ಕಲಬುರಗಿ ಜಿಲ್ಲಾಡಳಿತ, ಮಹಾನಗರ ಪಾಲಿಕೆ ಹಾಗೂ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಇವುಗಳ ಸಂಯುಕ್ತಾಶ್ರಯದಲ್ಲಿ ಕಲಬುರಗಿ ನಗರದ ಕೆಳಕಂಡ ಸ್ಥಳಗಳಲ್ಲಿ ಇದೇ ಸೆಪ್ಟೆಂಬರ್ 1 ರಂದು ಕೋವಿಡ್ ಲಸಿಕಾಕರಣ ಮೆಗಾ ಕ್ಯಾಂಪ್ನ್ನು ಆಯೋಜಿಸಲಾಗಿದ್ದು, ಸಾರ್ವಜನಿಕರು ಇದರ ಸದುಪಯೋಗ ಪಡೆಯಬೇಕೆಂದು ಕಲಬುರಗಿ ಮಹಾನಗರ ಪಾಲಿಕೆ ಆಯುಕ್ತ ಸ್ನೇಹಲ್ ಸುಧಾಕರ ಲೋಖಂಡೆ ಅವರು ತಿಳಿಸಿದ್ದಾರೆ.
ಕಲಬುರಗಿ ನಗರದ ಸೂಪರ ಮಾರ್ಕೇಟ್ ದತ್ತಮಂದಿರದಲ್ಲಿ ಲಸಿಕಾಕರಣ ಕ್ಯಾಂಪ್ ಆಯೋಜಿಸಲಾಗಿದ್ದು, ನೈರ್ಮಲ್ಯ ನಿರೀಕ್ಷಕ ದೀಪಕ ಇವರನ್ನು ನೋಡಲ್ ಅಧಿಕಾರಿಯಾಗಿ ನೇಮಕ ಮಾಡಲಾಗಿದ್ದು, ಮೊಬೈಲ್ ಸಂಖ್ಯೆ 9740483174 ಇರುತ್ತದೆ.
ಕಲಬುರಗಿಯ ಪುಟಾಣಿಗಲ್ಲಿಯ ಹನುಮಾನ ದೇವಸ್ಥಾನದಲ್ಲಿ ಲಸಿಕಾ ಕ್ಯಾಂಪ್ ಆಯೋಜಿಸಿದ್ದು, ಪಿಂಟು ಅವರನ್ನು ನೂಡಲ್ ಅಧಿಕಾರಿಯಾಗಿ ನೇಮಕ ಮಾಡಲಾಗಿದ್ದು, ಇವರ ಮೊಬೈಲ್ ನಂಖ್ಯೆ 9449718568 ಇರುತ್ತದೆ. ಕಲಬುರಗಿಯ ಅನ್ನಪೂರ್ಣ ಕ್ರಾಸ್ನಲ್ಲಿರುವ ಇಂದಿರಾ ಸ್ಮಾರಕ ಟೌನ್ಹಾಲ್ ಭವನದಲ್ಲಿ ಲಸಿಕಾ ಕ್ಯಾಂಪ್ ಆಯೋಜಿಸಿದ್ದು, ವಿಶ್ವರಾಧ್ಯ ಇವರನ್ನು ನೂಡಲ್ ಅಧಿಕಾರಿಯಾಗಿ ನೇಮಕ ಮಾಡಲಾಗಿದ್ದು, ಇವರ ಮೊಬೈಲ್ ಸಂಖ್ಯೆ 9916164925 ಇರುತ್ತದೆ.
ಕಲಬುರಗಿಯ ಶಿವಾಜಿ ನಗರದ ನೈರ್ಮಲ್ಯ ನಿರೀಕ್ಷಕರ ಕಚೇರಿಯಲ್ಲಿ ಲಸಿಕಾ ಕ್ಯಾಂಪ್ ಆಯೋಜಿಸಿದ್ದು, ಶರಣು ಟೆಂಗಳಿ ಇವರನ್ನು ನೂಡಲ್ ಅಧಿಕಾರಿಯಾಗಿ ನೇಮಕ ಮಾಡಲಾಗಿದ್ದು, ಇವರ ಮೊಬೈಲ್ ಸಂಖ್ಯೆ 9980150010 ಇರುತ್ತದೆ. ಕಲಬುರಗಿಯ ಬ್ರಹ್ಮಪೂರದಲ್ಲಿರುವ ನೈರ್ಮಲ್ಯ ನಿರೀಕ್ಷಕರ ಕಚೇರಿಯಲ್ಲಿ ಲಸಿಕಾ ಕ್ಯಾಂಪ್ ಆಯೋಜಿಸಿದ್ದು, ಕಲ್ಲಯ್ಯ ಸ್ವಾಮಿ ಇವರನ್ನು ನೂಡಲ್ ಅಧಿಕಾರಿಯಾಗಿ ನೇಮಕ ಮಾಡಲಾಗಿದ್ದು, ಇವರ ಮೊಬೈಲ್ ಸಂಖ್ಯೆ 9632016211 ಇರುತ್ತದೆ.
