1. ಸುದ್ದಿಗಳು

ಉದ್ಯೋಗಕ್ಕೆ ಇನ್ನುಮುಂದೆ ಏಕ ಪರೀಕ್ಷೆ

ಕೇಂದ್ರ ಸರ್ಕಾರದ ಉದ್ಯೋಗಗಳ ನೇಮಕಾತಿ ಪ್ರಕ್ರಿಯೆಗೆ ಹೊಸ ಸ್ವರೂಪ ಮತ್ತು ಪಾರದರ್ಶಕತೆ ತರುವ ಸಲುವಾಗಿ ರಾಷ್ಟ್ರೀಯ ನೇಮಕಾತಿ ಸಂಸ್ಥೆ (NRA) ಸ್ಥಾಪಿಸಲು ನರೇಂದ್ರ  ಕೇಂದ್ರ ಸರ್ಕಾರ ಮಹತ್ವದ ಹೆಜ್ಜೆಯಿಟ್ಟಿದೆ.

ದೇಶದ ಉನ್ನತ ಶಿಕ್ಷಣಕ್ಕೆ ರಾಷ್ಟ್ರವ್ಯಾಪಿ ಒಂದೇ ಸಾಮಾನ್ಯ ಪ್ರವೇಶ ಪರೀಕ್ಷೆ (Common Entrance Test) ನಡೆಸುವ ರೀತಿಯಲ್ಲೇ ವಿವಿಧ ಸರಕಾರಿ ವಲಯಗಳಲ್ಲಿ ಯುವಜನರ ನೇಮಕಾತಿಗಾಗಿ ರಾಷ್ಟ್ರಾದ್ಯಂತ ಒಂದೇ ನೇಮಕ ಪರೀಕ್ಷೆ ನಡೆಸುವ ಕ್ರಾಂತಿಕಾರಿ ನಿರ್ಧಾರ ಕೈಗೊಂಡಿದೆ. ಅಭ್ಯರ್ಥಿಗಳು ಪಡೆಯುವ ಶ್ರೇಯಾಂಕ ಅಥವಾ ಅಂಕಗಳ ಆಧಾರದಲ್ಲಿ ಸಂದರ್ಶನ ಅಥವಾ ನೇರ ನೇಮಕಾತಿಯ ಮೂಲಕ ಉದ್ಯೋಗ ನೀಡಲಾಗುತ್ತದೆ.

, ಈ ಕುರಿತು ಸಲ್ಲಿಸಲಾಗಿದ್ದ ಪ್ರಸ್ತಾವನೆಗೆ ಬುಧವಾರ ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ನಡೆದ ಸಂಪುಟ ಸಭೆಯಲ್ಲಿ ಒಪ್ಪಿಗೆ ನೀಡಲಾಗಿದೆ. ಈ ಬಗ್ಗೆ ಕೇಂದ್ರ ಸಚಿವ ಪ್ರಕಾಶ್‌ ಜಾಬ್ಡೇಕರ್‌ (Prakash javedkar) ಟ್ವೀಟ್‌ ಮೂಲಕ ತಿಳಿಸಿದ್ದಾರೆ.

 ಒಂದೇ ರೀತಿಯ ಉದ್ಯೋಗಗಳಿಗಾಗಿ ಹಲವು ಬಾರಿ ಪರೀಕ್ಷೆ ಬರೆಯುವ, ಪರೀಕ್ಷಾ ಶುಲ್ಕ ಭರಿಸುವ ತೊಂದರೆಯನ್ನು ಎನ್‌ಆರ್‌ಎ ನಿವಾರಿಸುತ್ತದೆ. ಕೇಂದ್ರದ ಗ್ರೂಪ್‌ ಬಿ ಮತ್ತು ಸಿ ಹುದ್ದೆಗಳಲ್ಲಿ ಮಹಿಳೆಯರು ಮತ್ತು ಗ್ರಾಮೀಣ ಪ್ರದೇಶದ ಆಕಾಂಕ್ಷಿ
ಗಳಿಗೆ ಇದರಿಂದಾಗಿ ಹೆಚ್ಚು ಅವಕಾಶ ದೊರೆಯಲಿದೆ ಎಂದು ಕೇಂದ್ರ ಸಚಿವ ಪ್ರಕಾಶ್‌ ಜಾವಡೇಕರ್‌ ಹೇಳಿದ್ದಾರೆ. 

