ಭಾರತ ದೇಶದಲ್ಲಿ ಚಾಲಕರಹಿತ ರೈಲು ಪ್ರಾರಂಭವಾಗುತ್ತದೆ ಎಂದರೆ ನೀವು ಶಾಕ್ ಆಗಿದ್ದೀರಾ? ಹೌದು ಇದನ್ನು ನೀವು ನಂಬಲೇಬೇಕು ಯಾಕೆಂದರೆ ಡಿಸೆಂಬರ್ 28ರಿಂದ ಭಾರತದಲ್ಲಿ ಚಾಲಕರ ಮೆಟ್ರೋರೈಲು ಪ್ರಾರಂಭವಾಗಲಿದೆ.
ಹೊಸದಿಲ್ಲಿಯಲ್ಲಿ ಮೆಟ್ರೋ ರೈಲು ಯೋಜನೆಯ ಭಾಗವಾಗಿ ನೆರಳೆ ಮಾರ್ಗದಲ್ಲಿ ಸಂಚರಿಸುವ ಅತ್ಯಾಧುನಿಕ ಮಲ್ಟಿ ಸ್ಪೆಷಲ್ ರೈಲಿಗೆ ಡಿಸೆಂಬರ್ 28ರಂದು ನಮ್ಮ ದೇಶದ ಪ್ರಧಾನಿ ಮಂತ್ರಿಗಳಾದ ನರೇಂದ್ರ ಮೋದಿ ಅವರು ಚಾಲನೆ ನೀಡಲಿದ್ದಾರೆ.
ಇನ್ನೊಂದು ಹೆಮ್ಮೆಯ ವಿಷಯವೇನೆಂದರೆ ಇದು ನಮ್ಮ ದೇಶದಲ್ಲೇ ಪ್ರಪ್ರಥಮ ಚಾಲಕರಹಿತ ರೈಲು ಆಗಿದೆ. ಮೊದಲನೇ ಹಂತದಲ್ಲಿ ರೈಲು 37 ಕಿಲೋಮೀಟರ್ ವರೆಗೆ ಚಲಿಸಲಿದೆ. ರೈಲು 37 ಕಿಲೋಮೀಟರ್ ಉದ್ದದ ನೇರಳೆ ಮಾರ್ಗದಲ್ಲಿ ಜನಕಪುರಿ ಪಶ್ಚಿಮ ಮತ್ತು ಬೋಟಾನಿಕಲ್ ಗಾರ್ಡನ್ ಮೆಟ್ರೋ ನಿಲ್ದಾಣಗಳ ಮಧ್ಯ ಸಂಚರಿಸಲಿದೆ.
ಈ ಒಂದು ಸಾಧನೆಯ ಮೂಲಕ ನಮ್ಮ ದೇಶವು ಕೂಡ ಹಲವಾರು ಸಾಧನೆಗಳಿಗೆ ಕಾರಣವಾಗಿದೆ, ಹಿಂದೆ ಸೀ ಪ್ಲೇನ್ ಅನ್ನು ಕೂಡ ನರೇಂದ್ರ ಮೋದಿ ಅವರು ಉದ್ಘಾಟಿಸಿದರು, ಇದೀಗ ಮತ್ತೆ ಚಾಲಕರಹಿತ ರೈಲನ್ನು ಉದ್ಘಾಟಿಸಿದ್ದಾರೆ ಹೀಗೆ ಇನ್ನು ಮುಂದೆ ಯಾವ ಯಾವ ತಂತ್ರಜ್ಞಾನಗಳು ಬರುತ್ತವೆ ಎಂಬುದನ್ನು ನಾವು ಊಹಿಸಲು ಸಾಧ್ಯವಿಲ್ಲ ಅಷ್ಟರಮಟ್ಟಿಗೆ ನಾವು ನಮ್ಮ ದೇಶದವರು ತಂತ್ರಜ್ಞಾನದಲ್ಲಿ ಮುಂದುವರಿಯುತ್ತಿದ್ದೇವೆ.
Share your comments