್ಯವಸ್ಥೆಗೆ ಧಕ್ಕೆ ತರುವ ಕಿಡಿಗೇಡಿಗಳನ್ನು ಠಾಣೆಗೆ ಕರೆದುಕೊಂಡು ಹೋಗಲು ಸಾಧ್ಯವಾಗದೆ ಇರುವುದರಿಂದ ಅಂಥವರನ್ನು ಆಂಬುಲೆನ್ಸ್ ಮೂಲಕ ಆಸ್ಪತ್ರೆಗೆ ಸ್ಥಳಾಂತರಿಸಲು ಯೋಚಿಸಲಾಗಿದೆ. ಇದಕ್ಕಾಗಿ ಈಗಾಗಲೇ ಕೆಲವು ಆಸ್ಪತ್ರೆಗಳಲ್ಲಿ ಈಗಾಗಲೇ ಪ್ರತ್ಯೇಕ ಆಸನ ವ್ಯವಸ್ಥೆಯನ್ನು ಮಾಡಿಕೊಳ್ಳಲಾಗಿದೆ ಎಂದು ಬೆಂಗಳೂರು ಪೊಲೀಸ್ ಕಮಿಷನರ್ ಪ್ರತಾಪ್ ರೆಡ್ಡಿ ಅವರು ಹೇಳಿದ್ದಾರೆ.
------------

------------

4. ರಾಜ್ಯದಲ್ಲಿ ಇತ್ತೀಚಿನ ವರ್ಷದಲ್ಲಿ ಮಾನವ ಮತ್ತು ಪ್ರಾಣಿ ಸಂಘರ್ಷ ಹೆಚ್ಚಾಗಿದ್ದು, ಕಳೆದ ಮೂರು ವರ್ಷದಲ್ಲಿ 74 ಜನ ಕಾಡಾನೆ ದಾಳಿಯಿಂದ ಮೃತಪಟ್ಟಿದ್ದಾರೆ.  ಮಲೆನಾಡು, ಹಾಸನ, ದಕ್ಷಿಣ ಕನ್ನಡ ಸೇರಿದಂತೆ ಕಾಡಂಚಿನ ರಾಜ್ಯದ ಹಲವು ಜಿಲ್ಲೆಗಳಲ್ಲಿ ಕಾಡಾನೆ ದಾಳಿ ನಿರಂತರವಾಗಿ ನಡೆಯುತ್ತಿದೆ.
------------
5.  ಮೊಲಾಸಸ್ ತಯಾರಿಸುವವರಿಗೆ ಪ್ರತಿ ಟನ್‌ಗೆ 100ರೂ ಹೆಚ್ಚಸಿ ಆದೇಶ ಹೊರಡಿ ಸಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು. ಮೈಶುಗರ್ ಕಾರ್ಖಾನೆ ಹಲವು ವರ್ಷಗಳಿಂದ ಮುಚ್ಚಿದ್ದರೂ ಯಾವುದೇ ಸರ್ಕಾರ ಈ ಬಗ್ಗೆ ಚಿಂತನೆ ಮಾಡಿರಲಿಲ್ಲ. ಅಧಿಕಾರಿಗಳು ಈ ಕಾರ್ಖಾನೆಯನ್ನು ಮಾರಾಟ ಮಾಡಿ ಖಾಸಗಿಯವರಿಗೆ ವಹಿಸಲು ಒತ್ತಡ ತಂದಿದ್ದರು. ಆದರೆ, ಈಗ ಕಬ್ಬು ಅರೆಸಲು ಪ್ರಾರಂಭಿಸಲಾಗಿದೆ. ಈ ಭಾಗದ ರೈತರಿಗೆ ಆತ್ಮವಿಶ್ವಾಸ ತುಂಬುವ ಕೆಲಸ ಮಾಡಲಾಗಿದೆ. ಅಲ್ಲದೇ ಮುಂದಿನ ವರ್ಷದಲ್ಲಿ ಎಥನಾಲ್ ಘಟಕ ಪ್ರಾರಂಭಿಸಲು ವ್ಯವಸ್ಥೆ ಕಲ್ಪಿಸಲಾಗುವುದು. ಇದನ್ನು ಲಾಭದಾಯಕವಾಗಿಸಲು, ರೈತರ ಸಕ್ಕರೆ ಕಾರ್ಖಾನೆಯಾಗಿ ಪರಿವರ್ತನೆ ಮಾಡಲಾಗುವುದು ಎಂದರು. ಕಬ್ಬು ಬೆಳೆಗಾರರು, ಕಬ್ಬಿಗೆ ಹೆಚ್ಚಿನ ಬೆಲೆ ನಿಗದಿಗೆ ಒತ್ತಾಯ ಮಾಡುತ್ತಿದ್ದರು. ಎಥನಾಲ್ ಉಳ್ಳವರು 50 ರೂ.ಗಳನ್ನು ಹೆಚ್ಚಿಸಲಾಗಿದೆ ಎಂದಿದ್ದಾರೆ.    
------------

