1. ಸುದ್ದಿಗಳು

Cyrus Mistry: ಹೂಳುವುದು ಇಲ್ಲ..ಸುಡುವುದು ಇಲ್ಲ..ಪಾರ್ಸಿ ಸಂಪ್ರದಾಯದಲ್ಲಿ ಅಂತ್ಯಕ್ರಿಯೆ ಹೇಗೆ ನಡೆಯುತ್ತೆ ಗೊತ್ತಾ..?

Maltesh
Maltesh
Cyrus Mistry: No burial..no cremation..Do you know how funerals are conducted in the Parsi

ಟಾಟಾ  ಗ್ರೂಫ್‌ನ  ಮಾಜಿ  ಅಧ್ಯಕ್ಷ  ಸೈರಸ್  ಮಿಸ್ತ್ರಿ  ಇತ್ತೀಚಿಗೆ ಮುಂಬೈನಲ್ಲಿ ನಡೆದ ಕಾರು ಅಪಘಾತದಲ್ಲಿ ಮೃತಪಟ್ಟಿದ್ದರು.  ದೇಶದ ಖ್ಯಾತ ಉದ್ಯಮಿಯ ಈ ದುರಂತ ಸಾವು ಎಲ್ಲರನ್ನು ದಿಗ್ಭ್ರಮೆ ಗೊಳಿಸಿತ್ತು. ಸದ್ಯ ಅವರ ಶವದ   ಮರಣೋತ್ತರ ಪರೀಕ್ಷೆಯನ್ನು   ನಡೆಸಲಾಗಿದ್ದು , ಶವವನ್ನು    ಕುಟುಂಬಕ್ಕೆ  ಹಸ್ತಾಂತರಿಸಲಾಗಿದೆ.   ವರದಿಗಳ ಪ್ರಕಾರ,  ಮುಂಬೈನ  ವರ್ಲಿಯ  ಸ್ಮಶಾನದಲ್ಲಿ   ಸೈರಸ್  ಮಿಸ್ತ್ರಿ ಅವರ ಅಂತ್ಯಕ್ರಿಯೆ ನಡೆಯುತ್ತದೆ ಎಂದು ಹೇಳಲಾಗಿದೆ.

ಭಾರೀ ಮಳೆಗೆ ಬೆಂಗಳೂರು ಸುಸ್ತೋ ಸುಸ್ತು..ರಾಜ್ಯದಲ್ಲಿ ಇನ್ನು ಎಷ್ಟು ದಿನ ಸುರಿಯಲಿದೆ ಮಳೆ

Tower Of Sillence ನಲ್ಲಿ ಅಂತ್ಯಕ್ರಿಯೆ

ಮಿಸ್ತ್ರಿ ಪಾರ್ಸಿ ಸಮುದಾಯಕ್ಕೆ ಸೇರಿದವರಾಗಿದ್ದರಿಂದ ಅವರ ಅಂತ್ಯಕ್ರಿಯೆ ಹೇಗೆ ಮಾಡಲಾಗುತ್ತದೆ ಎಂದು ಕುತೂಹಲ ಮೂಡಿದೆ. ಹೌದು ಸಾಮಾನ್ಯವಾಗಿ ಮೃತದೇಹವನ್ನು ಹೂಳಲಾಗುತ್ತದೆ ಅಥವಾ ಸುಡಲಾಗುತ್ತದೆ. ಆದರೆ ಈ ಧರ್ಮದಲ್ಲಿ ಅಂತ್ಯಕ್ರಿಯೆ ವೇಳೆ ಸುಡುವುದು ಇಲ್ಲ. ಹೂಳುವುದು ಇಲ್ಲ ಅಂದ್ರೆ ನೀವು ನಂಬಲೇ ಬೇಕು. ಯೆಸ್‌  ಟವರ್‌ ಆಪ್‌ ಸೈಲೆನ್ಸ್‌ ನಲ್ಲಿ ಇವರ ಅಂತ್ಯಕ್ರಿಯೆಯನ್ನು ನೆರವೆರಿಸಲಾಗುತ್ತದೆ.