ಸಿಬ್ಬಂದಿ ನೇಮಕಾತಿ ಆಯೋಗ (SSC), ರೈಲ್ವೆ ನೇಮಕಾತಿ ಮಂಡಳಿ (RRB) ಮತ್ತು ಬ್ಯಾಂಕ್‌ ಸಿಬ್ಬಂದಿ ಆಯ್ಕೆ ಸಂಸ್ಥೆ (IBPS) ಈಗ ನೇಮಕಾತಿಗಾಗಿ ಪ್ರತ್ಯೇಕ ಪರೀಕ್ಷೆ ಗಳನ್ನು ನಡೆಸುತ್ತಿವೆ. ಇನ್ನು ಮುಂದೆ ಇವೆಲ್ಲವೂ ಸಿಇಟಿಯಲ್ಲಿ ಒಳಗೊಳ್ಳಲಿವೆ.

. ಒಂದೊಂದು ಪರೀಕ್ಷೆಗೂ 2.5 ಕೋಟಿಯಿಂದ 3 ಕೋಟಿ ಆಕಾಂಕ್ಷಿಗಳು ಹಾಜರಾಗುತ್ತಿದ್ದಾರೆ. ಮುಂದೆ ಒಂದೇ ಪರೀಕ್ಷೆ ಬರೆದರೆ ಸಾಕಾಗುತ್ತದೆ. ಸಿಇಟಿ ಪರೀಕ್ಷೆಗೆ ಕಲಿಯಬೇಕಾದ ಪಠ್ಯ ವಿಷಯವೂ ಸಮಾನವಾಗಿರುತ್ತದೆ. ಈಗಿನಂತೆ, ಬೇರೆ ಬೇರೆ ಹುದ್ದೆಯ ಪರೀಕ್ಷೆಗೆ ಪ್ರತ್ಯೇಕವಾಗಿ ಸಿದ್ಧತೆ ನಡೆಸಬೇಕಾದ ಅಗತ್ಯವೂ ಇರುವುದಿಲ್ಲ. 

10, 12ನೇ ತರಗತಿ ಮತ್ತು ಪದವಿ ಪೂರ್ಣಗೊಂಡವರಿಗೆ ಮೂರು ಹಂತಗಳಲ್ಲಿ ಪ್ರತ್ಯೇಕ ಸಿಇಟಿ ಪರೀಕ್ಷೆಗಳನ್ನು ಕೈಗೊಳ್ಳಲಾಗುವುದು. ರಾಷ್ಟ್ರೀಯ ನೇಮಕಾತಿ ಸಂಸ್ಥೆ ರಚನೆಗೊಳ್ಳುವ ಮೂಲಕ ಈವರೆಗೆ ಅಸ್ತಿತ್ವದಲ್ಲಿದ್ದ ಸ್ಟಾಫ್ ಸೆಲೆಕ್ಷನ್ ಕಮಿಷನ್, ರೈಲ್ವೆ ನೇಮಕಾತಿ ಮಂಡಳಿ ಮತ್ತು ಬ್ಯಾಂಕಿಂಗ್ ಸೇವಾ ಸಿಬ್ಬಂದಿ ಸಂಸ್ಥೆ (ಐಬಿಪಿಎಸ್) ಎಂಬ ಮೂರು ನೇಮಕಾತಿ ಸಂಸ್ಥೆಗಳು ಬದಿಗೆ ಸರಿಯಲಿವೆ. ಸಿಇಟಿಯಲ್ಲಿ ಉತ್ತೀರ್ಣಗೊಂಡ ಅಭ್ಯರ್ಥಿಗಳಲ್ಲಿ ತಮಗೆ ಬೇಕಾದವರನ್ನು ಈ ಮೂರು ಸಂಸ್ಥೆಗಳು ನಿರ್ದಿಷ್ಟ ಕ್ಷೇತ್ರಗಳಲ್ಲಿನ ಉದ್ಯೋಗಕ್ಕಾಗಿ ಆಯ್ಕೆ ಮಾಡಿಕೊಳ್ಳಬಹುದಾಗಿದೆ.

