Cylinder Price Hike : ಗ್ರಾಹಕರೇ ಗಮನಿಸಿ ಮತ್ತೊಮ್ಮೆ ಸಿಲಿಂಡರ್ ಬೆಲೆ ಹೆಚ್ಚಳವಾಗಿದೆ. ಅಷ್ಟೇ ಅಲ್ಲದೇ ಪರಿಷ್ಕೃತ ದರ ಕೂಡ ಇಂದಿನಿಂದಲೇ ಜಾರಿಯಾಗುತ್ತಿದೆ ಕೂಡ.
ಇತ್ತೀಚಿಗೆ ಪ್ರತಿದಿನವೂ ಒಂದಿಲ್ಲೊಂದು ದಿನಬಳಕೆ ವಸ್ತುಗಳ ಬೆಲೆ ಏರಿಕೆಯಾಗುತ್ತಲೇ ಇದೆ. ಇದೀಗ ಗ್ರಾಹಕರಿಗೆ ಮತ್ತೊಂದು ಶಾಕ್ ಕಾದಿದೆ.
ಹೌದು, ಇದೀಗ ವಾಣಿಜ್ಯ ಬಳಕೆಯ ಗ್ಯಾಸ್ ಸಿಲಿಂಡರ್ಗಳ (LPG Gas Cylinder) ಬೆಲೆಯನ್ನು ಪ್ರತಿ ಸಿಲಿಂಡರಿಗೆ 7 ರೂಪಾಯಿಯಂತೆ ಹೆಚ್ಚಿಸಲಾಗಿದೆ.
19 ಕೆಜಿ ವಾಣಿಜ್ಯ ಎಲ್ಪಿಜಿ ಸಿಲಿಂಡರ್ನ ಚಿಲ್ಲರೆ ಮಾರಾಟದ ಬೆಲೆ ಪ್ರತಿ ಸಿಲಿಂಡರ್ಗೆ ರೂ. 1,773 ರಿಂದ ರೂ. 1,780 ಕ್ಕೆ ಏರಿಕೆಯಾಗಿದೆ.
ಆಗಾಗ ಈ ಎಲ್ಪಿಜಿ ಬೆಲೆಯಲ್ಲಿ ಏರಿಕೆ ಅಥವಾ ಇಳಿಕೆ ಆಗುತ್ತಲೆ ಇರುತ್ತದೆ. ಅದೆ ರೀತಿ ಜುಲೈ 4 ಅಂದರೆ ಇಂದಿನಿಂದ ಎಲ್ಪಿಜಿ ಬೆಲೆಯನ್ನು ಹೆಚ್ಚು ಮಾಡಲಾಗಿದೆ.
ತೈಲ ಮಾರುಕಟ್ಟೆ ಕಂಪನಿಗಳು (OMC) ಮಂಗಳವಾರ ವಾಣಿಜ್ಯ ಎಲ್ಪಿಜಿ ಸಿಲಿಂಡರ್ಗಳ ಬೆಲೆಯನ್ನು 7 ರೂಪಾಯಿ ಹೆಚ್ಚಿಸಿದೆ.
ಈ ಪರಿಷ್ಕೃತ ದರಗಳು ಇಂದಿನಿಂದಲೇ ಜಾರಿಗೆ ಕೂಡ ಬರಲಿವೆ ಎಂದೂ ತಿಳಿದು ಬಂದಿದೆ.
3 ತಿಂಗಳ ಬಳಿಕ ವಾಣಿಜ್ಯ ಸಿಲಿಂಡರ್ಗಳ ಬೆಲೆಯಲ್ಲಿ ಮತ್ತೆ ಹೆಚ್ಚಿಸಲಾಗಿದೆ. ಈ ಬದಲಾವಣೆಯ ನಂತರ, ದೆಹಲಿಯಲ್ಲಿ 19 ಕೆಜಿ ಎಲ್ಪಿಜಿ ಸಿಲಿಂಡರ್ಗೆ ಪ್ರಸ್ತುತ ಚಿಲ್ಲರೆ ಬೆಲೆ 1,780 ರೂ. ಗೆ ಏರಿಕೆಯಾಗಲಿದೆ.
ಅದೆ ರೀತಿ ದಿನಬಳಕೆಯ ದೇಶೀಯ ಎಲ್ಪಿಜಿ ಸಿಲಿಂಡರ್ಗಳ ಬೆಲೆಯಲ್ಲಿ ಯಾವ ಬದಲಾವಣೆಗಳು ಇಲ್ಲ’’ ಎಂದು ಮಾಹಿತಿ ಹೇಳಲಾಗುತ್ತಿದೆ.
ಹೌದು, ಗೃಹ ಬಳಕೆಯ ಎಲ್ಪಿಜಿ ಸಿಲಿಂಡರ್ಗಳ ದರದಲ್ಲಿ ಯಾವುದೇ ಬದಲಾವಣೆಗಳು ಆಗಿಲ್ಲ ಎಂದು ತೈಲ ಮಾರುಕಟ್ಟೆ ಕಂಪನಿಗಳು ತಿಳಿಸಿವೆ.
1 ವರ್ಷದಿಂದ ಗೃಹ ಬಳಕೆಯ ಅಥವಾ ವಾಣಿಜ್ಯ ಸಿಲಿಂಡರ್ ದರದಲ್ಲಿ ಭಾರಿ ಏರಿಕೆಯಾಗಿದೆ. ಜೂನ್ನಲ್ಲಿ 83 ರೂ. ಹಾಗೂ ಮೇ ತಿಂಗಳಲ್ಲಿ 19 ಕೆಜಿ ವಾಣಿಜ್ಯ ಎಲ್ಪಿಜಿ ಗ್ಯಾಸ್ ಸಿಲಿಂಡರ್ಗಳ ದರವನ್ನು 171.50 ರೂ ಕಡಿತಗೊಳಿಸಲಾಗಿತ್ತು.
Red Banana Farming : ಕೆಂಪು ಬಾಳೆ ಬೆಳೆದು ತಿಂಗಳಿಗೆ ₹30 ಲಕ್ಷ ಗಳಿಕೆ |ಇಲ್ಲಿದೆ ಈ ಯುವ ರೈತನ ಸಾಹಸಗಾಥೆ
Share your comments