ಸೆಪ್ಟೆಂಬರ್‌ನಲ್ಲಿ ಬೆಳೆಯಲು ಟಾಪ್ 10 ಬೆಳೆಗಳು..ಭಾರೀ ಆದಾಯ ಫಿಕ್ಸ್‌

ಪಾರ್ಸಿಗಳಲ್ಲಿ ಶವಸಂಸ್ಕಾರದ ವಿಭಿನ್ನ ಅಭ್ಯಾಸವಿದೆ. ಪಾರ್ಸಿಗಳು  ಒಬ್ಬ    ವ್ಯಕ್ತಿಯ ದೇಹವನ್ನು   ಹೂಳುವುದಿಲ್ಲ ಅಥವಾ   ಸುಡುವುದಿಲ್ಲ. ಇದಕ್ಕಾಗಿ, ಅವರು ವಿಭಿನ್ನ ಅಭ್ಯಾಸವನ್ನು ಹೊಂದಿದ್ದಾರೆ.  ಪಾರ್ಸಿ  ಬಹಳ  ಹಳೆಯ  ಧರ್ಮವಾಗಿದೆ ಮತ್ತು  ಈ  ಧರ್ಮದಲ್ಲಿ  3000 ವರ್ಷಗಳ ವಿಭಿನ್ನ ಆಚರಣೆಗಳನ್ನು ಇಂದಿಗೂ ಅನುಸರಿಸಲಾಗುತ್ತದೆ. ಪಾರ್ಸಿ ಸಮಾಜದಲ್ಲಿ ಅಗ್ನಿ, ಜಲ, ಹಾಗೂ ಭೂಮಿಯನ್ನು ಪವಿತ್ರ ಎಂದು ಅವುಗಳ ಮೂಲಕ ಶವ ಸಂಸ್ಕಾರವನ್ನು ಮಾಡುವುದಿಲ್ಲ.

ದೂರದ ಜನವಸತಿಯಿಲ್ಲದ ಸ್ಥಳದಲ್ಲಿ ಮೃತದೇಹದ ಅಂತಿಮ ಸಂಸ್ಕಾರಕ್ಕಾಗಿ ಮೌನ ಗೋಪುರಗಳಿವೆ. ಇದನ್ನು ದಖ್ಮಾ ಎಂದೂ ಕರೆಯುತ್ತಾರೆ. ಇದು ನೆಲದಿಂದ ಎತ್ತರದಲ್ಲಿ ನಿರ್ಮಿಸಲಾದ ಘನ ಮತ್ತು ವೃತ್ತಾಕಾರದ ರಚನೆಯಾಗಿದ್ದು, ಅದರ ಮೇಲೆ ಮೃತ ದೇಹವನ್ನು ಇರಿಸಲಾಗುತ್ತದೆ. 

Teachers' Day: ನಿಮ್ಮ ನೆಚ್ಚಿನ ಶಿಕ್ಷಕರಿಗೆ  ನೀಡಬಹುದಾದ ಅತ್ಯುತ್ತಮ ಗಿಫ್ಟ್‌ಗಳ ಲಿಸ್ಟ್‌ ಇಲ್ಲಿದೆ

ಇಲ್ಲಿ ಮೃತ ದೇಹವನ್ನು ಸೂರ್ಯನ ಬೆಳಕಿನಲ್ಲಿ ಇಡಲಾಗುತ್ತದೆ. ಇದರ ನಂತರ ಮೃತ ದೇಹವನ್ನು ರಣಹದ್ದುಗಳು,  ಮತ್ತು ಕಾಗೆಗಳು ತಿನ್ನುತ್ತವೆ. ಪಾರ್ಸಿ ಸಮುದಾಯದಲ್ಲಿ, ಮೃತ ದೇಹವನ್ನು ಈ ರೀತಿ ಅಂತ್ಯಕ್ರಿಯೆ ಮಾಡುವ ವಿಧಾನವನ್ನು ಅತ್ಯಂತ ಪವಿತ್ರವೆಂದು ಪರಿಗಣಿಸಲಾಗಿದೆ. ಆದರೆ, ಸೈರಸ್ ಮಿಸ್ತ್ರಿ ಅವರ ಅಂತಿಮ ಸಂಸ್ಕಾರವನ್ನು ಈ ರೀತಿ ಮಾಡಲಾಗುತ್ತದೆಯೇ ಅಥವಾ ಇಲ್ಲವೇ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ.

Published On: 06 September 2022, 03:03 PM English Summary: Cyrus Mistry: No burial..no cremation..Do you know how funerals are conducted in the Parsi

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.