ಸಮೀಪದಲ್ಲೇ ಪರೀಕ್ಷೆ:

ದೇಶದ ಪ್ರತಿ ಜಿಲ್ಲೆಯಲ್ಲಿ ಪರೀಕ್ಷಾ ಕೇಂದ್ರ ತೆರೆಯುವುದರಿಂದ ದೂರದ ಪ್ರದೇಶಗಳಿಂದ ಬರುವ ಅಭ್ಯರ್ಥಿಗಳಿಗೆ ಅನುಕೂಲವಾಗಲಿದೆ. 117 ಮಹತ್ವಾಕಾಂಕ್ಷಿ ಜಿಲ್ಲೆಗಳಲ್ಲಿ ಪರೀಕ್ಷಾ ಮೂಲಸೌಕರ್ಯಗಳನ್ನು ಹೆಚ್ಚಿಸುವ ಬಗ್ಗೆ ವಿಶೇಷ ಗಮನ ನೀಡಲು ಕೇಂದ್ರ ಉದ್ದೇಶಿಸಿದೆ. ಇದರಿಂದ ಅಭ್ಯರ್ಥಿಗಳು ತಮ್ಮ ಮನೆ/ಊರಿಗೆ ಹತ್ತಿರದ ಸ್ಥಳದಲ್ಲಿ ಪರೀಕ್ಷೆ ಬರೆಯಬಹುದು. ಗ್ರಾಮೀಣ ಅಭ್ಯರ್ಥಿಗಳಿಗೆ ಹೆಚ್ಚು ಅನುಕೂಲವಾಗಲಿದ್ದು ಮತ್ತು ಸರ್ಕಾರಿ ಉದ್ಯೋಗಗಳ ಮೇಲೆ ಹೆಚ್ಚಿನ ಆಸಕ್ತಿ ಮೂಡುವಂತೆ ಪ್ರೇರೇಪಿಸಲಿದೆ.

ಲಾಭಗಳೇನು?

ಅಭ್ಯರ್ಥಿಗಳು ಎಷ್ಟು ಬಾರಿ ಬೇಕಾದರೂ ಸಿಇಟಿ ಬರೆಯಬಹುದು

ಅಭ್ಯರ್ಥಿಗಳಿಗೆ ವಯೋಮಿತಿ ಅನ್ವಯ ಆಗಲಿದೆ

ಒಂದು ಬಾರಿ ಪಡೆದ ಅಂಕವು ಮೂರು ವರ್ಷದವರೆಗೆ ಮೌಲಿಕವಾಗಿರುತ್ತದೆ

ಈ ಮೂರು ವರ್ಷಗಳಲ್ಲಿ ಹಲವು ಬಾರಿ ಪರೀಕ್ಷೆ ಬರೆದಿದ್ದರೆ ಅವುಗಳಲ್ಲಿನ ಅತ್ಯುತ್ತಮ ಅಂಕ ಗಣನೆಗೆ ಬರಲಿದೆ

ಆರಂಭದ ವರ್ಷಗಳಲ್ಲಿ, ವರ್ಷಕ್ಕೆ ಎರಡು ಬಾರಿ ಸಿಇಟಿ ನಡೆಯಲಿದೆ

ಪ್ರತಿ ಪರೀಕ್ಷೆಗೂ ನೋಂದಣಿ, ಪ್ರವೇಶ ಪತ್ರ, ಅಂಕ ಮತ್ತು ರ್‍ಯಾಂಕ್‌ ಪಟ್ಟಿ ಪ್ರಕಟವಾಗಲಿದೆ

ಪ್ರತಿ ಜಿಲ್ಲೆಯಲ್ಲಿಯೂ ಒಂದು ಪರೀಕ್ಷಾ ಕೇಂದ್ರ ಇರಲಿದೆ

---

ರಾಷ್ಟ್ರೀಯ ನೇಮಕ ಏಜೆನ್ಸಿಯು ದೇಶದ ಕೋಟ್ಯಂತರ ಯುವಜನರಿಗೆ ನೆರವಾಗಲಿದೆ. ವರ್ಷದಲ್ಲಿ ಹತ್ತಾರು ಪರೀಕ್ಷೆಗಳನ್ನು ಬರೆಯುವ ಬದಲು ಇನ್ನು ಒಂದೇ ಪರೀಕ್ಷೆಯ ಮೂಲಕ ಕೇಂದ್ರದ ನೌಕರಿಗಳನ್ನು ಪಡೆಯಬಹುದು. ಸರ್ಕಾರಿ ಉದ್ಯೋಗಗಳ ನೇಮಕಾತಿಯಲ್ಲಿ ಸಂಪೂರ್ಣ ಪಾರದರ್ಶಕತೆ ಬರಲಿದೆ.
ಪ್ರಧಾನಮಂತ್ರಿ ನರೇಂದ್ರ ಮೋದಿ

Published On: 20 August 2020, 10:44 AM English Summary: common entrance test same exam for employment

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.