1. ಸುದ್ದಿಗಳು

ಬೆಳೆ ಸಮೀಕ್ಷೆಗೆ (Bele Darshak) ಬೆಳೆ ದರ್ಶಕ್ ಆ್ಯಪ್‌

survey

ಕೊರೋನಾ ಸೋಂಕು ಹರಡುವಿಕೆಯನ್ನು ತಡೆಯುವುದಕ್ಕಾಗಿ ಸರ್ಕಾರ ಹೇರಿದ್ದ ಲಾಕ್ಡೌನ್ ನಿಂದಾಗಿ ಪ್ರಸಕ್ತ ವರ್ಷ ಏಪ್ರೀಲ್ ತಿಂಗಳಿನಲ್ಲಿ ಬೆಳೆಗಳ ಸಮೀಕ್ಷೆ ನಡೆಸಲಾಗಿಲ್ಲ. ಪ್ರತಿ ವರ್ಷ ಎರಡು ಸಲ  ಏಪ್ರೀಲ್ ಮತ್ತು ಸೆಪ್ಟೆಂಬರ್ ತಿಂಗಳಲ್ಲಿ ಸಮೀಕ್ಷೆ (Crop Survey) ನಡೆಸಲಾಗುತ್ತದೆ. ಆದರೆ ಕೊರೋನಾ ಹಿನ್ನೆಲೆಯಲ್ಲಿ ಮೊದಲ ಹಂತದಲ್ಲಿ ಸಮೀಕ್ಷೆ ನಡಸಲಾಗಿಲ್ಲವಾದ್ದರಿಂದ ರೈತರೇ ಮನೆಯಲ್ಲಿಯೇ ಕುಳಿತು ಬೆಳೆ ದರ್ಶಕ್ ಆ್ಯಪ್‌ (Bele Darshak)   ಮೂಲಕ ಬೆಳೆಗೆ ಸಂಬಂಧಿಸಿದ ಮಾಹಿತಿ ನೀಡಬಹುದು.

ಬೆಳೆ ಸಮೀಕ್ಷೆ ಮನೆಯಲ್ಲಿಯೇ ಕುಳಿತು ಬೆಳೆ ದರ್ಶಕ್ ಆ್ಯಪ್‌ ಮೂಲಕ ವರದಿ ನೀಡುವುದು ಹೇಗೆ ಸಾಧ್ಯ ಎಂದುಕೊಂಡಿದ್ದಾರೆ. ಅದು ಹೇಗೆಂಬುದನ್ನು ಈ ಕೆಳಗಿನ ಮಾಹಿತಿಯನ್ನು ಓದಿ......

ರಾಜ್ಯದಲ್ಲಿ ನಡೆಯುತ್ತಿರುವ ಬೆಳೆ ಸಮೀಕ್ಷೆಯಲ್ಲಿ ರೈತರಿಗೆ ನೆರವಾಗುವ ನಿಟ್ಟಿನಲ್ಲಿ ರಾಜ್ಯ ಸರಕಾರವು ರೈತ ಸ್ನೇಹಿ ಬೆಳೆ ದರ್ಶಕ್ ಆ್ಯಪ್‌ವೊಂದನ್ನು (Bele Darshak)   ಬಿಡುಗಡೆ ಮಾಡಿದೆ. ಈ ಆ್ಯಪ್‌ (App) ಮೂಲಕ (Mobile) ಮೊಬೈಲ್‌ನಲ್ಲೇ  ತಮ್ಮ ಹೊಲದ ಸಮೀಕ್ಷೆ ನಡೆದ ಸಚಿತ್ರ ವರದಿ, ಬೆಳೆ ಸಮೀಕ್ಷೆಗೆ ನಿಯೋಜನೆಗೊಂಡಿರುವ ಸಿಬ್ಬಂದಿ, ನಡೆದಿಲ್ಲವಾದರೆ ಸಮೀಕ್ಷೆ ನಡೆಸುವವರ ಹೆಸರು, ಮೊಬೈಲ ಸಂಖ್ಯೆ ಇತ್ಯಾದಿ  ವಿವರ ಪಡೆಯಬಹುದು.

Bele Darshak Karnataka -2019 App Google play store ನಲ್ಲಿ ಆ್ಯಪ್‌ ಲಭ್ಯವಿದ್ದು, ಪ್ಲೇ ಸ್ಟೋರ್ ನಲ್ಲಿ ಲಭ್ಯವಿರುವ Android  ಫೋನ್ ಅಪ್ಲಿಕೇಷನ್ ಮೂಲಕ ಉಚಿತವಾಗಿ ಡೌನ್ಲೋಡ್ ಮಾಡಬಹುದು. ಬೆಳೆ ಸಮೀಕ್ಷೆ ಕಾರ್ಯ ಈ ವರೆಗೆ ಆರಂಭವಾಗದಿದ್ದರೆ ಕರೆ ಮಾಡಿ ಸಮೀಕ್ಷೆ ನಡೆಸುವರನ್ನು ಸಂಪರ್ಕಿಸಬಹುದು. ದಾಖಲಿಸಿರುವ ಮಾಹಿತಿ ಸರಿಯಾಗಿಲ್ಲದಿದ್ದರೆ ತಾಲೂಕು ಕಚೇರಿಗೆ ದೂರು ನೀಡಬಹುದು.

