1. ಸುದ್ದಿಗಳು

ಕೃಷಿ ಇಲಾಖೆಯ ಫ್ರೂಟ್ಸ್‌ ತಂತ್ರಾಂಶದಲ್ಲಿ ನಿಮ್ಮ ಹೆಸರು ನೋಂದಣಿಯಾಗಿದೆಯೇ? ಮೊಬೈಲ್ ನಲ್ಲಿಯೇ ಚೆಕ್ ಮಾಡಿ

farmer

ಕೃಷಿ ಇಲಾಖೆಯ ಫ್ರೂಟ್ಸ್ ತಂತ್ರಾಂಶದಲ್ಲಿ ನಿಮ್ಮ ಹೆಸರು ನೋಂದಣಿಯಾಗಿದೆಯೋ ಇಲ್ಲವೋ ಎಂಬುದನ್ನು ಈಗಮೊಬೈಲಿನಲ್ಲಯೇ ನೋಡಿಕೊಳ್ಳಹುದು. ಇದಕ್ಕಾಗಿ  ಕೃಷಿ ಇಲಾಖೆ ಕಚೇರಿಗೆ ಹೋಗಬೇಕಾಗಿಲ್ಲ. ಮೊಬೈಲಿನಲ್ಲಿಯೇ ಚೆಕ್ ಮಾಡುವುದು ಹೇಗೆ ಅಂದು ಕೊಂಡಿದ್ದೀರಾ ಇಲ್ಲಿದೆ ಸಂಪೂರ್ಣ ಮಾಹಿತಿ.

ಈ ಲಿಂಕ್ ಮೇಲೆ ಕ್ಲಿಕ್ ಮಾಡಿ.https://fruits.karnataka.gov.in/Reports/SearchFarmerID.aspx ನಿಮ್ಮ ಆಧಾರ್ ನಂಬರ್ ನಮೂದಿಸಿ ನಿಮ್ಮ ಹೆಸರು ಎಫ್ಐಡಿ ಆಗಿದನ್ನು ಹಾಗೂ ಯಾವ್ಯಾವ ಸರ್ವೆ ನಂಬರ್ ಲಿಂಕ್ ಆಗಿದೆ ಎಂಬುದನ್ನು ಚೆಕ್ ಮಾಡಬಹುದು.

ನಿಮ್ಮ ಆಧಾರ್ ನಂಬರ್ ಬಳಸಿ ನಿಮ್ಮ ಹೆಸರಿನಲ್ಲಿ FID ಆಗಿದ್ದನ್ನು ತಿಳಿಯಬಹುದು. ಹಾಗೂ ನಿಮ್ಮ ಎಲ್ಲ ಸರ್ವೇ ನಂಬರ್ ಗಳು ಲಿಂಕ್ ಆಗಿದೆಯೋ ಇಲ್ಲವೋ ಎಂಬುದನ್ನು ಸಹ ನೋಡಿಕೊಳ್ಳಬಹುದು.

ಒಂದು ವೇಳೆ ಕೆಲವು ಸರ್ವೇ ನಂ.  ಕೈ ಬಿಟ್ಟಿದ್ದರೆ ಆಧಾರ್ ಮತ್ತು ಆರ್. ಟಿ. ಸಿ (ಪಹಣಿ) ಯೊಂದಿಗೆ ಅಥವಾ FID ಆಗಿಲ್ಲದಿದ್ದಲ್ಲಿ ಆಧಾರ್ (ಒಪ್ಪಿಗೆಯೊಂದಿಗೆ),  RTC (ಪಹಣಿ /ಉತ್ತಾರಿ), ಬ್ಯಾಂಕ್ ಪಾಸ್ ಬುಕ್ ಮೊದಲನೇ ಪುಟದ ಜೆರಾಕ್ಸ್ ,  ಜಾತಿ ಮತ್ತು ಆದಾಯ ಪ್ರಮಾಣ ಪತ್ರ (ಪ.ಪಂ & ಪ.ಜಾ), ಇತ್ತೀಚಿನ ಭಾವಚಿತ್ರದೊಂದಿಗೆ ಹತ್ತಿರದ ಗ್ರಾಮ ಲೆಕ್ಕಾಧಿಕಾರಿಗಳಲ್ಲಿ,  ರೈತ ಸಂಪರ್ಕ್ ಕೇಂದ್ರಗಳಲ್ಲಿ,  ತಾಲೂಕಿನ ತೋಟಗಾರಿಕೆ ಇಲಾಖೆಯ ಕಚೇರಿಗಳು,  ರೇಷ್ಮೆ ಇಲಾಖೆಯ ಕಚೇರಿಗಲ್ಲಿ ಸಲ್ಲಿಸಬಹುದು.

ಏನೀದು ಎಫ್ಐಡಿ?

