2021-22 ನೇ ಸಾಲಿನಲ್ಲಿ ರಾಷ್ಟೀಯ ಕೃಷಿ ವಿಕಾಸ ಯೋಜನೆಯಡಿ ಅಭಿವೃದ್ಧಿ ಕಾರ್ಯಕ್ರಮದಡಿ ಆಕಳುಗಳಿಗೆ ನೆಲಹಾಸುಗಳ ವಿತರಣೆಗಾಗಿ ಅರ್ಜಿ ಆಹ್ವಾನಿಸಲಾಗಿದೆ.
ಈ ಕುರಿತು ವಿಜಯಪುರದ ಪಶುಪಾಲನಾ ಮತ್ತು ಪಶು ವೈದ್ಯ ಸೇವಾ ಇಲಾಖೆ ಸಹಾಯಕ ನಿರ್ದೇಶಕರು ತಾಲ್ಲೂಕಾ ಆಡಳಿತ ಕಛೇರಿಯಿಂದ ಮಾಹಿತಿ ನೀಡಲಾಗಿದೆ.
ವಿಜಯಪುರ ತಾಲ್ಲೂಕಿಗೆ 29 ಸಾಮಾನ್ಯ ವರ್ಗದ, 7 ಪರಿಶಿಷ್ಟ ಜಾತಿಯ, ಹಾಗೂ 01 ಪರಿಶಿಷ್ಟ ಪಂಗಡದ ಒಟ್ಟು 37 ರೈತರಿಗೆ ಗುರಿ ನಿಗದಿಯಾಗಿದೆ. ಆದ್ದರಿಂದ ಆಸಕ್ತ ಫಲಾನುಭವಿಗಳು ಕಡ್ಡಾಯವಾಗಿ ಎರಡು ಜಾನುವಾರುಗಳನ್ನು ಹೊಂದಿರಬೇಕು.
ಫಲಾನುಭವಿಗಳ ಶೇ.50ರ ವಂತಿಗೆ 3095 ರೂ ಮೊತ್ತದೊಂದಿಗೆ ಒಬ್ಬ ಫಲಾನುಭವಿಗೆ ಎರಡು ಆಕಳುಗಳಿಗೆ ನೆಲಹಾಸುಗಳನ್ನು ವಿತರಿಸುವ ಘಟಕಕ್ಕಾಗಿ ಅರ್ಜಿ ಸಲ್ಲಿಸಬಹುದಾಗಿದೆ.
ಫಲಾನುಭವಿಗಳನ್ನು ಆಯಾ ವಿಧಾನಸಭಾ (ವಿಜಯಪುರ, ನಾಗಠಾಣ) ಕ್ಷೇತ್ರಕ್ಕೆ ವಿಂಗಡಿಸಿದ ಗುರಿಗಳನ್ವಯ ಸಂಬಂಧಪಟ್ಟ ಶಾಸಕರ ಅಧ್ಯಕ್ಷತೆಯಲ್ಲಿರುವ ಸಮಿತಿಯಿಂದ ಆಯ್ಕೆ ಮಾಡಲಾಗುವುದು. ಆಸಕ್ತ ಫಲಾನುಭವಿಗಳು ಈ ಯೋಜನೆಯ ಪ್ರಯೋಜನ ಪಡೆದುಕೊಳ್ಳುವಂತೆ ಹಾಗೂ ಹೆಚ್ಚಿನ ಮಾಹಿತಿಗಾಗಿ ಹಾಗೂ ಅರ್ಜಿ ಸಲ್ಲಿಕೆಗೆ ಈ ಕಛೇರಿಗೆ ಖುದ್ದಾಗಿ ಸಂಪರ್ಕಿಸಬೇಕು.
ರಾಜ್ಯ ಸರ್ಕಾರಿ ನೌಕರರಿಗೆ Good News: ವರ್ಷಾಂತ್ಯಕ್ಕೆ ದೊರೆಯಲಿದೆ ಕೇಂದ್ರ ಮಾದರಿ ವೇತನ! ಯಾವಾಗ ದೊರೆಯಲಿದೆ ಗೊತ್ತೆ?