Read More:ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆ ಅನುಷ್ಠಾನ-ವಿಮೆ ಕಂತು ಕಟ್ಟಲು ಜುಲೈ 31 ಕೊನೆ ದಿನ

ಬೆಳೆ ದರ್ಶಕ್ ಆ್ಯಪ್‌ (Aap) ಮೊದಲ ಪರದೆಯಲ್ಲಿ ಬೆಳೆ ಸಮೀಕ್ಷೆ ವರ್ಷ, ಋತುಮಾನ, ಜಿಲ್ಲೆ, ತಾಲೂಕು, ಹೋಬಳಿ, ಗ್ರಾಮ ಮತ್ತು ಸರ್ವೆ ನಂಬರ್ ಹಾಕಿ ವಿವರ ಪಡೆಯಬಹುದು. ಇದಾದ ನಂತರ ಸರ್ವೆ ನಂಬರ್ /ಹಿಸ್ಸಾ ವಿವರ ಸಿಗಲಿದೆ. ಇಲ್ಲಿ ಒಂದೇ ಸರ್ವೆ ನಂಬರ್ ನಲ್ಲಿ ಒಂದಕ್ಕಿಂತ ಹೆಚ್ಚು ಹಿಸ್ಸೆಗಳಿದ್ದರೆ ಅದನ್ನು ಆಯ್ಕ ಮಾಡಬೇಕು. ಕೊನೆಯದಾಗಿ ಮಾಲಿಕರ ವಿವರ ಪಡೆದು ಖಚಿತಪಡಿಸಿಕೊಳ್ಳಬಹುದು. ಇದಾದ ಬಳಿಗೆ ಗ್ರಾಮದ ಬೆಳೆ (crop) ಸಮೀಕ್ಷೆ ನಡೆಸುವವರ ವಿವರಕ್ಕೆ ಹಾಗೂ ದಾಖಲಿಸಿದ ಬೆಳೆ ವಿವರಕ್ಕೆ ಪ್ರತ್ಯೇಕ ಎರಡು (Button) ಗುಂಡಿಗಳಿವೆ. ಸಮೀಕ್ಷೆದಾರರ ವಿವರ ಕ್ಲಿಕ್ಕಿಸಿದರೆ ಅವರ ಹೆಸರು ಹಾಗೂ ಮೊಬೈಲ್ ಸಂಖ್ಯೆ ಪರದೆ ಮೇಲೆ ಮೂಡಲಿದೆ. ದಾಖಲಿಸಿದ ಬೆಳೆ ವಿವರ ಕ್ಲಿಕ್ಕಿಸಿದರೆ ಬೆಳೆ ಹೆಸರು, ವಿಸ್ತೀರ್ಣ, ವರ್ಗ ಹಾಗೂ ಚಿತ್ರ ಸಿಗಲಿದೆ. ಒಂದು ವೇಳೆ ಈಗಾಗಲೇ ಜಮೀನು ಸಮೀಕ್ಷೆ ಕಾರ‍್ಯ ಮುಗಿದಿದ್ದರೆ, ತಮ್ಮ ಜಮೀನಿನ ಚಿತ್ರ ಸರಿಯಾಗಿ ಅಪ್‌ಲೋಡ್‌ (Upload) ಮಾಡಲಾಗಿದೆಯೋ ?, ಯಾವ ಬೆಳೆ ಎಂಬುದನ್ನು ಸಮೀಕ್ಷೆಯಲ್ಲಿ ನಿಖರವಾಗಿ ನಮೂದಿಸಲಾಗಿದೆಯೋ ? ಅಥವಾ ಇಲ್ಲವೋ ಎಂಬುದನ್ನು ರೈತರು (farmer) ತಮ್ಮ ಮೊಬೈಲ್‌ನಲ್ಲೇ ಕುಂತಲ್ಲೇ ತಿಳಿಯಬಹುದು.
 ಒಂದೊಮ್ಮೆ ಇಲ್ಲಿ ದಾಖಲಾದ ವಿವರ ಸರಿಯಿಲ್ಲದಿದ್ದರೆ ಆಯಾ ವ್ಯಾಪ್ತಿಯ ತಾಲೂಕು ಕಚೇರಿಗೆ ಸಂಪರ್ಕಿಸಬಹುದು ಎಂಬ ಮಾಹಿತಿ ಮೂಡುತ್ತದೆ. ಅದೇ ರೀತಿ ಬೆಳೆ ಸಮೀಕ್ಷೆ ತಂತ್ರಾಂಶದಲ್ಲಿ www.cropsurvey.karnataka.gov.in  www.cropsurvey.karnataka.gov.in ಮೂಲಕ ನೇರವಾಗಿ ತಮ್ಮ ದೂರು ಸಲ್ಲಿಸಲು ಇದರಲ್ಲಿ ರೈತರಿಗೆ ಅವಕಾಶ ಕಲ್ಪಿಸಲಾಗಿದೆ.

Read More: ಮಾವು ದ್ರಾಕ್ಷಿ ಬೆಳೆ ವಿಮೆಗೆ ಜುಲೈ 31 ಕೊನೆಯ ದಿನ

Published On: 15 July 2020, 03:08 PM English Summary: darshak mobile app for crop survey

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.