ತಂತ್ರಾಂಶದಲ್ಲಿ ಹೆಸರು ನೋಂದಣಿಯಾದ ರೈತರಿಗೆ ಯೂನಿಕ್‌ ನಂಬರ್‌ ಇರುವ ಗುರುತಿನ ಸಂಖ್ಯೆ ನೀಡಲಾಗುತ್ತದೆ. ರೈತರ ಎಲ್ಲಾಮಾಹಿತಿ ಆನ್‌ಲೈನ್‌ನಲ್ಲೇ ನೋಂದಣಿಯಾಗುತ್ತದೆ. ಯೂನಿಕ್‌ ನಂಬರ್‌ ಇದ್ದಲ್ಲಿ ಎಲ್ಲಾ ವಿವರ ಅಲ್ಲಿಯೇ ಸಿಗುತ್ತದೆ. ಇಲಾಖೆಯಿಂದ ನೀಡಿರುವ ಎಲ್ಲಾಸೌಲಭ್ಯಗಳ ಮಾಹಿತಿ ಲಭ್ಯವಾಗಲಿದೆ.

ರಿಯಾಯಿತಿ ದರದಲ್ಲಿ ಸೌಲಭ್ಯ:

 ಈ ಫ್ರೂಟ್ಸ್‌ ತಂತ್ರಾಂಶದ ಮೂಲಕ ಬಿತ್ತನೆ ಬೀಜ, ಕೀಟನಾಶಕ, ಸಾವಯವ ಗೊಬ್ಬರ, ಕೃಷಿ ಉಪಕರಣ, ಸಸ್ಯ ಸಂರಕ್ಷಣಾ ಉಪಕರಣಗಳನ್ನು ಸಹಾಯ ಧನದಲ್ಲಿ ಪಡೆಯಬಹುದು.ಕೃಷಿ, ತೋಟಗಾರಿಕೆ, ರೇಷ್ಮೆ, ಪಶುಸಂಗೋಪನೆ ಮತ್ತು ಇತರೆ ಸಂಬಂಧಿಸಿದ ಇಲಾಖೆಗಳಿಂದ ದೊರೆಯುವ ಸಹಾಯಧನ ಸೌಲಭ್ಯಗಳನ್ನು ಪಡೆಯಲು ಮತ್ತು ಬೆಂಬಲ ಬೆಲೆ, ಬೆಳೆ ವಿಮೆ, ಬೆಳೆ ಸಾಲ, ಬೆಳೆ ಹಾನಿ, ಪರಿಹಾರ ಹಾಗೂ ಯೋಜನೆಗಳಿಗೆ ಫ್ರೂಟ್ಸ್‌ ಸಂಖ್ಯೆಯನ್ನು ಬಳಸಲಾಗುತ್ತದೆ. ಈ ಸಂಖ್ಯೆಯೊಂದಿಗೆ ಮುಂದೆ ನೀವು ಎಲ್ಲ ಸೌಲಭ್ಯ ಪಡೆಯಬಹುದು. ಒಂದು ವೇಳೆ ಈ ತಂತ್ರಾಂಶದಲ್ಲಿ ನೋಂದಾಯಿಸಿಕೊಳ್ಳದ ರೈತರಿಗೆ ಇಲಾಖೆಯಿಂದ ಯಾವುದೇ ಸೌಲಭ್ಯ, ರಿಯಾಯಿತಿ ದರದಲ್ಲಿ ನೀಡಲು ಅವಕಾಶ ಇರುವುದಿಲ್ಲ.

ಹೆಸರು ನೋಂದಾಯಿಸಿಕೊಳ್ಳಿ

ನಿಮ್ಮ ಹೆಸರು ನೋಂದಾಯಿಸಿಕೊಳ್ಳದೇ ಇದ್ದರೆ ರೈತರು ಆಯಾ ಹೋಬಳಿ ರೈತ ಸಂಪರ್ಕ ಕೇಂದ್ರಗಳಲ್ಲಿಪಹಣಿ, ಆಧಾರ್‌ ಕಾರ್ಡ್‌, ಬ್ಯಾಂಕ್‌ ಪಾಸ್‌ಬುಕ್‌ ಜೆರಾಕ್ಸ್‌ ಪ್ರತಿ ಹಾಗೂ ಪಾಸ್‌ಪೋರ್ಟ್‌ ಅಳತೆಯ ಫೋಟೋ ಹಾಗೂ ಪರಿಶಿಷ್ಟ ಜಾತಿ ಮತ್ತು ಪಂಗಡದ ರೈತರಾಗಿದ್ದಲ್ಲಿಜಾತಿ ಪ್ರಮಾಣ ಪತ್ರದ ಜೆರಾಕ್ಸ್‌ ಪ್ರತಿ ಸೇರಿದಂತೆ ಸೂಕ್ತ ದಾಖಲೆ ನೀಡಿ ತಮ್ಮ ಹೆಸರು ನೋಂದಾಯಿಸಿಕೊಳ್ಳಬಹುದು.

Published On: 05 April 2021, 11:44 PM English Summary: Click here to see your name registered with Fruits software

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.