ಅರ್ಜಿಯನ್ನು ಭರ್ತಿ ಮಾಡಲು ಫಲಾನುಭವಿಯ ಬಳಿ ರಾಸು ಇರುವ ಕುರಿತು ಪಶುವೈದ್ಯಾಧಿಕಾರಿಗಳಿಂದ ದೃಢೀಕರಣ ಪತ್ರ, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಜಾತಿ ಪ್ರಮಾಣ ಪತ್ರ, ಅಂಗವಿಕಲರಾಗಿದ್ದಲ್ಲಿ ಪ್ರಮಾಣ ಪತ್ರಗಳನ್ನು ಲಗತ್ತಿಸಿ, ಜೂನ್ 24ನೇ ತಾರೀಖಿನೊಳಗೆ ಈ ಕಛೇರಿಗೆ ಸಲ್ಲಿಸುವಂತೆ
ಪಶುಪಾಲನಾ ಮತ್ತು ಪಶು ವೈದ್ಯ ಸೇವಾ ಇಲಾಖೆ ತಾಲ್ಲೂಕಾ ಆಡಳಿತ ಕಛೇರಿ ವಿಜಯಪುರದ ಸಹಾಯಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕೃಷಿ ಪಂಡಿತ ಮತ್ತು ಕೃಷಿ ಪ್ರಶಸ್ತಿಗೆ ಅರ್ಜಿ ಆಹ್ವಾನ: ₹1,25,000 ಬಹುಮಾನ!
ರಾಜ್ಯದ ಕೃಷಿ ಕ್ಷೇತ್ರದಲ್ಲಿ ಹೊಸ ಅನ್ವೇಷಣೆ ಮತ್ತು ಸೃಜನಾತ್ಮಕ ಕಾರ್ಯಗಳಿಂದ ಕೃಷಿ ವಲಯಕ್ಕೆ ಅನ್ವಯಿಸುವಂತೆ ಗಮನಾರ್ಹ ಸಾಧನೆ ಮಾಡಿದವರಿಗೆ, ರೈತ ಸಮುದಾಯದ ಅಭಿವೃದ್ಧಿಗೆ ಅಪಾರ ಕೊಡುಗೆ ನೀಡುತ್ತಿರುವ ರೈತರಿಗೆ ಕೃಷಿ ಪಂಡಿತ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗುವುದು.
Goat&Sheep:ಕುರಿ-ಮೇಕೆ ಸಾಕಾಣಿಕೆದಾರರಿಗೆ ಗುಡ್ನ್ಯೂಸ್-8 ಲಕ್ಷದವರೆಗೆ ಸಬ್ಸಿಡಿ
Pig Farming:ಹಂದಿ ಸಾಕಾಣಿಕೆದಾರರಿಗೆ ಬಂಪರ್.. ಶೇ 98 ರಷ್ಟು ಸಬ್ಸಿಡಿ ಸಿಗುತ್ತೆ!
ಕೃಷಿ ಪಂಡಿತ ಪುಶಸ್ತಿ ಮಾನದಂಡಗಳು:
ಕೃಷಿ ಪಂಡಿತ ಪ್ರಶಸ್ತಿಯಲ್ಲಿ ಭಾಗವಹಿಸಲು ಇಚ್ಛಿಸುವವರು ರಾಜ್ಯ ಕೃಷಿ ಕ್ಷೇತ್ರದಲ್ಲಿ ವಿನೂತನ/ಹೊಸ ಅನ್ವೇಷಣೆ ಮತ್ತು ಸೃಜನಾತ್ಮಕ ಕಾರ್ಯಗಳಿಂದ ಗಮನಾರ್ಹ ಸಾಧನೆ ಮಾಡಿರಬೇಕು.