Aadhaar Card| ಆಧಾರ್‌ ಕಾರ್ಡ್‌ನೊಂದಿಗೆ ಪಾನ್‌ಕಾರ್ಡ್‌ ಜೋಡಣೆ ಕಡ್ಡಾಯ: ಮತ್ತೊಮ್ಮೆ ಗಡುವು! Pan Card 

forest attacks

------------
6. ಕಬ್ಬಿನ ಎಫ್ಆರ್‌ಪಿ ದರಕ್ಕೆ ಹೆಚ್ಚುವರಿಯಾಗಿ 100ರೂ ನಿಗದಿ, ಉಪಉತ್ಪನ್ನಗಳ ಲಾಭದಿಂದ ಹಂಚಿಕೆ ಹಾಗೂ ಎಥನಾಲ್‌ ಉತ್ಪಾದನೆಯ ಕಾರ್ಖಾನೆಗಳು ಹೆಚ್ಚುವರಿ 50ರೂ ಸೇರಿ ಒಟ್ಟು 150 ರೂಪಾಯಿ ನಿಗದಿ ಮಾಡಿರುವ ಹಿನ್ನೆಲೆಯಲ್ಲಿ ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನದಲ್ಲಿ 39ದಿನದಿಂದ ನಡೆಯುತ್ತಿದ್ದ ಆಹೋರಾತ್ರಿ ಧರಣಿಯನ್ನು ಕಬ್ಬು ಬೆಳೆಗಾರರು ಕೈಬಿಟ್ಟಿದ್ದಾರೆ. ಸಕ್ಕರೆ ಸಚಿವ ಶಂಕರ ಪಾಟೀಲ ಮುನೇನಕೊಪ್ಪ ಅವರು ದೂರವಾಣಿ  ಮೂಲಕ ಕುರುಬೂರು ಶಾಂತಕುಮಾರ ಅವರೊಂದಿಗೆ ಮಾತನಾಡಿ, ಚಳವಳಿ ಕೈ ಬಿಡುವಂತೆ ಮನವಿ ಮಾಡಿದರು. ಸರ್ಕಾರದ ಆದೇಶ ಪ್ರತಿಯನ್ನು ರಾಜ್ಯ ಸರ್ಕಾರದ ಪ್ರತಿನಿಧಿಯಾಗಿ  ಆಹಾರ ಮತ್ತು ನಾಗರಿಕ ಸರಬರಾಜು ನಿಗಮದ ಜನರಲ್‌ ಮ್ಯಾನೇಜರ್‌ ಬಸವರಾಜ್ ಸೂಮಣ್ಣನವರ ನೀಡಿದರು. ಸರ್ಕಾರದ ಮನವಿಗೆ ಒಪ್ಪಿದ ಚಳವಳಿ ನಿರತರು, ಬಾಕಿ ಸಮಸ್ಯೆಗಳ ಬಗ್ಗೆ ರಾಜ್ಯ ಸರ್ಕಾರದ ನಿರ್ಧಾರವನ್ನು ಒಂದು ತಿಂಗಳು ಕಾದು ನೋಡುತ್ತೇವೆ ಎಂದಿದ್ದಾರೆ . ರಾಜ್ಯದ ಕಬ್ಬು ಬೆಳೆಗಾರರ ಸತತ ರೈತರ ಹೋರಾಟಕೆ ಮಣಿದು ಸರ್ಕಾರ ತಲೆಬಾಗಿದೆ, ಈ ಹೋರಾಟದಿಂದ ರಾಜ್ಯದ ಕಬ್ಬು ಬೆಳೆಗಾರರಿಗೆ 905 ಕೋಟಿ ಹಣ ಹೆಚ್ಚುವರಿ ಸಿಕ್ಕಂತಾಗಿದೆ ರೈತ ಹೋರಾಟಕ್ಕೆ ಸಿಕ್ಕ ಜಯ ಇದು ಎಂದು ಕುರುಬೂರು ಶಾಂತಕುಮಾರ್‌ ಅವರು ಹೇಳಿದ್ದಾರೆ.  
------------
7. ಪಿ ಕಿಸಾನ್‌ನ 13ನೇ ಕಂತು ಹೊಸ ವರ್ಷದ ದಿನ ಅಥವಾ ವರ್ಷದ ಮೊದಲ ವಾರ ಬಿಡುಗಡೆ ಆಗುವ ಸಾಧ್ಯತೆ ಇದೆ. ಕಳೆದ ವರ್ಷವೂ ಪ್ರಧಾನ ಮಂತ್ರಿ ಕಿಸಾನ್ ಯೋಜನೆಯ ಕಂತು ಜನವರಿ 1 ರಂದು ಬಿಡುಗಡೆ ಮಾಡಲಾಗಿತ್ತು. ಆದ್ದರಿಂದ ಈ ಬಾರಿಯೂ ಸರ್ಕಾರವು ಜನವರಿಯಲ್ಲಿ ಹಣವನ್ನು ವರ್ಗಾಯಿಸುವ ಸಾಧ್ಯತೆಯಿದೆ. ಆದರೆ, ಈ ಬಗ್ಗೆ ಸರ್ಕಾರದಿಂದ ಯಾವುದೇ ಅಧಿಕೃತ ಪ್ರಕಟಣೆ ಹೊರಬಿದ್ದಿಲ್ಲ. ಇನ್ನು    ನಿಮ್ಮ ಆಧಾರ್ ಕಾರ್ಡ್ ಅನ್ನು ಬ್ಯಾಂಕ್ ಖಾತೆಗೆ ಲಿಂಕ್ ಮಾಡಬೇಕು ಎಂಬ ಷರತ್ತು ಸರ್ಕಾರ ವಿಧಿಸಿದೆ.  
------------
8. ಹತ್ತಿ ಖರೀದಿ ಕೇಂದ್ರವನ್ನು ಪ್ರಾರಂಭಿಸಬೇಕು ಎಂದು ಆಗ್ರಹಿಸಿ ಅಖಿಲ ಭಾರತ ರೈತ  ಕೃಷಿ ಕಾರ್ಮಿಕ ಸಂಘಟನೆ ನೇತೃತ್ವದಲ್ಲಿ ರಾಯಚೂರಿನ ಜಿಲ್ಲಾಧಿಕಾರಿ ಕಚೇರಿಯ ಎದುರು ಜನವರಿ 4ರಂದು ಪ್ರತಿಭಟನೆ ಮಾಡಲು ನಿರ್ಧರಿಸಲಾಗಿದೆ. ಹತ್ತಿ ಖರೀದಿ ಕೇಂದ್ರವನ್ನು ತೆರೆದು ಪ್ರತಿ ಕ್ವಿಂಟಲ್‌ಗೆ 12 ಸಾವಿರ ನಿಗದಿಪಡಿಸಬೇಕು ಎಂದು ರೈತರು ಒತ್ತಾಯಿಸಿದ್ದಾರೆ.
------------