ಕಲಬುರಗಿಯ ಎಂ.ಎಸ್.ಕೆ.ಮಿಲ್ದಲ್ಲಿರುವ ನೈರ್ಮಲ್ಯ ನಿರೀಕ್ಷಕರ ಕಚೇರಿಯಲ್ಲಿ ಲಸಿಕಾ ಕ್ಯಾಂಪ್ ಆಯೋಜಿಸಲಾಗಿದ್ದು, ಹಣಮಂತ ನಿಂಬಾಳಕರ ಇವರನ್ನು ನೂಡಲ್ ಅಧಿಕಾರಿಯಾಗಿ ನೇಮಕ ಮಾಡಲಾಗಿದ್ದು ಇವರ ಮೊಬೈಲ್ ಸಂಖ್ಯೆ 9972236444 ಇರುತ್ತದೆ.
ಪ್ರತಿಯೊಂದು ಲಸಿಕಾ ಕ್ಯಾಂಪ್ನಲ್ಲಿ ತಲಾ 500 ಪ್ರಮಾಣದಲ್ಲಿ ಕೋವಿಡ್ ಲಸಿಕೆ ನೀಡಲಾಗುತ್ತಿದ್ದು, ಸಾರ್ವಜನಿಕರು ಇದರ ಸದುಪಯೋಗ ಪಡೆಯಬೇಕೆಂದು ಅವರು ತಿಳಿಸಿದ್ದಾರೆ.
ಸೆಪ್ಟೆಂಬರ್ 1 ರಂದು ಜಿಲ್ಲೆಯಾದ್ಯಂತ ಕೋವಿಡ್ ಲಸಿಕಾ ಮೇಳ
ಕಲಬುರಗಿ ಜಿಲ್ಲೆಯಾದ್ಯಂತ ಇದೇ ಸೆಪ್ಟೆಂಬರ್ 1 ರಂದು (ಪ್ರತಿ ಬುಧವಾರ) ಕೋವಿಡ್ ಲಸಿಕಾ ಮೇಳವನ್ನು ಹಮ್ಮಿಕೊಳ್ಳಲಾಗಿದ್ದು, ಕಲಬುರಗಿ ಜಿಲ್ಲೆಯ ಸಾರ್ವಜನಿಕರು ಇದರ ಸದುಪಯೋಗ ಪಡೆಯಬೇಕೆಂದು ಕಲಬುರಗಿ ಜಿಲ್ಲಾಧಿಕಾರಿಗಳಾದ ವಿ.ವಿ. ಜ್ಯೋತ್ಸಾö್ನ ಅವರು ತಿಳಿಸಿದ್ದಾರೆ.
ಕಲಬುರಗಿ ಜಿಲ್ಲೆಯ ಎಲ್ಲಾ ಆರೋಗ್ಯ ಉಪ ಕೇಂದ್ರಗಳಲ್ಲಿ, ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ, ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ ಮತ್ತು ತಾಲೂಕು ಸರ್ಕಾರಿ ಸಾರ್ವಜನಿಕ ಆಸ್ಪತ್ರೆಗಳಲ್ಲಿ ಹಾಗೂ ಕಲಬುರಗಿ ನಗರದ ಜಿಲ್ಲಾ ಆಸ್ಪತ್ರೆಯಲ್ಲಿ ಹಾಗೂ ಎಲ್ಲಾ ನಗರ ಆರೋಗ್ಯ ಕೇಂದ್ರಗಳಲ್ಲಿ ಕೋವಿಶೀಲ್ಡ್ ಮತ್ತು ಕೋವ್ಯಾಕ್ಸಿನ್ ಮೊದಲ ಹಾಗೂ ಎರಡನೇ ಲಸಿಕೆಯ ಡೋಸ್ನ್ನು ನೀಡಲಾಗುತ್ತಿದ್ದು, ಜಿಲ್ಲೆಯ ಸಾರ್ವಜನಿಕರು ಇದರ ಸದುಪಯೋಗ ಪಡೆಯಬೇಕೆಂದು ಅವರು ತಿಳಿಸಿದ್ದಾರೆ.
Share your comments