ಕೃಷಿ ವಲಯಕ್ಕೆ ಅನ್ವಯಿಸುವಂತೆ ಗಮನಾರ್ಹ/ಗಣನೀಯವಾದ/ ವಿಭಿನ್ನವಾದ ಮೂಲ ರೂಪದ ಸಾಧನೆ (Innovation) ಮಾಡಿದವರಬೇಕು.
ನಿಗದಿಪಡಿಸಿರುವ ನಮೂನೆಯಲ್ಲಿ ಇಲಾಖೆಯು ಸೂಚಿಸುವ ಅಂತಿಮ ದಿನಾಂಕ ದೊಳಗೆ ಅರ್ಜಿಯನ್ನು ತಾಲ್ಲೂಕು ಮಟ್ಟದ ಸಹಾಯಕ ಕೃಷಿ ನಿರ್ದೇಶಕರ ಕಛೇರಿಗೆ ಸಲ್ಲಿಸುವುದು.
ಮೇ ತಿಂಗಳಲ್ಲಿ ಬಿತ್ತನೆ ಮಾಡಬೇಕಾದ ಬೆಳೆಗಳು! ಇದರಿಂದ ರೈತರಿಗಾಗಲಿದೆ ಹೆಚ್ಚಿನ ಲಾಭ
ಶ್ರೀಗಂಧ ಬೆಳೆದು 6 ಲಕ್ಷ ರೂಪಾಯಿ ಗಳಿಸಬಹುದು..ಮಾರುಕಟ್ಟೆಯಲ್ಲೂ ಸಿಕ್ಕಾಪಟ್ಟೆ ಡಿಮ್ಯಾಂಡ್
ಈ ಹಿಂದೆ ಕೃಷಿ ಪಂಡಿತ ಪ್ರಶಸ್ತಿ (ಪ್ರಥಮ, ದ್ವಿತೀಯ, ತೃತೀಯ ಹಾಗೂ ಉದಯೋನ್ಮುಖ) ಪಡೆದವರು ಮತ್ತೆ ಸ್ಪರ್ಧಿಸುವಂತಿಲ್ಲ.
ಕೇಂದ್ರ ಅಥವಾ ರಾಜ್ಯ ಸರ್ಕಾರಿ ಸೇವೆಯಲ್ಲಿರುವ ಯಾವುದೇ ಇಲಾಖೆ/ ವಿಶ್ವವಿದ್ಯಾಲಯ/ಸರ್ಕಾರಿ ಸ್ವಾಮ್ಯದ ಸಂಸ್ಥೆಗಳ ನೌಕರರು ಮತ್ತು ಅವರ ಕುಟುಂಬದ ಸದಸ್ಯರು ಸ್ಪರ್ಧೆ ಭಾಗವಹಿಸುವಂತಿಲ್ಲ.
ಕೃಷಿ ಪಂಡಿತ ಪ್ರಶಸ್ತಿ ಬಹುಮಾನದ ಮೊತ್ತ:
ಕೃಷಿ ಪಂಡಿತ -ಪ್ರಥಮ - 1,25,000
ಕೃಷಿ ಪಂಡಿತ-ದ್ವೀತಿಯ - 1,00,000
ಕೃಷಿ ಪಂಡಿತ-ತೃತೀಯ - 75,000
ಕೃಷಿ ಪಂಡಿತ ಉದಯೋನ್ಮುಖ - ತಲಾ 50,000.
ಕಪ್ಪು ಗೋಧಿಯ ಬಗ್ಗೆ ನಿಮಗೆ ಗೊತ್ತೆ? ಇಲ್ಲಿದೆ ರೈತರಿಗೆ ಲಾಭದಾಯಕ ಕೃಷಿಯ ಐಡಿಯಾ!
Paddy: ಉತ್ತಮ ಇಳುವರಿ ನೀಡುವ ರೋಗ ನಿರೋಧಕ ಭತ್ತದ ತಳಿಗಳ ಕುರಿತು ಇಲ್ಲಿದೆ ಸಮಗ್ರ ಮಾಹಿತಿ…
Share your comments