ತಿರುಪತಿ ತಿರುಮಲ ದೇವಾಲಯದ ಗರ್ಭಗುಡಿಯನ್ನು 6ರಿಂದ 8 ತಿಂಗಳು ಮುಚ್ಚುಲಾಗುತ್ತದೆ ಎನ್ನುವ ವರದಿಯನ್ನು ದೇಗುಲದ ಮುಖ್ಯ ಅರ್ಚಕರಾದ ವೇಣುಗೋಪಾಲ ದೀಕ್ಷಿತುಲು ತಳ್ಳಿಹಾಕಿದ್ದಾರೆ. ಗೋಪುರಕ್ಕೆ ಚಿನ್ನದ ಲೇಪನ ಕಾರ್ಯ ನಡೆದಿದ್ದರೂ, ತಿಮ್ಮಪ್ಪನ ಮೂಲ ವಿರಾಟ್ ಮೂರ್ತಿಯ ದರ್ಶನ ಎಂದಿನಂತೆ ನಡೆಯಲಿದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
------------

ಪಹಣಿ ಬೆಲೆಯನ್ನು ಇದೀಗ 25 ರೂಪಾಯಿಗೆ ಹೆಚ್ಚಳ ಮಾಡಲಾಗಿದೆ. ರೈತರು ಈ ಮೊದಲು ಹದಿನೈದು ರುಪಾಯಿ ಪಾವತಿಸಿ ಪಹಣಿ ಪಡೆಯುತ್ತಿದ್ದರು.ಇದೀಗ ಇದರ ಬೆಲೆಯನ್ನು 25 ರೂಪಾಯಿಗೆ ಹೆಚ್ಚಿಸಲಾಗಿದೆ. ಪ್ರಸ್ತುತ ಭೂಹಿಡುವಳಿ ರೈತ ಸಮುದಾಯ ಸರ್ಕಾರದ ಯಾವುದೇ ಸೌಲಭ್ಯ ಪಡೆಯಬೇಕಾದರೂ ಪಹಳೆ ಕಡ್ಡಾಯಗೊಳಿಸಲಾಗಿದೆ.  

Fitment Factor: ಸರ್ಕಾರಿ ನೌಕರರೇ ಗಮನಿಸಿ, ಶೇ.4ರಷ್ಟು ತುಟ್ಟಿಭತ್ಯೆ ಹೆಚ್ಚಳಕ್ಕೆ ಸಿದ್ಧತೆ! 

Published On: 31 December 2022, 03:01 PM English Summary: Clarification by Chief Priest on closure of Tirupati sanctum sanctorum

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.